• Home
  • »
  • News
  • »
  • breaking-news
  • »
  • Munirathna: ಹೋಗಿ ನಿಮ್ಮಣ್ಣನ ಬಳಿ ಕೇಳಿ; ಡಿಕೆ ಸುರೇಶ್​ ವಿರುದ್ಧ ಮುನಿರತ್ನ ಗುಡುಗು

Munirathna: ಹೋಗಿ ನಿಮ್ಮಣ್ಣನ ಬಳಿ ಕೇಳಿ; ಡಿಕೆ ಸುರೇಶ್​ ವಿರುದ್ಧ ಮುನಿರತ್ನ ಗುಡುಗು

ಮುನಿರತ್ನ, ಸಚಿವ

ಮುನಿರತ್ನ, ಸಚಿವ

ನಿಮ್ಮ ಇಂತಹ ಮಾತುಗಳಿಂದಲೇ ಕಾಂಗ್ರೆಸ್​​ಗೆ ಇಂದು ಈ ಸ್ಥಿತಿ ಬಂದಿರೋದು, 17 ಜನ ಒಟ್ಟಿಗೆ ಪಕ್ಷ ಬಿಟ್ಟಿರೋದು ಎಂದರು. ಬೆಂಗಳೂರು ನಗರಕ್ಕೆ ಇವರ ಕೊಡುಗೆ ಏನಿದೆ? ರಾಜರಾಜೇಶ್ವರಿ ನಗರಕ್ಕೆ ಇವರ ಕೊಡುಗೆ ಏನಿದೆ? ಬೆಂಗಳೂರು ಹಾಳು ಮಾಡುವುದಕ್ಕೆ ಬರುತ್ತಿದ್ದಾರೆ. ಇಷ್ಟು ಸಣ್ಣ ಜನ ಅಂತಾ ನನಗೆ ಗೊತ್ತಿರಲಿಲ್ಲ ಎಂದು ಟೀಕಿಸಿದರು.

ಮುಂದೆ ಓದಿ ...
  • Share this:

ಎಲ್ಲಿ ಮತದಾರರ ಪಟ್ಟಿ ಡಿಲೀಟ್ (Voters name Delete) ಆಗಿರುವುದು, ಸೇರ್ಪಡೆ ಅಗಿರುವುದು ಅಂತಾ ಸಂಸದ ಡಿ.ಕೆ. ಸುರೇಶ್ (MP DK Suresh) ಅವರೇ  ಸರಿಯಾದ ಮಾಹಿತಿ ತನ್ನಿ ಎಂದು ಸಚಿವ ಮುನಿರತ್ನ (Minister Munirathna) ಸವಾಲು ಹಾಕಿದ್ದಾರೆ. ನಿಮ್ಮ ಜೊತೆ ನಾನು ಇದ್ದಾಗ ಯಾವುದೂ ಸೇರ್ಪಡೆ, ಡಿಲೀಟ್ ಆಗಿರಲಿಲ್ಲ. ನಿಮ್ಮ ಜೊತೆ ಇದ್ದಾಗ ನಾನು ಬಹಳ ಪವಿತ್ರವಾಗಿದ್ದೆ, ಈಗ ಪವಿತ್ರ ಇಲ್ಲದಾಗಿದೆ. ಸಂಸದ ಸ್ಥಾನಕ್ಕೆ ಘನತೆ ತರುವಂತಹ ಮಾತಾಡಿ ಎಂದು ವಾಗ್ದಾಳಿ ನಡೆಸಿದರು. ಮುನಿರತ್ನ ಅಂತಹ ಕೀಳು ರಾಜಕಾರಣ ಮಾಡಲ್ಲ. ಅವರಿಗೆ ಅಂತಹ ರಾಜಕಾರಣ (Politics) ಬೇಕೇನೋ? ಮೊದಲು ಡಿ.ಕೆ. ಸುರೇಶ್​ ಕ್ಷೇತ್ರಕ್ಕೆ ಕೊಟ್ಟಿರುವ ಕೆಲಸದ ಮಾಹಿತಿ ಕೊಡಲಿ. ಮತದಾರರ ಪಟ್ಟಿ ಡಿಲೀಟ್ ಮಾಡುವಷ್ಟು ಕೀಳು ಮಟ್ಟ ನನ್ನದಲ್ಲ.ತೇಜೋವಧೆ ಮಾಡಿ ಗೆಲ್ತೀನಿ ಅನ್ನೋದನ್ನು ಬಿಟ್ಟುಬಿಡಿ. ಬನ್ನಿ ಜನರ ಮುಂದೆ ಹೋಗೋಣ ಎಂದು ಬಹಿರಂಗ ಸವಾಲು ಹಾಕಿದರು.


ಸೇರ್ಪಡೆ, ಡಿಲೀಟ್ ನಿಮ್ಮ ರೂಡಿ, ನನ್ನದಲ್ಲ. ನಿಮಗೆ ಅಂತಹ ಅಭ್ಯಾಸಗಳಿವೆ. ಎಂಪಿ ಅಂತಾ ಬಾಯಿಗೆ ಬಂದಂತೆ ಮಾತಾಡೋದಲ್ಲ. ಸಣ್ಣತನದ ರಾಜಕೀಯ ಬಿಟ್ಟು ಜೀವನ ಮಾಡಿ ಎಂದು ವ್ಯಂಗ್ಯ ಮಾಡಿದರು.


ನಿಮ್ಮಣ್ಣನ್ನು ಹೋಗಿ ಕೇಳಿ


ಮಲ್ಲೇಶ್ವರಂನಲ್ಲಿ ನನ್ನದು ಐದನೇ ತಲೆಮಾರು, ಸ್ವಲ್ಪ ಗೊತ್ತಿರಲಿ. ನಿಮಗೆ ಗೊತ್ತಿರದಿದ್ದರೆ ನಿಮ್ಮ ಅಣ್ಣನ ಕೇಳಿ. ನಿಮಗಿಂತ ಮೊದಲೇ ಅವರು ಬೆಂಗಳೂರಿಗೆ ಬಂದಿದ್ದೇನೆ. ನಾನು ಮಲ್ಲೇಶ್ವರದಲ್ಲೇ ಹುಟ್ಟಿದ್ದು, ಚುನಾವಣೆಗೆ ನಾಮಪತ್ರ ಸಲ್ಲಿಸಿ ನಾನು ಕ್ಷೇತ್ರದಲ್ಲಿ ಓಡಾಡಲ್ಲ, ಮತಯಾಚನೆ ಮಾಡಲ್ಲ, ನೀವು ಅದೇ ರೀತಿ ಮಾಡಿ, ಜನರ ತೀರ್ಮಾನಕ್ಕೆ ಬಿಡೋಣ ಎಂದು ಹೇಳಿದರು.


ನಿಮ್ಮ ಇಂತಹ ಮಾತುಗಳಿಂದಲೇ ಕಾಂಗ್ರೆಸ್​​ಗೆ ಇಂದು ಈ ಸ್ಥಿತಿ ಬಂದಿರೋದು, 17 ಜನ ಒಟ್ಟಿಗೆ ಪಕ್ಷ ಬಿಟ್ಟಿರೋದು ಎಂದರು. ಬೆಂಗಳೂರು ನಗರಕ್ಕೆ ಇವರ ಕೊಡುಗೆ ಏನಿದೆ? ರಾಜರಾಜೇಶ್ವರಿ ನಗರಕ್ಕೆ ಇವರ ಕೊಡುಗೆ ಏನಿದೆ? ಬೆಂಗಳೂರು ಹಾಳು ಮಾಡುವುದಕ್ಕೆ ಬರುತ್ತಿದ್ದಾರೆ. ಇಷ್ಟು ಸಣ್ಣ ಜನ ಅಂತಾ ನನಗೆ ಗೊತ್ತಿರಲಿಲ್ಲ ಎಂದು ಟೀಕಿಸಿದರು.


ಸಣ್ಣತನ ಬಿಟ್ಟು ದೊಡ್ಡತನ ತೋರಿಸಲಿ


ಏನು ಇವರೇ ಬಹಳ ಶುದ್ಧ ಇರುವ ರೀತಿಯಲ್ಲಿ ಮಾತನಾಡುತ್ತಾರೆ. ಚುನಾವಣೆ ಹತ್ತಿ ಬಂದಾಗ ಇದೆಲ್ಲ ಶುರುವಾಗುತ್ತದೆ. ಡಿ.ಕೆ.‌ ಸುರೇಶ್ ಬಗ್ಗೆ ಮಾತ್ರ ಮಾತಾಡುತ್ತಿದ್ದೇನೆ. ಇನ್ನಾದರೂ ಸಣ್ಣತನ ಬಿಟ್ಟು ದೊಡ್ಡತನ ತೋರಿಸಲಿ. ಇವರ ಪವಿತ್ರತೆ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇವರ ಸಹವಾಸದಿಂದ ಈಚೆ ಬಂದು ಬಹಳ ನೆಮ್ಮದಿಯಾಗಿದ್ದೇವೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸೇರ್ಪಡೆ ಕುರಿತು ಊಹಾಪೋಹಗಳಿಗೆ ತೆರೆ ಎಳೆದರು.


ಬಿಜೆಪಿಯಲ್ಲಿ ನಮ್ಮನ್ನು ಬಹಳ ಪ್ರೀತಿಸುತ್ತಿದ್ದಾರೆ.ಬೇಕಾದರೆ ರಾಜಕೀಯ ಬಿಟ್ಟು‌ ಕೂಲಿ ಮಾಡಿಕೊಂಡು ಇರುತ್ತೇನೆ. ಆದರೆ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ವಾಪಸ್ ಹೋಗಲ್ಲ ಎಂದು ಸ್ಪಷ್ಟಪಡಿಸಿದರು.


ಇದನ್ನೂ ಓದಿ: Maharashtra Villages: ನಮ್ಮ ಗ್ರಾಮಗಳನ್ನು ಕರ್ನಾಟಕಕ್ಕೆ ಸೇರಿಸಿ; ಜಿಲ್ಲಾಧಿಕಾರಿ ಪತ್ರ ಬರೆದ ಗ್ರಾಮಸ್ಥರು


ಎಚ್​​.ವಿಶ್ವನಾಥ್ ಮತ್ತು ಸಿದ್ದರಾಮಯ್ಯ ಭೇಟಿ


ನಾವು ಮತ್ತೆ ಬಂದ್ರೆ ಸಾಕು ಅಂತಾ ಅವರು ಕಾಯುತ್ತಿದ್ದಾರೆ. ಎಚ್. ವಿಶ್ವನಾಥ್ ಸಿದ್ದರಾಮಯ್ಯವರ ಆರೋಗ್ಯ ವಿಚಾರಣೆಗೆ ಹೋಗಿದ್ದು ಅಂತಾ ಸ್ಪಷ್ಟಪಡಿಸಿದ್ದಾರೆ. ಇದರಲ್ಲಿ ಮತ್ಯಾವ ವಿಶೇಷತೆ ಇಲ್ಲ ಎಂದರು.


ಇದನ್ನೂ ಓದಿ:  Sriramulu: ಸ್ನೇಹಕ್ಕಾಗಿ ಜೀವ ಕೊಡಲು ನಾನು ರೆಡಿ; ಜನಾರ್ದನ ರೆಡ್ಡಿ ಜೊತೆ ನಾನಿದ್ದೇನೆ ಎಂದ್ರು ರಾಮುಲು


ಡಿ.ಕೆ. ಸುರೇಶ್ ಒಡೆದು ಅಳುವ ನೀತಿ ಅನುಸರಿಸುತ್ತಾರೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಇವರ ಆಟ ನಡೆಯಲ್ಲ. ಇವರನ್ನು ರಾಜರಾಜೇಶ್ವರಿನಗರದ ಒಳಗೆ ಬಿಟ್ಟುಕೊಂಡರೆ ಪುಲಿಕೇಶಿ ನಗರ, ಕೆಹಿ ಹಳ್ಳಿ ಡಿಜೆ ಹಳ್ಳಿ ಆಗುತ್ತದೆ. ನನ್ನ ಕುಟುಂಬ ರಾಜಕಾರಣಕ್ಕೆ ನಾನೇ ಕೊನೆ. ಇವರದ್ದು ಈಗಲೇ ಮೂರು ತಲೆಮಾರಿಗೆ ರಾಜಕೀಯ ಮಾಡುತ್ತಾರೆ ಎಂದು ಡಿಕೆ ಬ್ರದರ್ಸ್ ವಿರುದ್ಧ ವಾಗ್ದಾಳಿ ನಡೆಸಿದರು.

Published by:Mahmadrafik K
First published: