• ಹೋಂ
 • »
 • ನ್ಯೂಸ್
 • »
 • Breaking News
 • »
 • Mysuru Dasara 2021: ಅ.7ರಂದು ಮೈಸೂರು ದಸರಾ ಉದ್ಘಾಟನೆ, ಸರಳ ಆಚರಣೆಗೆ 6 ಕೋಟಿ ಹಣ ನಿಗದಿ

Mysuru Dasara 2021: ಅ.7ರಂದು ಮೈಸೂರು ದಸರಾ ಉದ್ಘಾಟನೆ, ಸರಳ ಆಚರಣೆಗೆ 6 ಕೋಟಿ ಹಣ ನಿಗದಿ

ದಸರಾ ಉದ್ಘಾಟಕರು ಯಾರು ಎಂಬುದನ್ನು ಸಿಎಂ ಅವರೇ ಘೋಷಣೆ ಮಾಡ್ತಾರೆ.  ಕಳೆದ ಬಾರಿ ಉದ್ಘಾಟನೆಗೆ 150 ಜನರಿಗೆ ಅವಕಾಶ ಇತ್ತು. ಈ ಬಾರಿ ಇದನ್ನು ಡಬಲ್ ಮಾಡಿ ಎಂದು ಸಿಎಂ ಗೆ ಮನವಿ ಮಾಡಿದ್ದೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.

ದಸರಾ ಉದ್ಘಾಟಕರು ಯಾರು ಎಂಬುದನ್ನು ಸಿಎಂ ಅವರೇ ಘೋಷಣೆ ಮಾಡ್ತಾರೆ.  ಕಳೆದ ಬಾರಿ ಉದ್ಘಾಟನೆಗೆ 150 ಜನರಿಗೆ ಅವಕಾಶ ಇತ್ತು. ಈ ಬಾರಿ ಇದನ್ನು ಡಬಲ್ ಮಾಡಿ ಎಂದು ಸಿಎಂ ಗೆ ಮನವಿ ಮಾಡಿದ್ದೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.

ದಸರಾ ಉದ್ಘಾಟಕರು ಯಾರು ಎಂಬುದನ್ನು ಸಿಎಂ ಅವರೇ ಘೋಷಣೆ ಮಾಡ್ತಾರೆ.  ಕಳೆದ ಬಾರಿ ಉದ್ಘಾಟನೆಗೆ 150 ಜನರಿಗೆ ಅವಕಾಶ ಇತ್ತು. ಈ ಬಾರಿ ಇದನ್ನು ಡಬಲ್ ಮಾಡಿ ಎಂದು ಸಿಎಂ ಗೆ ಮನವಿ ಮಾಡಿದ್ದೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.

 • Share this:

  ಬೆಂಗಳೂರು: (Bengaluru) ನಾಡಹಬ್ಬ ಮೈಸೂರು ದಸರಾ ಆಚರಣೆ 2021 (Mysuru Dasara 2021) ಹಿನ್ನೆಲೆಯಲ್ಲಿ ದಸರಾ ಆಚರಣೆ (Dasara Celebration) ಕುರಿತು ಸರ್ಕಾರದಿಂದ ಇಂದು ಪೂರ್ವಭಾವಿ ಸಭೆ ನಡೆಯಿತು. ಸಿಎಂ ಬಸವರಾಜ್ ಬೊಮ್ಮಾಯಿ (CM Basavaraja Bommai) ನೇತೃತ್ವದಲ್ಲಿ‌ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಈ ಬಾರಿಯೂ ಸರಳ ಸಾಂಪ್ರದಾಯಿಕವಾಗಿ ಮೈಸೂರು ದಸರಾ ಆಚರಣೆಗೆ ನಿರ್ಧಾರ ತೆಗೆದುಕೊಳ್ಳಲಾಯಿತು. 


  ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ ಅವರು, ಕಳೆದ ಬಾರಿ ಸಾಂಪ್ರದಾಯಿಕ, ಸರಳವಾಗಿ ದಸರಾ ಆಚರಣೆ ಮಾಡಲಾಗಿತ್ತು. ಈ ಬಾರಿ ಕೂಡ ಸರಳವಾಗಿ ದಸರಾ ಆಚರಣೆ ಮಾಡಲು ನಿರ್ಧಾರ ಮಾಡಲಾಗಿದೆ. ದಸರಾ ಆಚರಣೆ ವೇಳೆ ಆರ್ಥಿಕ ಚಟುವಟಿಕೆಗಳು ಆಗುತ್ತಿದ್ದವು. ಆದರೆ ಕೋವಿಡ್​ನಿಂದಾಗಿ ಅಲ್ಲಿ ಸಮಸ್ಯೆ ಆಗಿದೆ. ಹೀಗಾಗಿ ಆರ್ಥಿಕ ಚಟುವಟಿಕೆಗೆ ಅವಕಾಶ ಸಂಬಂಧ ಆಲೋಚನೆ ಮಾಡುತ್ತಿದ್ದೇವೆ ಎಂದರು.


  ಮೈಸೂರು ದಸರಾ 2021ಕ್ಕೆ ಈ ಬಾರಿ ಆರು ಕೋಟಿ ಹಣ ನಿಗದಿ ಮಾಡಲಾಗಿದೆ. ಕೊಟ್ಟಿರುವ ಹಣದಲ್ಲೇ ಅವರು ಖರ್ಚು ಮಾಡಬೇಕು. ಅದಕ್ಕಿಂತ ಜಾಸ್ತಿ ಆಗಬಾರದು. ಅಕ್ಟೋಬರ್‌ 7ರಂದು ಮೈಸೂರು ದಸರಾ ಉದ್ಘಾಟನೆ ಆಗಲಿದೆ. ಅಕ್ಟೋಬರ್ 15 ರಂದು ಮಧ್ಯಾಹ್ನ ಜಂಬೂ ಸವಾರಿ ನಡೆಯಲಿದೆ. ಕಳೆದ ಬಾರಿಯಂತೆ ಈ ಬಾರಿಯೂ ಅರಮನೆ ಆವರಣದ ಒಳಗಡೆ ಜಂಬೂ ಸವಾರಿ ನಡೆಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಹೇಳಿದರು.


  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಮಾತನಾಡಿ, ದಸರಾ ಆಚರಣೆಗೆ 6 ಕೋಟಿ ಹಣ ನಿಗದಿ ಮಾಡಲಾಗಿದೆ. ಈಗಿರುವ 5 ಕೋಟಿ ಹಣದ ಜೊತೆಗೆ ಹೆಚ್ಚುವರಿಯಾಗಿ 1 ಕೋಟಿ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಸೆಪ್ಟೆಂಬರ್ 20 ರ ನಂತರ ಮತ್ತೊಂದು ಸಭೆ ನಡೆಸಲಾಗುವುದು. ಆ ಸಭೆಯಲ್ಲಿ ಹೆಚ್ಚು ಕಾರ್ಯಕ್ರಮ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು. ಕೊವೀಡ್ ಪರಿಸ್ಥಿತಿ ನೋಡಿಕೊಂಡು ಕಾರ್ಯಕ್ರಮ ಹೆಚ್ಚಿಸುವ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದರು.


  ದಸರಾ ಉದ್ಘಾಟನೆಗೆ ಯಾರು ಮಾಡಲಿದ್ದಾರೆ ಎಂಬುದರ ಬಗ್ಗೆ ಇನ್ನೂ ನಿರ್ಧಾರ ಆಗಿಲ್ಲ. 20ರ ನಂತರ ಸಭೆ ಸೇರಿ, ಉದ್ಘಾಟನೆಗೆ ಯಾರನ್ನು ಆಹ್ವಾನಿಸಬೇಕು ಎಂದು ನಿರ್ಧಾರ ಮಾಡಲಾಗುವುದು. ಉದ್ಘಾಟನೆ ಯಾರು ಮಾಡಬೇಕು ಎಂದು ಸಿಎಂ ವಿವೇಚನೆಗೆ ಬಿಟ್ಡಿದ್ದೇವೆ. ದಸರಾ ಉದ್ಘಾಟಕರು ಯಾರು ಎಂಬುದನ್ನು ಸಿಎಂ ಅವರೇ ಘೋಷಣೆ ಮಾಡ್ತಾರೆ.  ಕಳೆದ ಬಾರಿ ಉದ್ಘಾಟನೆಗೆ 150 ಜನರಿಗೆ ಅವಕಾಶ ಇತ್ತು. ಈ ಬಾರಿ ಇದನ್ನು ಡಬಲ್ ಮಾಡಿ ಎಂದು ಸಿಎಂ ಗೆ ಮನವಿ ಮಾಡಿದ್ದೇವೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್ ಟಿ ಸೋಮಶೇಖರ್ ಹೇಳಿದರು.


  ನಾವು ದಸರಾ ಆಚರಣೆಗೆ 5 ಕೋಟಿ ಕೇಳಿದ್ದೆವು. ಸಿಎಂ 1 ಕೋಟಿ ಹೆಚ್ಚುವರಿಯಾಗಿ ಸೇರಿಸಿ 6 ಕೋಟಿ ಕೊಡಲು ಒಪ್ಪಿದ್ದಾರೆ. ಕಳೆದ ಬಾರಿ ಯಾವುದಕ್ಕೆಲ್ಲ ಅವಕಾಶ ಇತ್ತೋ ಅದರ ದುಪ್ಪಟ್ಟು ಅವಕಾಶ ಕೊಡಲು ಮನವಿ ಮಾಡಿದ್ದೇವೆ. ದಸರಾಗೆ ವ್ಯವಸ್ಥಿತವಾಗಿ ದೀಪಾಲಂಕಾರ ಮಾಡಲಾಗುತ್ತದೆ. 9 ದಿನ ಕಾರ್ಯಕ್ರಮಗಳನ್ನು ಮಾಡಲಾಗುತ್ತದೆ. ಮೈಸೂರಿನವರಿಗೆ ಕಾರ್ಯಕ್ರಮಗಳನ್ನು ಕೊಡಲು ನಿರ್ಧರಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದಲೇ ಕಾರ್ಯಕ್ರಮ, ದೀಪಾಲಂಕಾರ ವ್ಯವಸ್ಥೆ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.


  ಇದನ್ನು ಓದಿ: Mysuru Dasara 2021: ಈ ಬಾರಿಯೂ ಸರಳ, ಸಾಂಪ್ರದಾಯಿಕವಾಗಿ ಮೈಸೂರು ದಸರಾ ಆಚರಣೆಗೆ ಸರ್ಕಾರ ನಿರ್ಧಾರ!


  ದಸರಾ ಆಚರಣೆ ಸಂಬಂಧ ಮೈಸೂರು ಮಹಾರಾಜರ ಕುಟುಂಬದವರ ಜೊತೆ ಮೈಸೂರು ಜಿಲ್ಲಾಡಳಿತ ಹಾಗೂ ದಸರಾ ಆಚರಣೆ ಸಮಿತಿ ಚರ್ಚೆ ನಡೆಸುತ್ತದೆ. ಮೈಸೂರು ಅರಮನೆಯಲ್ಲಿ ನಡೆಯಬೇಕಾದ ಸಾಂಪ್ರದಾಯಿಕ ಆಚರಣೆಗಳು ಹಾಗೂ ಅರಮನೆ ಆವರಣ ಮತ್ತು ಚಾಮುಂಡಿ ಬೆಟ್ಟದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಯಾವುದೇ ಅಡ್ಡಿ ಇರುವುದಿಲ್ಲ. ಆದರೆ, ಸಾಂಸ್ಕೃತಿಕ, ಕಲೆ, ಸಂಗೀತ, ಕ್ರೀಡಾ ಚಟುವಟಿಕೆ, ಕುಸ್ತಿ ಪಂದ್ಯಾವಳಿ, ಪಂಜಿನ ಕವಾಯತು, ಸಿನಿಮೋತ್ಸವ, ರಂಗೋತ್ಸವ, ದೀಪೋತ್ಸವಗಳ ಆಚರಣೆಗಳಿಗೆ ಅವಕಾಶ ಇರುವುದು ಬಹುತೇಕ ಅನುಮಾನವಾಗಿದೆ. ಕಳೆದ ಬಾರಿಯಂತೆ ಖಾಸಗಿ ದರ್ಬಾರ್ ವೇಳೆ ರಾಜವಂಶಸ್ಥರು ಸೇರಿ ಕೆಲವೇ ಕೆಲವು ಮಂದಿಗೆ ಆಹ್ವಾನ ಇರುತ್ತದೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

  First published: