• ಹೋಂ
 • »
 • ನ್ಯೂಸ್
 • »
 • Breaking News
 • »
 • ಕರ್ನಾಟಕದಲ್ಲಿ 5 ವರ್ಷಗಳಲ್ಲಿ ಕಟ್ಟಿದ್ದು 10 ಸಾವಿರ ಕೋಟಿ ಟೋಲ್ ಶುಲ್ಕ! ಅಗ್ರಸ್ಥಾನ ಯಾವ ರಾಜ್ಯಕ್ಕೆ ಗೊತ್ತಾ?

ಕರ್ನಾಟಕದಲ್ಲಿ 5 ವರ್ಷಗಳಲ್ಲಿ ಕಟ್ಟಿದ್ದು 10 ಸಾವಿರ ಕೋಟಿ ಟೋಲ್ ಶುಲ್ಕ! ಅಗ್ರಸ್ಥಾನ ಯಾವ ರಾಜ್ಯಕ್ಕೆ ಗೊತ್ತಾ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕಳೆದ ಐದು ವರ್ಷಗಳ ಸಮಯದಲ್ಲಿ ಕರ್ನಾಟಕದ ರಸ್ತೆ ಬಳಕೆದಾರರು 9,982.6 ಕೋಟಿ ರೂಪಾಯಿ ಮೊತ್ತವನ್ನು ಟೋಲ್ ಪ್ಲಾಜಾಗಳಲ್ಲಿ ಪಾವತಿಸಿದ್ದಾರೆ. ಐದು ವರ್ಷಗಳ ಅಂಕಿ ಅಂಶ ಗಮನಿಸಿದರೆ 2021-22 ಹೆಚ್ಚು ಸಂಗ್ರಹಿಸಲಾಗಿದೆ. ಈ ಅವಧಿಯಲ್ಲಿ ರೂ 2,269.2 ಕೋಟಿ ಟೋಲ್ ಸಂಗ್ರಹವಾಗಿದೆ ಎಂದು ವರದಿಯಾಗಿದೆ.

ಮುಂದೆ ಓದಿ ...
 • Trending Desk
 • 3-MIN READ
 • Last Updated :
 • Share this:

  ಬೆಂಗಳೂರು: ಏಪ್ರಿಲ್ 2018 ಹಾಗೂ ಡಿಸೆಂಬರ್ 2022 ರ ನಡುವಿನ ಐದು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ರೂ 10,000 ಕೋಟಿಗಿಂತಲೂ ಅಧಿಕ ಟೋಲ್ (Toll) ಶುಲ್ಕವನ್ನು ಕರ್ನಾಟಕದ (Karnataka)  ರಸ್ತೆ ಬಳಕೆದಾರರು ಪಾವತಿಸಿದ್ದಾರೆ. ಕೇಂದ್ರ ಸಚಿವಾಲಯದ  ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಪ್ರಾಧಿಕಾರದ  (Ministry of road transport and highways subsequent ) ಪ್ರಕಾರ, ಇದೇ ಅವಧಿಯಲ್ಲಿ ರಾಷ್ಟ್ರವ್ಯಾಪಿಯಾಗಿ ಟೋಲ್ ಸಂಗ್ರಹದ ಮೊತ್ತ  ರೂ 1.5 ಲಕ್ಷ ಕೋಟಿಯಾಗಿದೆ. ಉತ್ತರ ಪ್ರದೇಶ (Uttar Pradesh), ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿ ಅತಿ ಹೆಚ್ಚು ಟೋಲ್ ಸಂಗ್ರಹವಾಗಿರುವುದು ಸಚಿವಾಲಯದಿಂದ ತಿಳಿದುಬಂದಿದೆ.


  20221-22ರಲ್ಲಿ ಹೆಚ್ಚು ಟೋಲ್ ಸಂಗ್ರಹ


  ಈ ಐದು ವರ್ಷಗಳ ಸಮಯದಲ್ಲಿ ರೂ 9,982.6 ಕೋಟಿ ಮೊತ್ತವನ್ನು ಕರ್ನಾಟಕದಲ್ಲಿರುವ ಟೋಲ್ ಪ್ಲಾಜಾಗಳಲ್ಲಿ ಸವಾರರು ಪಾವತಿಸಿದ್ದಾರೆ.  ಐದು ವರ್ಷಗಳ ಅಂಕಿ ಅಂಶ ಗಮನಿಸಿದರೆ 2021-22  ಹೆಚ್ಚು ಸಂಗ್ರಹಿಸಲಾಗಿದೆ.  ಈ ಅವಧಿಯಲ್ಲಿ ರೂ 2,269.2 ಕೋಟಿ ಟೋಲ್ ಸಂಗ್ರಹವಾಗಿದೆ ಎಂದು ವರದಿಯಾಗಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಟೋಲ್​ ಸಂಗ್ರಹಣೆಯಲ್ಲಿ  ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.


  ಅಂಕಿಅಂಶಗಳು ತಿಳಿಸಿರುವ ಮಾಹಿತಿಗಳೇನು?


  ಹಣಕಾಸಿನ ವರ್ಷಕ್ಕೆ ಇನ್ನೂ ತ್ರೈಮಾಸಿಕ ಬಾಕಿಯಿರುವಂತೆಯೇ ಡಿಸೆಂಬರ್ 31, 2022 ರವರೆಗೆ ರಾಜ್ಯದಲ್ಲಿರುವ ಟೋಲ್ ಪ್ಲಾಜಾಗಳು ರೂ 2,268.9 ಕೋಟಿಯನ್ನು ಸಂಗ್ರಹಿಸಿವೆ,  ರಾಷ್ಟ್ರದಲ್ಲೂ ಕೂಡ ಇದೇ ಅಂಕಿಅಂಶ ಕಂಡು ಬಂದಿದೆ. 2021-22 ರಲ್ಲಿ ರಾಷ್ಟ್ರಾದ್ಯಂತ ಟೋಲ್ ಪ್ಲಾಜಾಗಳಿಂದ ರೂ 33,881.2 ಕೋಟಿ ಆದಾಯ ಸಂಗ್ರಹವಾಗಿದೆ.  ಈ ವರ್ಷದ ಮೂರು ತ್ರೈಮಾಸಿಕಗಳಲ್ಲಿ ರೂ 33,489.1 ಕೋಟಿ ಸಂಗ್ರಹವಾಗಿದೆ ಎಂದು ವರದಿಯಾಗಿದೆ.
  ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚು ಟೋಲ್ ಸಂಗ್ರಹ


  ರಾಜ್ಯವಾರು ಅಂಕಿಅಂಶಗಳನ್ನು ಗಮನಿಸಿದರೆ  ಉತ್ತರ ಪ್ರದೇಶ ಅಗ್ರಸ್ಥಾನ ಪಡೆದುಕೊಂಡಿದೆ.  ಸುಮಾರು ರೂ 17,242.9 ಕೋಟಿ ಸಂಗ್ರಹಿಸಿದೆ. ಭೂಪ್ರದೇಶದಲ್ಲಿ  ದೇಶದ ಅತಿ ದೊಡ್ಡ ರಾಜ್ಯವಾದ ರಾಜಸ್ಥಾನ  16,565.9 ಕೋಟಿ ರೂಪಾಯಿ ಸಂಗ್ರಹಿಸಿದೆ.


  ಗುಜರಾತ್(15,332.2) , ಮಹಾರಾಷ್ಟ್ರ 13, 043.5)  ಹಾಗೂ ತಮಿಳುನಾಡು( 12, 738)  ನಂತರ ಸ್ಥಾನವನ್ನು ಅಲಂಕರಿಸಿವೆ. ಈ ಐದು ರಾಜ್ಯಗಳು ದೇಶದಲ್ಲಿ ಸಂಗ್ರಹವಾದ ಒಟ್ಟು ಟೋಲ್ ಸಂಗ್ರಹಣೆಯಲ್ಲಿ ಶೇ 50% ರಷ್ಟು ಕೊಡುಗೆ ನೀಡಿವೆ. ಕರ್ನಾಟಕ ಎಂಟನೇ ಸ್ಥಾನ ಪಡೆದುಕೊಂಡಿದೆ.


  ಫಾಸ್​ಟ್ಯಾಗ್ ಟೋಲ್  ಮಹತ್ವದ ಪಾತ್ರ


  ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ವಹಿಸುತ್ತಿರುವ ಇಲೆಕ್ಟ್ರಿಕ್ ಟೋಲ್ ಕಲೆಕ್ಷನ್​ ಸಿಸ್ಟಮ್ ಆದ ಫಾಸ್​ಟ್ಯಾಗ್ ಅನ್ನು ಎಲ್ಲಾ ವಾಗನಗಳಿಗೆ ಅಳವಡಿಕೆ ಟೋಲ್ ಸಂಗ್ರಹ ಹೆಚ್ಚಾಗಲು ಕಾರಣವಾಗಿದೆ.  ಕಳೆದ ಕೆಲವು ವರ್ಷಗಳಿಂದ ಎಲ್ಲಾ ಟೋಲ್​ಗಳಲ್ಲೂ ಸಂಪೂರ್ಣವಾಗಿ ಫಾಸ್​ಟ್ಯಾಗ್   ವ್ಯವಸ್ಥೆ ಮಾಡಲಾಗುತ್ತಿದೆ. ವಾಹನಗಳಿಗೆ ಫಾಸ್​ಟ್ಯಾಗ್ ಅಳವಡಿಸುವುದರಿಂದ ಟೋಲ್ ಬೂತ್​ಗಳಲ್ಲಿ ಸ್ವಯಂಚಾಲಿತವಾಗಿ ಟೋಲ್ ಹಣ ಕಡಿತಗೊಳ್ಳುವುದಲ್ಲದೇ ಹೆಚ್ಚು ಹೊತ್ತು ಕ್ಯೂ ನಿಲ್ಲುವ ಪರಿಸ್ಥಿತಿಯೂ ನಿಯಂತ್ರಣಕ್ಕೆ ಬರುತ್ತದೆ.


  2015 ರಲ್ಲಿ ಮೊದಲು ಬೆಂಗಳೂರು ಹಾಗೂ ಚೆನ್ನೈ ಮಹಾನಗರಗಳಲ್ಲಿ ಪ್ರಸ್ತುತಪಡಿಸಲಾದ ಫಾಸ್​ಟ್ಯಾಗ್ ವ್ಯವಸ್ಥೆಯನ್ನು 2019 ರಲ್ಲಿ ಸಂಪೂರ್ಣವಾಗಿ ದೇಶಾದ್ಯಂತ ಕಡ್ಡಾಯಗೊಳಿಸಲಾಯಿತು. ಆದರೆ ಪೂರ್ಣಾವಧಿಯಲ್ಲಿ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯ 2021-22 ರಲ್ಲಿ ನಡೆದಿರುವುದರಿಂದ ಈ ಅವಧಿಯಲ್ಲಿ ಹೆಚ್ಚು ಟೋಲ್ ಸಂಗ್ರಹವಾಗಿದೆ.


  ಸಾಂದರ್ಭಿಕ ಚಿತ್ರ


  ದುಪ್ಪಟ್ಟು ಶುಲ್ಕ ವಿಧಿಸಲಾಗುತ್ತಿದೆ ಎಂಬ ದೂರು


  ಆದರೆ ಫಾಸ್​ಟ್ಯಾಗ್ ವ್ಯವಸ್ಥೆಯ ಕುರಿತು ವಾಹನ ಸವಾರರದಿಂದ ಅಪಸ್ವರಗಳು ಕೇಳಿಬರುತ್ತಿದ್ದು ದುಪ್ಪಟ್ಟು ಶುಲ್ಕವನ್ನು ವಿಧಿಸಲಾಗುತ್ತಿದೆ ಎಂಬುದು ಪ್ರಯಾಣಿಕರ ಆಪಾಧನೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮಗಳಿಗೆ ಅನುಸಾರವಾಗಿ ಪ್ಲಾಜಾಗಳಿಗೆ ಶುಲ್ಕಗಳನ್ನು ವಿಧಿಸಲಾಗುತ್ತಿದೆ ಎಂದು ಸಚಿವಾಲಯ ತಿಳಿಸಿದೆ. ಹೆದ್ದಾರಿ ಪ್ರತಿ ವರ್ಷ 3% ರಷ್ಟು ಹೆಚ್ಚಿಸಲಾಗುತ್ತದೆ.


  ಕರ್ನಾಟಕದಲ್ಲಿ ಐದು ವರ್ಷಗಳಲ್ಲಿ ಸಂಗ್ರಹವಾದ ಟೋಲ್ ಮೊತ್ತ


  2018-19 ಅವಧಿಯಲ್ಲಿ 1,830.1 ಕೋಟಿ ರೂ, 2019-20ರಲ್ಲಿ  1,814.3 ಕೋಟಿ ರೂ, 2020-21ರಲ್ಲಿ  1,800.1 ಕೋಟಿ ರೂ, 2021-22 ರಲ್ಲಿ 2,269.2 ಕೋಟಿ ರೂ ಹಾಗೂ 2022-23 ರಲ್ಲಿ 2,268.9 ಕೋಟಿ ರೂ ಸಂಗ್ರಹವಾಗಿದೆ.

  Published by:Rajesha B
  First published: