ಭಾರತೀಯರು ಪ್ರತೀ ಮನೆಯಲ್ಲಿ (Home) ಸದಸ್ಯರು ತಮ್ಮ ದಿನವನ್ನು ಚಹಾದ (Tea) ಜೊತೆಗೆ ಶುರು ಮಾಡ್ತಾರೆ. ಅಲ್ಲದೆ ದಿನದ ಸಾಯಂಕಾಲ ಮತ್ತೆ ಚಹಾ ಕುಡಿಯಲು ಇಷ್ಟ ಪಡ್ತಾರೆ. ಚಹಾ ಸೇವನೆ ಮೈಂಡ್ ಮತ್ತು ಮೂಡ್ (Mind And Mood) ಫ್ರೆಶ್ ಆಗಿಡುತ್ತದೆ ಅನ್ನೋ ನಂಂಬಿಕೆ ಇದೆ. ಅಲ್ಲದೇ ಕೆಲಸ ಒತ್ತಡ (Work Stress) ಮತ್ತು ಸುಸ್ತು ಸಮಸ್ಯೆ ನಿವಾರಣೆ ಮಾಡಲು ಒಂದು ಕಪ್ ಚಹಾ ಸಹಾಯ ಮಾಡುತ್ತದೆ ಎಂದು ಭಾವಿಸಿದ್ದಾರೆ. ಅದಾಗ್ಯೂ ಒಂದು ಕಪ್ ಚಹಾ ಕುಡಿದರೆ ಆಯಾಸ ದೂರವಾಗುತ್ತೆ ಅನ್ನೋ ಮಾತಿದೆ. ಆದರೆ ದೇಹದ ಜೊತೆಗೆ ನಮ್ಮ ತ್ವಚೆಯೂ ದಣಿಯುತ್ತದೆ ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ.
ತ್ವಚೆಯ ಕಾಂತಿಗೆ ಮತ್ತು ಸಮಸ್ಯೆ ದೂರ ಮಾಡಲು ಊಲಾಂಗ್ ಚಹಾ
ಇಡೀ ದಿನದ ಬಿಸಿಲು, ಧೂಳು, ಮಾಲಿನ್ಯ ಮತ್ತು ಒತ್ತಡವು ಚರ್ಮದ ಮೇಲೆ ಕೊಳಕು ಅಂಟಿಕೊಳ್ಳಲು ಕಾರಣವಾಗುತ್ತದೆ. ಇದರಿಂದ ತ್ವಚೆ ದಣಿಯುತ್ತದೆ. ಹಾಗಾಗಿ ಚರ್ಮಕ್ಕೂ ವಿಶ್ರಾಂತಿ ಬೇಕು. ನೀವು ನಿಮ್ಮ ದೈಹಿಕ ಆಯಾಸ ದೂರ ಮಾಡೋಕೆ ಚಹಾ ಕುಡಿಯುತ್ತೀರಿ.
ಹಾಗೆಯೇ ಚಹಾ ಚರ್ಮದ ಆಯಾಸ ನಿವಾರಣೆಗೂ ಪ್ರಯೋಜನಕಾರಿ ಆಗಿದೆ. ಚಹಾದಲ್ಲಿ ಹಲವಾರು ರೀತಿಯ ಪೋಷಕಾಂಶಗಳಿವೆ. ಇದು ಚರ್ಮ ಮತ್ತು ಆರೋಗ್ಯ ಎರಡನ್ನೂ ಕಾಪಾಡಲು ಸಹಕಾರಿ ಆಗಿದೆ. ಹಾಗಾದರೆ ನಿಮ್ಮ ಚರ್ಮ ಮತ್ತು ಕೂದಲಿಗೆ ಚಹಾವನ್ನು ಹೇಗೆ ಬಳಸಬಹುದು ಎಂದು ನೋಡೋಣ.
ಊಲಾಂಗ್ ಟೀ, ಹೃದಯದ ಆರೋಗ್ಯ ಕಾಪಾಡುತ್ತದೆ. ಮತ್ತು ತೂಕ ಕಡಿಮೆ ಮಾಡಲು ಸಹಕಾರಿ. ಊಲಾಂಗ್ ಚಹಾ ನಿಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಲು ಹೇಗೆ ಸಹಾಯ ಮಾಡುತ್ತದೆ ಎಂದು ತಿಳಿಯೋಣ.
ಊಲಾಂಗ್ ಚಹಾ ಮತ್ತು ಅದರ ಪ್ರಯೋಜನಗಳು
ಊಲಾಂಗ್ ಚಹಾ ಬೆಸ್ಟ್ ಆಯ್ಕೆ ಆಗಿದೆ. ಕ್ಯಾಮೆಲಿಯಾ ಸಿನೆನ್ಸಿಸ್ ಅನ್ನು ಉಪ್ಪು ಸಸ್ಯದಿಂದ ತಯಾರಿಸಲಾಗುತ್ತದೆ. ಇದು ಸ್ವಲ್ಪ ಹುದುಗುವಿಕೆ ಮತ್ತು ಆಕ್ಸಿಡೀಕರಣಗೊಳ್ಳುತ್ತದೆ. ಊಲಾಂಗ್ ಚಹಾವು ಅದ್ಭುತ ಪರಿಮಳ ಹೊಂದಿದೆ. ರುಚಿ ಮತ್ತು ಆರೋಗ್ಯಕರವಾಗಿದೆ. ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕ ಹೊಂದಿದೆ.
ಊಲಾಂಗ್ ಚಹಾದ ಆರೋಗ್ಯ ಲಾಭಗಳು
ಒಳಗಿನಿಂದ ಚರ್ಮವನ್ನು ಹಗುರಗೊಳಿಸುತ್ತದೆ
ಊಲಾಂಗ್ ಚಹಾದ ಸೇವನೆ ಮುಖದ ಸೂಕ್ಷ್ಮ ರೇಖೆಗಳು ಮತ್ತು ಸುಕ್ಕುಗಳನ್ನು ಕಡಿಮೆ ಮಾಡುತ್ತದೆ. ಚರ್ಮವನ್ನು ಪುನರ್ಯೌವನಗೊಳಿಸುತ್ತದೆ. ವಯಸ್ಸಾಗುವಿಕೆ ಪ್ರಕ್ರಿಯೆ ನಿಧಾನಗೊಳಿಸುತ್ತದೆ.
ಚರ್ಮದ ಸಮಸ್ಯೆ ದೂರ ಮಾಡುತ್ತದೆ
ಜರ್ನಲ್ ಆಫ್ ಡರ್ಮಟಾಲಜಿ ಪ್ರಕಾರ, ಊಲಾಂಗ್ ಚಹಾವು ಅಲರ್ಜಿ ವಿರೋಧಿ ಗುಣಲಕ್ಷಣ ಹೊಂದಿದೆ. ಮತ್ತು ಉತ್ಕರ್ಷಣ ನಿರೋಧಕ ದದ್ದುಗಳಿಂದ ರಕ್ಷಿಸುತ್ತದೆ.
ಕೂದಲಿಗೆ ಊಲಾಂಗ್ ಟೀ ಹೇಗೆ ಪ್ರಯೋಜನಕಾರಿ?
ಕೂದಲಿನ ಆರೋಗ್ಯ ಸುಧಾರುಸುತ್ತದೆ
ಊಲಾಂಗ್ ಚಹಾದ ನಿಯಮಿತ ಸೇವನೆ ಕೂದಲು ಉದುರುವಿಕೆ ತಡೆಯಬಹುದು. ನೆತ್ತಿಯ ಒಟ್ಟಾರೆ ಆರೋಗ್ಯ ಕಾಪಾಡುತ್ತದೆ. ಊಲಾಂಗ್ ಟೀ ಮಂದ, ಶುಷ್ಕ, ಹಾನಿಗೊಳಗಾದ ಮತ್ತು ನಿರ್ಜೀವ ಕೂದಲನ್ನು ಸರಿಪಡಿಸುತ್ತದೆ.
ತಲೆಹೊಟ್ಟು ಕಡಿಮೆ ಮಾಡುತ್ತದೆ
ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧ. ಇದು ತುರಿಕೆ ಮತ್ತು ತಲೆಹೊಟ್ಟು ಕಡಿಮೆ ಮಾಡುತ್ತದೆ. ಕೂದಲಿಗೆ ಹೊಳಪು ನೀಡುತ್ತದೆ. ಕೂದಲಿನ ರಚನೆ ಸುಧಾರಿಸುತ್ತದೆ.
ಇದನ್ನೂ ಓದಿ: ಬೆಳಗಿನ ಉಪಹಾರಕ್ಕೆ ಮಾಡಿ ದಾಲ್ ಪರೋಠಾ; ಇಲ್ಲಿದೆ ಓದಿ ಸೂಪರ್ ರೆಸಿಪಿ
ಚರ್ಮ ಮತ್ತು ಕೂದಲಿಗೆ ಊಲಾಂಗ್ ಟೀ ಬಳಸುವ ವಿಧಾನ
ಒಂದು ಲೀಟರ್ ನೀರಿನಲ್ಲಿ ಸ್ವಲ್ಪ ಊಲಾಂಗ್ ಚಹಾ ಕುದಿಸಿ. ಶಾಂಪೂವಿನಿಂದ ಕೂದಲು ತೊಳೆದ ನಂತರ ಚಹಾದ ನೀರಿನಿಂದ ಕೂದಲನ್ನು ತೊಳೆಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ