• ಹೋಂ
  • »
  • ನ್ಯೂಸ್
  • »
  • Breaking News
  • »
  • Gang Rape| ಜಾರ್ಖಂಡ್​ನಲ್ಲಿ ಬಾಲಕಿಯ ಮೇಲೆ 7 ಜನರಿಂದ ಸಾಮೂಹಿಕ ಅತ್ಯಾಚಾರ; ಆರೋಪಿಗಳೂ ಅಪ್ರಾಪ್ತ ಬಾಲಕರೇ!

Gang Rape| ಜಾರ್ಖಂಡ್​ನಲ್ಲಿ ಬಾಲಕಿಯ ಮೇಲೆ 7 ಜನರಿಂದ ಸಾಮೂಹಿಕ ಅತ್ಯಾಚಾರ; ಆರೋಪಿಗಳೂ ಅಪ್ರಾಪ್ತ ಬಾಲಕರೇ!

7 ಜನ ಬಾಲಕರನ್ನು ನೋಡುತ್ತಿದ್ದಂತೆ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆದರೆ, ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಳಿಕ ಎಲ್ಲಾ ಆರೋಪಿಗಳೂ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಠಾಣಾ ಉಸ್ತುವಾರಿ ಅಧಿಕಾರಿ ರಾಣಾ ಸಿಂಗ್ ಹೇಳಿದ್ದಾರೆ.

7 ಜನ ಬಾಲಕರನ್ನು ನೋಡುತ್ತಿದ್ದಂತೆ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆದರೆ, ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಳಿಕ ಎಲ್ಲಾ ಆರೋಪಿಗಳೂ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಠಾಣಾ ಉಸ್ತುವಾರಿ ಅಧಿಕಾರಿ ರಾಣಾ ಸಿಂಗ್ ಹೇಳಿದ್ದಾರೆ.

7 ಜನ ಬಾಲಕರನ್ನು ನೋಡುತ್ತಿದ್ದಂತೆ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆದರೆ, ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಳಿಕ ಎಲ್ಲಾ ಆರೋಪಿಗಳೂ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಠಾಣಾ ಉಸ್ತುವಾರಿ ಅಧಿಕಾರಿ ರಾಣಾ ಸಿಂಗ್ ಹೇಳಿದ್ದಾರೆ.

  • Share this:

    ಜಾರ್ಖಂಡ್‌ ರಾಜಧಾನಿ ರಾಂಚಿ (jharkhand) ಜಿಲ್ಲೆಯಲ್ಲಿ ಬಾಲಕಿಯ ಮೇಲೆ ಏಳು ಬಾಲಕರು ಸಾಮೂಹಿಕ ಅತ್ಯಾಚಾರ (Gang Rape) ನಡೆಸಿದ್ದಾರೆ. ಎಲ್ಲಾ ಆರೋಪಿಗಳೂ ಸಹ ಅಪ್ರಾಪ್ತ ಬಾಲಕರೇ ಆಗಿದ್ದು, ಪರಿಚಯಸ್ಥ ಹುಡುಗರಿಂದಲೇ ಇಂತಹ ಹೀನ ಕೃತ್ಯ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇತರರನ್ನು ಬಂಧಿಸಲು ಶೋಧಕಾರ್ಯ ಆರಂಭಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಸ್ಟ್ 26 ರಂದು ಈ ಘಟನೆ ನಡೆದಿದ್ದು, ಸಂತ್ರಸ್ತ ಬಾಲಕಿಯ ಪರಿಚಯದವನಾದ ಒಬ್ಬ ಆರೋಪಿ ತನ್ನ ಬೈಕಿನಲ್ಲಿ ಬಾಲಕಿಯನ್ನು ಸುತ್ತಾಡಿಸುವ ನೆಪದಲ್ಲಿ ಕರೆದುಕೊಂಡು ಹೋಗಿದ್ದಾನೆ. ಆತನ ಇನ್ನು6 ಮಂದಿ ಸ್ನೇಹಿತರು ಕಾಯುತ್ತಿದ್ದ ಮಂದಾರ್ ಪೊಲೀಸ್ ಠಾಣಾ ವ್ಯಾಪ್ತಿಯ ನಿರ್ಜನ ಪ್ರದೇಶಕ್ಕೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾನೆ. ಅಲ್ಲೇ ಬಾಲಕಿಯ ಮೇಲೆ ಅತ್ಯಾಚಾರ ನಡೆಸಲಾಗಿದೆ.


    7 ಜನ ಬಾಲಕರನ್ನು ನೋಡುತ್ತಿದ್ದಂತೆ ಆಕೆ ತಪ್ಪಿಸಿಕೊಳ್ಳಲು ಯತ್ನಿಸಿದ್ದಾಳೆ. ಆದರೆ, ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ಬಳಿಕ ಎಲ್ಲಾ ಆರೋಪಿಗಳೂ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ಠಾಣಾ ಉಸ್ತುವಾರಿ ಅಧಿಕಾರಿ ರಾಣಾ ಸಿಂಗ್ ಹೇಳಿದ್ದಾರೆ. ಘಟನೆಯ ನಂತರ ಬಾಲಕಿಯನ್ನು ಕಡೆದುಕೊಂಡು ಹೋಗಿದ್ದ ಬಾಲಕನೇ ಮತ್ತೆ ಆಕೆಯನ್ನು ಮನೆಗೆ ತಂದು ಬಿಟ್ಟಿದ್ದಾನೆ. ಬಳಿಕ ಬಾಲಕಿ ಮನೆಯವರಿಗೆ ಈ ವಿಷಯ ತಿಳಿಸಿದ್ದಾರೆ. ಮನೆಯ ಸದಸ್ಯರು ಅತ್ಯಾಚಾರದ ಬಗ್ಗೆ ದೂರು ದಾಖಲಿಸಿದ್ದಾರೆ.


    ಎಲ್ಲಾ ಆರೋಪಿಗಳು ಮಂದಾರ್ ಪ್ರದೇಶದವರಾಗಿದ್ದು, ಅವರಲ್ಲಿ ನಾಲ್ವರನ್ನು ಶನಿವಾರ ಬಂಧಿಸಲಾಗಿದೆ. ಎಲ್ಲರ ಮೇಲೆ ಭಾರತೀಯ ದಂಡ ಸಂಹಿತೆ ಮತ್ತು ಫೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಬಂಧಿತ ಆರೋಪಿಗಳನ್ನು ಬಾಲಾಪರಾಧಿಗಳ ಕಾರಾಗೃಹಕ್ಕೆ ರವಾನಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.


    ಇದನ್ನೂ ಓದಿ: Exclusive- ಪಾಕಿಸ್ತಾನದೊಂದಿಗೆ ಸೇರಿ ಭಾರತಕ್ಕೆ ಹಾನಿ ಮಾಡಲ್ಲ: ತಾಲಿಬಾನ್ ನಾಯಕ ಶೇರ್ ಮೊಹಮ್ಮದ್


    ಆಗಸ್ಟ್ 24 ರಂದು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಎಂಬಿಎ ವಿದ್ಯಾರ್ಥಿನಿ ಮೇಲೆ ಅಮಾನವೀಯವಾಗಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಈ ಪ್ರಕರಣ ರಾಜ್ಯಾದ್ಯಂತ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿತ್ತು. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಜನ  ಆರೋಪಿಗ ಳನ್ನು ಕರ್ನಾಟಕ ಪೊಲೀಸರು ತಮಿಳುನಾಡಿನಲ್ಲಿ ಬಂಧಿಸಿದ್ದಾರೆ. ಅಲ್ಲದೆ, ಕರ್ನಾಟಕಕ್ಕೆ ಕರೆತಂದು ರಹಸ್ಯ ಜಾಗದಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    First published: