ಬೆಂಗಳೂರು(ಆ.18): ಈ ವರ್ಷ ಸುರಿದ ಭಾರೀ ಮಳೆ, ಪ್ರವಾಹ ಮತ್ತು ಇದರಿಂದಾಗಿ ಹಾನಿ ಬಳಿಕ ಕರ್ನಾಟಕದ 83 ತಾಲೂಕುಗಳನ್ನು ‘ಪ್ರವಾಹ ಪೀಡಿತ ಪ್ರದೇಶ‘ಗಳೆಂದು ಕಂದಾಯ ಸಚಿವ ಆರ್. ಅಶೋಕ್ ಅಧಿಕೃತವಾಗಿ ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೊದಲು ನಾವು 61 ತಾಲೂಕುಗಳನ್ನು ನೆರೆ ಪೀಡಿತ ಪ್ರದೇಶಗಳೆಂದು ಘೋಷಿಸಿದ್ದೆವು. ಇತ್ತೀಚಿನ ಮಳೆಯ ಪ್ರಮಾಣ ಮತ್ತು ಪ್ರವಾಹದ ಪರಿಸ್ಥಿತಿಯನ್ನು ನೋಡಿ ಹೊಸದಾಗಿ 22 ತಾಲೂಕುಗಳನ್ನು ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರಿಸಲಾಗಿದೆ ಎಂದರು.
ಬೆಳಗಾವಿ, ಚಿಕ್ಕಮಗಳೂರು, ಹುಬ್ಬಳ್ಳಿ ನಗರ, ಕಡೂರು, ದಾವಣಗೆರೆ, ದಾಂಡೇಲಿ, ಆಲೂರು, ಲಕ್ಷ್ಮೇಶ್ವರ್, ತರೀಕೆರೆ, ಮುಂಡಗೋಡ, ಸೂಪಾ, ಹುಬ್ಬಳ್ಳಿ, ಭದ್ರಾವತಿ, ಚನ್ನಗಿರಿ, ಅಣ್ಣಿಗೇರಿ, ಬಬಲೇಶ್ವರ, ನಿಡಗುಂದಿ, ಕೊಲ್ಹಾರ, ಮುದ್ದೇಬಿಹಾಳ, ಹರಪ್ಪನಹಳ್ಳಿ, ಹೊಸನಗರ ಮತ್ತು ಮೂಡಿಗೆರೆ ತಾಲೂಕುಗಳು ಹೊಸದಾಗಿ ಪ್ರವಾಹ ಪೀಡಿತ ಪ್ರದೇಶಗಳ ಪಟ್ಟಿಗೆ ಸೇರ್ಪಡೆಯಾಗಿವೆ. ಈಗ ಕರ್ನಾಟಕದಲ್ಲಿ ಒಟ್ಟು ನೆರೆ ಪೀಡತ ಪ್ರದೇಶಗಳು 83 ಆಗಿದೆ ಎಂದು ಆರ್.ಆಶೋಕ್ ಹೇಳಿದರು.
ಇದನ್ನೂ ಓದಿ: Karnataka Weather Today: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ; ರಾಜ್ಯದ 8 ಜಿಲ್ಲೆಗಳಲ್ಲಿ ಇಂದಿನಿಂದ ಭಾರೀ ಮಳೆ
ಪ್ರವಾಹ ಪೀಡಿತ ಸ್ಥಳಗಳಿಗೆ ಒಂದೆರಡು ಬಾರಿ ನಾನು ಹೋಗಿದ್ದೇನೆ. ಪ್ರವಾಹ ಸಂದರ್ಭಗಳಲ್ಲಿ ಮುನ್ನೆಚ್ಚರಿಕೆ ತೆಗೆದುಕೊಂಡಿದ್ದೇವೆ. ಸಿಡಿಲಿನಿಂದ ಹಲವರು ಸಾಯುತ್ತಿದ್ದಾರೆ. ಅದರ ಅಲರ್ಟ್ ನೆಸ್ ಬಗ್ಗೆ ಹೊಸ ಯೋಜನೆ ಮಾಡುತ್ತಿದ್ದೇವೆ. ಈ ಅಲರ್ಟ್ ಒಂದೂವರೆ ಕಿ.ಮೀವರೆಗೆ ಕೇಳಿಸುತ್ತದೆ. ಮೈಕ್ ಸಿಸ್ಟಂ ಮೂಲಕ ಅಲರ್ಟ್ ಮಾಡಲಾಗುತ್ತದೆ. ಗ್ರಾಮ ಪಂಚಾಯ್ತಿಗಳಲ್ಲಿ ಅಲರ್ಟ್ ಆಗಲಿದೆ. ಈ ಹೊಸ ಸಿಸ್ಟಂನ್ನು ಅಳವಡಿಕೆ ಮಾಡ್ತೇವೆ ಎಂದು ಹೇಳಿದರು.
ಚಂಡಮಾರುತದ ಅಬ್ಬರದ ಬಗ್ಗೆಯೂ ಅಲರ್ಟ್ ನೀಡುವ ವ್ಯವಸ್ಥೆ ಮಾಡುತ್ತೇವೆ. ಕರಾವಳಿ ಭಾಗದ 40 ಕಡೆ ಅನುಷ್ಠಾನ ಮಾಡುತ್ತೇವೆ. ಅಲಾರಾಂ ಸಿಸ್ಟಂಗಳನ್ನ ಮಾಡುತ್ತೇವೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಹಣ ಬರಲಿದೆ. ಒಂದೊಂದು ಸಿಸ್ಟಂಗೆ 12 ಕೋಟಿ ಖರ್ಚಾಗುತ್ತದೆ. ಆರೇಳು ಕಿ.ಮೀ.ವರೆಗೆ ಇದು ಸೈರನ್ ಮಾಡಲಿದೆ. ಚಂಡಮಾರುತಗಳ ಸುಳಿವನ್ನು ನೀಡಲಿದೆ. ಇದು ಕರಾವಳಿ ಭಾಗದ ಜನರಿಗೆ ಅನುಕೂಲವಾಗಲಿದೆ ಮೀನುಗಾರರಿಗೆ ಇದು ಹೆಚ್ಚು ಉಪಯೋಗವಾಗಲಿದೆ ಎಂದರು.
ಇದನ್ನೂ ಓದಿ:Karnataka Dams Water Level: ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಂತಿದೆ
ಮುಂದುವರೆದ ಅವರು, ಬೆಂಗಳೂರಿನಲ್ಲೂ ಅನೇಕ ಪ್ರದೇಶಗಳನ್ನು ಗುರುತಿಸಲಾಗಿದೆ. 50 ಕ್ಕೂ ಹೆಚ್ಚು ರಸ್ತೆಗಳಲ್ಲಿ ನೀರು ನಿಲ್ಲುತ್ತಿದೆ. ಅಧಿಕಾರಿಗಳಿಗೆ ಇದರ ಬಗ್ಗೆ ಸೂಚಿಸಿದ್ದೇನೆ. ನೀರು ನಿಲ್ಲುವ ಡ್ರೈನ್ ಬಗ್ಗೆ ಸೂಚಿಸಿದ್ದೇನೆ. ಜೊತೆಗೆ ಸಮಸ್ಯೆ ಪರಿಹಾರಕ್ಕೂ ಸೂಚಿಸಿದ್ದೇನೆ. ನೀರು ನಿಲ್ಲುವ ಜಾಗಗಳ ಬಗ್ಗೆ ಕೇಳಿದ್ದೇನೆ. ಬೆಂಗಳೂರಿನ ಜಾಗಗಳ ಬಗ್ಗೆ ವಿವರ ಕೇಳಿದ್ದೇನೆ. ತುರ್ತು ಕಾಮಗಾರಿ ಮುಗಿಸುವ ಬಗ್ಗೆ ತಿಳಿಸಿದ್ದೇನೆ. ಬೆಂಗಳೂರಿನಲ್ಲಿ ಕಾಮಗಾರಿ ನಿರಂತರವಾಗಿ ನಡೆಯುತ್ತೆ. ಮಿತಿ ಹಾಕಿ ಕಾಮಗಾರಿ ಮಾಡ್ತಿಲ್ಲ. ಇಲ್ಲಿ ನಿರಂತರವಾಗಿ ಕೆಲಸ ನಡೆಯುತ್ತಲೇ ಇರುತ್ತೆ ಎಂದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ