• ಹೋಂ
 • »
 • ನ್ಯೂಸ್
 • »
 • Breaking News
 • »
 • 82ರ ಹರೆಯದಲ್ಲಿ ಬಾಹ್ಯಾಕಾಶ ಉಡ್ಡಯನ ನಡೆಸಿದ ವಾಲಿ ಫಂಕ್..! ಸಾಧಿಸುವ ಛಲವಿದ್ದರೆ ವಯಸ್ಸು ಲೆಕ್ಕಕ್ಕೇ ಬರಲ್ಲ

82ರ ಹರೆಯದಲ್ಲಿ ಬಾಹ್ಯಾಕಾಶ ಉಡ್ಡಯನ ನಡೆಸಿದ ವಾಲಿ ಫಂಕ್..! ಸಾಧಿಸುವ ಛಲವಿದ್ದರೆ ವಯಸ್ಸು ಲೆಕ್ಕಕ್ಕೇ ಬರಲ್ಲ

ಗಗನಯಾತ್ರಿಗಳಲ್ಲಿ ಫಂಕ್ ಅತಿ ಕಿರಿಯ ವಯಸ್ಸಿನವರಾಗಿದ್ದರು ಮತ್ತು ಮೂರನೇ ಸ್ಥಾನದಲ್ಲಿದ್ದರು. ಆದರೆ ಮಹಿಳಾ ಗಗನ ಯಾತ್ರಿಗಳಿಗೆ ನಾಸಾ ಬೆಂಬಲ ನೀಡದ ಕಾರಣ ಇಲ್ಲಿಯೇ ಮೊಟಕುಗೊಂಡಿತು.

ಗಗನಯಾತ್ರಿಗಳಲ್ಲಿ ಫಂಕ್ ಅತಿ ಕಿರಿಯ ವಯಸ್ಸಿನವರಾಗಿದ್ದರು ಮತ್ತು ಮೂರನೇ ಸ್ಥಾನದಲ್ಲಿದ್ದರು. ಆದರೆ ಮಹಿಳಾ ಗಗನ ಯಾತ್ರಿಗಳಿಗೆ ನಾಸಾ ಬೆಂಬಲ ನೀಡದ ಕಾರಣ ಇಲ್ಲಿಯೇ ಮೊಟಕುಗೊಂಡಿತು.

ಗಗನಯಾತ್ರಿಗಳಲ್ಲಿ ಫಂಕ್ ಅತಿ ಕಿರಿಯ ವಯಸ್ಸಿನವರಾಗಿದ್ದರು ಮತ್ತು ಮೂರನೇ ಸ್ಥಾನದಲ್ಲಿದ್ದರು. ಆದರೆ ಮಹಿಳಾ ಗಗನ ಯಾತ್ರಿಗಳಿಗೆ ನಾಸಾ ಬೆಂಬಲ ನೀಡದ ಕಾರಣ ಇಲ್ಲಿಯೇ ಮೊಟಕುಗೊಂಡಿತು.

 • Share this:

  ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಛಲವಿದ್ದರೆ ವಯಸ್ಸು ಅದಕ್ಕೆ ನಿರ್ಬಂಧವಾಗುವುದಿಲ್ಲ ಎಂಬುದನ್ನು 82ರ ಹರೆಯದ ವಾಲಿ ಫಂಕ್ ಸಂಪೂರ್ಣ ವಿಶ್ವಕ್ಕೆ ಮನದಟ್ಟು ಮಾಡಿದ್ದಾರೆ. ಜೆಫ್ ಬೆಜೋಸ್‌ರೊಂದಿಗೆ ನಡೆಸಿದ ಬಾಹ್ಯಾಕಾಶ ಹಾರಾಟದಲ್ಲಿ ತಮ್ಮ ಹರೆಯದ ಕನಸನ್ನು ನನಸು ಮಾಡಿಕೊಂಡಿದ್ದಾರೆ. ಯಶಸ್ವಿ ಉಡ್ಡಯನ ಮುಗಿಸಿ ಬಾಹ್ಯಾಕಾಶ ನೌಕೆ ಭೂಮಿಗೆ ಲ್ಯಾಂಡ್ ಆಗುತ್ತಿರುವಂತೆ ವಾಲಿಯ ಹರುಷಕ್ಕೆ ಪಾರವೇ ಇರಲಿಲ್ಲ. ಕೊನೆಗೂ ನಾನು ಸಾಧಿಸಿಯೇ ಬಿಟ್ಟೆ ಎಂಬ ತೃಪ್ತಿ ಅವರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಈ ಯಾನ ಕೈಗೊಳ್ಳಲು ನಾನು ಬಹಳಷ್ಟು ಶ್ರಮಪಟ್ಟಿರುವೆ. ವಿಶ್ವಾದ್ಯಂತ ಹಲವಾರು ಗಗನಯಾತ್ರಿ ತರಬೇತಿಗಳನ್ನು ನಾನು ಕೈಗೊಂಡಿರುವೆ. ಬೇರೆಯವರು ಮಾಡಿದ್ದಕ್ಕಿಂತಲೂ ಅತ್ಯುತ್ತಮವಾಗಿ ನಾನು ಸಾಧಿಸಿರುವೆ. ಇನ್ನಷ್ಟು ಹೆಚ್ಚಿನ ಅವಕಾಶಕ್ಕಾಗಿ ಕಾಯುತ್ತಿರುವೆ ಎಂಬುದು ವಾಲಿ ಫಂಕ್ ನುಡಿಯಾಗಿದೆ.


  ಗಗನ ಯಾತ್ರಿಯಾಗಲು ಪಟ್ಟ ಶ್ರಮ


  1960ರಿಂದ ಫಂಕ್ ಬಾಹ್ಯಾಕಾಶ ಯಾತ್ರೆ ನಡೆಸಲು ಕನಸು ಕಂಡವರು. ಮಹಿಳೆಯರ ದೇಹವು ಬಾಹ್ಯಾಕಾಶದಲ್ಲಿ ಹೇಗೆ ಹಿಡಿದಿಡಲ್ಪಡುತ್ತವೆ ಎಂಬ ಸಂವೇದನಾ ಅಭಾವ ಪರೀಕ್ಷೆಗೆ ಮಹಿಳಾ ಪೈಲಟ್ ಜೆರಿ ಕೋಬ್ ಒಳಪಡುತ್ತಿದ್ದಾರೆ ಎಂಬುದನ್ನು ಲೈಫ್ ನಿಯತಕಾಲಿಕೆಯಲ್ಲಿ ಫಂಕ್ ಓದಿದರು. ಆಗ ಫಂಕ್‌ಗೆ ಅನ್ನಿಸಿಬಿಟ್ಟಿತ್ತು. “ನಾನು ನಿಜವಾಗಿಯೂ ಮಾಡಬೇಕಾಗಿರುವುದನ್ನು ಇದನ್ನೇ ಎಂಬುದು”. ಏಕೆಂದರೆ 60ರ ದಶಕದಲ್ಲಿ ಮಹಿಳೆಯರಿಗೆ ಕೆಲವೊಂದು ನಿರ್ಬಂಧನೆಗಳಿತ್ತು. ಆ ನಿರ್ಬಂಧನೆಗಳ ಹೊರತಾಗಿಯೂ ಫಂಕ್ ಗಗನ ಯಾತ್ರಿಯ ಕನಸು ಭದ್ರವಾಗಿ ಮನದಲ್ಲಿ ಅಚ್ಚೊತ್ತಿತ್ತು.


  ಇದನ್ನೂ ಓದಿ:Karnataka Rains: ಮಲೆನಾಡಲ್ಲಿ ಮಳೆಯ ಆರ್ಭಟ; ಕುಸಿದ ರಸ್ತೆ- ಮನೆಗಳು, ಮುಳುಗಿದ ಸೇತುವೆಗಳು

  ತನ್ನೊಂದಿಗೆ ನುರಿತ ಪೈಲಟ್ ಜೊತೆಗೆ ಇದ್ದುದರಿಂದ ಈ ಪರೀಕ್ಷೆಯಲ್ಲಿ ಪಾಲ್ಗೊಳ್ಳಲು ಆಕೆ ವೈದ್ಯರನ್ನು ಭೇಟಿಯಾದರು. ನಾಸಾದ ಮರ್ಕ್ಯುರಿ ಪ್ರೊಗ್ರಾಮ್‌ಗೆ ಪುರುಷ ಗಗನಯಾತ್ರಿಗಳನ್ನು ಪರಿಶೀಲನೆ ನಡೆಸಿ ಪರಿಣಿತರಾಗಿದ್ದ ರಾಂಡಿ ಲೊವ್‌ಲೇಸ್ ವಾಲಿಯನ್ನು ಪರಿಶೀಲಿಸಿದರು. ಆದರೆ ಆ ಸಮಯದಲ್ಲಿ ಇಂತಹ ತರಬೇತಿಗೆ ಒಳಪಡಲು ಮಿಲಿಟರಿ ಪೈಲಟ್ ಆಗಿ ಅರ್ಹತೆ ಹೊಂದಬೇಕಿತ್ತು. ಮಹಿಳೆಯರಿಗೆ ಇದು ಅಸಾಧ್ಯವಾದ ಕೆಲಸ ಎಂಬ ಭಾವನೆ ಆಗಿನ ಕಾಲದಲ್ಲಿತ್ತು. ಒಂದು ರೀತಿಯ ಶೀತಲ ಸಮರ ಆ ಸಮಯದಲ್ಲಿ ಏರ್ಪಟ್ಟಿತ್ತು.


  ಈ ಸಂದರ್ಭದಲ್ಲಿಯೇ ಸೋವಿಯತ್ ಒಕ್ಕೂಟವು ಬಾಹ್ಯಾಕಾಶಕ್ಕೆ ಮಹಿಳೆಯರನ್ನು ಕಳುಹಿಸಲು ತಯಾರಿ ನಡೆಸುತ್ತಿದೆ ಎಂಬುದನ್ನು ವಾಲ್ಲಿ ತಿಳಿದುಕೊಂಡರು. ಇದೇ ಸಮಯದಲ್ಲಿ ಬಾಹ್ಯಾಕಾಶದಲ್ಲಿ ಮಹಿಳಾ ಗಗನಯಾತ್ರಿಗಳಿಗೂ ಅವಕಾಶ ನೀಡಬೇಕೆಂಬ ಕಲ್ಪನೆಯನ್ನು ರಾಂಡಿ ಲೊವ್‌ಲೇಸ್ ಪ್ರಸ್ತುತಪಡಿಸಿದರು. ಕೋಬ್ ಯಶಸ್ವಿಯಾಗಿ ಬಾಹ್ಯಾಕಾಶದಲ್ಲಿ ಉಡ್ಡಯನ ನಡೆಸಿದ ನಂತರ ಮಹಿಳೆಯರು ಬಾಹ್ಯಾಕಾಶದಲ್ಲಿ ಪುರುಷ ಗಗನ ಯಾತ್ರಿಗಳಂತೆ ಉಡ್ಡಯನ ನಡೆಸಬಹುದು ಎಂಬುದನ್ನು ರಾಂಡಿ ಕಂಡುಕೊಂಡರು.


  ಇದನ್ನೂ ಓದಿ:Kitchen Hacks: ಹಸಿ ಬಟಾಣಿಯನ್ನು ಒಂದಿಡೀ ವರ್ಷ ಹಾಳಾಗದಂತೆ ಇಡಬಹುದು, ಹೀಗೆ ಮಾಡಿ..!

  ನಾಸಾ ತಿರಸ್ಕಾರ


  ಇದೇ ಪರೀಕ್ಷೆಯನ್ನು ಇನ್ನೂ ಕೆಲ ಮಹಿಳೆಯರ ಮೇಲೆ ನಡೆಸಲು ರಾಂಡಿ ಬಯಸಿದರು. ಅದರಂತೆ 35ಕ್ಕಿಂತ ಕಡಿಮೆ ವಯಸ್ಸಿನ, ಉತ್ತಮ ಆರೋಗ್ಯವಿರುವ, ಅದೇ ರೀತಿ 2,000 ಗಂಟೆಗಿಂತ ಹೆಚ್ಚಿನ ಹಾರಾಟವನ್ನು ಪೂರ್ಣಗೊಳಿಸಿರುವ ಮಹಿಳೆಯರ ಅಗತ್ಯವಿದೆ ಎಂಬುದನ್ನು ರಾಂಡಿ ಘೋಷಿಸಿದರು. ಫಂಕ್ ರಾಂಡಿರನ್ನು ಭೇಟಿಯಾದರು ಹಾಗೂ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸುವ 25 ಮಹಿಳಾ ಗಗನ ಯಾತ್ರಿಗಳಲ್ಲಿ ಒಬ್ಬರಾದರು. ಆದರೆ ರಾಂಡಿಯ ಈ ಉದ್ದೇಶಕ್ಕೆ ನಾಸಾ ಬೆಂಬಲ ನೀಡಲಿಲ್ಲ. ಗಗನಯಾತ್ರಿಗಳಲ್ಲಿ ಫಂಕ್ ಅತಿ ಕಿರಿಯ ವಯಸ್ಸಿನವರಾಗಿದ್ದರು ಮತ್ತು ಮೂರನೇ ಸ್ಥಾನದಲ್ಲಿದ್ದರು. ಆದರೆ ಮಹಿಳಾ ಗಗನ ಯಾತ್ರಿಗಳಿಗೆ ನಾಸಾ ಬೆಂಬಲ ನೀಡದ ಕಾರಣ ಇಲ್ಲಿಯೇ ಮೊಟಕುಗೊಂಡಿತು.


  ಗರಿಗೆದರಿದ ಬಾಹ್ಯಾಕಾಶದ ಆಸೆ


  1961ನೇ ಇಸವಿಯ ಸಪ್ಟೆಂಬರ್ ತಿಂಗಳಲ್ಲಿ ಮರ್ಕ್ಯುರಿ 13 ಬಾಹ್ಯಾಕಾಶಕ್ಕೆ ಹೋಗುವ ಯೋಜನೆಯನ್ನು ಸಿದ್ಧಪಡಿಸಿತು. ಕೋಬ್ ತನ್ನ ಸಹ ಗಗನ ಯಾತ್ರಿಗಳಿಗೆ ಈ ಅವಕಾಶದ ಬಗ್ಗೆ ತಿಳಿಸಿದರು. ಆದರೆ ಈ ಪ್ರಯತ್ನವೂ ಕೈಗೂಡಲಿಲ್ಲ. ನಾಸಾ ಮಹಿಳೆಯರಿಗಾಗಿ ಪರೀಕ್ಷಾ ತರಬೇತಿಗಳನ್ನು ನಡೆಸಲು ಮನಸ್ಸು ಮಾಡಲಿಲ್ಲ. ಅಂತೆಯೇ ಮಿಲಿಟರಿ ಪಡೆಯು ರಾಂಡಿಗೆ ತನ್ನ ಸೌಲಭ್ಯವನ್ನು ನೀಡಲು ಹಿಂಜರಿಯಿತು. ಅದೇ ರೀತಿ ಸರಕಾರಿ ಅಧಿಕಾರಿಗಳು ಈ ಕುರಿತು ಮುಂದುವರಿಯಲು ಹಿಂದೇಟು ಹಾಕಿದರು.


  ಚಂದ್ರನ ಮೇಲೆ ಮನುಷ್ಯನನ್ನು ಇಳಿಸುವತ್ತ ನಾಸಾ ಗಮನ ಹರಿಸಿದೆ ಎಂಬ ಪುರಾವೆ ನೀಡಿತು. ಭೂಮಿಯ ಸುತ್ತ ಪರಿಭ್ರಮಿಸಿದ ಅಮೇರಿಕಾದ ಜಾನ್ ಗ್ಲೆನ್ ಮಹಿಳೆಯರಿಗೂ ಬಾಹ್ಯಾಕಾಶ ಯಾನದಲ್ಲಿ ಅವಕಾಶ ನೀಡಬೇಕೆಂದು ಸಲಹೆ ನೀಡಿದರು. ಜಾನ್ ಗ್ಲೆನ್ ಮಾತು ಫಂಕ್ ಮನದಲ್ಲಿ ಸಾಧಿಸುವ ಕಿಚ್ಚನ್ನು ಹಚ್ಚಿತು. ಆಕೆ ಗಗನ ಯಾತ್ರಿಯಾಗಲು ಸಿದ್ಧಳಾಗಬೇಕಾದ ಪರೀಕ್ಷೆಗಳಿಗೆ ತಯಾರಿ ನಡೆಸಿಕೊಂಡರು. ಒಂದಲ್ಲ ಒಂದು ದಿನ ಗಗನ ಯಾತ್ರಿಯಾಗಿ ಉಡ್ಡಯನ ನಡೆಸುತ್ತೇನೆಂಬ ಭರವಸೆಯನ್ನು ಫಂಕ್ ಹೊಂದಿದ್ದರು.
  ಅಂತೂ ಅವರು ಪಟ್ಟ ಪರಿಶ್ರಮಕ್ಕೆ ಇಳಿವಯಸ್ಸಿನಲ್ಲಿ ಫಲ ದೊರೆತಿದೆ. ಆದರೂ, ಇನ್ನಷ್ಟು ಎತ್ತರಕ್ಕೆ ಉಡ್ಡಯನ ನಡೆಸಬೇಕೆಂಬ ಅವರ ಬಯಕೆ ಇನ್ನೂ ಹಸಿರಾಗಿದೆ.

  top videos
   First published: