• ಹೋಂ
  • »
  • ನ್ಯೂಸ್
  • »
  • Breaking News
  • »
  • Rahul Gandhi: ರಾಹುಲ್ ಗಾಂಧಿ ಹೊಸ ಪಾಸ್‌ ಪೋರ್ಟ್ ಪ್ರಕರಣ: ಸುಬ್ರಮಣಿಯನ್ ಸ್ವಾಮಿಗೆ ನ್ಯಾಯಾಲಯ ಹೇಳಿದ್ದೇನು?

Rahul Gandhi: ರಾಹುಲ್ ಗಾಂಧಿ ಹೊಸ ಪಾಸ್‌ ಪೋರ್ಟ್ ಪ್ರಕರಣ: ಸುಬ್ರಮಣಿಯನ್ ಸ್ವಾಮಿಗೆ ನ್ಯಾಯಾಲಯ ಹೇಳಿದ್ದೇನು?

ರಾಹುಲ್ ಗಾಂಧಿ ಮತ್ತು ಸುಬ್ರಮಣಿಯನ್ ಸ್ವಾಮಿ

ರಾಹುಲ್ ಗಾಂಧಿ ಮತ್ತು ಸುಬ್ರಮಣಿಯನ್ ಸ್ವಾಮಿ

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ರಾಜತಾಂತ್ರಿಕ ಪಾಸ್​ಪೋರ್ಟ್ ಅನ್ನು ನಿರಾಕರಿಸಿದ್ದು, ಬಳಿಕ ಸಾಮಾನ್ಯ ಹೊಸ ಪಾಸ್​ಪೋರ್ಟ್​​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಇದು ಹಲವು ಚರ್ಚೆಗೆ ಎಡೆ ಮಾಡಿಕೊಟ್ಟಿದೆ.

  • Share this:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರು ರಾಜತಾಂತ್ರಿಕ ಪಾಸ್​ಪೋರ್ಟ್ ಅನ್ನು (Passport) ನಿರಾಕರಿಸಿದ್ದು, ಬಳಿಕ ಸಾಮಾನ್ಯ ಹೊಸ ಪಾಸ್​ಪೋರ್ಟ್​​ಗಾಗಿ ಅರ್ಜಿ ಸಲ್ಲಿಸಿದ್ದಾರೆ. ಇದು ಹಲವು ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಇನ್ನು ಹೊಸ ಪಾಸ್​ಪೋರ್ಟ್ ಪಡೆದುಕೊಳ್ಳುವುದಕ್ಕಾಗಿ ನಿರಾಪೇಕ್ಷಣ ಪತ್ರ ನೀಡುವಂತೆ ಮಂಗಳವಾರ ದೆಹಲಿಯ ಹೈಕೋರ್ಟ್ (High Court) ಮೊರೆ ಹೋಗಿದ್ದಾರೆ. ಸಂಸದ ಸ್ಥಾನದಿಂದ ಅನರ್ಹಗೊಂಡು, ಬಂಗಲೆಯನ್ನು ತೊರೆದ ಬಳಿಕದ ರಾಹುಲ್ ಗಾಂಧಿ ಅವರ ಈ ನಿಲುವು ಚರ್ಚಾಸ್ಪದವಾಗಿದೆ.


ಈ ಬಗ್ಗೆ ಬಿಜೆಪಿ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಗಾಂಧಿ ಅವರಿಗೆ ಪಾಸ್​ಪೋರ್ಟ್ ನೀಡುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು, ಅವರ ವಿರುದ್ಧ ಕೇಳಿ ಬಂದಿರುವ ಆರೋಪಗಳ ತನಿಖೆಗೆ ಅಡ್ಡಿಯಾಗಬಹುದು ಎಂದು ಹೇಳಿದ್ದಾರೆ.


ರಾಹುಲ್ ಗಾಂಧಿ ಅವರು ರಾಜತಾಂತ್ರಿಕ ಪಾಸ್​ಪೋರ್ಟ್ ಅನ್ನು ಒಪ್ಪಿಸಿದ್ದು ಯಾಕೆ?


ರಾಹುಲ್ ಗಾಂಧಿ ಅವರು 2019 ರಲ್ಲಿ ಕೋಲಾರದಲ್ಲಿ ನಡೆದ ಸಮಾರಂಭವೊಂದರಲ್ಲಿ ಮೋದಿ ಉಪನಾಮ ಉಳ್ಳವರು ಕಳ್ಳರು ಎಂದು ಹೇಳಿದ್ದಾರೆ ಎಂದು ಮೋದಿ ಉಪನಾಮ ಹೊಂದಿರುವ ವ್ಯಕ್ತಿಯೊಬ್ಬರು ರಾಹುಲ್ ಗಾಂಧಿ ಅವರ ಮೇಲೆ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಈ ಹಿನ್ನೆಲೆ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ ಎರಡು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಬಳಿಕ ಜಾಮೀನು ಪಡೆದ ರಾಹುಲ್ ಗಾಂಧಿ ಅವರು ಸರ್ಕಾರಿ ಬಂಗಲೆಯನ್ನು ತೊರೆದಿದ್ದರು.


ಇದನ್ನೂ ಓದಿ: ಬಕೆಟ್‌ನಲ್ಲಿ ಮೂತ್ರ ವಿಸರ್ಜನೆ ಮಾಡಿದ ನೀರಿನಲ್ಲಿ ಮನೆ ಒರೆಸಿದ ಮಹಿಳೆ! ವಿಡಿಯೋ ವೈರಲ್‌


ಈ ಎಲ್ಲಾ ಘಟನಾವಳಿಗಳ ಬಳಿಕ ಮಾರ್ಚ್ ನಲ್ಲಿ ರಾಹುಲ್ ಅವರ ಸಂಸತ್ ಸದಸ್ಯತ್ವ ಕೊನೆಗೊಂಡಿತು. ಹಾಗಾಗಿ ರಾಜತಾಂತ್ರಿಕ ಪಾಸ್​ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಸಾಮಾನ್ಯ ಹೊಸ ಪಾಸ್​ಪೋರ್ಟ್ ನೀಡುವಂತೆ ಮನವಿ ಸಲ್ಲಿಸಿದ್ದಾರೆ.


ಇದೇನಿದು ರಾಜತಾಂತ್ರಿಕ ಪಾಸ್​ಪೋರ್ಟ್?


ಈ ಪಾಸ್‌ ಪೋರ್ಟ್ ಅನ್ನು ಅಧಿಕೃತ ಸರ್ಕಾರಿ ಕೆಲಸದ ಮೇಲೆ ವಿದೇಶಕ್ಕೆ ಪ್ರಯಾಣಿಸುವ ಸಲುವಾಗಿ ಕೆಲವೇ ವ್ಯಕ್ತಿಗಳಿಗೆ ನೀಡುವ ಪಾಸ್​ಪೋರ್ಟ್ ಇದಾಗಿದೆ.


ರಾಹುಲ್ ಗಾಂಧಿ ಮತ್ತು ಸುಬ್ರಮಣಿಯನ್ ಸ್ವಾಮಿ


ಹೊಸ ಪಾಸ್​ಪೋರ್ಟ್​​ಗೆ ಅರ್ಜಿ ಸಲ್ಲಿಸಿದ್ದು ಯಾಕೆ?


ಮುಂದಿನ ದಿನಗಳಲ್ಲಿ ರಾಹುಲ್ ಗಾಂಧಿ ಅವರು ಜೂನ್ 4 ರಂದು ಅಮೆರಿಕಾ ಪ್ರವಾಸ ಕೈಗೊಳ್ಳಲು ಯೋಜಿಸಿದ್ದಾರೆ. ನ್ಯೂಯಾರ್ಕ್ ನ ಮ್ಯಾಡಿಸನ್ ಸ್ವ್ಕೇರ್ ಗಾರ್ಡನ್‌ ನಲ್ಲಿ ನಡೆಯುವ ಸಾರ್ವಜನಿಕ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದು, ಸ್ಟ್ಯಾಂಡ್ ಪೋರ್ಡ್ ವಿಶ್ವವಿದ್ಯಾಲಯದಲ್ಲಿ ಭಾಷಣ ಮೂಲಕ ಈ ಒಂದು ವಾರದ ಪ್ರವಾಸ ಅಂತ್ಯಗೊಳ್ಳಲಿದೆ. ಇದು ರಾಹುಲ್ ಗಾಂಧಿ ಪಾಲ್ಗೊಳ್ಳುತ್ತಿರುವ ಅಮೆರಿಕಾದ ಮೊದಲ ಸಾರ್ವಜನಿಕ ರ್ಯಾಲಿಯಾಗಿದೆ.


ಸುಬ್ರಮಣಿಯನ್ ಸ್ವಾಮಿ ವಿರೋಧಿಸುತ್ತಿರುವುದೇಕೆ?


ರಾಹುಲ್ ಗಾಂಧಿ ಅವರಿಗೆ ಹೊಸ ಪಾಸ್​ಪೋರ್ಟ್ ನೀಡಿದರೆ ನ್ಯಾಷನಲ್ ಹೆರಾಲ್ಡ್ ಪ್ರಕರಣದ ಮೇಲೆ ಪರಿಣಾಮ ಬೀರಲಿದೆ. ಹಾಗಾಗಿ ಅವರಿಗೆ ಹೊಸ ಪಾಸ್​ಪೋರ್ಟ್ ನೀಡದಂತೆ ವಿರೋಧಿಸಿ ನ್ಯಾಯಲಯದ ಮುಂದೆ ಹಾಜರಾಗಿದ್ದಾರೆ.


ನ್ಯಾಷನಲ್ ಹೆರಾಲ್ಡ್ ಪ್ರಕರಣ ತನಿಖೆಗೆ ಇನ್ನು ಪ್ರಗತಿಯಲ್ಲಿದೆ. ಅವರಿಗೆ ಇದೀಗ ಹೊಸ ಪಾಸ್​ಪೋರ್ಟ್ ನೀಡಿದರೆ ತನಿಖೆಯ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.


ನ್ಯಾಯಾಲಯ ಹೇಳಿದ್ದೇನು?


ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆ ನಡೆಯುತ್ತಿದೆ ಮತ್ತು ರಾಹುಲ್ ಗಾಂಧಿ ಅವರು ವಿದೇಶ ಪ್ರಯಾಣ ಕೈಗೊಂಡಿದ್ದಾರೆ. ಅವರು ಪರಾರಿಯಾಗುವ ಹಾಗೂ ಓಡಿ ಹೋಗುವ ಭಯವಿಲ್ಲ. ಏಕೆಂದರೆ ಪ್ರಯಾಣ ಎಂಬುದು ಮೂಲಭೂತ ಹಕ್ಕು ಎಂದು ಕೋರ್ಟ್ ಹೇಳಿದೆ. ರಾಹುಲ್ ಗಾಂಧಿ ಪರ ವಕೀಲರಾದ ಟರ್ನಮ್ ಚೀಮಾ ಮತ್ತು ನಿಖಿಲ್ ಭಲ್ಲಾ, ಸುಮೀತ್ ಕುಮಾರ್ ಅವರು ರಾಹುಲ್ ಮೇಲೆ ಯಾವುದೇ ಪ್ರಕರಣಗಳಿಲ್ಲ. ವಿದೇಶಿ ಪ್ರವಾಸವು ಮೂಲಭೂತ ಹಕ್ಕು ಎಂದು ವಾದಿಸಿದ್ದರು.




ಏನಿದು ನ್ಯಾಷನಲ್ ಹೆರಾಲ್ಡ್ ಪ್ರಕರಣ?


ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಜವಾಹರಲಾಲ್ ನೆಹರು ಅವರು ಹುಟ್ಟು ಹಾಕಿದ್ದರು. ಇದರಲ್ಲಿ 5000 ಸ್ವಾತಂತ್ರ್ಯ ಹೋರಾಟಗಾರರು ಷೇರುದಾರರಾಗಿದ್ದರು.

top videos


    ಯಂಗ್ ಇಂಡಿಯಾ ಲಿಮಿಟೆಡ್ (ವೈಐಎಲ್)ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ ನ ಷೇರುಗಳ ಖರೀದಿ ವಿಚಾರದಲ್ಲಿ ನಂಬಿಕೆ ಹಾಗೂ ದ್ರೋಹ ನಡೆದಿದೆ. ಇದರಲ್ಲಿ ಕಾಂಗ್ರೆಸ್‌ನ ಹಲವು ನಾಯಕರು ಪಾಲ್ಗೊಂಡಿದ್ದಾರೆ ಎಂದು 2012 ರಲ್ಲಿ ಬಿಜೆಪಿ ನಾಯಕ ಹಾಗೂ ವಕೀಲ ಸುಬ್ರಮಣಿಯನ್ ಸ್ವಾಮಿ ಅವರು ವಿಚಾರಣಾ ನ್ಯಾಯಲಯದಲ್ಲಿ ದೂರು ದಾಖಲಿಸಿದ್ದರು. ಅಂದಿನಿಂದ ಇಂದಿನವರೆಗೂ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರು ತನಿಖೆ ಎದುರಿಸುತ್ತಿದ್ದಾರೆ.

    First published: