• Home
  • »
  • News
  • »
  • breaking-news
  • »
  • Jairam Ramesh: ಶವಸಂಸ್ಕಾರಕ್ಕೂ ಜಿಎಸ್‌ಟಿ ಅಂತ ಜೈರಾಮ್ ರಮೇಶ್ ತರಾಟೆ, ಟ್ಯಾಕ್ಸ್ ಪೇ ಮಾಡಿ ಸಾಯಬಹುದೇ ಅಂತ ನೆಟ್ಟಿಗರಿಂದ ವ್ಯಂಗ್ಯ!

Jairam Ramesh: ಶವಸಂಸ್ಕಾರಕ್ಕೂ ಜಿಎಸ್‌ಟಿ ಅಂತ ಜೈರಾಮ್ ರಮೇಶ್ ತರಾಟೆ, ಟ್ಯಾಕ್ಸ್ ಪೇ ಮಾಡಿ ಸಾಯಬಹುದೇ ಅಂತ ನೆಟ್ಟಿಗರಿಂದ ವ್ಯಂಗ್ಯ!

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್

ಸ್ಮಶಾನಗಳ ಮೇಲಿನ ಜಿಎಸ್‌ಟಿಯನ್ನು ಕೇಂದ್ರ ಸರ್ಕಾರ ಶೇಕಡಾ 18ಕ್ಕೆ ಹೆಚ್ಚಿಸಿದೆ! ಇಲ್ಲೊಂದು ಕಥೆ ಇರಬಹುದು ಅಂತ ರಾಕೇಶ್ ಎನ್ನುವವರು ಹೇಳಿದ್ದಾರೆ. ಇನ್ನೊಬ್ಬರು ಖಂಡಿತವಾಗಿಯೂ ನಾನು "ಕೊನೆಯ ಕ್ಷಣದವರೆಗೆ" ತೆರಿಗೆಯನ್ನು ಪಾವತಿಸಿದ ಸಂಪೂರ್ಣ ತೃಪ್ತಿಯೊಂದಿಗೆ ಹೋಗುತ್ತೇನೆ, ಅದಕ್ಕಾಗಿ ಧನ್ಯವಾದಗಳು ಅಂತ ವ್ಯಂಗ್ಯವಾಡಿದ್ದಾರೆ.

ಮುಂದೆ ಓದಿ ...
  • Share this:

ನವದೆಹಲಿ: ಜಿಎಸ್‌ಟಿ ಏರಿಕೆಗೆ (GST Hike) ಕಾಂಗ್ರೆಸ್ ನಾಯಕ (Congress Leader) ಹಾಗೂ ರಾಜ್ಯ ಸಭಾ ಸದಸ್ಯ (Rajyasabha Member) ಜೈರಾಮ್ ರಮೇಶ್ (Jairam Ramesh) ಕೇಂದ್ರ ಸರ್ಕಾರದ (Central Government) ವಿರುದ್ಧ ಕಿಡಿ ಕಾರಿದ್ದಾರೆ. ಟ್ವಿಟರ್‌ನಲ್ಲಿ (Twitter) 10 ಪ್ರಶ್ನೆಗಳನ್ನು ಕೇಳಿರುವ ಅವರು, ಹಣದುಬ್ಬರ (Inflation) ಮತ್ತಷ್ಟು ಏರಿಕೆಗೆ ಕಾರಣವಾಗುವುದರಿಂದ ಬಳಕೆಯ ಕೆಲವು ಅಗತ್ಯ ವಸ್ತುಗಳ ಮೇಲೆ ತೆರಿಗೆಯನ್ನು (Tax) ಹೆಚ್ಚಿಸುವುದು ಸರ್ಕಾರದ ಕ್ರೂರ ನಿರ್ಧಾರ (Cruel decision) ಅಂತ ಕಿಡಿಕಾರಿದ್ದಾರೆ. ಅಂತ್ಯಸಂಸ್ಕಾರಕ್ಕೂ (Funeral) ಶೇಕಡಾ 18ರಷ್ಟು ಟ್ಯಾಕ್ಸ್ ಹಾಕಿದೆ ಅಂತ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರು, ನಾವು ಅಂತ್ಯಸಂಸ್ಕಾರದ ಟ್ಯಾಕ್ಸ್ ಕಟ್ಟಿ, ಆಮೇಲೆ ನೆಮ್ಮದಿಯಾಗಿ ಸಾಯಬಹುದು ಅಂತ ಟ್ವೀಟಿಸಿದ್ದಾರೆ.


ಜಿಎಸ್‌ಟಿ ಏರಿಕೆ ಕ್ರೂರ ನಿರ್ಧಾರ ಎಂದ ಜೈರಾಮ್ ರಮೇಶ್


ಕೇಂದ್ರ ಸರ್ಕಾರದ ಟಿಎಸ್‌ಟಿ ಏರಿಕೆಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಕಿಡಿಕಾರಿದ್ದಾರೆ. ಜಿಎಸ್‌ಟಿ ಏರಿಕೆ ಸಮರ್ಥಿಸಿಕೊಂಡಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ವಾಗ್ದಾಳಿ ನಡೆಸಿದರು, ನರೇಂದ್ರ ಮೋದಿ ಸರ್ಕಾರವು ಹೆಚ್ಚು ಆರೋಗ್ಯಕರವಾಗಿ ಪ್ಯಾಕ್ ಮಾಡಿದ ವಸ್ತುಗಳನ್ನು ಕೊಳ್ಳುವುದನ್ನು ಇಷ್ಟಪಡುವುದಿಲ್ಲ ಎಂದಿದ್ದಾರೆ.


ಜಿಎಸ್‌ಟಿ ಏರಿಕೆ ಕುರಿತಂತೆ ಜೈರಾಮ್ ರಮೇಶ್ 10 ಪ್ರಶ್ನೆಗಳನ್ನು ಕೇಳಿದ್ದಾರೆ. 'ಬ್ರಾಂಡೆಡ್ ಮತ್ತು ಲೇಬಲ್' ಎನ್ನುವುದು 'ಪೂರ್ವ-ಪ್ಯಾಕೇಜ್ ಮಾಡಲಾದ ಮತ್ತು ಲೇಬಲ್' ಗಿಂತ ತುಂಬಾ ಭಿನ್ನವಾಗಿದೆ. ಮೊದಲನೆಯದು ಹೆಚ್ಚಿನ ಬೆಲೆಯ ಮತ್ತು ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರು ಖರೀದಿಸಿದ ದೊಡ್ಡ ಕಂಪನಿಗಳ ಉತ್ಪನ್ನಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ. ಎರಡನೆಯದು ಕಡಿಮೆ ಮಧ್ಯಮ ವರ್ಗ ಮತ್ತು ಬಡವರು ಖರೀದಿಸುವ ಸಣ್ಣ ವ್ಯಾಪಾರಗಳ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.


ಇದನ್ನೂ ಓದಿ: Boy Death: 2ನೇ ವರ್ಷದ ಹುಟ್ಟುಹಬ್ಬವೇ ಕೊನೆಯಾಯ್ತು, ಸ್ವಿಮ್ಮಿಂಗ್ ಪೂಲ್‌ ಬಳಿ ಪಾರ್ಟಿ ಮಾಡುವಾಗಲೇ ದುರಂತ!


ಹಣದುಬ್ಬರ ಹೆಚ್ಚಾಗುವ ಸಾಧ್ಯತೆ


ಎಲ್ಲಕ್ಕಿಂತ ಹೆಚ್ಚಾಗಿ ಸಮಯ ಜಿಎಸ್‌ಟಿ ಏರಿಕೆಗೆ ಸೂಕ್ತವಲ್ಲ ಎಂದಿದ್ದಾರೆ., ಸಿಪಿಐ (ಗ್ರಾಹಕ ಬೆಲೆ ಸೂಚ್ಯಂಕ) ಹಣದುಬ್ಬರವು ಶೇಕಡಾ 7 ಕ್ಕಿಂತ ಹೆಚ್ಚಿರುವಾಗ, ಡಬ್ಲ್ಯುಪಿಐ (ಸಗಟು ಬೆಲೆ ಸೂಚ್ಯಂಕ) ಹಣದುಬ್ಬರವು ಶೇಕಡಾ 15 ಕ್ಕಿಂತ ಹೆಚ್ಚಿರುವಾಗ, ನಿರುದ್ಯೋಗ ಹೆಚ್ಚಿರುವಾಗ, ರೂಪಾಯಿ ಮೌಲ್ಯ ಕುಸಿಯುತ್ತಿರುವಾಗ ತೆರಿಗೆ ದರಗಳನ್ನು ಹೆಚ್ಚಿಸುವುದು ಕ್ರೂರವಾಗಿದೆ. ಚಾಲ್ತಿ ಖಾತೆ ಕೊರತೆ ಹೆಚ್ಚುತ್ತಿದೆ ಮತ್ತು ವಿಶ್ವಾದ್ಯಂತ ಹಣದುಬ್ಬರ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ರಮೇಶ್ ಸರಣಿ ಟ್ವೀಟ್‌ಗಳಲ್ಲಿ ತಿಳಿಸಿದ್ದಾರೆ.


ನೆಟ್ಟಿಗರ ತಮಾಷೆ


ಇನ್ನು ಇದಕ್ಕೆ ಹಲವರು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಸ್ಮಶಾನಗಳ ಮೇಲಿನ ಜಿಎಸ್‌ಟಿಯನ್ನು ಕೇಂದ್ರ ಸರ್ಕಾರ ಶೇಕಡಾ 18ಕ್ಕೆ ಹೆಚ್ಚಿಸಿದೆ! ಇಲ್ಲೊಂದು ಕಥೆ ಇರಬಹುದು ಅಂತ ರಾಕೇಶ್ ಎನ್ನುವವರು ಹೇಳಿದ್ದಾರೆ.


ಕೊನೆ ಕ್ಷಣದವರೆಗೆ ತೆರಿಗೆ ಕಟ್ಟಿದ ತೃಪ್ತಿಯಿಂದ ಸಾಯುತ್ತೇವೆ


ಇನ್ನು ಮತ್ತೊಬ್ಬರು ಕಾಮೆಂಟ್ ಮಾಡಿ, ನಾನು ಸತ್ತಾಗ ಮತ್ತು ನನ್ನ ಕುಟುಂಬ ಸ್ಮಶಾನದಲ್ಲಿ ಶೇಕಡಾ 18 ಜಿಎಸ್‌ಟಿ ಪಾವತಿಸಿದಾಗ, ಇನ್ನೂ ನನ್ನ ಬದುಕುಳಿದವರು ನನ್ನ ಐಟಿ ರಿಟರ್ನ್ ಅನ್ನು ಸಲ್ಲಿಸಬೇಕೇ ಅಥವಾ ಅವನು ಅಥವಾ ಅವಳು ನನಗಾಗಿ ಆರ್ ಫೈಲ್ ಮಾಡಲು ವಿನಾಯಿತಿ ನೀಡುತ್ತಾರೆಯೇ ಸಚಿವೆ ನಿರ್ಮಲಾ ಸೀತಾರಾಮ್ ಅವರೇ ಅಂತ ಪ್ರಶ್ನಿಸಿದ್ದಾರೆ.


ಇದನ್ನೂ ಓದಿ: IIM Raipur: ಹುಡುಗರಿಗಿಂತ ಹುಡುಗಿಯರಿಗೇ ಹೆಚ್ಚು ಅಡ್ಮಿಷನ್! ಉನ್ನತ ಶಿಕ್ಷಣ ಸಂಸ್ಥೆಯ ದಾಖಲೆ


ಇನ್ನೊಬ್ಬರು ಖಂಡಿತವಾಗಿಯೂ ನಾನು "ಕೊನೆಯ ಕ್ಷಣದವರೆಗೆ" ತೆರಿಗೆಯನ್ನು ಪಾವತಿಸಿದ ಸಂಪೂರ್ಣ ತೃಪ್ತಿಯೊಂದಿಗೆ ಹೋಗುತ್ತೇನೆ, ಅದಕ್ಕಾಗಿ ಧನ್ಯವಾದಗಳು ಅಂತ ವ್ಯಂಗ್ಯವಾಡಿದ್ದಾರೆ.

Published by:Annappa Achari
First published: