Morning Digest: ಹೆಚ್​ಡಿಕೆ ಸ್ಫೋಟಕ ಹೇಳಿಕೆ, ಕೊಡಗು ದೇಗುಲ ಶುದ್ಧೀಕರಣ, ಚಿನ್ನದ ಬೆಲೆ; ಬೆಳಗಿನ ಟಾಪ್ ನ್ಯೂಸ್

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
1.Kodagu Temple: ಸಿದ್ದರಾಮಯ್ಯ ಭೇಟಿ ಬಳಿಕ ದೇವಸ್ಥಾನದ ಶುದ್ಧೀಕರಣ, ವಿಶೇಷ ಪೂಜೆ

ಮಾಂಸಾಹಾರ ಸೇವನೆ ಮಾಡಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಅವರು ಕೊಡಗು (Kodagu) ಜಿಲ್ಲೆಯ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ (Basaveshwara Temple) ಭೇಟಿ ನೀಡಿದ್ದರು ಎಂದು ಬಿಜೆಪಿ ಆರೋಪ (BJP Allegation) ಮಾಡಿದೆ. ಆದ್ರೆ ಸಿದ್ದರಾಮಯ್ಯನವರು ತಾವು ಮಾಂಸಾಹಾರ (Non veg) ಸೇವನೆ ಮಾಡಿರಲಿಲ್ಲ ಎಂದು ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದರು. ಆಗಸ್ಟ್ 19ರಂದು ಕೊಡಗಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಬಸವೇಶ್ವರ ದೇವಸ್ಥಾನಕ್ಕೆ ತೆರಳಿದ್ದರು. ಈ ಎಲ್ಲಾ ಬೆಳವಣಿಗೆ ಬಳಿಕ ದೇವಾಲಯದ ಸಮಿತಿ ಶನಿವಾರ ದೇವಸ್ಥಾನದ ಆವರಣವನ್ನು ಶುಚಿಗೊಳಿಸಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಶನಿವಾರ ಇಡೀ ದೇವಸ್ಥಾನದ ಶುದ್ಧೀಕರಣ (Temple Purified) ನಡೆದಿದೆ ಎಂದು TOI ವರದಿ ಮಾಡಿದೆ.

2.Murugha Shri: ಮುರುಘಾ ಶ್ರೀಗಳ ಲೈಂಗಿಕ ಕಿರುಕುಳದ ಬಗ್ಗೆ 6 ತಿಂಗಳ ಹಿಂದೆಯೇ ಗೊತ್ತಿದ್ರೆ HDK ದೂರು ದಾಖಲಿಸಲಿಲ್ಲ ಏಕೆ?

ಚಿತ್ರದುರ್ಗದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಅಡಿ ಪ್ರಕರಣ ದಾಖಲಾಗಿದೆ. ಈ ಸಂಬಂಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ನೀಡಿರುವ ಹೇಳಿಕೆ ಅಚ್ಚರಿಗೆ ಕಾರಣವಾಗಿದೆ. ಭಾನುವಾರ ರಾಮನಗರದ ಚನ್ನಪಟ್ಟಣದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಕುಮಾರಸ್ವಾಮಿ ಅವರು, ಶ್ರೀಗಳ ವಿರುದ್ಧದ ಲೈಂಗಿಕ ಕಿರುಕುಳದ ಆರೋಪ ನನಗೆ ಆಶ್ಚರ್ಯ ತಂದಿಲ್ಲ. ಇದರ ಬಗ್ಗೆ ಐದಾರು ತಿಂಗಳ ಹಿಂದೆಯೇ ಚರ್ಚೆ ನಡೆದಿತ್ತು ಎಂದು ಹೇಳಿದ್ದಾರೆ. ಈ ವಿಷಯದಲ್ಲಿ ಸರ್ಕಾರ ಮುಂಜಾಗ್ರತ ಕ್ರಮವಾಗಿ ಆರಂಭಿಕ ಹಂತದಲ್ಲಿಯೇ ತನಿಖೆ ನಡೆಸಬೇಕು. ಧಾರ್ಮಿಕ ಕ್ಷೇತ್ರ ಮತ್ತು ನಮ್ಮ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಆಗದಂತೆ ಸರ್ಕಾರ ಕೆಲಸ ನಿರ್ವಹಿಸಬೇಕಿದೆ. ಯಾರಾದ್ರೂ ಬಲವಂತವಾಗಿ ಮತ್ತು ಕಾನೂನು ಬಾಹಿರವಾಗಿ ನಡೆದುಕೊಂಡಿದ್ರೆ ಕ್ರಮ ಕೈಗೊಳ್ಳಬೇಕು ಎಂದು ಹೆಚ್​ಡಿಕೆ ಆಗ್ರಹಿಸಿದ್ದಾರೆ.

3.Alia Bhatt: ಅಬ್ಬಾ, ಆಲಿಯಾ​ ತೊಟ್ಟಿರೋ ಈ ಟಾಪ್​ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ! ಬಟ್ಟೆ ಅಂಗಡಿನೇ ಓಪನ್​ ಮಾಡ್ಬಹುದಿತ್ತು

ಆಲಿಯಾ ಮತ್ತು ರಣಬೀರ್ ಅಭಿನಯದ ಚಿತ್ರ ಬ್ರಹ್ಮಾಸ್ತ್ರ. ಚಿತ್ರ ಸೆಪ್ಟೆಂಬರ್ 9 ರಂದು ತೆರೆಗೆ ಬರಲಿದೆ. ಇದರೊಂದಿಗೆ ಈ ಜೋಡಿ ಈಗ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಪ್ರಚಾರದ ಭಾಗವಾಗಿ, ಆಲಿಯಾ ತನ್ನ ಪತಿಯೊಂದಿಗೆ ತನ್ನ ಬೇಬಿ ಬಂಪ್‌ನೊಂದಿಗೆ ಫೋಟೋಗಳಿಗೆ ಪೋಸ್ ನೀಡಿದ್ದಾರೆ. ಈ ಸಂದರ್ಭದಲ್ಲಿ ಆಲಿಯಾ ಡ್ರೆಸ್ ಈಗ ಹಾಟ್ ಟಾಪಿಕ್ ಆಗಿದೆ. ಆಲಿಯಾ ಧರಿಸಿರುವ ಟಾಪ್ ನ ಬೆಲೆ 4100 ಡಾಲರ್ ಎನ್ನಲಾಗಿದೆ. ಅಂದರೆ ನಮ್ಮ ಕರೆನ್ಸಿಯಲ್ಲಿ ರೂ.3,27,883. ಆದರೆ ಈ ಡ್ರೆಸ್ ತುಂಬಾ ಸಿಂಪಲ್ ಮತ್ತು ತೆಳ್ಳಗಿದೆ ಎಂದು ತಿಳಿದು ಎಲ್ಲರೂ ಶಾಕ್ ಆಗಿದ್ದಾರೆ. ಆಲಿಯಾ ಕೇವಲ ಟಾಪ್ ಗಾಗಿಯೇ ಇಷ್ಟು ಲಕ್ಷ ಖರ್ಚು ಮಾಡುತ್ತಾರಾ ಎಂದು ಬಾಲಿವುಡ್ ಮಾಧ್ಯಮಗಳಲ್ಲಿ ಜೋರಾಗಿ ಚರ್ಚೆ ನಡೆಯುತ್ತಿದೆ.

4.Gold-Silver Price Today: ಚಿನ್ನ, ಬೆಳ್ಳಿ ಬೆಲೆಯಲ್ಲಿ ಬದಲಾವಣೆ ಇಲ್ಲ: ಖರೀದಿಗೂ ಮುನ್ನ ಇಂದಿನ ದರವನ್ನೊಮ್ಮೆ ನೋಡಿ!

ಇನ್ನು ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 47,350 ಆಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಬಗ್ಗೆ ನೋಡುವುದಾದರೆ, ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,730 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,160 ಆಗಿದೆ. ಇನ್ನು ಎಂಟು ಗ್ರಾಂ (8GM) ಇತ್ತ 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 37,840 ಆಗಿದ್ದರೆ, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,280 ಆಗಿದೆ.

5.PHOTOS: ಮತ್ತೆ ಮಾಜಿ ಬಾಯ್​ಫ್ರೆಂಡ್​ ರೋಹ್ಮನ್ ಜೊತೆ ಕಾಣಿಸಿಕೊಂಡ ಸುಶ್ಮಿತಾ ಸೇನ್, ಎಲ್ಲಿ ಲಲಿತ್ ಮೋದಿ?

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್ ಸಿನಿಮಾ ಮಾತ್ರವಲ್ಲದೇ ತಮ್ಮ ವೈಯುಕ್ತಿಕ ಜೀವನದಿಂದಲೂ ಆಗಾಗ ಚರ್ಚೆಯಲ್ಲಿರುತ್ತಾರೆ. ಸದ್ಯ ಈ ನಟಿಯ ಕೆಲ ಪೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿವೆ, ಇದರಲ್ಲಿ ಅವರು ತಮ್ಮ ಮಾಜಿ ಗೆಳೆಯ ರೋಹ್ಮನ್ ಶಾಲ್ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಸುಶ್ಮಿತಾ ಸೇನ್ ಮತ್ತು ರೋಹ್ಮನ್ ಶಾಲ್ ನಡುವೆ ಬ್ರೇಕಪ್ ಆಗಿರಬಹುದು, ಆದರೆ ಇವರಿಬ್ಬರೂ ಈಗಲೂ ಉತ್ತಮ ಸ್ನೇಹಿತರಾಗಿದ್ದಾರೆ. ಈ ಮಾಜಿ ಜೋಡಿಯ ಇತ್ತೀಚಿನ ಚಿತ್ರಗಳು ಈ ಮಾತಿಗೆ ಸಾಕ್ಷಿ ಎಂಬಂತಿವೆ. ಇವರಿಬ್ಬರು ಮುಂಬೈನಲ್ಲಿ ಪಾಪರಾಜಿಗಳು ಒಟ್ಟಿಗೆ ಪೋಸ್​ ನೀಡಿದ್ದಾರೆ
Published by:Mahmadrafik K
First published: