ಮರಾಠಿ ಪುಂಡರು ಬೆಳಗಾವಿ (Belagavi) ನಮ್ಮದು ಅಂತ ಕ್ಯಾತೆ ಮಾಡ್ತಾರೆ. ಆದರೆ ಕೊಲ್ಹಾಪುರ, ಸಾಂಗ್ಲಿ, ಸೊಲ್ಲಾಪುರ, ಜತ್ತ, ಉಸ್ಮನಾಬಾದ್, ಲಾತೂರ್ ಒಳಗೊಂಡ ಕರ್ನಾಟಕದ (Karnataka Map) ಹೊಸ ನಕಾಶೆಯನ್ನ ಮಹಾರಾಷ್ಟ್ರದಲ್ಲಿರುವ ಕನ್ನಡಿಗರು (Maharashtra Kannadigas) ಸಿದ್ದಪಡಿಸಿದ್ದಾರೆ. ಹೊಸ ನಕಾಶೆಯನ್ನು (New Map) ಶೇರ್ ಮಾಡಿಕೊಂಡು ನಮ್ಮನ್ನು ಕರ್ನಾಟಕಕ್ಕೆ (Karnataka) ಸೇರಿಸಿ ಎಂದು ಗಟ್ಟಿ ಕೂಗು ಹಾಕಿದ್ದಾರೆ. ಕನ್ನಡಿಗರೇ ಹೆಚ್ಚಾಗಿರುವ ಜತ್ತ (Jatt) ತಾಲ್ಲೂಕು ಕರ್ನಾಟಕದಲ್ಲಿ ಸೇರ್ಪಡೆ ಮಾಡುವಂತೆ ಅಲ್ಲಿನ ಕನ್ನಡಿಗರು ಒತ್ತಾಯಿಸಿದ್ದಾರೆ. ಕರ್ನಾಟಕ ಸೇರ್ಪಡೆಗೆ ಮಹಾರಾಷ್ಟ್ರದ 42 ಹಳ್ಳಿಗಳ ಜನರು ರೆಡಿಯಾಗಿದ್ದಾರೆ.
ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ತ ತಾಲೂಕಿನ 42 ಹಳ್ಳಿಗಳ ಜನರು ಕರ್ನಾಟಕ ಸೇರ್ಪಡೆಗೆ ಒತ್ತಾಯಿಸಿದ್ದಾರೆ. ಸೊನ್ಯಾಳ, ಸಂಖ, ಕಾಗನೇರಿ, ಜಾಲ್ಯಾಳ್, ಉಮದಿ ಸೇರಿದಂತೆ ಹಲವು ಹಳ್ಳಿಗಳ ಜನ ಕರ್ನಾಟಕ ಸೇರಲು ತುದಿಗಾಲ ಮೇಲೆ ನಿಂತಿದ್ದಾರೆ. ಬೊಮ್ಮಾಯಿ ಸರ್ಕಾರ ಒಳ್ಳೆಯ ಕೆಲಸ ಮಾಡ್ತಿದೆ. ಹಾಗಾಗಿ ನಾವು ಕರ್ನಾಟಕ ಸೇರುತ್ತೇವೆ ಎಂದು ಹೇಳುತ್ತಿದ್ದಾರೆ.
ಮರಾಠಿ ಪುಂಡರ ವಿರುದ್ಧ ಪ್ರತಿಭಟನೆ
ಕರ್ನಾಟಕ ಬಸ್ಗಳಿಗೆ ಮಸಿ ಬಳಿದು ಕಲ್ಲು ತೂರಿದ್ದ ಮರಾಠಿ ಪುಂಡರ ವಿರುದ್ಧ ಕರವೇ ಕಾರ್ಯಕರ್ತರು ಕಿಡಿ ಕಾಡಿದ್ದಾರೆ. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿದ್ದಾರೆ. ಮಹಾರಾಷ್ಟ್ರ ಸಿಎಂ ಶಿಂಧೆ, ಡಿಸಿಎಂ ದೇವೇಂದ್ರ ಫಡ್ನವಿಸ್ಗೆ ಧಿಕ್ಕಾರ ಕೂಗಿದ್ದಾರೆ. ಮಹಾರಾಷ್ಟ್ರ ವಾಹನಗಳಿಗೆ ಮಸಿ ಬಳಿದು ಆಕ್ರೋಶ ಹೊರಹಾಕಿದ್ದಾರೆ.
ಹೆಚ್ಡಿಕೆಗೆ ಆರ್ ಅಶೋಕ್ ತಿರುಗೇಟು
ಬೆಳಗಾವಿ ಗಡಿ ವಿವಾದದ ಬಗ್ಗೆ ಮಾತಾಡಿದ ಕುಮಾರಸ್ವಾಮಿಯವ್ರಿಗೆ ಸಚಿವ ಆರ್ ಅಶೋಕ್ ತಿರುಗೇಟು ಕೊಟ್ಟಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಜೆಡಿಎಸ್ ಹೆಬ್ಬೆಟ್ಟು ಪಾರ್ಟಿ. ಅವರ ಕುಟುಂಬದವರು ಹೇಳಿದ್ರೆ ಮಾತ್ರ ಹೆಬ್ಬೆಟ್ಟು ಒತ್ತೋದು. ಅಲ್ಲಿ ಈಗಲೂ ದೇವೆಗೌಡ ಇನ್ಮಂದೆನೂ ದೇವೇಗೌಡ. ಆದರೆ, ನಮ್ಮಲ್ಲಿ ವಾಜಪೇಯಿ, ಅಡ್ವಾಣಿ, ನರೇಂದ್ರ ಮೋದಿ ಇದ್ದಾರೆ ಎಂದು ಹೇಳಿದ್ದಾರೆ.
ಮಹಾ ಸರ್ಕಾರಕ್ಕೆ ಸಿಎಂ ಬೊಮ್ಮಾಯಿ ತಿರುಗೇಟು
ಗಡಿ ವಿಚಾರದಲ್ಲಿ ಉದ್ಧಟತನ ತೋರಿದ್ದ ಮಹಾರಾಷ್ಟ್ರ ಸರ್ಕಾರಕ್ಕೆ (Maharashtra Government) ಕರ್ನಾಟಕ (Karnataka) ತಿರುಗೇಟು ನೀಡಿದೆ. ಮಹಾರಾಷ್ಟ್ರದಲ್ಲಿರುವ ಕನ್ನಡ ಶಾಲೆಗಳ (Kannada School) ಅಭಿವೃದ್ಧಿಗೆ ಹೆಚ್ಚಿನ ಹಣ ನೀಡೋದಾಗಿ ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai) ತಿಳಿಸಿದ್ದಾರೆ.
ಕಲ್ಲು ತೂರಾಟ ಬಸ್ ಸಂಚಾರ ಬಂದ್
ಬೆಳಗಾವಿ ಜಿಲ್ಲೆಯ ಅಥಣಿ (Athani, Belagavi) ಡಿಪೋಗೆ ಸೇರಿದ್ ಬಸ್ ಶುಕ್ರವಾರ ರಾತ್ರಿ ರಾಜ್ಯಕ್ಕೆ ಹಿಂದಿರುಗುತ್ತಿತ್ತು. ರಾತ್ರಿ ಸುಮಾರು 10.30ರ ವೇಳೆಗೆ ಪುಂಡರು ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.
ಬೆಳಗಾವಿ ಜಿಲ್ಲಾ ಪೊಲೀಸರ ಸೂಚನೆ ಮೇರೆಗೆ ಮೀರಜ್ (Meeraj) ಮತ್ತು ಕಾಗವಾಡ (Kagawada) ಗಡಿ ಮಾರ್ಗವಾಗಿ ಸಂಚರಿಸುವ ಎಲ್ಲಾ ಬಸ್ ಸೇವೆ ಬಂದ್ ಮಾಡಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ