ಕೆಲವಷ್ಟು ಒಳ್ಳೆಯ ಮನಸ್ಸಿರುವ ಶ್ರೀಮಂತರು, ಹಣವಂತರೆಲ್ಲ ಹಬ್ಬ ಹರಿದಿನಗಳಲ್ಲಿ, ಹುಟ್ಟುಹಬ್ಬದಂಥ ವಿಶೇಷ ಸಂದರ್ಭಗಳಲ್ಲಿ ಬಡವರಿಗೆ ಉಡುಗೊರೆಗಳನ್ನು ನೀಡುತ್ತಾರೆ. ನಟಿ (Actress) ನಯನತಾರಾ (Nayanthara) ಹಾಗೂ ಅವರ ಪತಿ ವಿಘ್ನೇಶ್ (Vignesh) ಕೂಡ ಇತ್ತೀಚಿಗೆ ಇಂಥದ್ದೇ ಕೆಲಸ ಮಾಡಿದ್ದಾರೆ. ಈ ದಂಪತಿ ಹೊಸವರ್ಷಕ್ಕೆ ಬಡವರಿಗೆ ಒಂದಿಷ್ಟು ಉಡುಗೊರೆಗಳನ್ನು (Gifts) ನೀಡಿದ್ದಾರೆ. ಅವರು ಹೀಗೆ ಗಿಫ್ಟ್ ನೀಡಿರೋ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗಿದೆ.
ಬಡವರಿಗೆ ಉಡುಗೊರೆ ಕೊಡುವ ಮೂಲಕ ಹೊಸ ವರ್ಷಾರಂಭ
ನಟಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ದಕ್ಷಿಣದ ಅತ್ಯಂತ ಜನಪ್ರಿಯ ಜೋಡಿ. ಅವರು ಮಾಡುವ ಪ್ರತಿಯೊಂದು ಕೆಲಸದಲ್ಲೂ ಒಂದೊಂದು ವಿಶೇಷತೆ ಇರುತ್ತದೆ ಅನ್ನೋದು ಸುಳ್ಳಲ್ಲ. ಹಾಗೆಯೇ ಈ ಜೋಡಿ ಹೊಸ ವರ್ಷವನ್ನು ಬಡವರಿಗೆ ಉಡುಗೊರೆ ಕೊಡುವಂಥ ಒಳ್ಳೆ ಕೆಲಸ ಮಾಡುವ ಮೂಲಕ ಆರಂಭಿಸಿದ್ದಾರೆ. ಬೀದಿ ಬದಿಯಲ್ಲಿ ಕುಳಿತಿದ್ದ ಮಕ್ಕಳು, ಮಹಿಳೆಯರು ಸೇರಿದಂತೆ ಹಲವಾರು ಜನ ಬಡವರಿಗೆ ಉಡುಗೊರೆಗಳನ್ನು ನೀಡುವ ಮೂಲಕ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ.
ಬಹಳಷ್ಟು ಜನರು ನಯನತಾರಾ ಹಾಗೂ ವಿಘ್ನೇಶ್ ಮಾಡಿರೋ ಕೆಲವನ್ನು ಅಭಿನಂದಿಸಿದ್ದಾರೆ. ನಿಮ್ಮದು ಒಳ್ಳೆಯ ಮನಸ್ಸು ಎಂದು ಹೊಗಳಿದ್ದಾರೆ. ಆದ್ರೆ ಬಡವರಿಗೆ ಉಡುಗೊರೆ ಕೊಟ್ಟು ಅವನ್ನು ಚಿತ್ರೀಕರಿಸಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿಕೊಂಡಿದ್ದು ಪಬ್ಲಿಸಿಟಿಗಾಗಿಯೇ? ಎಂಬ ಕಾಮೆಂಟ್ ಕೂಡ ಕೆಲವರು ಮಾಡಿದ್ದಾರೆ.
2022ಕ್ಕೆ ವಿಘ್ನೇಶ್ ಶಿವನ್ ಕೃತಜ್ಞತೆ
ವಿಘ್ನೇಶ್ ಶಿವನ್ ಅವರು ತಮ್ಮ ಪೋಸ್ಟ್ನಲ್ಲಿ 2022ಕ್ಕೆ ಧನ್ಯವಾದ ಅರ್ಪಿಸಿದರು. ನಟಿ ನಯನತಾರಾ ಅವರನ್ನು ಮದುವೆಯಾಗುವುದರಿಂದ ಹಿಡಿದು ಅವಳಿ ಗಂಡು ಮಕ್ಕಳಿಗೆ ಪೋಷಕರಾಗುವುದು, ಕನೆಕ್ಟ್ ಚಿತ್ರ ನಿರ್ಮಿಸುವುದು, ಅಜಿತ್ ಕುಮಾರ್ ಅವರೊಂದಿಗೆ ಸಿನಿಮಾ ಮಾಡುವುದ ತನಕ 2022ರಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳಾಗಿವೆ ಎಂದು ಬರೆದುಕೊಂಡಿದ್ದಾರೆ.
Lets do our bit #Love #Humanity 🫶🏻 pic.twitter.com/xvddUoRSjY
— Nayanthara✨ (@NayantharaU) January 4, 2023
ನಯನತಾರಾ ಕೊನೆಯ ಬಾರಿಗೆ ಹಾರರ್ ಚಿತ್ರ ಕನೆಕ್ಟ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇದು ತಮಿಳು, ತೆಲುಗು ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಚಿತ್ರವು ಪ್ರೇಕ್ಷಕರಿಂದ ಮಿಶ್ರ ವಿಮರ್ಶೆಗಳನ್ನು ಪಡೆದಿದೆ. ಕನೆಕ್ಟ್ ಬಿಡುಗಡೆಯೊಂದಿಗೆ ಅವರು ಚಿತ್ರರಂಗದಲ್ಲಿ ಯಶಸ್ವಿಯಾಗಿ 20 ವರ್ಷಗಳನ್ನು ಪೂರೈಸಿದ್ದಾರೆ.
ಇದನ್ನೂ ಓದಿ: Shah Rukh Khan: ಶಾರುಖ್ ಖಾನ್ ತಿಂಗಳ ಸಂಪಾದನೆ ಎಷ್ಟು ಗೊತ್ತಾ? ಅಭಿಮಾನಿಗೆ ಕಿಂಗ್ ಖಾನ್ ಕೊಟ್ರು ಆನ್ಸರ್
ಇತ್ತೀಚಿಗಷ್ಟೇ ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದ ನಯನತಾರಾ, ಇತ್ತೀಚಿನ ವರ್ಷಗಳಲ್ಲಿ ಚಿತ್ರೋದ್ಯಮದಲ್ಲಿ ಭಾರೀ ಬದಲಾವಣೆಗಳಾಗಿವೆ. ದಕ್ಷಿಣದ ಚಿತ್ರಗಳು ದೇಶಮಟ್ಟದಲ್ಲಿ ಸದ್ದುಮಾಡುತ್ತಿವೆ. ಇಂಥ ಬದಲಾವಣೆಗಳು ನನಗೆ ಆತ್ಮವಿಶ್ವಾಸ ನೀಡಿವೆ ಎಂಬುದಾಗಿ ಅವರು ಹೇಳಿದ್ದರು.
View this post on Instagram
ಅಲ್ಲದೇ ಇತ್ತೀಚಿಗೆ ನಯನತಾರಾ ಅವರು ಚಲನಚಿತ್ರೋದ್ಯಮದಲ್ಲಿ 20 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹಾಗೂ ಕನೆಕ್ಟ್ ಚಿತ್ರ ಬೆಂಬಲಿಸಿದ್ದಕ್ಕಾಗಿ ಬಹಿರಂಗ ಪತ್ರವೊಂದನ್ನು ಬರೆದಿದ್ದಾರೆ. ನಮ್ಮ ಕನೆಕ್ಟ್ ಚಿತ್ರವನ್ನು ವೀಕ್ಷಿಸಿದ ಮತ್ತು ಬೆಂಬಲಿಸಿದ ಎಲ್ಲಾ ಚಲನಚಿತ್ರ ಪ್ರೇಮಿಗಳು ಮತ್ತು ಅಭಿಮಾನಿಗಳಿಗೆ ಧನ್ಯವಾದಗಳು ಎಂಬುದಾಗಿ ಪತ್ರದಲ್ಲಿ ಬರೆದಿದ್ದರು.
ಜವಾನ್ ಮೂಲಕ ನಯನತಾರಾ ಬಾಲಿವುಡ್ ಎಂಟ್ರಿ
ನಯನತಾರಾ ಪ್ರಸ್ತುತ ತನ್ನ ಬಾಲಿವುಡ್ ಚೊಚ್ಚಲ ಚಿತ್ರ ಜವಾನ್ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಇಷ್ಟು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅವರು ಪೂರ್ಣಪ್ರಮಾಣದ ಹಿಂದಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಜವಾನ್ ಚಿತ್ರದಲ್ಲಿ ನಟ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ದಳಪತಿ ವಿಜಯ್ ಕೂಡ ನಟಿಸುತ್ತಿದ್ದಾರೆ. ಇತ್ತ ವಿಘ್ನೇಶ್ ಶಿವನ್ ಪ್ರಸ್ತುತ ತಮ್ಮ ಬಹು ನಿರೀಕ್ಷಿತ ಮುಂಬರುವ ಯೋಜನೆಯ ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ನಿರತರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ