ನವದೆಹಲಿ: ಕಾಂಗ್ರೆಸ್ (Congress) ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಸಲ್ಮಾನ್ ಖುರ್ಷಿದ್ (Salman Khurshid) ಅವರು, ಭಾರತ್ ಜೋಡೋ ಪಾದಯಾತ್ರೆಯನ್ನು (Bharat Jodo Padayatre) ರಾಮಾಯಣ (Ramayana) ಮಹಾಕಾವ್ಯಕ್ಕೆ, ರಾಹುಲ್ ಗಾಂಧಿ (Rahul Gandhi) ಅವರನ್ನು ಶ್ರೀರಾಮನಿಗೆ (Sri Rama) ಮತ್ತು ಕಾಂಗ್ರೆಸ್ ಅನ್ನು ಭಾರತಕ್ಕೆ (India) ಹೋಲಿಸಿದ್ದಾರೆ. ನಿನ್ನೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಹುಲ್ ಗಾಂಧಿ ಅತಿಮಾನುಷ ವ್ಯಕ್ತಿ, ನಾವು ಚಳಿಯಿದೆ (Cold) ಎಂದು ಜಾಕೆಟ್ (Jacket) ಧರಿಸುತ್ತಿದರೆ, ಅವರು ಕೇವಲ ಟೀ-ಶರ್ಟ್ (T-Shirt) ಧರಿಸಿ ಭಾರತ್ ಜೋಡೋ ಯಾತ್ರೆ ನಡೆಸುತ್ತಿದ್ದಾರೆ. ಅವರು ಎಲ್ಲರ ಮಧ್ಯೆ ತಪಸ್ಸು ಮಾಡುತ್ತಿರುವ ಯೋಗಿಯಂತೆ ಕಾಣಿಸುತ್ತಿದ್ದಾರೆ.
ಭಗವಾನ್ ರಾಮನ ಪಾದುಕೆ ಬಹಳ ದೂರದವರೆಗೂ ಸಾಗುತ್ತೆ
ಭಗವಾನ್ ರಾಮನ ಪಾದುಕೆ ಬಹಳ ದೂರದವರೆಗೂ ಸಾಗುತ್ತದೆ. ಕೆಲವೊಮ್ಮೆ ಶ್ರೀರಾಮ ತಲುಪಲು ಸಾಧ್ಯವಾಗದ ಕಡೆ ಆತನ ಸಹೋದರ ಭರತ್ ಪಾದುಕೆಯನ್ನು ತೆಗೆದುಕೊಂಡು ಹೋಗುತ್ತಾನೆ. ಅದರಂತೆ ನಾವು ಸಹ ಉತ್ತರ ಪ್ರದೇಶಕ್ಕೆ ಪಾದುಕೆಯನ್ನು ಹೊತ್ತೊಯ್ಯುತ್ತಿದ್ದೇವೆ. ಈಗ ಪಾದುಕೆ ಉತ್ತರ ಪ್ರದೇಶವನ್ನು ತಲುಪಿದೆ. ರಾಮ್ ಜಿ(ರಾಹುಲ್ ಗಾಂಧಿ) ಕೂಡ ಬರುತ್ತಾರೆ, ಇದು ನಮ್ಮ ನಂಬಿಕೆ ಎಂದು ಹೇಳಿದ್ದರು.
ಸಾರ್ವತ್ರಿಕವಾಗಿ ಮಾರ್ಗಸೂಚಿ ಜಾರಿಗೆ ಬಂದಾಗ ಕಾಂಗ್ರೆಸ್ ಅನಸರಿಸುತ್ತೆ
ಇದೇ ವೇಳೆ ಭಾರತ್ ಜೋಡೋ ಯಾತ್ರೆ' ಸಂದರ್ಭದಲ್ಲಿ ಕೋವಿಡ್ ಪ್ರೋಟೋಕಾಲ್ ಅನ್ನು ಅನುಸರಿಸುವಂತೆ ರಾಹುಲ್ ಗಾಂಧಿಗೆ ಕೇಂದ್ರ ಆರೋಗ್ಯ ಸಚಿವಾಲಯ ಪತ್ರ ಬರೆದಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಖುರ್ಷಿದ್, ಕೋವಿಡ್ ಕುರಿತು ಕಾಂಗ್ರೆಸ್ಗೆ ಮಾತ್ರ ವಿಶೇಷ ಮಾರ್ಗಸೂಚಿ ಇಡಲು ಸಾಧ್ಯವಿಲ್ಲ, ಸಾರ್ವತ್ರಿಕವಾಗಿ ಮಾರ್ಗಸೂಚಿಗಳನ್ನು ಜಾರಿಗೆ ತಂದಾಗ ಪಕ್ಷ ಕೂಡ ಆ ನಿಯಮಗಳನ್ನು ಅನುಸರಿಸುತ್ತದೆ ಎಂದರು.
ಸಲ್ಮಾನ್ ಖುರ್ಷಿದ್ ಹೇಳಿಕೆಗೆ ಬಿಜೆಪಿ ತಿರುಗೇಟು
ಇದೀಗ ಸಲ್ಮಾನ್ ಖುರ್ಷಿದ್ ಅವರ ಹೇಳಿಕೆಗೆ ಬಿಜೆಪಿ ತಿರುಗೇಟು ನೀಡಿದೆ. ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ, ಕಾಂಗ್ರೆಸ್ ಪಕ್ಷವು ವೋಟ್ಗಾಗಿ ಈ ರೀತಿಯ ಎಂಥದ್ದೇ ನಾಟಕವನ್ನೂ ಆಡಬಲ್ಲದು ಎಂದು ವ್ಯಂಗ್ಯವಾಡಿದ್ದಾರೆ.
ಮತಕ್ಕಾಗಿ ಕಾಂಗ್ರೆಸ್ ಎಂಥ ರಾಜಕೀಯ ನಾಟವಾಡುತ್ತೆ
ನಾಟಕ ಆಡೋದು ಕಾಂಗ್ರೆಸ್ ಪಕ್ಷದ ಡಿಎನ್ಎನಲ್ಲೇ ಇದೆ. ಕಾಂಗ್ರೆಸ್ ಪಕ್ಷ ಚುನಾವಣೆ ವೇಳೆ ಮತಕ್ಕಾಗಿ ಎಂಥ ರಾಜಕೀಯ ನಾಟವನ್ನಾದರೂ ಆಡಬಲ್ಲದು. ಇದೇ ನಾಟಕದ ಭಾಗ ಎಂಬಂತೆ ಸಲ್ಮಾನ್ ಖುರ್ಷಿದ್ ಅವರು ರಾಹುಲ್ ಗಾಂಧಿ ಅವರನ್ನು ಭಗವಾನ್ ಶ್ರೀರಾಮನಿಗೆ ಹೋಲಿಕೆ ಮಾಡಿದ್ದಾರೆ. ಭ್ರಷ್ಟಾಚಾರ ಆರೋಪ ಪ್ರಕರಣ ಸಂಬಂಧ ಜಾಮೀನಿನ ಮೇಲೆ ಹೊರಗಿರುವ ವ್ಯಕ್ತಿಯನ್ನು ಭಗವಂತನಿಗೆ ಹೋಲಿಕೆ ಮಾಡುತ್ತಿದ್ದಾರೆ. ಇದಕ್ಕೆ ದೇಶದ ಜನರೇ ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಕಿಡಿಕಾರಿದ್ದಾರೆ.
ಇತಿಹಾದ ನೆನಪಿಸಿದ ಗೌರವ್ ಬಾಟಿಯಾ
ಇದೇ ವೇಳೆ ದಿವಂಗತ ನೇತಾರರಾದ ಪಿ. ವಿ. ನರಸಿಂಹ ರಾವ್, ಸೀತಾರಾಂ ಕೇಸರಿ, ಸರ್ದಾರ್ ವಲ್ಲಭಭಾಯ್ ಪಟೇಲ್, ಡಾ. ಬಿ. ಆರ್. ಅಂಬೇಡ್ಕರ್ ಹಾಗೂ ನೇತಾಜಿ ಸುಭಾಷ್ ಚಂದ್ರ ಭೋಸ್ ಸೇರಿದಂತೆ ಯಾರಿಗೂ ಕಾಂಗ್ರೆಸ್ ಪಕ್ಷ ಸೂಕ್ತ ಗೌರವ ಕೊಡಲೇ ಇಲ್ಲ ಎಂದು ಟೀಕಿಸಿದ್ದಾರೆ.
ಜವಹರಲಾಲ್ ನೆಹರೂ, ಇಂದಿರಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಭಾರತ ರತ್ನ ಸಿಕ್ಕಿತು. ಆದ್ರೆ, ಅಂಬೇಡ್ಕರ್ ಹಾಗೂ ಪಟೇಲ್ ಅವರಿಗೆ ಮರಣೋತ್ತರವಾಗಿ ತುಂಬಾ ತಡವಾಗಿ 1990 ಹಾಗೂ 1991ರಲ್ಲಿ ಭಾರತ ರತ್ನ ನೀಡಲಾಯಿತು ಎಂದು ಅಸಮಾಧಾನ ಹೊರಹಾಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ