Niveditha Gowda ಭರ್ಜರಿ ಶಾಪಿಂಗ್; ಚಪ್ಪಲಿ ಖರೀದಿಸಲು ಹೋಗಿ ಅಂಗಡಿಯನ್ನೇ ಮನೆಗೆ ತಂದ ಬೇಬಿ ಡಾಲ್!

ಒಂದೇ ದಿನ ನಿವೇದಿತಾ ಗೌಡ ಭರ್ಜರಿ ಶಾಪಿಂಗ್​ ಮಾಡಿದ್ದಾರೆ. ವಿಡಿಯೋ ಅಪ್ಲೋಡ್​ ಮಾಡಿ ಎಲ್ಲರಿಗೂ ನಾನು ವಿಂಟರ್​ ಕಲೆಕ್ಷನ್​ ತೋರಿಸೋದಾಗಿ ಹೇಳಿದ ನಿವೇದಿತಾ ಗೌಡ,  ಶಾಪಿಂಗ್​ ಕಥೆ ಹೇಳಿದ್ದಾರೆ.

ನಿವೇದಿತಾ ಗೌಡ

ನಿವೇದಿತಾ ಗೌಡ

  • Share this:
ಕನ್ನಡ ಬಿಗ್​ಬಾಸ್ (Bigg Boss) ಖ್ಯಾತಿಯ ನಿವೇದಿತಾ ಗೌಡ (Niveditha Gowda) ಈಗ ಸೋಷಿಯಲ್ ಮೀಡಿಯಾದಲ್ಲಿ (Social Media) ಸಖತ್ ಆ್ಯಕ್ಟಿವ್ ಆಗಿದ್ದಾರೆ. ಇನ್​ಸ್ಟಾಗ್ರಾಮ್ ರೀಲ್ಸ್ (Instagram Reels), ವಿಡಿಯೋ (Video), ಫೋಟೊಗಳನ್ನು ಹಂಚಿಕೊಳ್ಳುವ ನಟಿ ಅವರ ಅಭಿಮಾನಿಗಳಿಗೆ ಅಪ್ಡೇಟ್​ಗಳನ್ನು ಕೊಡುವುದನ್ನು ಎಂದಿಗೂ ಮಿಸ್ ಮಾಡುವುದಿಲ್ಲ. ಅವರ ಫ್ಯಾಷನ್, ಸ್ಟೈಲ್, ಲೈಫ್​ಸ್ಟೈಲ್ ಕಂಟೆಂಟ್​ಗಳಿಗಾಗಿ ಬಹಳಷ್ಟು ಜನರು ಅವರನ್ನು ಫಾಲೋ ಮಾಡುತ್ತಾರೆ.  ಇದೀಗ ನಿವೇದಿತಾ ವಿಂಟರ್ ಶಾಪಿಂಗ್​ ಎಂದು ವಿಡಿಯೋ ಒಂದನ್ನು ಅಪ್ಲೋಡ್​ ಮಾಡಿದ್ದಾರೆ.

ನಿವೇದಿತಾ ವಿಂಟರ್​​ ಶಾಪಿಂಗ್​

ಕೆಲ ದಿನಗಳಿಂದ ಮಳೆ ಸುರಿಯುತ್ತಲೇ ಇದೆ.  ಚಳಿಗೆ ಮನೆಯಿಂದ ಹೊರಗೆ ಹೋಗೋಕೆ ಜನರು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಈ ಕ್ರೇಜಿ ನಟಿ ನಿವೇದಿತಾ, ಮಳೆಯಲ್ಲೂ ಶಾಪಿಂಗ್ ಮಾಡಿದ್ದಾರೆ. ತಾನು ಚಪ್ಪಲಿ ತರಲು ಹೋಗಿ ಇಡೀ ಅಂಗಡಿಯನ್ನೇ ಕೊಂಡು ಕೊಂಡು ಬಂದಿದ್ದೇನೆ ಎಂದು ವಿಡಿಯೋದಲ್ಲಿ ತಿಳಸಿದ್ದಾರೆ. ತಾವು ಶಾಪಿಂಗ್ ಮಾಡಿರೋ ಎಲ್ಲಾ ಬಟ್ಟೆ, ಹ್ಯಾಂಡ್ ಬ್ಯಾಗ್​, ಹಾಗೂ ಇನ್ನಿತರ ವಸ್ತುಗಳನ್ನು ಖರೀದಿ ಮಾಡಿದ್ದಾರೆ.

ನಿವೇದಿತಾ ಗೌಡ ಬ್ಯಾಗ್​ ಶಾಪಿಂಗ್​

ಚಳಿಗಾಲ ಶುರುವಾದರೆ ಸಾಕು ಸಾಮಾನ್ಯವಾಗಿ ಎಲ್ಲರು ಕೊಡೆಗಳು, ಸ್ವೆಟರ್‌, ಜ್ಯಾಕೆಟ್‌ ಮತ್ತು ರೈನ್ ಕೋಟ್‌ ಖರೀದಿ ಮಾಡೋದನ್ನು ನೋಡಿದ್ದೇವೆ ಆದ್ರೆ  ನಿವೇದಿತಾ ಗೌಡ ಏನೆಲ್ಲಾ ಖರೀದಿ ಮಾಡಿದ್ದಾರೆ ನೋಡಿ. ಕೆವಿಂಟರ್ ಶಾಪಿಂಗ್ ಅಂತ ವಿಡಿಯೋ ಅಪ್ಲೋಡ್ ಮಾಡಿ ಬ್ಯಾಗ್ ಶಾಪಿಂಗ್ ಮಾಡಿದ್ದಾರೆ.



ಅಬ್ಬಬ್ಬಾ ಏನೆಲ್ಲಾ ಖರೀದಿಸಿದ್ದಾರೆ ಈ ನಿವೇದಿತಾ!

ಒಂದೇ ದಿನ ನಿವೇದಿತಾ ಗೌಡ ಭರ್ಜರಿ ಶಾಪಿಂಗ್​ ಮಾಡಿದ್ದಾರೆ. ವಿಡಿಯೋ ಅಪ್ಲೋಡ್​ ಮಾಡಿ ಎಲ್ಲರಿಗೂ ನಾನು ವಿಂಟರ್​ ಕಲೆಕ್ಷನ್​ ತೋರಿಸೋದಾಗಿ ಹೇಳಿದ ನಿವೇದಿತಾ ಗೌಡ,  ಶಾಪಿಂಗ್​ ಕಥೆ ಹೇಳಿದ್ದಾರೆ. ನನಗೆ ಶಾಪಿಂಗ್​ ಮಾಡೋ ಉದ್ದೇಶವಿರಲಿಲ್ಲ, ಬೋರ್​ ಆಗ್ತಿತ್ತು ಎಂದು ಶಾಪಿಂಗ್​ ಮಾಡಲು ಹೋದೆ ಎಂದು ಹೇಳಿದ್ದಾರೆ.

ಪಕ್ಕದ್ಮನೆ ಅವರ ಬಳಿ ಕ್ಲಿಪ್​ ಕೇಳಿದ ನಿವೇದಿತಾ

ಇದ್ದಕ್ಕಿದ್ದಂತೆ ನೆನಪಾಯ್ತು ನನ್ನ ಹೊಸ ಕೆಂಪು ಬಣ್ಣದ ಡ್ರೆಸ್‌ಗೆ  ಕೆಂಪು ಬಣ್ಣದ ಹೀಲ್ಸ್‌ ಬೇಕು ಅಂತ. ಎರಡು ಅಂಗಡಿಗೆ ಹೋಗಿದ್ದೆ. ಶಾಪ್​ಗಳಲ್ಲಿ ಎಲ್ಲಿ ನೋಡಿದ್ರೂ ಹೊಸ ಹೊಸ ಕಲೆಕ್ಷನ್‌ಗಳು. ಇದ್ವು. ಇದು ತಗೋಳೋಣ ಅದು ತಗೋಳೋಣ ಅಂತ ಎಲ್ಲಾ ತಗೋಂಡೆ. ಬಟ್ಟೆ ಅಷ್ಟು ಇಷ್ಟ ಆಗುತ್ತಿಲ್ಲ ಅಂತ ಹ್ಯಾಂಡ್‌ಬ್ಯಾಗ್‌ಗಳನ್ನು ಹೆಚ್ಚಿಗೆ ಶಾಪಿಂಗ್ ಮಾಡಿದೆ ಎಂದು ನಿವೇದಿತಾ ಗೌಡ ವಿಡಿಯೋದಲ್ಲಿ ಹೇಳಿದ್ದಾರೆ.

ನಾನು ಎಷ್ಟೇ ಹೇರ್‌ ಕ್ಲಿಪ್‌ ತೆಗೆದುಕೊಂಡರೂ ಎಲ್ಲೋ ಮಿಸ್ ಆಗುತ್ತೆ. ನಿನ್ನೆ ಮನೆಯಲ್ಲಿ ನಾನು ಹೇರ್‌ಕ್ಲಿಪ್ ಕಳೆದುಕೊಂಡೆ. ರಾತ್ರಿ 12 ಗಂಟೆಗೆ ನಮ್ಮ ಪಕ್ಕದ ಮನೆಯವರ ಬಳಿ ಕೇಳಿ ಪಡೆದುಕೊಂಡೆ ಎಂದು ನಿವೇದಿತಾ ಹೇಳಿದ್ರು.  ಅವರು ಮಲಗಿರ್ಬೇಕು ಎಂದು ಕೊಂಡು ಮೇಲಿನ ಇಣುಕಿ ನೋಡಿದೆ ಸದ್ಯ ಅವರು ಎದ್ದೇ ಇದ್ರೂ ಬಳಿಕ ಅವರ ಮನೆಗೆ ಹೋಗಿ ಕ್ಲಿಪ್‌ ಕೇಳಿದೆ. ಈ ರೀತಿ ಮತ್ತೆ ಆಗಬಾರದು ಅಂತ ನಾನು ಹೊಸ ಕ್ಲಿಪ್‌ ತಂದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Liger Collection: ವೀಕೆಂಡ್​​ನಲ್ಲೂ ಥಿಯೇಟರ್​ಗೆ ಬರಲಿಲ್ಲ ಜನ! ಬಾಕ್ಸ್ ಆಫೀಸ್​​ನಲ್ಲಿ ಲೈಗರ್ ಗಳಿಸಿದ್ದು ಎಷ್ಟು!?

ನಾನು ಕೆಂಪು ಬಣ್ಣದ ಹೀಲ್ಸ್‌ ಖರೀದಿಸಲು ಹೋದೆ ಆದರೆ ಅದು ಬಿಟ್ಟು ಎಲ್ಲಾ ತೆಗೆದುಕೊಂಡು ಬಂದೆ. ಈಗ ಮತ್ತೊಂದು ದಿನ ಕೆಂಪು ಹೀಲ್ಸ್‌ ತರಲು ಹೋಗಬೇಕು ಆಗ ಮತ್ತೆ ಎಷ್ಟು ಶಾಪಿಂಗ್ ಮಾಡ್ತೀನಿ ನನಗೆ ಗೊತ್ತಿಲ್ಲ. ನಾನು ಈ ವಿಡಿಯೋದಲ್ಲಿ ತೋರಿಸಿದ ಇಷ್ಟು ಬ್ಯಾಗ್ ಮತ್ತು ಡ್ರೆಸ್‌ಗಳು ಯಾವುದು ತುಂಬಾ ಇಷ್ಟ ಆಯ್ತು ಅಂತ ನೀವು ನನಗೆ ಹೇಳಿ ಕಾಮೆಂಟ್ ಮಾಡಿ ಎಂದಿದ್ದಾರೆ ನಿವೇದಿತಾ ಗೌಡ.
Published by:Pavana HS
First published: