• Home
 • »
 • News
 • »
 • breaking-news
 • »
 • Laxman Savadi- ಸೋತ ವ್ಯಕ್ತಿಯನ್ನ ಡಿಸಿಎಂ ಮಾಡಿದರು, ಈಗ ಯಾವುದೇ ಬೇಸರ ಇಲ್ಲ: ಲಕ್ಷ್ಮಣ ಸವದಿ

Laxman Savadi- ಸೋತ ವ್ಯಕ್ತಿಯನ್ನ ಡಿಸಿಎಂ ಮಾಡಿದರು, ಈಗ ಯಾವುದೇ ಬೇಸರ ಇಲ್ಲ: ಲಕ್ಷ್ಮಣ ಸವದಿ

ಚುನಾವಣೆಯಲ್ಲಿ ಗೆದ್ದ ಎಲ್ಲಾ 224 ಶಾಸಕರಿಗೂ ಮಂತ್ರಿ ಆಗುವ ಆಸೆಗಳಿರುತ್ತವೆ. ಕೆಲವರಷ್ಟೇ ಸಚಿವರಾಗಲು ಸಾಧ್ಯ. ನಾನು ಚುನಾವಣೆಯಲ್ಲಿ ಸೋತರೂ ಡಿಸಿಎಂ ಆಗಿ ಮಾಡಿದರು. ಈಗ ಸಚಿವ ಸ್ಥಾನ ಸಿಗಲಿಲ್ಲ ಎಂಬ ಬೇಸರ ನನಗಿಲ್ಲ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ಚುನಾವಣೆಯಲ್ಲಿ ಗೆದ್ದ ಎಲ್ಲಾ 224 ಶಾಸಕರಿಗೂ ಮಂತ್ರಿ ಆಗುವ ಆಸೆಗಳಿರುತ್ತವೆ. ಕೆಲವರಷ್ಟೇ ಸಚಿವರಾಗಲು ಸಾಧ್ಯ. ನಾನು ಚುನಾವಣೆಯಲ್ಲಿ ಸೋತರೂ ಡಿಸಿಎಂ ಆಗಿ ಮಾಡಿದರು. ಈಗ ಸಚಿವ ಸ್ಥಾನ ಸಿಗಲಿಲ್ಲ ಎಂಬ ಬೇಸರ ನನಗಿಲ್ಲ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

ಚುನಾವಣೆಯಲ್ಲಿ ಗೆದ್ದ ಎಲ್ಲಾ 224 ಶಾಸಕರಿಗೂ ಮಂತ್ರಿ ಆಗುವ ಆಸೆಗಳಿರುತ್ತವೆ. ಕೆಲವರಷ್ಟೇ ಸಚಿವರಾಗಲು ಸಾಧ್ಯ. ನಾನು ಚುನಾವಣೆಯಲ್ಲಿ ಸೋತರೂ ಡಿಸಿಎಂ ಆಗಿ ಮಾಡಿದರು. ಈಗ ಸಚಿವ ಸ್ಥಾನ ಸಿಗಲಿಲ್ಲ ಎಂಬ ಬೇಸರ ನನಗಿಲ್ಲ ಎಂದು ಲಕ್ಷ್ಮಣ ಸವದಿ ಹೇಳಿದ್ದಾರೆ.

 • Share this:

  ಚಿಕ್ಕೋಡಿ: ಯಡಿಯೂರಪ್ಪ ರಾಜೀನಾಮೆ ನೀಡಿದ ಬಳಿಕ ಬಸವರಾಜ ಬೊಮ್ಮಾಯಿ  ಸಂಪುಟದಲ್ಲಿ ಲಕ್ಷ್ಮಣ ಸವದಿಯನ್ನ ಕೈ ಬಿಟ್ಟಿದ್ದಾರೆ. ಇದೇ ವಿಚಾರವಾಗಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಸಂಪುಟದಿಂದ ತನ್ನನ್ನ ಕೈ ಬಿಟ್ಟಿದ್ದಕ್ಕೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ. ಸೋತಂತಹ ವ್ಯಕ್ತಿಯನ್ನು ಡಿಸಿಎಮ್ ಮಾಡಿದ್ದಾರೆ, ಸಚಿವನನ್ನಾಗಿ ಮಾಡಿ ನನಗೆ ಒಳ್ಳೆಯ ಸ್ಥಾನಮಾನವನ್ನ ಪಕ್ಷ ನೀಡಿದೆ. ಈಗ ಬೇಸರ ಮಾಡಿಕೊಳ್ಳುವ ಪ್ರಶ್ನೆಯೇ ಬರಲ್ಲ ಎಂದಿದ್ದಾರೆ.


  ಕೆಲವೊಮ್ಮೆ ಮತ್ತೊಬ್ಬರಿಗೆ ಅವಕಾಶ ಕೊಡುವುದಕ್ಕಾಗಿ ಅವಧಿ ಆಧರಿತ ಖಾತೆ ಹಂಚಿಕೆಯನ್ನು ಮಾಡಿದ್ದಾರೆ. 33 ಖಾತೆಗಳಿದ್ದು, ಒಬ್ಬರು ಮುಖ್ಯಮಂತ್ರಿ ಆಗುತ್ತಾರೆ. ಅದೇ ರೀತಿ ಮಂತ್ರಿ ಆಗುವ ಆಸೆ ಎಲ್ಲ 224  ಜನರಿಗೂ ಇರುತ್ತದೆ. ಎಲ್ಲರಿಗೂ ಮಂತ್ರಿ ಸ್ಥಾನ ಕಷ್ಟ. ಕೆಲವರನ್ನ ಗುರುತಿಸಿ ಮಂತ್ರಿ ಮಾಡಿದ್ದಾರೆ ಎಂದು ಸಂಪುಟ ವಿಸ್ತರಣೆಯ ವಾಸ್ತವ ಪರಿಸ್ಥಿತಿಯನ್ನ ಲಕ್ಷ್ಮಣ ಸವದಿ ವಿವರಿಸಿದ್ಧಾರೆ.


  ಇನ್ನು ಉತ್ತರ ಕರ್ನಾಟಕದವರೇ ಆದ ನನ್ನ ಆತ್ಮೀಯರಾದ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆಗಿದ್ದಾರೆ. ಇವರ ಮುಂದಾಳತ್ವದಲ್ಲಿ ರಾಜ್ಯ ಅಭಿವೃದ್ಧಿ ಆಗುತ್ತದೆ ಎಂಬ ಆಶಯ ನಮಗೆ ಇದೆ. ಉಳಿದ ಇಪ್ಪತ್ತು ತಿಂಗಳಲ್ಲಿ ಉತ್ತಮ ಯೋಜನೆಗಳನ್ನು ಕೊಟ್ಟು ಮುಂದೆ ರಾಜ್ಯದಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳು ಆಗಲಿವೆ. ಕೊರೊನಾ ಮಹಾಮಾರಿ, ಮಹಾಪೂರ, ಪ್ರವಾಹ ಸೇರಿದಂತೆ ಹಲವು ಕಂಟಕಗಳಿಂದ ಕೆಲ ಅಭಿವೃದ್ಧಿ ಕಾರ್ಯಗಳು ಹಿನ್ನಡೆಗೊಂಡಿದ್ದವು. ಮುಂದೆ ಅಭಿವೃದ್ಧಿ ಕೆಲಸಗಳು ಹೆಚ್ಚಾಗಿ ಆಗಲಿವೆ ಎಂದು ಮಾಜಿ ಉಪಮುಖ್ಯಮಂತ್ರಿಗಳು ಆಶಿಸಿದ್ದಾರೆ.


  ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕ ಮತ್ತು ಕರಾವಳಿ ಭಾಗದಲ್ಲಿ ಖಾತೆಗಳನ್ನು ಬ್ಯಾಲೆನ್ಸ್ ಆಗಿ ಹಂಚಿಕೆ ಮಾಡಲಾಗಿದೆ. ಉತ್ತರ ಕರ್ನಾಟಕದರೇ ಆಗಿರುವ ಮುಖ್ಯಮಂತ್ರಿಗಳು, ಉತ್ತರ ಕರ್ನಾಟಕದ ಶಾಸಕರಿಗೆ ಒಳ್ಳೊಳ್ಳೆಯ ಖಾತೆ ಕೊಟ್ಟು ಬ್ಯಾಲೆನ್ಸ್ ಮಾಡಿ ಜಾಣತನ ಮೆರೆದಿದ್ದಾರೆ. ಒಳ್ಳೆಯ ಅಭಿವೃದ್ಧಿಯ ನಿರೀಕ್ಷೆ ನಮಗೆ ಇದೆ. ಇನ್ನು 2023 ಚುನಾವಣೆಯಲ್ಲಿ ಮತ್ತೆ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪವನ್ನು ನಾವೆಲ್ಲ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಉತ್ತಮ ಅವಕಾಶಗಳು ಬರುತ್ತವೆ. ಆದ್ದರಿಂದ ಅಭಿಮಾನಿಗಳು ದೃತಿಗೆಡಬಾರದು ಎಂದು ಲಕ್ಷ್ಮಣ ಸವದಿ ಕರೆ ನೀಡಿದ್ದಾರೆ.


  ಇದನ್ನೂ ಓದಿ: Truck Robbery- ಕೋಲಾರದಲ್ಲಿ ಸಿನಿಮೀಯ ರೀತಿಯಲ್ಲಿ ಟ್ರಕ್ ರಾಬರಿ; 6 ಕೋಟಿಗೂ ಅಧಿಕ ಮೌಲ್ಯದ ಫೋನ್​ಗಳ ದರೋಡೆ


  ಇನ್ನು ಕೆಲವರಿಗೆ ಶಾಸಕರಾಗಿ ಮಂತ್ರಿ ಭಾಗ್ಯ ಕೈ ತಪ್ಪಿರುವ ಹಿನ್ನೆಲೆಯಲ್ಲಿ ಪ್ರತಿಭಟನೆಗಳು ನಡೆಯುತ್ತಿರುವ ವಿಚಾರದಲ್ಲಿ ಮಾತನಾಡಿದ ಸವದಿ, ಪ್ರತಿಭಟನೆ ಮತ್ತು ಆಗ್ರಹಗಳು ಅಭಿಮಾನಿಗಳು ಮತ್ತು ಅವರವರ ಮುಖಂಡರ ನಡುವಿನ ಸಂಬಂಧದ ಅನುಗುಣವಾಗಿ ಇರುತ್ತದೆ. ಸಚಿವ ಸ್ಥಾನ ಸಿಕ್ಕಿಲ್ಲಾ ಎಂಬ ಕಾರಣದಿಂದ ಯಾವುದೇ ರೀತಿಯ ಪಕ್ಷವಿರೋಧಿ ಚಟುವಟಿಕೆ ಪ್ರತಿಭಟನೆ ಮಾಡಬಾರದು. ನಾನು ನನ್ನ ಅಭಿಮಾನಿಗಳಿಗೆ ಹೇಳಿದ್ದೇನೆ, ಒಳ್ಳೆಯ ರೀತಿಯಲ್ಲಿ ಪಕ್ಷ ಸಂಘಟನೆಯ ಕಾರ್ಯದಲ್ಲಿ ತೊಡಗಿಕೊಳ್ಳಿ. ಮುಂದೆ 2023 ರಲ್ಲಿ ಮತ್ತೊಮ್ಮೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ್ರೆ ಪಕ್ಷ ನಮ್ಮನ್ನ ಗುರ್ತಿಸಿ ಒಳ್ಳೆಯ ಸ್ಥಾನಮಾನ ಕೊಡುತ್ತದೆ ಎಂದು ಸವದಿ ಅಭಿಪ್ರಾಯ ಪಟ್ಟಿದ್ಧಾರೆ.


  ದೋಸ್ತಿ ಸರ್ಕಾರ ಪತನವಾದ ಬಳಿಕ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಎಲ್ಲಿಲ್ಲದ ತೆರೆಮರೆಯ ಕಸರತ್ತು ಮಾಡಿದ್ದರು. ಅಂದು ಯಡಿಯೂರಪ್ಪ ರಾಜ್ಯದ ಮುಖ್ಯಮಂತ್ರಿ ಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಹಲವು ಹಿರಿಯ ಶಾಸಕರು ಮಂತ್ರಿಗಿರಿಗಾಗಿ ಎಲ್ಲಿಲ್ಲದ ಲಾಬಿಯನ್ನ ನಡೆಸಿದ್ರು. ಆದ್ರೆ ಅಂದು ಬಿಜೆಪಿ ಹೈಕಮಾಂಡ್ ಎಲ್ಲರಿಗೂ ಅಚ್ಚರಿ ಮೂಡಿಸುವಂತೆ ಚುನಾವಣೆಯಲ್ಲಿ ಸೋತಿದ್ದ ಲಕ್ಷ್ಮಣ ಸವದಿಯನ್ನ ರಾಜ್ಯದ ಉಪ ಮುಖ್ಯಮಂತ್ರಿ ಯಾಗಿ ಘೋಷಣೆ ಮಾಡಿತ್ತು.


  ವರದಿ: ಲೋಹಿತ್ ಶಿರೋಳ

  First published: