ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ (MS Dhoni) ತಮ್ಮ ಹಸ್ತಾಕ್ಷರವಿರುವ ಬ್ಯಾಟ್ ಅನ್ನು ತಮಿಳು ಸ್ಟಾರ್ ಯೋಗಿ ಬಾಬಾ (Yogi Babu) ಅವರಿಗೆ ಉಡುಗೊರೆಯಾಗಿ ನೀಡಿದ್ದಾರೆ. ಇದೇ ಬ್ಯಾಟ್ ನಲ್ಲಿ ಧೋನಿ ನೆಟ್ಸ್ ನಲ್ಲಿ ಅಭ್ಯಾಸ ನಡೆಸಿದ್ದರು. ಸ್ಟಾರ್ ಹಾಸ್ಯನಟ ಯೋಗಿ ಬಾಬು ಅವರು ಧೋನಿ ಹಸ್ತಾಕ್ಷರ ಹೊಂದಿರುವ ಬ್ಯಾಟ್‌ನೊಂದಿಗೆ ಪೋಸ್ ನೀಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಯೋಗಿ ಬಾಬು ಬ್ಯಾಟ್ (BAT) ಹಿಡಿದು ನಿಂತಿರುವ ಚಿತ್ರಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಯೋಗಿ ಬಾಬು ಅವರು ಧೋನಿಯ ಅವರ ಪ್ರಾಜೆಕ್ಟ್ ಅಡಿಯಲ್ಲಿ 'LGM- ಲೆಟ್ಸ್ ಗೆಟ್ ಮ್ಯಾರೇಡ್' ಚಿತ್ರದಲ್ಲಿ ನಟಿಸುತ್ತಿದ್ದಾರೆ.
ವಿಶೇಷ ಗಿಫ್ಟ್ ನೀಡಿದ ಧೋನಿ:
ಇನ್ನು, ಧೋನಿಗೂ ಚೆನ್ನೈಗೂ ಅನೇಕ ವರ್ಷಗಳಿಂದ ಅವಿನಾಭಾವ ಸಂಬಂಧವಿದೆ. ಅದರ ಭಾಗವಾಗಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಪರ ಐಪಿಎಲ್ನಲ್ಲಿ ಆಡುತ್ತಿದ್ದಾರೆ. ಇದೀಗ ಅದರ ಹಿನ್ನಲೆ ತಮ್ಮ ಧೋನಿ ಎಂಟರ್ಟೈನ್ಮೆಂಟ್ ನಲ್ಲಿ ಚೊಚ್ಚಲ ತಮಿಳು ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಇದರಲ್ಲಿ ತಮಿಳಿನ ಖ್ಯಾತ ಹಾಸ್ಯ ನಟ ಯೋಗಿ ಬಾಬು ಸಹ ನಟಿಸುತ್ತಿದ್ದು, ಅವರಿಗಾಗಿ ಧೋನಿ ವಿಶೆಷ ಗಿಫ್ಟ್ ಒಂದನ್ನು ನೀಡಿದ್ದಾರೆ. ಧೋನಿ ಯೋಗಿ ಬಾಬು ಅವರಿಗೆ ತಾವು ನೆಟ್ಸ್ನಲ್ಲಿ ಅಭ್ಯಾಸ ಮಾಡಿದ ಬ್ಯಾಟ್ ಮೇಲೆ ತಮ್ಮ ಹಸ್ತಾಕ್ಷರ ಹಾಕಿ ಯೋಗಿ ಬಾಬು ಅವರಿಗೆ ಗಿಫ್ಟ್ ನೀಡಿದ್ದಾರೆ.
Direct from #MSDhoni hands which he played in nets . Thankyou @msdhoni sir for the bat .... Always cherished with the - your cricket memory as well as cinematic memory #dhonientertainmentprod1 #sakshidhoni . pic.twitter.com/2iDv2e5aBZ
— Yogi Babu (@iYogiBabu) February 15, 2023
ಧೋನಿ ಎಂಟರ್‌ಟೈನ್‌ಮೆಂಟ್‌ನ ಮೊದಲ ತಮಿಳು ಚಿತ್ರ 'ಲೆಟ್ಸ್ ಗೆಟ್ ಮ್ಯಾರೇಡ್' ಅನ್ನು ಕಳೆದ ತಿಂಗಳು ಜನವರಿ 27 ರಂದು ಘೋಷಿಸಲಾಯಿತು. ಯೋಗಿ ಬಾಬು, ಹರೀಶ್ ಕಲ್ಯಾಣ್, ಇವಾನಾ ಮತ್ತು ನಾಡಿಯಾ ಈ ಚಿತ್ರದಲ್ಲಿದ್ದಾರೆ. ಈ ಚಿತ್ರ ಕೌಟುಂಬಿಕ ಕಾಮಿಡಿ ಚಿತ್ರವಾಗಿರಲಿದೆ. ಧೋನಿ ಎಂಟರ್‌ಟೈನ್‌ಮೆಂಟ್‌ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಸಾಕ್ಷಿ ಸಿಂಗ್ ಧೋನಿ ಇದಕ್ಕೆ ಬಂಡವಾಳ ಹೂಡುತ್ತಿದ್ದಾರೆ.
ಇದನ್ನೂ ಓದಿ: IND vs AUS: ಆಸೀಸ್ ವಿರುದ್ಧದ 2ನೇ ಟೆಸ್ಟ್ಗೆ ನಂಬರ್ 1 ಬ್ಯಾಟ್ಸ್ಮನ್ ಔಟ್! ದ್ರಾವಿಡ್ ಮಹತ್ವದ ನಿರ್ಧಾರ
ಯೋಗಿ ಬಾಬುಗೆ ಕ್ರಿಕೆಟ್ ತುಂಬಾ ಇಷ್ಟ. ಅವರು ಆಗಾಗ್ಗೆ ಶೂಟಿಂಗ್ ಸಮಯದಲ್ಲಿ ಮತ್ತು ಶೂಟಿಂಗ್ ಇಲ್ಲದ ವೇಳೆ ಕ್ರಿಕೆಟ್ ಆಡುತ್ತಾರೆ. ಯೋಗಿ ಬಾಬು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದು, ಈ ಉಡುಗೊರೆಗಾಗಿ ಧೋನಿಗೆ ಧನ್ಯವಾದ ಹೇಳಿದ್ದಾರೆ.
ಐಪಿಎಲ್ಗಾಗಿ ಧೋನಿ ಅಭ್ಯಾಸ:
ಏತನ್ಮಧ್ಯೆ, ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ತಯಾರಿಯಲ್ಲಿ ನಿರತರಾಗಿದ್ದಾರೆ. ಇದು ಮಹೇಂದ್ರ ಸಿಂಗ್ ಧೋನಿಯ ಕೊನೆಯ ಐಪಿಎಲ್ ಸೀಸನ್ ಆಗಿರಬಹುದು. ಆದಾಗ್ಯೂ, ಧೋನಿ ಅಥವಾ ಚೆನ್ನೈ ಸೂಪರ್ ಕಿಂಗ್ಸ್‌ನಿಂದ ಇದುವರೆಗೆ ಯಾವುದೇ ಸೂಚನೆಯನ್ನು ನೀಡಲಾಗಿಲ್ಲ. ಆದಾಗ್ಯೂ, ಐಪಿಎಲ್ 2023ರ ಮಿನಿ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಬೆನ್ ಸ್ಟೋಕ್ಸ್ ಅವರನ್ನು ಖರೀದಿಸಿದೆ ಮತ್ತು ಧೋನಿ ನಂತರ, ಸಿಎಸ್‌ಕೆ ನಾಯಕತ್ವವನ್ನು ಸ್ಟೋಕ್ಸ್‌ಗೆ ಹಸ್ತಾಂತರಿಸಬಹುದು ಎಂದು ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ