• Home
  • »
  • News
  • »
  • breaking-news
  • »
  • T20 WC 2022 IND vs NED: ಮತ್ತೆ ಅಬ್ಬರಿಸಿದ ಕಿಂಗ್ ಕೊಹ್ಲಿ, ನೆದರ್ಲ್ಯಾಂಡ್ಸ್ ತಂಡಕ್ಕೆ ಬೃಹತ್ ಮೊತ್ತದ ಟಾರ್ಗೆಟ್​

T20 WC 2022 IND vs NED: ಮತ್ತೆ ಅಬ್ಬರಿಸಿದ ಕಿಂಗ್ ಕೊಹ್ಲಿ, ನೆದರ್ಲ್ಯಾಂಡ್ಸ್ ತಂಡಕ್ಕೆ ಬೃಹತ್ ಮೊತ್ತದ ಟಾರ್ಗೆಟ್​

IND vs NED

IND vs NED

T20 WC 2022 IND vs NED: ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ ಗಳಲ್ಲಿ 2 ವಿಕೆಟ್​ ನಷ್ಟಕ್ಕೆ  ರನ್ ಗಳಿಸುವ ಮೂಲಕ ನೆದರ್ಲ್ಯಾಂಡ್ಸ್ ತಂಡಕ್ಕೆ  ರನ್ ಗಳ ಟಾರ್ಗೆಟ್​ ನೀಡಿದೆ.

  • Share this:

ಟಿ20 ವಿಶ್ವಕಪ್​ನಲ್ಲಿ (T20 World Cup 2022) ಭಾರತ ತಂಡ ಪಾಕಿಸ್ತಾನದ ವಿರುದ್ದ ಗೆದ್ದು ಭರ್ಜರಿಯಾಗಿ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.  ಇನ್ನು ಭಾರತ ಮತ್ತು ನೆದರ್ಲ್ಯಾಂಡ್ಸ್ (IND vs NED) ಟಿ20 ಕ್ರಿಕೆಟ್​ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿ ಆಗುತ್ತಿವೆ. ಹೀಗಾಗಿ ಎರಡೂ ತಂಡಗಳಿಗೂ ಮುಖಾಮುಖಿ ಆಡಿರುವ ಅನುಭವವಿಲ್ಲ.  ಈಗಾಗಲೇ ಟಾಸ್​ ಗೆದ್ದಿರುವ ಟೀಂ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 179 ರನ್ ಗಳಿಸುವ ಮೂಲಕ ನೆದರ್ಲ್ಯಾಂಡ್ಸ್ ತಂಡಕ್ಕೆ 180  ರನ್ ಗಳ ಟಾರ್ಗೆಟ್​ ನೀಡಿದೆ.


ತ್ರಿಮೂರ್ತಿಗಳ ಅರ್ಧಶತಕ:


ಇನ್ನು, ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ನಿಗದಿತ 20 ಓವರ್​ ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 179 ರನ್ ಗಳಿಸಿತು. ಈ ಪಂದ್ಯದಲ್ಲಿ ಸೂರ್ಯಕುಮಾರವ ಯಾದವ್, ವಿರಾಟ್ ಕೊಹ್ಲಿ ಮತ್ತು ನಾಯಕ ರೋಹಿತ್ ಶರ್ಮಾ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ಕೆಎಲ್ ರಾಹುಲ್ ಮತ್ತೊಮ್ಮೆ ಅಲ್ಪ ಮೊತ್ತಕ್ಕೆ ಔಟ್​ ಆಗುವ ಮೂಲಕ ನಿರಾಸೆ ಮೂಡಿಸಿದರು. ಆರಂಭಿಕರಾಗಿ ಕಣಕ್ಕಿಳಿದ ಕೆಎಲ್ ರಾಹುಲ್ ಕೇವಲ 9 ರನ್ ಗಳಿಸಿ ವಿಕೆಟ್​ ಒಪ್ಪಿಸಿದರು. ಆದರೆ ನಾಯಕ ರೋಹಿತ್ ಶರ್ಮಾ 39 ಎಸೆತದಲ್ಲಿ 3 ಸಿಕ್ಸ್ ಮತ್ತು 4 ಬೌಂಡರಿಗಳ ನೆರವಿನಿಂದ 53 ರನ್ ಗಳಿಸಿ ಮಿಂಚಿದರು.ನಂತರ ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಭರ್ಜರಿ ಬ್ಯಾಟಿಂಗ್ ಮಾಡಿದರು. ಅಂತಿಮವಾಗಿ ಕೊಹ್ಲಿ ಔಟಾಗದೇ 44 ಎಸೆತದಲ್ಲಿ 2 ಸಿಕ್ಸ್ ಮತ್ತು 3 ಬೌಂಡರಿಗಳಿಂದ 62 ರನ್ ಗಳಿಸಿದರು. ಯಾದವ್ ಸಹ 25 ಎಸೆತದಲ್ಲಿ 1 ಸಿಕ್ಸ್ 7 ಪೋರ್​ ಮೂಲಕ 51 ರನ್ ಗಳಿಸಿ ಮಿಂಚಿದರು. ಕೊಹ್ಲಿ ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಇದು ಸತತ 2ನೇ ಅರ್ಧ ಶತಕ ಸಿಡಿಸಿದರು.


ಇದನ್ನೂ ಓದಿ: T20 World Cup 2022: ಕ್ರಿಕೆಟಿಗರ ಜೊತೆ ರಾಷ್ಟ್ರಗೀತೆಗೆ ದನಿಗೂಡಿಸುವ ಈ ಮಕ್ಕಳು ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಮಾಹಿತಿ


ಉತ್ತಮ ಬೌಲಿಂಗ್​ -ಫಿಲ್ಡಿಂಗ್​ ಮಾಡಿದ ನೆದರ್ಲ್ಯಾಂಡ್ಸ್:


ಇನ್ನು, ಕ್ರಿಕೆಟ್​ ಶಿಶುಗಳೆಂದು ಕರೆಸಿಕೊಂಡರೂ ಸಹ ಭಾರತದಂತಹ ಬಲಿಷ್ಠ ದೇಶದ ಎದುರು ನೆದರ್ಲ್ಯಾಂಡ್ಸ್ ತಂಡವು ಉತ್ತಮ ಬೌಲಿಂಗ್ ಮತ್ತು ಕ್ಷೇತ್ರರಕ್ಷಣೆ ಮಾಡಿದೆ. ನೆದರ್ಲ್ಯಾಂಡ್ಸ್ ಪರ ಫ್ರೆಡ್ ಕ್ಲಾಸೆನ್ ಮತ್ತು ಪಾಲ್ ವ್ಯಾನ್ ಮಿಕೆರೆನ್ ತಲಾ 1 ವಿಕೆಟ್​ ಪಡೆದರು. ಅಲ್ಲದೇ ಉತ್ತಮ ಕ್ಷೇತ್ರರಕ್ಷಣೆ ಸಹ ಮಾಡುವ ಮೂಲಕ ಮಿಂಚಿದರು.


ಇದನ್ನೂ ಓದಿ: T20 World Cup 2022: ಟಿ20 ವಿಶ್ವಕಪ್​ನ ಡೇಂಜರಸ್​ ಆಟಗಾರರು, ಇವರು ನಿಂತ್ರೆ ಎದುರಾಳಿ ಗೆಲ್ಲೋ ಚಾನ್ಸೇ ಇಲ್ಲ!


IND vs NED ಪ್ಲೇಯಿಂಗ್​ 11:


ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ದಿನೇಶ್ ಕಾರ್ತಿಕ್, ಅಕ್ಷರ್ ಪಟೇಲ್, ಆರ್. ಅಶ್ವಿನ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್.


ನೆದರ್ಲ್ಯಾಂಡ್ಸ್ ತಂಡ:  ವಿಕ್ರಮಜಿತ್ ಸಿಂಗ್, ಮ್ಯಾಕ್ಸ್ ಓ ಡೌಡ್, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ಸಿ & ಡಬ್ಲ್ಯೂಕೆ), ಕಾಲಿನ್ ಅಕರ್ಮನ್, ಬಾಸ್ ಡಿ ಲೀಡ್, ಟಿಮ್ ಪ್ರಿಂಗಲ್, ಲೋಗನ್ ವ್ಯಾನ್ ಬೀಕ್, ಶರೀಜ್ ಅಹ್ಮದ್, ಫ್ರೆಡ್ ಕ್ಲಾಸೆನ್ ಮತ್ತು ಪಾಲ್ ವ್ಯಾನ್ ಮಿಕೆರೆನ್.

Published by:shrikrishna bhat
First published: