ಬೆಂಗಳೂರು: ಪೆಟ್ರೋಲ್ (Petrol Rate) ಮತ್ತು ಡೀಸೆಲ್ ಗೆ (Diesel Price)ಪ್ರಸ್ತುತ ಜಗತ್ತಿನಾದ್ಯಂತ ಎಲ್ಲ ಕಡೆ ಅಪಾರವಾದ ಬೇಡಿಕೆಯಿದೆ. ಹಲವು ಕೈಗಾರಿಕೆಗಳಿಂದ ಹಿಡಿದು ವಾಹನಗಳ ಓಡಾಟಕ್ಕೆ ಇಂಧನ ಎಂಬುದು ಅತಿ ಅವಶ್ಯಕ ಸಾಧನವಾಗಿದೆ.
ಪೆಟ್ರೋಲ್-ಡೀಸೆಲ್‌ಬೆಲೆ ಏರಿಕೆ ಅಂದರೆ ದೇಶಕ್ಕೆ ಅದೊಂದು ಹೊಸ ತಲೆನೋವಿದ್ದಂತೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಏರಿಕೆಯಾದರೆ ಸಾಕು, ದೇಶದಲ್ಲಿಯೂ ಬೆಲೆ ಗಗನಕ್ಕೇರುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಬರೆ ಬೀಳೋದಂತೂ ಸತ್ಯ. ಆದರೆ ಕಳೆದ ಒಂದು ವರ್ಷದಿಂದ ನಾಗರೀಕರಿಗೆ ಈ ತಲೆಬಿಸಿ ಇಲ್ಲದಿದ್ದರೂ, ಮತ್ತಷ್ಟು ಇಳಿಕೆ ಆಗಿದ್ದರೆ ಚೆನ್ನಾಗಿರುತ್ತಿತ್ತು ಎನ್ನುತ್ತಾರೆ ಬಳಕೆದಾರರು.
ಇನ್ನೂ ಬೆಲೆ ವಿಚಾರ ಬಂದರೆ ಭಾರತದಲ್ಲಿ ಸಹ ಅಂತಾರಾಷ್ಟ್ರೀಯ ಮಾರುಕಟ್ಟೆಗನುಗುಣವಾಗಿ ಪೆಟ್ರೋಲ್ ಅಥವಾ ಡೀಸೆಲ್ ಇಂಧನಗಳ ದರಗಳಲ್ಲಿ ನಿತ್ಯ ಏರಿಳಿತಗಳು ನಡೆಯುತ್ತವೆ. ತೈಲದ ಈ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆ ಸದಾ ಸ್ಥಿರವಾಗಿರುವುದಿಲ್ಲ. ಹಲವು ಜಾಗತಿಕ ವಿದ್ಯಮಾನಗಳಿಂದಾಗಿ ಅದರ ಬೆಲೆ ಸದಾ ಪ್ರಭಾವಿಸಲ್ಪಡುತ್ತಿರುತ್ತದೆ. ಹಾಗಾದರೆ ದೇಶದ ಪ್ರಮುಖ ನಗರಗಳಲ್ಲಿನ ಮತ್ತು ರಾಜ್ಯದ ಜಿಲ್ಲೆಗಳಲ್ಲಿ ಪೆಟ್ರೋಲ್-ಡೀಸೆಲ್‌ಬೆಲೆ ಎಷ್ಟಿದೆ? ಎಷ್ಟು ಇಳಿಕೆ.. ಎಷ್ಟು ಏರಿಕೆ ಎಂಬುದನ್ನು ಇಲ್ಲಿ ನೋಡೋಣ.
ಇದನ್ನೂ ಓದಿ: YouTube ನೋಡಿ ಕೃಷಿ ಆರಂಭಿಸಿದ ಇಟ್ಟಿಗೆ ವ್ಯಾಪಾರಿ, ತರಕಾರಿ ಬೆಳೆದು 20 ಲಕ್ಷ ಸಂಪಾದನೆ!
ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್-ಡೀಸೆಲ್ ದರಗಳು
ರಾಜಧಾನಿ ಬೆಂಗಳೂರು ನಗರದಲ್ಲಿ ಇಂದು ಪೆಟ್ರೋಲ್ ರೂ. 101.94 ಆಗಿದ್ದರೆ ಡೀಸೆಲ್ ದರ ರೂ. 87.89 ಆಗಿದೆ. ಮಹಾನಗರಗಳಾದ ಚೆನ್ನೈ, ಮುಂಬೈ, ಕೊಲ್ಕತ್ತಾಗಳಲ್ಲಿ ಇಂದಿನ ಪೆಟ್ರೋಲ್ ದರಗಳು ಕ್ರಮವಾಗಿ ರೂ.102.63, ರೂ. 106.31, ರೂ. 106.03 ಆಗಿದ್ದರೆ ಡೀಸೆಲ್ ದರಗಳು ಕ್ರಮವಾಗಿ ರೂ. 94.24, ರೂ. 94.27, ರೂ. 92.76 ಆಗಿವೆ. ಇನ್ನು ಉಳಿದಂತೆ ರಾಜಧಾನಿ ದೆಹಲಿಯಲ್ಲಿ ಇಂದಿನ ಪೆಟ್ರೋಲ್ ದರ ರೂ. 96.72 ಆಗಿದ್ದರೆ ಡೀಸೆಲ್ ದರ ರೂ. 89.62 ಆಗಿದೆ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು
ಬಾಗಲಕೋಟೆ - ರೂ. 102.49 (1 ಪೈಸೆ ಏರಿಕೆ)
ಬೆಂಗಳೂರು - ರೂ. 101.94 (00)
ಬೆಂಗಳೂರು ಗ್ರಾಮಾಂತರ - ರೂ. 101.58 (42 ಪೈಸೆ ಇಳಿಕೆ)
ಬೆಳಗಾವಿ - ರೂ. 101.88 (50 ಪೈಸೆ ಇಳಿಕೆ)
ಬಳ್ಳಾರಿ - ರೂ 103.07 (54 ಪೈಸೆ ಇಳಿಕೆ)
ಬೀದರ್ - ರೂ. 102.75 (23 ಪೈಸೆ ಏರಿಕೆ)
ವಿಜಯಪುರ - ರೂ. 101.93 (31 ಪೈಸೆ ಇಳಿಕೆ)
ಚಾಮರಾಜನಗರ - ರೂ. 102.07 (00)
ಚಿಕ್ಕಬಳ್ಳಾಪುರ - ರೂ. 102.83 (14 ಪೈಸೆ ಏರಿಕೆ)
ಚಿಕ್ಕಮಗಳೂರು - ರೂ. 103.47 (65 ಪೈಸೆ ಇಳಿಕೆ )
ಚಿತ್ರದುರ್ಗ - ರೂ. 103.09 (36 ಪೈಸೆ ಏರಿಕೆ)
ದಕ್ಷಿಣ ಕನ್ನಡ - ರೂ. 101.13 (08 ಪೈಸೆ ಇಳಿಕೆ)
ದಾವಣಗೆರೆ - ರೂ. 103.21 (7 ಪೈಸೆ ಏರಿಕೆ)
ಧಾರವಾಡ - ರೂ. 102.04 (33 ಪೈಸೆ ಏರಿಕೆ)
ಗದಗ - ರೂ. 102.79 (41 ಪೈಸೆ ಏರಿಕೆ)
ಕಲಬುರಗಿ - ರೂ. 102.21 (8 ಪೈಸೆ ಇಳಿಕೆ)
ಹಾಸನ - ರೂ. 101.79 (12 ಪೈಸೆ ಏರಿಕೆ)
ಹಾವೇರಿ - ರೂ. 102.24 (6 ಪೈಸೆ ಏರಿಕೆ)
ಕೊಡಗು - ರೂ. 103.44 (31 ಪೈಸೆ ಏರಿಕೆ)
ಕೋಲಾರ - ರೂ. 101.87 (44 ಪೈಸೆ ಇಳಿಕೆ)
ಕೊಪ್ಪಳ - ರೂ. 102.94 (6 ಪೈಸೆ ಇಳಿಕೆ)
ಮಂಡ್ಯ - ರೂ. 102.14 (9 ಪೈಸೆ ಏರಿಕೆ )
ಮೈಸೂರು - ರೂ. 101.50 (00)
ರಾಯಚೂರು 101.90 (6 ಪೈಸೆ ಏರಿಕೆ)
ರಾಮನಗರ - ರೂ. 102.55 (17 ಪೈಸೆ ಏರಿಕೆ)
ಶಿವಮೊಗ್ಗ - ರೂ. 103.44 (17 ಪೈಸೆ ಇಳಿಕೆ)
ತುಮಕೂರು - ರೂ. 103.18 (42 ಪೈಸೆ ಏರಿಕೆ)
ಉಡುಪಿ - ರೂ. 101.92 (11 ಪೈಸೆ ಏರಿಕೆ)
ಉತ್ತರ ಕನ್ನಡ - ರೂ. 102.14 (86 ಪೈಸೆ ಇಳಿಕೆ)
ವಿಜಯನಗರ - ರೂ. 103.20 (76 ಪೈಸೆ ಇಳಿಕೆ)
ಯಾದಗಿರಿ - ರೂ. 102.65 (14 ಪೈಸೆ ಇಳಿಕೆ)
ಇದನ್ನೂ ಓದಿ: Delhi: ಆನ್ಲೈನ್ನಲ್ಲಿ ಜಾನುವಾರು ವ್ಯಾಪಾರ ಮಾಡಿ 565 ಕೋಟಿ ಆದಾಯ ಗಳಿಸಿದ ಸ್ಟಾರ್ಟ್ಅಪ್!
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಡೀಸೆಲ್ ದರಗಳು
ಬಾಗಲಕೋಟೆ - ರೂ. 88.41
ಬೆಂಗಳೂರು - ರೂ. 87.89
ಬೆಂಗಳೂರು ಗ್ರಾಮಾಂತರ - ರೂ. 87.57
ಬೆಳಗಾವಿ - ರೂ. 87.87
ಬಳ್ಳಾರಿ - ರೂ. 89.95
ಬೀದರ್ - ರೂ. 88.65
ವಿಜಯಪುರ - ರೂ. 87.90
ಚಾಮರಾಜನಗರ - ರೂ. 87.88
ಚಿಕ್ಕಬಳ್ಳಾಪುರ - ರೂ. 87.80
ಚಿಕ್ಕಮಗಳೂರು - ರೂ. 89.22
ಚಿತ್ರದುರ್ಗ - ರೂ. 88.83
ದಕ್ಷಿಣ ಕನ್ನಡ - ರೂ. 87.13
ದಾವಣಗೆರೆ - ರೂ. 88.94
ಧಾರವಾಡ - ರೂ. 88.01
ಗದಗ - ರೂ. 88.68
ಕಲಬುರಗಿ - ರೂ. 88.16
ಹಾಸನ - ರೂ. 87.67
ಹಾವೇರಿ - ರೂ. 88.19
ಕೊಡಗು - ರೂ. 89.12
ಕೋಲಾರ - ರೂ. 87.83
ಕೊಪ್ಪಳ - ರೂ. 88.13
ಮಂಡ್ಯ - ರೂ. 88.08
ಮೈಸೂರು - ರೂ. 87.49
ರಾಯಚೂರು - ರೂ. 87.89
ರಾಮನಗರ - ರೂ. 88.36
ಶಿವಮೊಗ್ಗ – 89.21
ತುಮಕೂರು - ರೂ. 89.01
ಉಡುಪಿ - ರೂ. 87.84
ಉತ್ತರ ಕನ್ನಡ - ರೂ. 88.09
ವಿಜಯನಗರ - ರೂ. 89.05
ಯಾದಗಿರಿ - ರೂ. 88.55
ಪೆಟ್ರೋಲ್ ಹಾಗೂ ಡೀಸೆಲ್ ನಂತಹ ಇಂಧನಗಳನ್ನು ಮೂಲತಃ ಕಚ್ಚಾ ತೈಲವನ್ನು ಸಂಸ್ಕರಿಸಿ ಉತ್ಪಾದಿಸಲಾಗುತ್ತದೆ. ಹಾಗಾಗಿ ಕಚ್ಚಾ ತೈಲ ಎಂಬುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಪಾರ ಬೇಡಿಕೆ ಹೊಂದಿದ್ದು ಇದಕ್ಕೆಂದೇ ದೊಡ್ಡ ಮಾರುಕಟ್ಟೆಯೇ ಇದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ