• Home
  • »
  • News
  • »
  • breaking-news
  • »
  • Top 5 News: ಇಂದಿನಿಂದ ದಸರಾ ಹಬ್ಬ, ಹುಬ್ಬಳ್ಳಿ ಚರಂಡಿಗಳಿಗೆ ಗ್ರೀನ್ ಮ್ಯಾಟ್, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್​ಗಳು

Top 5 News: ಇಂದಿನಿಂದ ದಸರಾ ಹಬ್ಬ, ಹುಬ್ಬಳ್ಳಿ ಚರಂಡಿಗಳಿಗೆ ಗ್ರೀನ್ ಮ್ಯಾಟ್, ಚಿನ್ನದ ದರ; ಬೆಳಗಿನ ಟಾಪ್ ನ್ಯೂಸ್​ಗಳು

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Top News of the Day: ರಾಜ್ಯ, ದೇಶ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಬಗ್ಗೆ ಗಮನಹರಿಸುವುದು ಮುಖ್ಯ. ಇಂದಿನ ಪ್ರಮುಖ ಸುದ್ದಿಗಳೇನು ಎಂಬುದರ ಬಗ್ಗೆ ಇಲ್ಲಿದೆ ಸಂಕ್ಷಿಪ್ತ ಮಾಹಿತಿ.

  • Share this:

1.Hubballi: ಮುರ್ಮು ಭೇಟಿ; ಕ್ಲೀನ್, ಗ್ರೀನ್ ಸಿಟಿಯಾಗಿ ಬಿಂಬಿಸಲು ಹರಸಾಹಸ, ಡ್ರೈನೇಜ್​​​​ಗಳಿಗೂ ಹಸಿರು ಹೊದಿಕೆ


ಹುಬ್ಬಳ್ಳಿ ವಾಣಿಜ್ಯ ನಗರಿ (Commercial City) ಅಂತಲೇ ಫೇಮಸ್. ಹುಬ್ಬಳ್ಳಿ – ಧಾರವಾಡ (Hubballi-Dharwad) ಅವಳಿ ನಗರಗಳೆನಿಸಿಕೊಂಡಿದ್ದು, ಬೆಂಗಳೂರು (Bengaluru) ನಂತರ ಅತಿ ದೊಡ್ಡ ಸಿಟಿ ಎಂಬ ಖ್ಯಾತಿಗೂ ಪಾತ್ರವಾಗಿವೆ. ಸ್ಮಾರ್ಟ್ ಸಿಟಿ (Smart City) ಯೋಜನೆಗೆ ಆಯ್ಕೆಯಾದ ನಂತರ ಸ್ಮಾರ್ಟ್ ಆಗ್ತೇವೆ ಅಂತ ಕನಸು ಕಂಡಿದ್ದ ಜನತೆಗೆ ನಿರಾಸೆಯಾಗಿದೆ. ಇದರ ನಡುವೆ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಹುಬ್ಬಳ್ಳಿಗೆ (Hubballi) ಭೇಟಿ ನೀಡ್ತಿರೋದ್ರಿಂದ ಹುಬ್ಬಳ್ಳಿ ಕ್ಲೀನ್ & ಗ್ರೀನ್ ಅಂತ ಬಿಂಬಿಸೋಕೋ ಮಹಾನಗರ ಪಾಲಿಕೆ ಹರಸಾಹಸಪಡುತ್ತಿದೆ.


president draupadi murumu visits hubballi today municipality cover drainage using green mat saklb mrq
ಹಸಿರು ಹೊದಿಕೆ


ರಾಷ್ಟ್ರಪತಿ ಸಾಗೋ ರಸ್ತೆಗಳಲ್ಲಿ ಸ್ವಚ್ಛತಾ ಕಾರ್ಯ ಬಿರುಸುಗೊಂಡಿದೆ. ಡ್ರೈನೇಜ್ ಗಳು ಕಾಣದಂತೆ ಪಾಲಿಕೆಯಿಂದ ಗ್ರೀನ್ ಕಾರ್ಪೆಟ್ ಹೊದಿಕೆ ಹಾಕಿಸಲಾಗ್ತಿದೆ.


2.Mysuru Dasara 2022: ಇಂದು ದಸರಾ ಮಹೋತ್ಸವಕ್ಕೆ ಚಾಲನೆ; ಇಲ್ಲಿದೆ ಸಂಪೂರ್ಣ ಮಾಹಿತಿ


ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಇಂದು ಮೈಸೂರು ದಸರಾಗೆ (Mysuru Dasara) ಚಾಲನೆ ನೀಡಲಿದ್ದಾರೆ. ರಾಷ್ಟ್ರಪತಿಯಾದ ನಂತರ ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ (Karnataka) ಆಗಮಿಸುತ್ತಿರುವ ದ್ರೌಪದಿ ಮುರ್ಮು ಇಂದು ಮೈಸೂರಿಗೆ ಬಂದಿಳಿಯಲಿದ್ದಾರೆ. ಬೆಳಗ್ಗೆ 9 ಗಂಟೆಗೆ ರಾಷ್ಟ್ರಪತಿ ಆಗಮಿಸಲಿದ್ದು, ಚಾಮುಂಡಿ ಬೆಟ್ಟಕ್ಕೆ (Chamundi Hill) ತೆರಳಿ ದೇವಿ (Goddess Chamundeshwari) ದರ್ಶನ ಪಡೆದು, ಬೆಳಗ್ಗೆ 10ಕ್ಕೆ ದೇವಿಗೆ ಪುಷ್ಪಾರ್ಚನೆ ಮೂಲಕ ದಸರಾ ಮಹೋತ್ಸವವನ್ನ (Dasara Mahotsava) ಅದ್ಧೂರಿಯಾಗಿ ಉದ್ಘಾಟನೆ ಮಾಡಲಿದ್ದಾರೆ. ಇನ್ನು ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ಭಾನುವಾರ ರಾತ್ರಿಯೇ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದಾರೆ.


Morning Digest 26 September 2022 have quick look of important news today mrq
(ಫೋಟೋ ಕೃಪೆ: ಟ್ವಿಟರ್)


3.Gold-Silver Price Today: ಏರಿಕೆಯಾಗದ ಚಿನ್ನದ ದರ, ಖರೀದಿಸಲು ಅದೇ ಸೂಕ್ತ ಸಮಯ: ಹೀಗಿದೆ ಇಂದಿನ ರೇಟ್​


Gold and Silver Price on 26 Sep, 2022: ಭಾರತದ ಮಾರುಕಟ್ಟೆಗಳಲ್ಲಿ ಇಂದು ಚಿನ್ನ ಖರೀದಿ ಸಹಜ ಸಂಗತಿಯಾಗಿದ್ದು ದಿನದಲ್ಲೇ ಕೋಟ್ಯಂತರ ರೂಪಾಯಿಗಳಷ್ಟು ವ್ಯವಹಾರವನ್ನು ಈ ವ್ಯವಹಾರ ಹೊಂದಿದೆ. ಬೆಂಗಳೂರಿನಲ್ಲಿ ಇಂದು ಪ್ರತಿ 10 ಗ್ರಾಂ ಆಭರಣ ಚಿನ್ನದ ಬೆಲೆ ರೂ. 46,050 ಆಗಿದೆ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,600 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,200 ಆಗಿದೆ. ಇನ್ನು ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 36,800 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 41,600 ಆಗಿದೆ.


Morning Digest 26 September 2022 have quick look of important news today mrq
ಚಿನ್ನ


ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 46,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 52,000 ಆಗಿದೆ. ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 4,60,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,20,000 ಆಗಿದೆ.


4.Ganesh In Kenya Market: ಆಫ್ರಿಕಾ ದೇಶದ ಕೀನ್ಯಾ ಮಾರ್ಕೆಟ್​ ನಲ್ಲಿ ಗೋಲ್ಡನ್ ಗಣಿ ಸಖತ್ ರೋಮಿಂಗೋ ರೋಮಿಂಗ್


ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh) ದೂರದ ಆಫ್ರಿಕಾ ದೇಶದಲ್ಲಿಯೇ ಈಗ ಬೀಡು ಬಿಟ್ಟಿದ್ದಾರೆ. ಆಫ್ರಿಕಾ (Africa) ದೇಶದ ಕೀನ್ಯಾದಲ್ಲಿಯೆ (Kenya) ಗೋಲ್ಡನ ಗಣಿ ರೋಮಿಂಗೋ ರೋಮೀಂಗ್. ಆದರೆ ಈ ರೋಮಿಂಗ್ ಯಾಕೆ? ಈ ಒಂದು ಪ್ರಶ್ನೆಗೆ ಉತ್ತರ ತುಂಬಾ ಇಂಟ್ರಸ್ಟಿಂಗ್ ಆಗಿಯೇ ಇದೆ. ಕೀನ್ಯಾದ ಆ ಒಂದು ಮಾರುಕಟ್ಟೆಯಲ್ಲಿ ಗಣೇಶ್ ಆ್ಯಂಡ್ ಟೀಮ್ ಸಖತ್ ಮಜಾ ಮಾಡುತ್ತಿದೆ. ಗಣೇಶ್ ಕೂಡ ಸುಮ್ನೆ ಕೂತಿಲ್ಲ. ಸಣ್ಣ ಹಾದಿಯ ದೊಡ್ಡ ಲೋಕಲ್ (Kenya Local Market) ಮಾರುಕಟ್ಟೆಯಲ್ಲಿ ಮನಸೋಯಿಚ್ಛೆ ಓಡಾಡಿ ಬಿಟ್ಟಿದ್ದಾರೆ.


Morning Digest 26 September 2022 have quick look of important news today mrq
ಇಂಡಿಗೋ ಏರ್ಲೈನ್


5.Indigo Airlines: ಹಿಂದಿ, ಇಂಗ್ಲಿಷ್ ಗೊತ್ತಿಲ್ಲವೆಂದು ಪ್ರಯಾಣಿಕರ ಸೀಟ್ ಬದಲಾಯಿಸಿದ ಇಂಡಿಗೋ ಸಿಬ್ಬಂದಿ


ಇತ್ತೀಚಿನ ಘಟನೆಯೊಂದರಲ್ಲಿ, ಇಂಡಿಗೋ ಪ್ರಯಾಣಿಕನನ್ನು ಭಾಷೆಯ ಅಡೆತಡೆಯಿಂದಾಗಿ ತನ್ನ ನಿರ್ಗಮನ ಸಾಲಿನ ಎಂದರೆ ‘ಎಕ್ಸಿಟ್ ರೋ’ ನಲ್ಲಿರುವ ಆಸನವನ್ನು ಬಿಟ್ಟು ಬೇರೆ ಸೀಟಿನಲ್ಲಿ ಕುಳಿತುಕೊಳ್ಳುವಂತೆ ಮಾಡಿರುವ ಘಟನೆಯೊಂದು ವರದಿಯಾಗಿದೆ. ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರು ಮಾಡಿದ ಟ್ವೀಟ್ ಈಗ ದೊಡ್ಡ ಸುದ್ದಿಯಾಗಿದ್ದು, ಟ್ವಿಟ್ಟರ್ ನಲ್ಲಿ ಬಳಕೆದಾರರಿಂದ ತುಂಬಾ ಪ್ರತಿಕ್ರಿಯೆಗಳು ಬರುತ್ತಿವೆ.

Published by:Mahmadrafik K
First published: