• Home
  • »
  • News
  • »
  • breaking-news
  • »
  • Pakistan: ಮತ್ತೆ ಕಳಚಿತು ಪಾಕ್ ಮುಖವಾಡ: ಕರಾಚಿಯಲ್ಲೇ ನೆಲೆಸಿದ್ದಾನೆ ದಾವೂದ್ ಇಬ್ರಾಹಿಂ

Pakistan: ಮತ್ತೆ ಕಳಚಿತು ಪಾಕ್ ಮುಖವಾಡ: ಕರಾಚಿಯಲ್ಲೇ ನೆಲೆಸಿದ್ದಾನೆ ದಾವೂದ್ ಇಬ್ರಾಹಿಂ

ದಾವೂದ್ ಇಬ್ರಾಹಿಂ

ದಾವೂದ್ ಇಬ್ರಾಹಿಂ

Dawood Ibrahim: ಕರಾಚಿಯ ಕ್ಲಿಫ್ಟನ್ ಟವರ್‌ನಲ್ಲಿರುವ ಐಎಸ್‌ಐನ ಸೇಫ್ ಹೌಸ್‌ನಲ್ಲಿ ನಡೆದ ಈ ಸಭೆಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಭಾರತದಲ್ಲಿ ಭೂಗತ ಜಗತ್ತು ಮತ್ತು ಭಯೋತ್ಪಾದನೆಯ ಜಾಲವನ್ನು ಮರುಹೊಂದಿಸುವಂತೆ ದಾವೂದ್‌ಗೆ ಕೇಳಿದರು.

  • Share this:

ಕರಾಚಿ(ಅ.20): ಭೂಗತ ಪಾತಕಿ ಹಾಗೂ 1993ರ ಮುಂಬೈ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ದಾವೂದ್ ಇಬ್ರಾಹಿಂ (Dawood Ibrahim) ಪಾಕಿಸ್ತಾನದಲ್ಲಿದ್ದಾನೆ. ನ್ಯೂಸ್ 18 ಬಳಿ ಲಭ್ಯವಿರುವ ಗೌಪ್ಯ ದಾಖಲೆಗಳಿಂದ ಇದು ಬಹಿರಂಗವಾಗಿದೆ. ಈ ದಾಖಲೆಗಳು ಕರಾಚಿಯಲ್ಲಿ ಪಾಕಿಸ್ತಾನಿ ಗುಪ್ತಚರ ಸಂಸ್ಥೆ ISI( ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್) ಮತ್ತು ದಾವೂದ್ ಇಬ್ರಾಹಿಂ ನಡುವಿನ ಸಭೆಯನ್ನು ದೃಢೀಕರಿಸುತ್ತವೆ. ಕರಾಚಿಯ ಕ್ಲಿಫ್ಟನ್ ಟವರ್‌ನಲ್ಲಿರುವ ಐಎಸ್‌ಐನ ಸೇಫ್ ಹೌಸ್‌ನಲ್ಲಿ ನಡೆದ ಈ ಸಭೆಯಲ್ಲಿ ಪಾಕಿಸ್ತಾನದ (Pakistan) ಗುಪ್ತಚರ ಸಂಸ್ಥೆಯ ಅಧಿಕಾರಿಗಳು ಭಾರತದಲ್ಲಿ ಭೂಗತ ಜಗತ್ತು ಮತ್ತು ಭಯೋತ್ಪಾದನೆಯ ಜಾಲವನ್ನು ಮರುಹೊಂದಿಸುವಂತೆ ದಾವೂದ್‌ಗೆ ಕೇಳಿದ್ದಾರೆ.


ದಾವೂದ್‌ ಇಬ್ರಾಹಿಂನೊಂದಿಗೆ ಐಎಸ್‌ಐ ಸಂಪರ್ಕ


ದಾವೂದ್‌ ಇಬ್ರಾಹಿಂನೊಂದಿಗೆ ಐಎಸ್‌ಐ ಸಂಪರ್ಕದಲ್ಲಿದ್ದು ದೊಡ್ಡ ಅಪರಾಧ ಎಸಗಲು ಏನೇ ಸಹಾಯ ಬೇಕಾದರೂ ನೀಡಲಾಗುವುದು ಎಂದು ಹೇಳಲಾಗಿದೆ.


ನ್ಯೂಸ್ 18 ಇಂಡಿಯಾದೊಂದಿಗಿನ ಗೌಪ್ಯ ದಾಖಲೆಯಲ್ಲಿ ದಾವೂದ್ ಮತ್ತು ಐಎಸ್‌ಐ ಅಧಿಕಾರಿಗಳ ನಡುವಿನ ಸಭೆಯ ಸಂಪೂರ್ಣ ವಿವರಗಳಿವೆ. ಇದಲ್ಲದೆ, ಭಾರತೀಯ ತನಿಖಾ ಸಂಸ್ಥೆಗಳು ದಾವೂದ್ ಇಬ್ರಾಹಿಂ ಮತ್ತು ಅವನ ಸಹಾಯಕರ ನಡುವಿನ ಸಂಭಾಷಣೆಯ ಟೇಪ್‌ಗಳೂ ಲಭ್ಯವಾಗಿವೆ.


ಭಾರೀ ದಾಳಿ ನಡೆಸುವ ಯೋಜನೆ


ಭಾರತದಲ್ಲಿ ಭೂಗತ ಜಗತ್ತನ್ನು ಮತ್ತೆ ಪುನರುಜ್ಜೀವನಗೊಳಿಸುವ ಕುಕೃತ್ಯವನ್ನು ಐಎಸ್‌ಐ ದಾವೂದ್‌ಗೆ ವಹಿಸಿದೆ. ಇದರೊಂದಿಗೆ ಭಾರೀ ದಾಳಿ ನಡೆಸುವ ಯೋಜನೆಯನ್ನೂ ರೂಪಿಸಲಾಗಿದ್ದು, ಇದಕ್ಕಾಗಿ ಸಮುದ್ರ ಮಾರ್ಗದ ಮೂಲಕ ಶಸ್ತ್ರಾಸ್ತ್ರ, ಮದ್ದುಗುಂಡುಗಳನ್ನು ರವಾನಿಸುವ ಯೋಜನೆ ರೂಪಿಸಲಾಗಿದೆ. ಭಾರತದ ಮೋಸ್ಟ್ ವಾಂಟೆಡ್ ಉಗ್ರನಿಗೆ ಕರಾಚಿಯಲ್ಲಿ ಪಾಕಿಸ್ತಾನ ಆಶ್ರಯ ನೀಡಿದ್ದು, ಆತನನ್ನು ಬಿಗಿ ಭದ್ರತೆಯಲ್ಲಿ ಇರಿಸಿದೆ.


ಅಕ್ಟೋಬರ್ 18 ರಂದು ದೆಹಲಿಯ ಪ್ರಗತಿ ಮೈದಾನದಲ್ಲಿ ಇಂಟರ್‌ಪೋಲ್ ಸಭೆ ನಡೆಸಲಾಯಿತು, ಇದರಲ್ಲಿ ದಾವೂದ್ ಇಬ್ರಾಹಿಂ ಕರಾಚಿಯಲ್ಲಿದ್ದಾನೆ ಎಂಬುದಕ್ಕೆ ಭಾರತವು ಬಲವಾದ ಪುರಾವೆಗಳನ್ನು ಪ್ರಸ್ತುತಪಡಿಸಿತು. ಈ ಸಭೆಯಲ್ಲಿ ಪಾಕಿಸ್ತಾನದ ಪ್ರತಿನಿಧಿಗಳೂ ಭಾಗಿಯಾಗಿದ್ದರು.


ಇಂಟರ್‌ಪೋಲ್‌ನ  ಸಭೆಯಲ್ಲಿ, 195 ದೇಶಗಳ ಪ್ರತಿನಿಧಿಗಳು


ಇಂಟರ್‌ಪೋಲ್‌ನ ಈ ಸಭೆಯಲ್ಲಿ, 195 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದರು, ಪಾಕಿಸ್ತಾನದ ಪರವಾಗಿ ಅದರ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್‌ಐಎ) ಮಹಾನಿರ್ದೇಶಕ ಮೊಹ್ಸಿನ್ ಬಟ್ ಭಾಗಿಯಾಗಿದ್ದರು. ಇಂಟರ್‌ಪೋಲ್ ಜನರಲ್ ಅಸೆಂಬ್ಲಿಯಲ್ಲಿ ಪತ್ರಕರ್ತರು ಮೊಹ್ಸಿನ್ ಬಟ್ ಅವರನ್ನು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಲಷ್ಕರ್-ಎ-ತೊಯ್ಬಾ ಮುಖ್ಯಸ್ಥ ಹಫೀಜ್ ಸಯೀದ್ ಅವರನ್ನು ಭಾರತಕ್ಕೆ ಹಸ್ತಾಂತರಿಸುತ್ತೀರಾ ಎಂದು ಕೇಳಿದಾಗ? ಉತ್ತರಿಸಲು ನಿರಾಕರಿಸಿದರು.


ಈ ಸಂಪೂರ್ಣ ಘಟನೆಯ ವಿಡಿಯೋವನ್ನು ಎಎನ್‌ಐ ಹಂಚಿಕೊಂಡಿದೆ. ದಾವೂದ್ ಬಗ್ಗೆ ಪತ್ರಕರ್ತ ಮೊಹ್ಸಿನ್ ಬಟ್‌ಗೆ ಪ್ರಶ್ನೆ ಕೇಳಿದ ತಕ್ಷಣ, ಅವರು ತಮ್ಮ ಬೆರಳುಗಳಿಂದ ಮೌನ ವಹಿಸುವಂತೆ ಸೂಚಿಸಿದ್ದಾರೆ ಎಂದು ಟ್ವೀಟ್‌ನಲ್ಲಿ ಕಾಣಬಹುದು. 25 ವರ್ಷಗಳ ನಂತರ ಭಾರತದಲ್ಲಿ ಇಂಟರ್‌ಪೋಲ್‌ನ ಈ ಸಭೆ ನಡೆಯುತ್ತಿದೆ. ಭಾರತದಲ್ಲಿ ಕೊನೆಯ ಬಾರಿಗೆ 1997 ರಲ್ಲಿ ಈ ಮಹಾಸಭೆ ನಡೆದಿತ್ತು. ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಸಂದರ್ಭದಲ್ಲಿ ಹೊಸದಿಲ್ಲಿಯಲ್ಲಿ ಈ ವರ್ಷದ ಮಹಾಸಭೆಯನ್ನು ಆಯೋಜಿಸಲು ವಿಶೇಷ ಅವಕಾಶ ಕಲ್ಪಿಸಲಾಯಿತು.


ಭಯೋತ್ಪಾದನೆ ವಿಷಯ ಪ್ರಸ್ತಾಪಿಸಿದ ಪ್ರಧಾನಿ ಮೋದಿ


ಈ ಸಭೆಯಲ್ಲಿ ಪ್ರಧಾನಿ ಮೋದಿ ಅವರು ಭಯೋತ್ಪಾದನೆಯ ವಿಷಯವನ್ನೂ ಪ್ರಸ್ತಾಪಿಸಿದರು. ಯಾವುದೇ ದೇಶವನ್ನು ಹೆಸರಿಸದೆ ತಮ್ಮ ಭಾಷಣದಲ್ಲಿ, ಭಯೋತ್ಪಾದನೆಯ ಪಿಡುಗನ್ನು ಎದುರಿಸಲು ವಿಶ್ವದ ಎಲ್ಲಾ ದೇಶಗಳು ಒಂದಾಗಬೇಕು ಎಂದು ಹೇಳಿದರು. ಮಾದಕ ದ್ರವ್ಯ ದಂಧೆಕೋರರು, ಅಕ್ರಮ ಸಾಗಣೆ ಗ್ಯಾಂಗ್‌ಗಳು ಅಥವಾ ಸಂಘಟಿತ ಅಪರಾಧಗಳಿಗೆ ಯಾವುದೇ ಸ್ಥಾನ ನೀಡಬಾರದು ಎಂದು ಅವರು ಹೇಳಿದರು. ಈ ಬೆದರಿಕೆಗಳನ್ನು ಸೋಲಿಸಲು ಜಗತ್ತು ಒಗ್ಗೂಡಬೇಕಾದ ಸಮಯ ಬಂದಿದೆ ಎಂದು ಹೇಳಿದರು.


ದಾವೂದ್ ಇಬ್ರಾಹಿಂ ಕರಾಚಿಯಲ್ಲಿದ್ದಾನೆ ಎಂದಿದ್ದ ಪಾಕಿಸ್ತಾನ


2020 ರಲ್ಲಿ, ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫೋರ್ಸ್‌ಗೆ ಸಲ್ಲಿಸಿದ ವರದಿಯಲ್ಲಿ, ಕರಾಚಿಯ ಸೌದಿ ಮಸೀದಿಯ ಪಕ್ಕದಲ್ಲಿರುವ ಶ್ವೇತಭವನದ ಕಟ್ಟಡದಲ್ಲಿ ದಾವೂದ್ ಇಬ್ರಾಹಿಂ ವಾಸಿಸುತ್ತಿದ್ದಾರೆ ಎಂದು ಪಾಕಿಸ್ತಾನವೇ ಒಪ್ಪಿಕೊಂಡಿದೆ ಎಂಬುವುದು ಉಲ್ಲೇಖನೀಯ. ಅವರ ಮನೆ ಸಂಖ್ಯೆ 37-30 ಬೀದಿ. ಆದರೆ, ಒಂದು ದಿನದ ನಂತರ, ಪಾಕಿಸ್ತಾನವು ಇದನ್ನು ಬದಲಾಯಿಸಿತು ಮತ್ತು ದಾವೂದ್ ಇಬ್ರಾಹಿಂ ಕರಾಚಿಯಲ್ಲಿದ್ದಾನೆ ಎಂಬ ಮಾತು ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವಂತಿದೆ ಎಂದು ಹೇಳಿದೆ.

Published by:Precilla Olivia Dias
First published: