New Rules: ರಾಜ್ಯದ ಪಬ್​, ಬಾರ್​ & ರೆಸ್ಟೋರೆಂಟ್​ಗೆ ಹೊಸ ರೂಲ್ಸ್; ಪೊಲೀಸ್​ ಇಲಾಖೆಯಿಂದ ಸುತ್ತೋಲೆ

ಪಬ್ ಹಾಗೂ ರಾಜ್ಯದ ಎಲ್ಲಾ ಬಾರ್​ಗಳು ನಿಗದಿತ ಸಮಯದಲ್ಲಿ ಬಂದ್​ ಆಗಬೇಕು,  ಜೊತೆಗೆ ಕೆಲ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು (ಜು.29): ಬೆಂಗಳೂರು ಕಮಿಷನರೇಟ್ ವ್ಯಾಪ್ತಿ ಹೊರತುಪಡಿಸಿ ರಾಜ್ಯದ ಎಲ್ಲಾ ಪಬ್ ಹಾಗೂ ಬಾರ್ ಅಂಡ್​ ರೆಸ್ಟೋರೆಂಟ್​ಗಳಿಗೆ (Pub Bar And Restaurant) ಕೆಲ ನೂತನ ರೂಲ್ಸ್​ ಜಾರಿಯಾಗಿದೆ. ಪಬ್ ಹಾಗೂ ರಾಜ್ಯದ ಎಲ್ಲಾ ಬಾರ್​ಗಳು ನಿಗದಿತ ಸಮಯದಲ್ಲಿ ಬಂದ್​ ಆಗಬೇಕು,  ಜೊತೆಗೆ ಕೆಲ ನಿಯಮಗಳನ್ನು  (Rules) ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದು ಸೂಚನೆ ನೀಡಲಾಗಿದೆ. ರಾಜ್ಯ ಲಾ ಅಂಡ್ ಆರ್ಡರ್ ಮುಖ್ಯಸ್ಥ ಅಲೋಕ್ ಕುಮಾರ್ (Alok Kumar) ಅವರು ಸುತ್ತೋಲೆ ಹೊರಡಿಸಿದ್ದಾರೆ. ಈ ಬಗ್ಗೆ ರಾಜ್ಯದ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳಿಗೆ (District Superintendent of Police) ಕ್ರಮವನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಜುಲೈ 31ರೊಳಗೆ ಕ್ರಮ ಕೈಗೊಂಡು ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದಾರೆ.

ಈ ನಿಯಮಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲೇಬೇಕು

* ಪಬ್, ಬಾರ್ ಮತ್ತು ರೆಸ್ಟೋರೆಂಟ್​ಗಳಿಗೆ ಅಪ್ರಾಪ್ತರಿಗೆ ಪ್ರವೇಶ ನೀಡದಂತೆ ಕಟ್ಟು ನಿಟ್ಟಿನ ಕ್ರಮವನ್ನು ಕೈಗೊಳ್ಳಲಾಗುವುದು.

*ಪಬ್​  ಹಾಗೂ ಬಾರ್ ಅಂಡ್​ ರೆಸ್ಟೋರೆಂಟ್​ಗಳಿಗೆ ಮಾದಕ ದ್ರವ್ಯಗಳ ಸಾಗಾಣಿಕೆ ಮತ್ತು ಬಳಕೆಯನ್ನು ತಡೆಗಟ್ಟುವ ಬಗ್ಗೆ ಸೂಕ್ತ ಕ್ರಮ ಅಗತ್ಯ

*ಲೈಸನ್ಸ್‌ಗಳಲ್ಲಿ ನಿಗದಿಪಡಿಸಿದ ಸಮಯದಂತೆ  ಪಬ್ ಹಾಗೂ ಬಾರ್ ಅಂಡ್​ ರೆಸ್ಟೋರೆಂಟ್​ ಗಳನ್ನು ಕಡ್ಡಾಯವಾಗಿ ಕ್ಲೋಸ್ ಮಾಡಬೇಕು.

*ಸುಪ್ರೀಂ ನ್ಯಾಯಾಲಯದ ಆದೇಶದಂತೆ ಪಬ್‌ಗಳಲ್ಲಿ ಅಳವಡಿಸಿರುವ ಧ್ವನಿವರ್ಧಕ 10 ಗಂಟೆಯೊಳಗೆ ನಿಲ್ಲಿಸಬೇಕು



ಮಂಗಳೂರು (ಜು. 29): ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜೆಲ್ಲೆಯ 4 ತಾಲ್ಲೂಕುಗಳಲ್ಲಿ ಆಗಸ್ಟ್ 6ರವರೆಗೆ ನಿಷೇಧಾಜ್ಞೆ (144 Section) ಮುಂದುವರಿಸಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ (District Collector Dr. Rajendra K.V) ಆದೇಶ ಹೊರಡಿಸಿದ್ದಾರೆ. ಜೊತೆಗೆ ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಮದ್ಯ ಮಾರಾಟ ಬಂದ್ (Liquor Sale Banned) ಮಾಡಲಾಗಿದೆ. ಬಂಟ್ವಾಳ, ಪುತ್ತೂರು, ಕಡಬ ಮತ್ತು ಸುಳ್ಯ ತಾಲ್ಲೂಕುಗಳಲ್ಲಿ ಸೆಕ್ಷನ್ 144 ಅಡಿಯಲ್ಲಿ ನಿಷೇಧಾಜ್ಞೆ ಮುಂದುವರಿಯಲಿದೆ. ಜನರು ಗುಂಪು ಗುಂಪಾಗಿ ಓಡಾಡುವುದು, ವಿನಾಕಾರಣ ತಿರುಗಾಡಲು ಅವಕಾಶವಿಲ್ಲ. ಸಾರ್ವಜನಿಕ ಸಭೆ, ಸಮಾರಂಭಗಳಿಗೂ ನಿಷೇಧ ಹೇರಲಾಗಿದೆ.

ಇದನ್ನೂ ಓದಿ: Murder Case: ಚಿಕನ್​ ಅಂಗಡಿ ತೆರೆದಿದ್ದೇ ಕೊಲೆಗೆ ಕಾರಣವಾಯ್ತಾ? ಪ್ರವೀಣ್​ ಸಹೋದರನ ಸ್ಫೋಟಕ ಹೇಳಿಕೆ

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಸುರತ್ಕಲ್, ಮೂಲ್ಕಿ, ಪಣಂಬೂರು ಮತ್ತು ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಗುರುವಾರ ರಾತ್ರಿಯಿಂದಲೇ ನಿಷೇಧಾಜ್ಞೆ ಜಾರಿಯಲ್ಲಿದೆ.
 ದ. ಕನ್ನಡ ಜಿಲ್ಲೆಯಾದ್ಯಾಂತ ಮದ್ಯ ಮಾರಾಟ ಬಂದ್

ಮುಂದಿನ ಮೂರು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಮದ್ಯ ಮಾರಾಟ ಬಂದ್ ಮಾಡಲಾಗಿದೆ.  ಈ ಕುರಿತು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಆದೇಶ ಹೊರಡಿಸಿದ್ದಾರೆ. ಅಗಸ್ಟ್ ಒಂದನೇ ತಾರೀಖು ಬೆಳಗ್ಗೆ ಎಂಟು ಗಂಟೆಯವರೆಗೆ ಮದ್ಯ ಮಾರಾಟ ಬಂದ್ ಮಾಡಲಾಗಿದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರೋ ಹಿನ್ನೆಲೆ ನಿಷೇಧಾಜ್ಞೆ ಮುಂದುವರಿಸಲಾಗಿದೆ. ಗುಪ್ತಚರ ಇಲಾಖೆಯ ಎಚ್ಚರಿಕೆಯ ಹಿನ್ನೆಲೆಯಲ್ಲಿ 3 ದಿನಗಳ ಕಾಲ ಬಿಗಿ ಪೊಲೀಸ್​ ಬಂದೋಬಸ್ತ್​ ಏರ್ಪಡಿಸಲಾಗಿದೆ.

ಇದನ್ನೂ ಓದಿ:  Siddaramaiah ಅಧಿಕಾರವಧಿಯಲ್ಲಿ 32 ಕೊಲೆ, ನಾವು ಎಲ್ಲವನ್ನು ನಿಭಾಯಿಸಿದ್ದೇವೆ: CM Bommai

ಸಂಜೆ 6 ಗಂಟೆಯೊಳಗೆ ಅಂಗಡಿ ಬಂದ್​ಗೆ ಸೂಚನೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಕೊಲೆಗಳಿಂದ ಪರಿಸ್ಥಿತಿ ಬಿಗಡಾಯಿಸಿದೆ. ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸರು ಕಠಿಣ ಕ್ರಮಕೈಗೊಂಡಿದ್ದಾರೆ. ಸಂಭವಿಸಿದ ಅಹಿತಕರ ಘಟನೆ ಹಿನ್ನೆಲೆಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸಂಜೆ 6 ಗಂಟೆಯೊಳಗೆ ಮುಚ್ಚುವಂತೆ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಸೂಚನೆ ನೀಡಿದ್ದರು.
Published by:Pavana HS
First published: