Belagavi: ವಡಗಾವಿಯ ಆರಾಧ್ಯದೇವತೆ ಶ್ರೀ ಮಂಗಾಯಿದೇವಿ ಜಾತ್ರೆಗೆ ಅದ್ಧೂರಿ ಚಾಲನೆ

ಪ್ರತಿ ವರ್ಷವೂ ಆಷಾಢ ಮಾಸದಲ್ಲಿ ಹುಣ್ಣಿಮೆಯ ನಂತರ ಬರುವ ಮಂಗಳವಾರದಂದೇ ಈ ಜಾತ್ರೆ ನಡೆಯುತ್ತದೆ. ವಡಗಾವಿಯ ವಿಷ್ಣು ಗಲ್ಲಿ, ಪಾಟೀಲಗಲ್ಲಿ ಮೊದಲಾದ ಕಡೆಗಳಲ್ಲಿ ಮಾರಾಟಕ್ಕಿಟ್ಟಿದ್ದ ಕೋಳಿ ಮರಿಗಳನ್ನು ಖರೀದಿಸಿದ ಭಕ್ತರು, ಅವುಗಳನ್ನು ಮಂದಿರದ ಮೇಲೆ ಹಾರಿಸಿ ತಮ್ಮಭಕ್ತಿಯನ್ನು ಸಮರ್ಪಿಸಿದರು.

ವಡಗಾವಿಯ ಆರಾಧ್ಯದೇವತೆ ಶ್ರೀ ಮಂಗಾಯಿದೇವಿ ಜಾತ್ರೆ

ವಡಗಾವಿಯ ಆರಾಧ್ಯದೇವತೆ ಶ್ರೀ ಮಂಗಾಯಿದೇವಿ ಜಾತ್ರೆ

  • Share this:
ಬೆಳಗಾವಿ(ಜು.26): ಕಳೆದ ಎರಡು ವರ್ಷಗಳಿಂದ ಕೋವಿಡ್ (19) ಕಾರಣಕ್ಕೆ ವಡಗಾವಿಯ ಆರಾಧ್ಯದೇವತೆ ಶ್ರೀ ಮಂಗಾಯಿದೇವಿ ಜಾತ್ರೆ (Festival) ಸರಳವಾಗಿ ಆಚರಣೆ ಮಾಡಲಾಗಿತ್ತು. ಇದೀಗ ಮಂಗಾಯಿದೇವಿ ಜಾತ್ರಾಮಹೋತ್ಸವನ್ನು ಇಂದಿನಿಂದ ಅದ್ಧೂರಿಯಾಗಿ ಐದು ದಿನಗಳ ಕಾಲ ನೆರವೇರಲಿದೆ. ನಗರದ ವಡಗಾವಿಯ ಮಂಗಾಯಿದೇವಿ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಗ್ರಾಮೀಣ ಸೊಗಡಿನ ಈ ಜಾತ್ರೆ ಸಾವಿರಾರು ಭಕ್ತರು (Devotees) ತನ್ನತ್ತ ಆಕರ್ಷಿಸುತ್ತದೆ. ಇಂದಿನಿಂದ ಆರಂಭವಾದ ಮಂಗಾಯಿ ಜಾತ್ರಾಮಹೋತ್ಸವಕ್ಕೆ ಭಕ್ತರು ಕಿಕ್ಕಿರಿದು ಸೇರಿದ್ದರು. ಸ್ಥಳೀಯರು ಅಷ್ಟೇ ಅಲ್ಲದೇ ಗೋವಾ, ಮಹಾರಾಷ್ಟ್ರದ (Maharastra) ಕೊಲ್ಲಾಪುರ ಸೇರಿದಂತೆ ಇತರ ರಾಜ್ಯಗಳಿಂದ ಸಾವಿರಾರು ಭಕ್ತರು ದೇವಿ ದರ್ಶನವನ್ನು ಪಡೆದು ಪುನೀತರಾದರು.

ಪ್ರತಿ ವರ್ಷವೂ ಆಷಾಢ ಮಾಸದಲ್ಲಿ ಹುಣ್ಣಿಮೆಯ ನಂತರ ಬರುವ ಮಂಗಳವಾರದಂದೇ ಈ ಜಾತ್ರೆ ನಡೆಯುತ್ತದೆ. ವಡಗಾವಿಯ ವಿಷ್ಣು ಗಲ್ಲಿ, ಪಾಟೀಲಗಲ್ಲಿ ಮೊದಲಾದ ಕಡೆಗಳಲ್ಲಿ ಮಾರಾಟಕ್ಕಿಟ್ಟಿದ್ದ ಕೋಳಿ ಮರಿಗಳನ್ನು ಖರೀದಿಸಿದ ಭಕ್ತರು, ಅವುಗಳನ್ನು ಮಂದಿರದ ಮೇಲೆ ಹಾರಿಸಿ ತಮ್ಮಭಕ್ತಿಯನ್ನು ಸಮರ್ಪಿಸಿದರು.

ತವರು ಮನೆಯ ದೇವತೆ:

ಬೆಳಗಾವಿ ನಗರದ ವಡಗಾವಿಯ ಪಾಟೀಲ ಗಲ್ಲಿಯಲ್ಲಿರುವ ಮಂಗಾಯಿ ದೇವಿ ‘ತವರು ಮನೆಯ ದೇವತೆ’ ಎಂದೇ ಪರಿಗಣಿಸಲಾಗುತ್ತಿದ್ದು ಈ ದೇವಿಯ ಜಾತ್ರೆಗೆ ಹೆಣ್ಣು ಮಕ್ಕಳೇ ಹೆಚ್ಚಾಗಿ ಸೇರುತ್ತಾರೆ. ಬೆಳಗಾವಿ ಜಿಲ್ಲೆಯಿಂದ ಬೇರೆ ಬೇರೆ ಊರುಗಳಿಗೆ ಮದುವೆಯಾಗಿ ಹೋದ ಬಹುಪಾಲು ಹೆಣ್ಣುಮಕ್ಕಳು ಈ ಜಾತ್ರೆಗೆ ಬರುವುದು ಸಂಪ್ರದಾಯ. ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಕ್ಕೆ ಸಂಕ್ಷಿಪ್ತವಾಗಿದ್ದ ಈ ಜಾತ್ರೆಯನ್ನು ಈ ಬಾರಿ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ನಸುಕಿನ 5ರಿಂದಲೇ ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಆರಂಭವಾದವು. ಅಭಿಷೇಕ, ಪುಷ್ಪಾಲಂಕಾರ, ಉಡಿ ತುಂಬುವ ಕಾರ್ಯಕ್ರಮಗಳನ್ನು ಭಕ್ತರು ನೆರವೇರಿಸಿದರು.ಬೆಳಿಗ್ಗೆಯಿಂದಲೇ ಕಿಲೋ ಮೀಟರ್‌ ಉದ್ದಕ್ಕೂ ಸರದಿಯಲ್ಲಿ ನಿಂತು ಜನ ದೇವಿಯ ದರ್ಶನ ಪಡೆದರು. ಸೀರೆ, ರವಿಕೆ, ಬಳೆ, ನೈವೇದ್ಯ ಅರ್ಪಿಸಿ ಹರಕೆ ತೀರಿಸಿದರು. ಮತ್ತೆ ಕೆಲವರು ಹರಕೆ ಹೊತ್ತುಕೊಂಡರು. ಇಷ್ಟಾರ್ಥಗಳು ಈಡೇರಿದ ಹಲವು ಭಕ್ತರು ದೇವಸ್ಥಾನದ ಸುತ್ತ ‘ದೀಡ್‌ ನಮಸ್ಕಾರ’ ಹಾಕಿದರು.

ದೇವಸ್ಥಾನ ಗರ್ಭಗುಡಿಯ ಮೇಲೆ ಕುರಿ, ಕೋಳಿ ಹಾರಿಸುವ ಪದ್ಧತಿ:

ಸಂಪ್ರದಾಯದಂತೆ ಈ ಬಾರಿಯೂ ಕುರಿ, ಆಡು, ಕೋಳಿಗಳನ್ನು ಮಂಗಾಯಿ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಅರ್ಪಿಸಿದರು. ಮಹಿಳೆಯರು, ಮಕ್ಕಳು, ವೃದ್ಧರು ಕೂಡ ಕುರಿಮರಿ ಹಾಗೂ ಕೋಳಿಪಿಳ್ಳಿಗಳನ್ನು ದೇವಸ್ಥಾನದ ಮೇಲಿನಿಂದ ಎಸೆದು ಭಕ್ತಿ ಸಮರ್ಪಿಸಿದರು.

ಇದನ್ನೂ ಓದಿ: Route Change: ಸವಾರರೇ ಅಲರ್ಟ್; ಸರ್ಕಾರದ ಸಾಧನಾ ಸಮಾವೇಶ ಹಿನ್ನೆಲೆ ಮಾರ್ಗ ಬದಲಾವಣೆ: ಇಲ್ಲಿದೆ ಸಂಪೂರ್ಣ ಮಾಹಿತಿ

ಮಂಗಾಯಿ ದೇವಿ ಆರಾಧಕರು ಕುರಿ, ಕೋಳಿಗಳ ಬಲಿ ಅರ್ಪಿಸುವ ಸಂಪ್ರದಾಯ ಮೊದಲಿನಿಂದಲೂ ಇದೆ. ಹೀಗಾಗಿ, ಈ ಬಾರಿಯೂ ಜಾತ್ರೆಗೂ ಮುನ್ನ ಒಂದು ವಾರದವರೆಗೆ ಆಡು, ಕುರಿ, ಕೋಳಿಗಳ ಖರೀದಿ ಭರಾಟೆ ಜೋರಾಗಿತ್ತು. ದಿನದ 24 ಗಂಟೆಯೂ ದೇವಿಗೆ ಉಡಿ ತುಂಬುವ, ನೈವೇದ್ಯ ಅರ್ಪಿಸುವ, ಭಕ್ತರಿಗೆ ಮಾಂಸಾಹಾರದ ಊಟ ಹಾಕುವ ಪದ್ಧತಿ ಇಲ್ಲಿ ಮೊದಲಿನಿಂದಲೂ ಇದೆ.

ಕಳೆದ ಮೂರು ವರ್ಷಗಳಿಂದ ಕೊರೊನಾದಿಂದ ಜಾತ್ರೆ ಆಗಿರಲಿಲ್ಲ:

ಈ ವೇಳೆ ಮಾತನಾಡಿದ ಭಕ್ತರು, ನಾವು ಬಹಳ ವರ್ಷದಿಂದ ಜಾತ್ರೆ ಬರುತ್ತಿದ್ದೇವೆ. ಕಳೆದ ಮೂರು ವರ್ಷಗಳಿಂದ ಕೊರೊನಾದಿಂದ ಜಾತ್ರೆ ಆಗಿರಲಿಲ್ಲ. ಈ ಬಾರಿ  ಜೋರ ಜಾತ್ರೆ ನಡೆದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ಜಾತ್ರೆಯ ಸಂದರ್ಭದಲ್ಲಿ ಮಂಗಾಯಿ ದೇವಿಗೆ ಪೂಜೆ ಸಲ್ಲಿಸಿದರೆ,ಮಳೆ-ಬೆಳೆ ಚೆನ್ನಾಗಿ ಆಗುತ್ತದೆ ಎನ್ನುವ ನಂಬಿಕೆ ಇದೆ. ಹೀಗಾಗಿ ಸುತ್ತಮುತ್ತಲಿನ ಗ್ರಾಮಗಳ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೇವಿಗೆ ಪೂಜೆ ನೆರವೇರಿಸುತ್ತಾರೆ.

ಇದನ್ನೂ ಓದಿ: Karnataka Weather Report: ರಾಜ್ಯದಲ್ಲಿ ವರುಣನ ಕಣ್ಣಾಮುಚ್ಚಾಲೆ; ಜಡಿ ಮಳೆಗೆ ಜನರು ಹೈರಾಣು

ಎರಡು ವರ್ಷಗಳಿಂದ ಸರಳವಾಗಿ ಜಾತ್ರೆ ಮಾಡಿದ್ದೇವು. ಬಾರಿ ಅದ್ಧೂರಿಯಾಗಿ ಜಾತ್ರೆ ಮಾಡುತ್ತಿದ್ದೇವೆ.ಮಂದಿರ ಕಮೀಟಿ, ಪಾಲಿಕೆ, ಶಾಹಪುರ ಪೊಲೀಸರ ಸಹಕಾರದೊಂದಿಗೆ ಜಾತ್ರೆ ಯಶಸ್ಸಿಗೆ ಶ್ರಮಿಸುತ್ತಿದ್ದೇವೆ.ಜಾತ್ರೆಗಾಗಿ ಒಂದು ತಿಂಗಳು ವಾರ ಪಾಲಿಸಿದ್ದೇವು. ಮಂಗಾಯಿ ಜಾತ್ರೆ ದಿನ ಮಳೆ ಆಗುವ ಪ್ರತೀತಿಯಿದೆ. ಅದೇ ರೀತಿ ಬಾರಿಯೂ ಮಳೆ ಆಗಿಯೇ ಆಗುತ್ತದೆ.ಎಲ್ಲರೂ ಬಂದು ಜಾತ್ರೆಯಲ್ಲಿ ಭಾಗಿಯಾಗಿ ಪುನೀತರಾಗಿ ಎಂದರು.

ಬಿಗಿ ಪೊಲೀಸ್ ಬಂದೋಬಸ್ತ್:

ಇನ್ನೂ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಡಿಸಿಪಿ ರವೀಂದ್ರ ಗಡಾದಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು . ಇದೇ ವೇಳೆ ಮಾತನಾಡಿದ ಡಿಸಿಪಿ ರವೀಂದ್ರ ಗಡಾದಿ ಅವರು ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದಾರೆ . ಅದಕ್ಕೆ ಅನುಕೂಲಕ್ಕೆ ತಕ್ಕಂತೆ ಸಿಬ್ಬಂದಿಗಳನ್ನು ನಿಯೋಜಿಸಿದ್ದೇವೆ. ಸಿಸಿ ಕ್ಯಾಮರಾ ಅಳವಡಿಸಿದ್ದೇವೆ ಎಂದರು.
Published by:Divya D
First published: