• ಹೋಂ
  • »
  • ನ್ಯೂಸ್
  • »
  • Breaking News
  • »
  • Shamita Shetty: ಬಿಗ್‌ಬಾಸ್ ನನಗೆ ಯಾವುದೇ ಸಿನಿಮಾ ಆಫರ್ ನೀಡಿಲ್ಲ; ಖಿನ್ನತೆಗೆ ಒಳಗಾಗಿರುವೆ ಎಂದ ಶಮಿತಾ ಶೆಟ್ಟಿ

Shamita Shetty: ಬಿಗ್‌ಬಾಸ್ ನನಗೆ ಯಾವುದೇ ಸಿನಿಮಾ ಆಫರ್ ನೀಡಿಲ್ಲ; ಖಿನ್ನತೆಗೆ ಒಳಗಾಗಿರುವೆ ಎಂದ ಶಮಿತಾ ಶೆಟ್ಟಿ

ನಟಿ ಶಮಿತಾ ಶೆಟ್ಟಿ

ನಟಿ ಶಮಿತಾ ಶೆಟ್ಟಿ

23 ವರ್ಷಗಳಿಂದ ನಾನು ಬಾಲಿವುಡ್‌ನಲ್ಲಿದ್ದರೂ ನನಗೆ ಅಷ್ಟೊಂದು ಸಿನಿಮಾ ಆಫರ್​ಗಳು ಬಂದಿಲ್ಲ ಎಂದು ನಟಿ ಶರ್ಮಿತಾ ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ.

  • Trending Desk
  • 3-MIN READ
  • Last Updated :
  • Karnataka, India
  • Share this:

ಇತ್ತೀಚಿಗಷ್ಟೇ ಹಿಂದಿ ಚಿತ್ರರಂಗದ ಶಮಿತಾ ಶೆಟ್ಟಿ (Shamita Shetty) ಅವರು ತಮಗೆ ಬಿಗ್ ಬಾಸ್ (Bigg Boss) ಯಾವುದೇ ಚಿತ್ರಗಳ ಆಫರ್ ಮಾಡಿಲ್ಲ. ನಾನು ಖಿನ್ನತೆಗೆ ಒಳಗಾಗಿರೋದಾಗಿ ಹೇಳಿದ್ದಾರೆ. ಹಾಗಾದರೆ ಅವರೊಡನೆ ಆಗಿದ ಮಾತುಕತೆಯಾದ್ರೂ ಏನು ಎಂಬ ಕುತೂಹಲ ಎಲ್ಲರಲ್ಲೂ ಮೂಡದೆ ಇರದು. ಧಡ್ಕನ್ ಚಿತ್ರದ ಬೆಡಗಿ ಶಿಲ್ಪಾಶೆಟ್ಟಿ ಸಹೋದರಿ (Shilpa Shetty Sister) ಶಮಿತಾ ಶೆಟ್ಟಿ ಕೂಡ ತಮ್ಮ ಸಹೋದರಿಯ ಹಾದಿ ಅನುಸರಿಸಿ ಬಾಲಿವುಡ್‌ನಲ್ಲಿ  ಹೆಸರು, ಕೀರ್ತಿ ಸಂಪಾದಿಸಿದ್ದಾರೆ. ಅಕ್ಕ ಶಿಲ್ಪಾ ಶೆಟ್ಟಿಯ ಹೆಸರು ಬಳಸಿಕೊಳ್ಳದೇ ತಮ್ಮದೇ ಆದ ಸ್ವಂತ ನಟನೆ ಹಾಗೂ ಪ್ರತಿಭೆಯಿಂದ ಬಾಲಿವುಡ್‌ನಲ್ಲಿ (Bollywood) ಮಿಂಚಿದವರು.


ಶಮಿತಾ ಅಭಿನಯಿಸಿರುವ ಚಿತ್ರಗಳು


ಶಮಿತಾ ಆದಿತ್ಯ ಚೋಪ್ರಾರ ಮೊಹಬ್ಬತೇನ್ (2000) ಚಿತ್ರದಲ್ಲಿ ಅಪಾರ ಮೆಚ್ಚುಗೆ ಗಳಿಸಿದ ನಟಿಯಾಗಿದ್ದಾರೆ. ಮೋಹಿತ್ ಸೂರಿಯವರ ಜೆಹರ್ (2015) ಚಿತ್ರದಲ್ಲಿ ಕೂಡ ಮನೋಜ್ಞವಾಗಿ ಅಭಿನಯಿಸಿ ಖ್ಯಾತಿ ಗಳಿಸಿದವರು.


Shamita Shetty Bigg Boss didnt bring me any film work have been through depression in my life


2007 ರಲ್ಲಿ ಬಿಡುಗಡೆಯಾದ ಅನುಭವ್ ಸಿನ್ಹಾರ ಕ್ಯಾಶ್ ಚಿತ್ರದಲ್ಲಿ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಿಯಾಲಿಟಿ ಶೋ ಬಿಗ್‌ಬಾಸ್‌ನಲ್ಲಿ ಮೂರು ಬಾರಿ ಭಾಗವಹಿಸಿದ್ದಾರೆ ಜೊತೆಗೆ ಈಗ ದಿ ಟೆನೆಂಟ್ ಎಂಬ ಚಿತ್ರದಲ್ಲಿ ಕೂಡ ಶಮಿತಾ ಅಭಿನಯಿಸಿದ್ದಾರೆ.


ಸಂದರ್ಶನದಲ್ಲಿ ಅನಿಸಿಕೆ ಹಂಚಿಕೊಂಡ ನಟಿ


ತಮ್ಮ ಸಹೋದರಿಯ ಸ್ಫೂರ್ತಿಯೇ ಚಿತ್ರರಂಗದಲ್ಲಿ ಈ ಮಟ್ಟಕ್ಕೆ ಬೆಳೆಯಲು ಕಾರಣ ಎಂದು ತಿಳಿಸಿರುವ ಶಮಿತಾ ವಿಶೇಷ ಸಂದರ್ಶನದಲ್ಲಿ ತಮ್ಮೊಳಗಿನ ಹೋರಾಟ, ಬೇಸರ ಎಲ್ಲವನ್ನೂ ಹೊರಹಾಕಿದ್ದಾರೆ.


ದ ಟೆನೆಂಟ್ ಚಿತ್ರದ ಬಗ್ಗೆ ಶಮಿತಾ ಮಾತು


ದ ಟೆನೆಂಟ್ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ಶಮಿತಾ ಕೆಲಸಕ್ಕಾಗಿ ಎದುರು ನೋಡುತ್ತಿರುವ ಸಮಯಲ್ಲಿಯೇ ಟೆನೆಂಟ್ ಚಿತ್ರ ದೊರಕಿತು ಎಂದು ತಿಳಿಸಿದ್ದಾರೆ.


ಆಡಿಷನ್ ಮಾಡಿಸಿ ಪಾತ್ರ ದೊರಕಿಸಿಕೊಡಿ ಎಂದು ಹಲವಾರು ನಿರ್ದೇಶಕರನ್ನು ಬೇಡಿಕೊಳ್ಳುತ್ತಿದ್ದೆ ಎಂದು ಶಮಿತಾ ತಿಳಿಸಿದ್ದಾರೆ. ಕೊನೆಗೂ ದ ಟೆನೆಂಟ್ ಚಿತ್ರದ ಪಾತ್ರಕ್ಕೆ ನನ್ನ ಆಡಿಷನ್ ಮಾಡಲಾಯಿತು ಹಾಗೂ ಪಾತ್ರಕ್ಕೆ ನಾನು ಆಯ್ಕೆಗೊಂಡೆ ಎಂದು ಶಮಿತಾ ತಿಳಿಸಿದ್ದಾರೆ.


ಟೆನೆಂಟ್ ಚಿತ್ರದಲ್ಲಿರುವ ಮೀರಾ ಪಾತ್ರ ನನ್ನೊಳಗಿನ ಭಾವನೆಗಳಿಗೆ ಸರಿಹೊಂದುವ ಪಾತ್ರವಾಗಿತ್ತು ಹಾಗೂ ಆ ಪಾತ್ರದೊಂದಿಗೆ ಏನೋ ಒಂದು ರೀತಿಯ ಕನೆಕ್ಶನ್ ಒಡಮೂಡಿತು ಎಂದು ತಿಳಿಸಿದ್ದಾರೆ.


ಒಂಟಿ ಮಹಿಳೆ ಪಡುವ ಪಾಡು


ಇಂದಿಗೂ ಮಹಿಳೆ ಒಬ್ಬಂಟಿಯಾಗಿ ಇರುವುದು ಎಂದರೆ ಜನರು ಸಂದೇಹದಿಂದ ನೋಡುತ್ತಾರೆ. ಅದುವೇ ಅಂಶವನ್ನು ಟೆನೆಂಟ್‌ನಲ್ಲಿ ಹೈಲೈಟ್ ಮಾಡಲಾಗಿದೆ ಎಂದು ಶಮಿತಾ ತಿಳಿಸಿದ್ದಾರೆ.


ಮುಂಬೈಯಂತಹ ಮಹಾನಗರಗಳಲ್ಲಿ ಒಂಟಿ ಮಹಿಳೆಯರಿಗೆ ಫ್ಲ್ಯಾಟ್ ದೊರೆಯುವುದು ತುಂಬಾ ಕಷ್ಟ. ಇಂತಹ ಅಂಶಗಳನ್ನು ಮೊದಲು ಬದಲಾಯಿಸಬೇಕು ಎಂದು ಶಮಿತಾ ಸಲಹೆ ನೀಡಿದ್ದಾರೆ.


ಒಬ್ಬ ಉತ್ತಮ ನಿರ್ದೇಶಕರೊಂದಿಗೆ ಕೆಲಸ ಮಾಡಿದ ತೃಪ್ತಿ ನನಗಿದೆ. ಈ ಚಿತ್ರದಲ್ಲಿ ಅಭಿನಯಿಸುವುದು ಒಂದು ವಿಭಿನ್ನ ಅನುಭವವನ್ನು ನೀಡಿದೆ ಎಂದು ಶಮಿತಾ ಹೇಳಿಕೊಂಡಿದ್ದಾರೆ. ಆಧ್ಯಾತ್ಮಿಕ ಅನುಭವವನ್ನು ನೀಡಿದೆ ಎಂದು ಶಮಿತಾ ಬಣ್ಣಿಸಿದ್ದಾರೆ


ಮೊಹಬ್ಬತೇನ್ ಹಾಗೂ ಜೆಹರ್ ಚಿತ್ರದ ಬಗ್ಗೆ


ಮೊಹಬ್ಬತೇನ್ ಚಿತ್ರದಲ್ಲಿ ನಟಿಸುವಾಗ ನನಗೆ ನಟನೆ ಎಂಬುದು ಎಷ್ಟು ಇಷ್ಟವೆಂದು ತಿಳಿದಿರಲಿಲ್ಲ. ಜೆಹರ್‌ನಲ್ಲಿ ನಾನು ಅದನ್ನು ಅರಿತುಕೊಂಡೆ. ಜೆಹರ್‌ನಲ್ಲಿ ಇನ್ನಷ್ಟು ಉತ್ತಮವಾಗಿ ನಟಿಸಬೇಕೆಂಬ ಬಯಕೆ ಹೊಂದಿದ್ದೆ.


23 ವರ್ಷಗಳ ಕಾಲ ಬಾಲಿವುಡ್‌ನಲ್ಲಿದ್ದರೂ ನನಗೆ ಅಷ್ಟೊಂದು ಚಿತ್ರಗಳನ್ನು ನೀಡಲಿಲ್ಲ ಹಾಗಾಗಿ ನನಗೆ ಅವಕಾಶ ದೊರೆಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.


ಬಿಗ್‌ಬಾಸ್


ಬಿಗ್‌ಬಾಸ್ ನನಗೆ ಸಾಕಷ್ಟು ಅವಕಾಶ ನೀಡಿದೆ. ಬಿಗ್‌ಬಾಸ್‌ನಲ್ಲಿ ಜನರು ನನ್ನ ಪ್ರತಿಭೆಯನ್ನು ಕಂಡುಕೊಂಡರು ಹಾಗೂ ಹೆಚ್ಚಿನ ಮನ್ನಣೆಯನ್ನು ಪಡೆದುಕೊಂಡೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: Shah Rukh Khan-Pathaan: ಶಾರುಖ್ ಅಭಿಮಾನಿಗಳಿಗೆ ಬಂಪರ್ ಆಫರ್; ಪಠಾಣ್ ಸಿನಿಮಾ ಟಿಕೆಟ್ ರೇಟ್ ಇಳಿಕೆ!


ಸಹೋದರಿ ಶಿಲ್ಪಾ ಶೆಟ್ಟಿ ಬಗ್ಗೆ


ಆಕೆ ನನಗೆ ಹೆಚ್ಚಿನ ಸ್ಫೂರ್ತಿ, ಪ್ರೇರಣೆ ನೀಡಿದ್ದಾರೆ ಎಂದು ಶಮಿತಾ ಅಕ್ಕನ ಬಗ್ಗೆ ಹೇಳಿದ್ದಾರೆ. ಆಕೆ ಕೂಡ ಕಷ್ಟಪಟ್ಟೇ ಈ ಸ್ಥಾನದಲ್ಲಿ ನಿಂತಿದ್ದಾರೆ. ಹೆಚ್ಚಿನ ನಟಿಯರು ಬಂದು ಹೋದರು ಆದರೆ ಇಂಡಸ್ಟ್ರಿಯಲ್ಲಿ ಶಿಲ್ಪಾ ಶೆಟ್ಟಿ ಮಾತ್ರ ಒಬ್ಬರು ಆಕೆಯನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ ಎಂದೇ ತಿಳಿಸಿದ್ದಾರೆ.

Published by:ಪಾವನ ಎಚ್ ಎಸ್
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು