• ಹೋಂ
  • »
  • ನ್ಯೂಸ್
  • »
  • Breaking News
  • »
  • ’’ಕಾಂಗ್ರೆಸ್​ನವರು ಮನೆ ಹತ್ರ ಬಂದರೆ ನನ್ನ ಹೆಂಡತಿ ರಾಖಿ ಕಟ್ಟುತ್ತೇನೆ ಎಂದು ಹೇಳಿದ್ದಾಳೆ’’ ಸಿ.ಟಿ.ರವಿ ವ್ಯಂಗ್ಯ

’’ಕಾಂಗ್ರೆಸ್​ನವರು ಮನೆ ಹತ್ರ ಬಂದರೆ ನನ್ನ ಹೆಂಡತಿ ರಾಖಿ ಕಟ್ಟುತ್ತೇನೆ ಎಂದು ಹೇಳಿದ್ದಾಳೆ’’ ಸಿ.ಟಿ.ರವಿ ವ್ಯಂಗ್ಯ

 ಸಿ.ಟಿ.ರವಿ ಚಿಕ್ಕಮಗಳೂರಿನ ನಿವಾಸಕ್ಕೆ ಮುತ್ತಿಗೆ ಹಾಗೂ ಪ್ರತಿಭಟನೆ ಮಾಡಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ದಾರಿ ಮಧ್ಯದಲ್ಲಿ ತಡೆದ ಪೊಲೀಸರು ಚಿಕ್ಕಮಗಳೂರಿನ ಐಜಿ ರಸ್ತೆಯಲ್ಲಿ ತಡೆಹಾಕಿದರು. ಸಿಟಿ ರವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ರಸ್ತೆ ಮಧ್ಯೆ ಹಗ್ಗ, ಬ್ಯಾರಿಕೇಡ್ ಹಾಕಿ ತಡೆದ ನಂತರ ಬಂಧಿಸಿದ್ದಾರೆ.

ಮುಂದೆ ಓದಿ ...
  • Share this:

    ದೆಹಲಿ:  ನಾನು ನೆಹರು ಚಾರಿತ್ರ್ಯ ಹರಣ ಮಾಡಿಲ್ಲ ಮೋದಿ ಹೆಸರು ಶೌಚಾಲಯಕ್ಕೆ ಇಡಬೇಕು ಎಂದು ಕಾಂಗ್ರೆಸ್​ ಹಿರಿಯ ನಾಯಕ ಹರಿಪ್ರಸಾದ್ ಹೇಳಿದ್ದರು, ಆ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡಿದೆ ಅಷ್ಟೇ. ಮೋದಿ ಅವರು ಇಡೀ ದೇಶದಾದ್ಯಂತ ಗೌರವಯುತ ಕೆಲಸ ಮಾಡುತ್ತಿದ್ದಾರೆ. ಮೆಡಿಕಲ್ ಕಾಲೇಜುಗಳನ್ನು ಸೇರಿ ನೂರಾರು ಯೋಜನೆ ಅನುಷ್ಠಾನಕ್ಕೆ ತಂದಿದ್ದಾರೆ. 

    ಆದರೆ ಈ ಕ್ರಾಂಗ್ರೆಸ್​ ಪಕ್ಷದವರು 217 ಯೋಜನೆಗಳಿಗೆ ಗಾಂಧಿ ಪರಿವಾರದ ಹೆಸರು ಇಟ್ಟಿದ್ದಾರೆ. ಎಲ್ಲಾ ಯೋಜನೆಗಳಿಗೂ ಕಾಂಗ್ರೆಸ್​ ಪಕ್ಷದವರ ಕೊಡುಗೆ ಇದೆಯೇ ಎನ್ನುವುದು ನನ್ನ ಪ್ರಶ್ನೆ ಎಂದು ಕಿಡಿಕಾರಿದರು.

    ಇಷ್ಟೊಂದು ದೊಡ್ಡ ದೇಶಕ್ಕೆ ಗಾಂಧಿ ಪರಿವಾರದವರ ಬಿಟ್ಟರೆ ಯಾರ ಕೊಡುಗೆಯೂ ಇಲ್ಲವೇ, ದೇಶಕ್ಕೆ ಬೇರೆ ಯಾರೂ ತಮ್ಮ ಕೊಡುಗೆಯನ್ನೇ ನೀಡಿಲ್ಲವೇ. 271 ಯೋಜನೆಗೂ ಅವರ ಕುಟುಂಬದವರ ಹೆಸರನ್ನೇ ಇಟ್ಟಿರುವುದರ ಬಗ್ಗೆ ಮಾತನಾಡಿದ್ದೇನೆ ಎಂದರು.

    ಗಾಂಧಿ ಅವರ ವಿಚಾರಕ್ಕೆ ಹೋಲಿಸಿ ನೋಡಿದರೆ ನೆಹರು ಏನೇನು ಅಲ್ಲವೇ ಅಲ್ಲ, ನೆಹರು ಹಾಗೇ ಇದ್ದಿದ್ದರೆ, ಬದುಕಿದ್ದಿದ್ದರೆ ಚರ್ಚೆ ಆಗಲಿ, ಗಾಂಧಿಯವರಿಗೆ ಇದ್ದ ಆರ್ಥಿಕ ಚಿಂತನೆ ನೆಹರೂಗೆ ಇರಲಿಲ್ಲ. ನಾನು ಬಹಿರಂಗವಾಗಿಯೇ ಈ ಚರ್ಚೆಗೆ ಸಿದ್ದವಿದ್ದೇನೆ. ಚರ್ಚೆ ಬಿಟ್ಟು ಕಾಂಗ್ರೆಸ್ ನಾಯಕರು ಅವಾಚ್ಯ ಪದಗಳಿಂದ ನನ್ನ ವಿರುದ್ದ ಟೀಕೆ ಮಾಡುತ್ತಾರೆ ಎಂದು ಹೇಳಿದರು.

    ನಾನು ಗಾಂಧಿ ಅವರ ತತ್ವ ಚಿಂತನೆಗಳಿಗೆ ಹತ್ತಿರವಿರುವ ಒಳ್ಳೆ ಯೋಜನೆಗಳನ್ನು ಸ್ವೀಕರಿಸಿದ್ದೇವೆ. ಅವರು ಮಾಡಿದ ಅನೇಕ ತಪ್ಪುಗಳನ್ನು ತಿದ್ದುತಿದ್ದೇವೆ. ರಾಷ್ಟ್ರ ಭಕ್ತರು ಮತ್ತು ಭಯೋತ್ಪಾದಕರಿಗೂ ವ್ಯತಾಸ ಗೊತ್ತಾಗದ ಅಸ್ವಸ್ಥತೆ ಕಾಂಗ್ರೆಸ್ ನಾಯಕರಿಗೆ ಬಂದೊದಗಿದೆ.  ಒಂದು ಕುಟುಂಬದ ಗುಲಾಮಗಿರಿತನದಿಂದ ಮಾನಸಿಕ ಅಸ್ವಸ್ಥತೆ ಬಂದಿರಬಹುದು ಅಥವಾ ಸತತ ಸೋಲಿನಿಂದ ಕಂಗೆಟ್ಟಿರುವ ಕಾಂಗ್ರೆಸ್​ಗೆ ಮಾನಸಿಕ ಆಘಾತ ಉಂಟಾಗಿರಬಹುದು ಎಂದು ಲೇವಡಿ ಮಾಡಿದರು.

    ಯಾವುದೋ ಚರ್ಚೆಯನ್ನ ಎಲ್ಲಿಗೋ ತೆಗೆದುಕೊಂಡು ಹೋಗುವುದು ಕಾಂಗ್ರೆಸ್​ ಜಾಯಮಾನ,  ಚರ್ಚೆ ಬಿಟ್ಟು ಸುಮ್ಮನೆ ಟೀಕೆ ಮಾಡಬಾರದು. ಈಗ ನನ್ನ ಮೇಲೆ ಅಕ್ರಮ ಆಸ್ತಿ ಗಳಿಕೆ ಆರೋಪ ಮಾಡುತ್ತಿದ್ದಾರೆ. ಈ ಆರೋಪವನ್ನು ಸಾಬೀತು ಮಾಡಿದರೆ ನಾನು ಎಲ್ಲಾ ಆಕ್ರಮ ಆಸ್ತಿಯನ್ನು ದಾನ ಮಾಡುವೆ. ನಾನೇನು ಅಕ್ರಮ ಆಸ್ತಿ ಮಾಡಿ ಜೈಲಿಗೆ ಹೋಗಿ ಬೇಲ್ ತಗೆದುಕೊಂಡು ಬಂದಿಲ್ಲ ಎಂದು ಕಾಂಗ್ರೆಸ್​ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಅವರನ್ನು ಪರೋಕ್ಷವಾಗಿ ತಿವಿದರು.

    ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ ಪಕ್ಷ ಎಂದು ಹೇಳಿ ಕೊಳ್ಳುವ ಮೂಲಕ ಕಾಂಗ್ರೆಸ್ ಮೋಸ ಮಾಡುತ್ತಿದೆ. ಅವರೇನು ಹೋರಾಟವನ್ನು ಗುತ್ತಿಗೆ ಅಂದುಕೊಂಡಿದ್ದಾರಾ ಎಂದು ಪ್ರಶ್ನಿಸಿದರು. ಕಾಂಗ್ರೆಸೇತರ ವ್ಯಕ್ತಿಗಳೇ ಹೆಚ್ಚಾಗಿ ಸ್ವಾತಂತ್ರ್ಯ ಹೋರಾಟಕ್ಕೆ ಕೊಡುಗೆ ಕೊಟ್ಟಿದ್ದಾರೆ ಎಂದರು.

    ಯಾವುದೇ ವಿಚಾರ ಮುನ್ನೆಲೆಗ ಬಂದರೂ ಬಿಜೆಪಿ ಪಾತ್ರ ಏನು ಅಂತಾ ಕೇಳುತ್ತಾರೆ, ಹಾಗಿದ್ದರೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಕಾಂಗ್ರೆಸ್ ಪಾತ್ರ ಏನು? ಕಾಂಗ್ರೆಸ್ ಸ್ಥಾಪಕ ಎಓ ಹ್ಯೂಮ್ ಭಾರತೀಯನೇ ಅಲ್ಲ ಎಂದು ಹೇಳಿದರು.

    ನೆಹರೂ ಹಾಗೂ ಕಾಂಗ್ರೆಸ್​ ನಾಯಕರ ಬಗ್ಗೆ ಹಗುರವಾಗಿ ಮಾತನಾಡಿರುವ ಸಿ.ಟಿ.ರವಿ ವಿರುದ್ದ  ಯೂಥ್ ಕಾಂಗ್ರೆಸ್ ನಾಯಕರು ಪ್ರತಿಭಟನೆ ಹಾಗೂ ಮನೆ ಮುತ್ತಿಗೆ ಮಾಡುವುದಾಗಿ ಹೇಳಿದ್ದಾರೆ, ’’ಅವರುಗಳು ಆರಾಮವಾಗಿ ನಮ್ಮ ಮನೆ ಬಳಿಗೆ ಬರಲಿ. ನನ್ನ ಪತ್ನಿ ರಾಕಿ ಕಟ್ಟಿ, ಸಿಹಿ ಕೊಟ್ಟು ಕಳಿಹಿಸುತ್ತೇನೆ ಎಂದು ಹೇಳಿದ್ದಾಳೆ’’, ಎಂದರು

    ಇದನ್ನೂ ಓದಿ: ತ್ರಿಪುರಾ ರಾಜ್ಯ ಕಾಂಗ್ರೆಸ್​​ ಅಧ್ಯಕ್ಷ ರಾಜಿನಾಮೆ: ಟಿಎಂಸಿ ಪಕ್ಷ ಸೇರುವ ಸಾಧ್ಯತೆ? ಕಾಂಗ್ರೆಸ್​ಗೆ ಮತ್ತೊಂದು ಆಘಾತ

    ಸಿ.ಟಿ.ರವಿ ಚಿಕ್ಕಮಗಳೂರಿನ ನಿವಾಸಕ್ಕೆ ಮುತ್ತಿಗೆ ಹಾಗೂ ಪ್ರತಿಭಟನೆ ಮಾಡಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ದಾರಿ ಮಧ್ಯದಲ್ಲಿ ತಡೆದ ಪೊಲೀಸರು ಚಿಕ್ಕಮಗಳೂರಿನ ಐಜಿ ರಸ್ತೆಯಲ್ಲಿ ತಡೆಹಾಕಿದರು. ಸಿಟಿ ರವಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಕಾರ್ಯಕರ್ತರನ್ನು ರಸ್ತೆ ಮಧ್ಯೆ ಹಗ್ಗ, ಬ್ಯಾರಿಕೇಡ್ ಹಾಕಿ ತಡೆದ ನಂತರ ಬಂಧಿಸಿದ್ದಾರೆ.

    ವರದಿ: ಧರಣೇಶ್ ಬಿ.ಎನ್​.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    First published: