ನವದೆಹಲಿ: 28 ವರ್ಷದ ಮಹಿಳೆಯೊಬ್ಬರು ತ್ರಿವಳಿ ತಲಾಖ್ ( Triple Talaq) ನೀಡಿದ ತನ್ನ ಪತಿ ವಿರುದ್ಧ ದೂರು ದಾಖಲಿಸಿದ್ದಾರೆ. ತನ್ನನ್ನು ಅತ್ಯಾಚಾರ(Rape) ಮಾಡಿದ್ದ ಪತಿ ಜೈಲು ಶಿಕ್ಷೆಯಿಂದ (Jail Imprisonment) ತಪ್ಪಿಸಿಕೊಳ್ಳಲು ತನ್ನನ್ನು ವಿವಾಹವಾಗಿದ್ದ. ಆದರೆ ಇದೀಗ ತ್ರಿವಳಿ ತಲಾಖ್ ಹೇಳುವ ಮೂಲಕ ವಿಚ್ಛೇದನ ನೀಡಿದ್ದಾನೆ ಎಂದು ಪೊಲೀಸರ ಬಳಿ ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಮೂರು ವರ್ಷದ ಹಿಂದೆ ಆತ ನನ್ನ ಮೇಲೆ ಬಲವಂತದ ಲೈಂಗಿಕ ಸಂಪರ್ಕ ಮಾಡಿದ್ದ. ಬಳಿಕ ಪೊಲೀಸ್ ಕೇಸ್ (Police Case) ಆದರೆ ಜೈಲು ಶಿಕ್ಷೆ ಅನುಭವಿಸಬೇಕೆಂಬ ಭಯದಿಂದ ನನ್ನನ್ನು ಮದುವೆಯಾಗಿದ್ದ. ಆದರೆ ವಿವಾಹದ (Marriage) ಕೆಲವೇ ದಿನಗಳಲ್ಲಿ ತಲಾಖ್ ಹೇಳಿ ಮದುವೆಯನ್ನು ಅಂತ್ಯಗೊಳಿಸಿದ್ದಾನೆ ಎಂದು ನ್ಯಾಯಕ್ಕಾಗಿ ಮಹಿಳೆ ಪೊಲೀಸರ ಮೊರೆ ಹೋಗಿದ್ದಾಳೆ.
ಹರಿಯಾಣದ ನ್ಹೂ ಜಿಲ್ಲೆಯ ಪುನ್ಹಾನ ಪ್ರದೇಶದ ನಿವಾಸಿ ಸಮೀರ್ ಅಹ್ಮದ್ ಎಂಬಾತನ ವಿರುದ್ಧ ಮಹಿಳೆ ದೂರು ನೀಡಿದ್ದಾರೆ. ಸಮೀರ್ ಪಂಚಾಯತಿಯಲ್ಲಿ ಮೂರು ಬಾರಿ ತಲಾಖ್ ಎಂದು ಹೇಳಿ, ಅಂಚೆ ಮೂಲಕ ಪತ್ರಗಳ ಮೂಲಕ ಪತ್ರಗಳ್ನು ಕಳುಹಿಸಿ ವಿಚ್ಛೇದನ ನೀಡಿದ್ದಾನೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. 2020ರಲ್ಲಿ ಸಮೀರ್ ನನ್ನೊಂದಿಗೆ ಬಲವಂತವಾಗಿ ಲೈಂಗಿಕ ಸಂಬಂಧ ಬೆಳೆಸಿದ್ದ. ಈ ಬಗ್ಗೆ ನನ್ನ ಮನೆಯವರಿಗೆ ತಿಳಿಸಿದಾಗ, ಅವರು ಆತನೊಂದಿಗೆ ಮಾತನಾಡಿದ್ದರು. ಆ ಬಳಿಕ ಆತ ಮದುವೆಯಾಗಲು ಒಪ್ಪಿಗೆ ನೀಡಿದ್ದ. ಎರಡೂ ಕುಟುಂಬಗಳ ಒಪ್ಪಿಗೆ ಮೇರೆಗೆ ನಾವಿಬ್ಬರು ವಿವಾಹ ಮಾಡಿಕೊಂಡಿದ್ದೆವು ಎಂದು ಮಹಿಳೆ ತಿಳಿಸಿದ್ದಾರೆ.
ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ಪ್ಲಾನ್
ನಾನು ಮತ್ತು ಸಮೀರ್ ಮೇ 29, 2020, ಇಸ್ಲಾಮಿಕ್ ಆಚರಣೆಗಳ ಪ್ರಕಾರ ಎರಡೂ ಕುಟುಂಬಗಳ ಮುಂದೆ ವಿವಾಹ ಮಾಡಿಕೊಂಡಿದ್ದೆವು. ಆದರೆ ಮದುವೆಯಾದಾಗಿನಿಂದ ಆತ ನನ್ನನ್ನು ಅವನ ಮನೆಗೆ ಕರೆದುಕೊಂಡು ಹೋಗಿಲ್ಲ. ಆಗ ಸಮೀರ್ ನನ್ನನ್ನು ಮನಸ್ಪೂರ್ತಿಯಾಗಿ ವಿವಾಹವಾಗಿಲ್ಲ, ಅತ್ಯಾಚಾರ ಶಿಕ್ಷೆಯಿಂದ ತಪ್ಪಿಸಿಕೊಳ್ಳಲು ನನ್ನನ್ನು ವಿವಾಹವಾಗಿದ್ದಾನೆಂಬುದು ನಮ್ಮ ಅರಿವಿಗೆ ಬಂದಿತು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: Snake Bite: ಬ್ಯಾಗ್ನಲ್ಲಿ ಹಾವಿಟ್ಟುಕೊಂಡು ಆಸ್ಪತ್ರೆಗೆ ಓಡಿಬಂದ ಮಹಿಳೆ; ಆಕೆ ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ವೈದ್ಯರು!
ರಾಜಿ ಪಂಚಾಯಿತಿ ವೇಳೆಯೇ ತಲಾಖ್ ಹೇಳಿದ ಆರೋಪಿ
ವಿವಾಹವಾದರೂ ನನ್ನನ್ನು ಕರೆದುಕೊಂಡು ಹೋಗಲು ಸಮೀರ್ ಬಾರದ ಕಾರಣ, ಈ ಸಮಸ್ಯೆಯನ್ನು ಪರಿಹರಿಸಲು ನನ್ನ ಕುಟುಂಬ ಸದಸ್ಯರು ಜನವರಿ 24, 2021 ರಂದು ಸಮೀರ್ ಮನೆಗೆ ಪಂಚಾಯತಿಗೆ ಹೋಗಿದ್ದರು. ಈ ವೇಳೆ ಆತ ಎಲ್ಲರ ಮುಂದೆ ತ್ರಿವಳಿ ತಲಾಖ್ ಹೇಳಿದನು. ಅಷ್ಟೇ ಅಲ್ಲದೆ ಅಂಚೆ ಮೂಲಕ ಪತ್ರಗಳನ್ನು ಕಳುಹಿಸಿ ವಿಚ್ಛೇಧನವನ್ನೂ ನೀಡಿದ್ದಾನೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಆದರೂ ನಾನು ಕೆಲವು ಸಮಯ ಆತನಿಗಾಗಿ ಕಾದಿದ್ದೆ, ಆದರೆ ಅತ ಬರುವ ಯಾವುದೇ ಮುನ್ಸೂಚನೆ ಕಾಣದೆ ದೂರು ನೀಡುತ್ತಿರುವುದಾಗಿ ತಿಳಿಸಿದ್ದಾಳೆ.
ತಲಾಕ್ ನೀಡಿ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ
ಉತ್ತರ ಪ್ರದೇಶದಲ್ಲಿ ಮಹಿಳೆಗೆ ತಲಾಖ್ ನೀಡಿದ ನಂತರ ಆಕೆಯ ಪತಿ, ಮೈದುನ ಮತ್ತು ಧರ್ಮಗುರು ಸೇರಿ ಹಲವರು ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಮಾಡಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿತ್ತು. ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಈ ಘಟನೆ ನಡೆದಿದ್ದು, ಸಂತ್ರಸ್ಥ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಲಾಗಿದೆ.
ಐದು ವರ್ಷಗಳ ಹಿಂದೆ ಸಲ್ಮಾನ್ ಎಂಬಾತ ಮಹಿಳೆಯನ್ನು ಮದುವೆಯಾಗಿದ್ದ. ಆದರೆ ಕೆಲವು ತಿಂಗಳ ಹಿಂದೆ ಧರ್ಮಗುರುವಿನ ಸಲಹೆಯ ಮೇರೆಗೆ ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದ. ನಂತರ ಮಹಿಳೆಗೆ ತನ್ನ ತಮ್ಮನನ್ನು ಮದುವೆಯಾಗಿ ಬಳಿಕ ಆತನಿಗೂ ವಿಚ್ಛೇದನಾ ನೀಡಿ ಬಂದರೆ ಮತ್ತೆ ಪತ್ನಿಯಾಗಿ ಸ್ವೀಕರಿಸುವುದಾಗಿ ನಂಬಿಸಿ ವಿವಾಹ ಮಾಡಿಸಿದ್ದಾನೆ.
6 ಜನರ ವಿರುದ್ಧ ಪ್ರಕರಣ
ಪತಿ ತಮ್ಮನನ್ನು ವಿವಾಹದ ಬಳಿಕ ಆತ ಮಹಿಳೆಗೆ ವಿಚ್ಛೇದನಾ ನೀಡಲು ನಿರಾಕರಿಸಿದ್ದಾನೆ. ಅಲ್ಲದೆ ಸಹೋದರ ಜೊತೆ ಸೇರಿ ಮಹಿಳೆ ಮೇಲೆ ಬಲವಂತವಾಗಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಇವರಿಬ್ಬರಲ್ಲದೆ ಸ್ಥಳೀಯ ಧರ್ಮಗುರುವನ್ನು ಮನೆಗೆ ಕರೆಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ಸಲ್ಮಾನ್, ಆತನ ಸಹೋದರ ಇಸ್ಲಾಂ ಸೇರಿ 6 ಜನರ ಮೇಲೆ ಐಪಿಸಿ ಸೆಕ್ಸನ್ 376, 377ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ