• ಹೋಂ
  • »
  • ನ್ಯೂಸ್
  • »
  • Breaking News
  • »
  • Crime News: ಪ್ರೀತಿಸಿ ಕೈ ಕೊಟ್ಟ ಯುವತಿ; ಹಾಸನ ಯುವಕ ಚೆನ್ನೈ ಲಾಡ್ಜ್​ನಲ್ಲಿ ನೇಣಿಗೆ ಶರಣು, ಅಸಲಿಗೆ ಆಗಿದ್ದೇನು?

Crime News: ಪ್ರೀತಿಸಿ ಕೈ ಕೊಟ್ಟ ಯುವತಿ; ಹಾಸನ ಯುವಕ ಚೆನ್ನೈ ಲಾಡ್ಜ್​ನಲ್ಲಿ ನೇಣಿಗೆ ಶರಣು, ಅಸಲಿಗೆ ಆಗಿದ್ದೇನು?

ಮೃತ ಯುವಕ ಕಾರ್ತಿಕ್

ಮೃತ ಯುವಕ ಕಾರ್ತಿಕ್

ಮೂರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಯುವತಿ ಬ್ರೇಕ್​ಅಪ್​ ಹೇಳಿದಳು ಎಂದು ಮನನೊಂದ ಹಾಸನ ಯುವಕ ಚೆನ್ನೈನ ಲಾಡ್ಜ್​​ವೊಂದರಲ್ಲಿ ಸಾವಿಗೆ ಶರಣಾಗಿದ್ದಾನೆ.

  • News18 Kannada
  • 3-MIN READ
  • Last Updated :
  • Hassan, India
  • Share this:

ಹಾಸನ: ಪ್ರೀತಿಸಿದ ಯುವತಿ (Love Breakup ) ವಂಚನೆ ಮಾಡಿದಳು ಎಂದು ಮನನೊಂದ ಹಾಸನದ (Hassan) ಯುವಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಮಿಳುನಾಡು (Tamil Nadu) ರಾಜಧಾನಿ ಚೆನ್ನೈನ (Chennai) ಖಾಸಗಿ ಹೋಟೆಲ್​ ಒಂದರಲ್ಲಿ ನಡೆದಿದೆ. ಮೃತ ಯುವಕನನ್ನು ಹಾಸನ ನಗರದ ಸಂಗಮೇಶ್ವರ ಬಡಾವಣೆಯ ಕಾರ್ತಿಕ್ (26) ಎಂದು ಗುರುತಿಸಲಾಗಿದೆ. ಕಾರ್ತಿಕ್​ ಕಳೆದ ನಾಲ್ಕು ವರ್ಷಗಳಿಂದ ಹೊಳೆನರಸೀಪುರ ತಾಲೂಕಿನ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಜನವರಿ 27ರಂದು ತಾನು ಚೆನ್ನೈನಲ್ಲಿದ್ದೇನೆ ಅಲ್ಲಿಗೆ ಬಾ ಎಂದು ಯುವತಿ ಕರೆ ಮಾಡಿದ್ದಳಂತೆ. ಆಕೆಯ ಮಾತು ನಂಬಿ ಚೆನ್ನೈಗೆ ಹೋಗಿದ್ದ ಕಾರ್ತಿಕ್, ಯುವತಿಗೆ ಕರೆ ಮಾಡಿದ್ದಾನೆ. ಆದರೆ ಆಕೆ ಚೆನ್ನೈನಲ್ಲಿ ಇಲ್ಲ ಎಂದು ಗೊತ್ತಾಗಿದ್ದು, ಇದರಿಂದ ಮನನೊಂದು ಲಾಡ್ಜ್​​ನ ರೂಮ್​​ನಲ್ಲೇ ಸಾವಿಗೆ ಶರಣಾಗಿದ್ದಾನೆ ಎನ್ನಲಾಗಿದೆ.


ಯುವತಿ ವಿರುದ್ಧ ಪ್ರೀತಿಸಿ ವಂಚನೆ ಮಾಡಿದ ಆರೋಪ


ಹಾಸನದ ಪ್ರತಿಷ್ಠಿತ ಹೋಟೆಲ್​​ನಲ್ಲಿ ಕಾರ್ತಿಕ್​, ರಿಸೆಪ್ಷನಿಸ್ಟ್ ಆಗಿ ಕೆಲಸ ಮಾಡುತ್ತಿದ್ದ. ಯುವತಿ ಹುಡುಗನ ನಂಬಿಸಿ ಮೋಸಮಾಡಿದ್ದಾಳೆ ಎಂದು ಯುವಕನ ಕುಟುಂಬ ಸದಸ್ಯರ ಆರೋಪ ಮಾಡಿದ್ದಾರೆ. ಅಲ್ಲದೇ ತಮ್ಮ ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಪೋಷಕರ ಆಗ್ರಹಿಸಿದ್ದು, ಚೆನ್ನೈನ ಆರಂಬಕ್ಕಮ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.


ಇದನ್ನೂ ಓದಿ: Crime News: ಅಕ್ಕನ ಮಗಳ ಪ್ರೀತಿಗೆ ಅಡ್ಡಗಾಲಾದ ಸೋದರ ಮಾವ: ಪ್ರಿಯಕರನನ್ನು ಪುಸಲಾಯಿಸಿ ಕರೆದು ಕೊಂದೇ ಬಿಟ್ಟ!


ಘಟನೆ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಮೃತ ಯುವಕನ ಸಹೋದರಿ, ನನ್ನ ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಗೊತ್ತಾಗುತ್ತಿದ್ದಂತೆ ನಾನು ಯುವತಿಗೆ ಫೋನ್ ಮಾಡಿದ್ದೆ. ಏನಾಯ್ತು? ಚೆನ್ನೈಗೆ ಏಕೆ ಹೋದ? ಎಂದು ಕೇಳಿದ್ದಕ್ಕೆ, ನಾನೇ ಅಲ್ಲಿ ಕೆಲಸ ಮಾಡ್ತಿದ್ದೀನಿ ಅಂತ ಅವನಿಗೆ ಹೇಳಿದ್ದೆ. ಅವನು ಸಾಯುತ್ತೀನಿ ಅಂತ ನನಗೆ ಹೇಳಿದ್ದ, ಅವನು ಸಾಯುತ್ತಾನೆ ಎಂತ ನಾನು ಸಾಯೋಕೆ ಆಗುತ್ತಾ ಎಂದು ಹೇಳಿದ್ದಳು. ಆಕೆಗೆ ಓರ್ವ ಸತ್ತಿದ್ದಾನೆ ಅಂತ ಕರುಣೆ ಕೂಡ ಇಲ್ಲ.




ಇಲ್ಲಿ ಇದ್ದುಕೊಂಡು ಅವನಿಗೆ ಚೆನ್ನೈ ಬರಲು ಹೇಳಿದ್ದಾಳೆ. ದುಡ್ಡು ದುಡ್ಡು ಅಂತ ಅವನಿಂದ ಸಾಕಷ್ಟು ಹಣ ಪಡೆದುಕೊಂಡಿದ್ದಾಳೆ. ಅವನು ಯಾಕೆ ಚೆನ್ನೈಗೆ ಬರ್ಬೇಕು ಅಂತ ಪ್ರಶ್ನೆ ಮಾಡಿದ್ದಳು. ಅಲ್ಲದೇ, ಇತ್ತೀಚೆಗೆ ಕಾರ್ತಿಕ್​ ಮೇಲೆಯೇ ಹೊಳೆನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ನೀಡಿದ್ದಳು.


ಮೂರು ವರ್ಷದಿಂದ ಇಬ್ಬರ ನಡುವೆ ಪ್ರೀತಿ-ಪ್ರೇಮ


ಕಳೆದ ಎರಡೂವರೆ ವರ್ಷಗಳಿಂದ ಇಬ್ಬರು ಪ್ರೀತಿ ಮಾಡುವ ವಿಚಾರ ಮನೆಯಲ್ಲಿ ಗೊತ್ತಿತ್ತು. ಮನೆಯವರು ಕೂಡ ಮದುವೆ ಮಾಡಿಕೊಡುವುದಾಗಿ ಹೇಳಿದ್ದರು. ಅವಳು ಸಹ ಸಾಕಷ್ಟು ಬಾರಿ ಮನೆಗೆ ಬಂದು ಮನೆಯಲ್ಲೇ ಉಳಿದುಕೊಂಡಿದ್ದಳು. ಆದರೆ ಈಗ ತೊಂದರೆ ಅಂತ ಪೊಲೀಸರಿಗೆ ದೂರು ಕೊಟ್ಟಿದ್ದಳು. ಕೊನೆಗೆ ನಮ್ಮ ಮನೆಯವರು ಹೇಳಿದ ಹುಡುಗನನ್ನೇ ಮದುವೆ ಆಗ್ತೀನಿ ಅಂತ ಹೇಳಿದ್ದಳು ಎಂದು ಆರೋಪಿಸಿದ್ದಾರೆ.


ಇನ್ನು, ಪೊಲೀಸರು ಕೂಡ ನಮಗೆ ನ್ಯಾಯ ಕೊಡಿಸುತ್ತಿಲ್ಲ. ಚೆನ್ನೈ ಪೊಲೀಸರು ಮಾಹಿತಿ ನೀಡಿದ್ದರು. ನಾವು ಹೋಗೋ ವೇಳೆಗೆ ಮೃತದೇಹವನ್ನು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಮೂರು ವರ್ಷದಿಂದ ಆತ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಆಕೆಯನ್ನು ಮೀಟ್​ ಮಾಡಬೇಕು ಎಂದು ಮೂರು ದಿನಗಳ ಹಿಂದೆ ಚೆನ್ನೈಗೆ ಹೋಗಿದ್ದ. ಆಕೆ ಹಾಸನದಲ್ಲಿ ಇದ್ದುಕೊಂಡು ತಾನು ಚೆನ್ನೈನಲ್ಲಿ ಇದ್ದೀನಿ ಅಂತ ಕರೆದಿದ್ದಳಂತೆ, ಮನೆಯಲ್ಲಿ ಹೇಳಿಯೇ ಹೋಗಿದ್ದ.


ಮೃತ ಯುವಕ ಕಾರ್ತಿಕ್


ಇದನ್ನೂ ಓದಿ: Crime News: ಪತ್ನಿ, ಮೂವರು ಮಕ್ಕಳಿಗೆ ಸುತ್ತಿಗೆಯಿಂದ ಹೊಡೆದು ನೇಣಿಗೇರಿದ ಪತಿ! ಕಂದಮ್ಮಗಳ ಸಾವು, ಪತ್ನಿ ಸ್ಥಿತಿ ಗಂಭೀರ


ಆದರೆ ಮೂರು ದಿನ ಆದ್ಮೇಲೆ ಪೊಲೀಸರು ಕಾಲ್ ಮಾಡಿದಾಗಲೇ ಅವನು ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತ ಗೊತ್ತಾಗಿತ್ತು. ಆತ ಸಾಯೋ ಮುನ್ನ ವಿಡಿಯೋ ಮಾಡಿ ಸಾವನ್ನಪ್ಪಿರುವ ಬಗ್ಗೆ ಮಾಹಿತಿ ಇದೆ. ಆದರೆ ಚೆನ್ನೈ ಪೊಲೀಸರು ಇದುವರೆಗೂ ನಮಗೆ ಯಾವುದೇ ಸಹಕಾರ ನೀಡುತ್ತಿಲ್ಲ. ಏನಾದರೂ ಹೇಳಿದರೆ ನೀವು ಕರ್ನಾಟಕದವರು ಅಲ್ಲಿಯೇ ಹೋಗಿ ಪೊಲೀಸ್ ಕಂಪ್ಲೇಟ್ ಕೊಡಿ ಅಂತ ಜೋರು ಮಾಡ್ತಾರೆ. ನಮಗೆ ಹಾಸನ ಪೊಲೀಸರು ನೆರವು ಬೇಕಿದೆ ಎಂದು ಮನವಿ ಮಾಡಿದ್ದಾರೆ.

Published by:Sumanth SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು