• Home
 • »
 • News
 • »
 • breaking-news
 • »
 • ಕೋಲಾರ; ಅಮೃತ್ ಸಿಟಿ ಯೋಜನೆಯಲ್ಲಿ ಭಾರೀ ಗೋಲ್ ಮಾಲ್, ಅಧಿಕಾರಿಗಳ ಚಳಿಬಿಡಿಸಿದ ಸಂಸದ ಮುನಿಸ್ವಾಮಿ

ಕೋಲಾರ; ಅಮೃತ್ ಸಿಟಿ ಯೋಜನೆಯಲ್ಲಿ ಭಾರೀ ಗೋಲ್ ಮಾಲ್, ಅಧಿಕಾರಿಗಳ ಚಳಿಬಿಡಿಸಿದ ಸಂಸದ ಮುನಿಸ್ವಾಮಿ

ಅಮೃತ್ ಸಿಟಿ ಯೋಜನೆಯಡಿ ಗುತ್ತಿಗೆ ಪಡೆದಿರುವ ಕಾಮಗಾರಿ ವೀಕ್ಷಣೆಗೆ, ರಾಜ್ಯ ಸರ್ಕಾರ ಐಪಿ ಗ್ಲೋಬಲ್ ಎನ್ನುವ ಖಾಸಗಿ ಸಂಸ್ಥೆಗೆ ಗುಣಮಟ್ಟ ಪರಿಶೀಲನೆಗೆ ಅನುಮತಿ ನೀಡಿದ್ದು,  ಗುತ್ತಿಗೆ ಪಡೆದ ಸಂಸ್ತೆಯೂ ಮೇಲುಸ್ತುವಾರಿ ನಿರ್ಲಕ್ಷ್ಯವಹಿಸಿ ಅಕ್ರಮದಲ್ಲಿ ಪಾಲು ಪಡೆದುಕೊಂಡಿದೆ.

ಅಮೃತ್ ಸಿಟಿ ಯೋಜನೆಯಡಿ ಗುತ್ತಿಗೆ ಪಡೆದಿರುವ ಕಾಮಗಾರಿ ವೀಕ್ಷಣೆಗೆ, ರಾಜ್ಯ ಸರ್ಕಾರ ಐಪಿ ಗ್ಲೋಬಲ್ ಎನ್ನುವ ಖಾಸಗಿ ಸಂಸ್ಥೆಗೆ ಗುಣಮಟ್ಟ ಪರಿಶೀಲನೆಗೆ ಅನುಮತಿ ನೀಡಿದ್ದು,  ಗುತ್ತಿಗೆ ಪಡೆದ ಸಂಸ್ತೆಯೂ ಮೇಲುಸ್ತುವಾರಿ ನಿರ್ಲಕ್ಷ್ಯವಹಿಸಿ ಅಕ್ರಮದಲ್ಲಿ ಪಾಲು ಪಡೆದುಕೊಂಡಿದೆ.

ಅಮೃತ್ ಸಿಟಿ ಯೋಜನೆಯಡಿ ಗುತ್ತಿಗೆ ಪಡೆದಿರುವ ಕಾಮಗಾರಿ ವೀಕ್ಷಣೆಗೆ, ರಾಜ್ಯ ಸರ್ಕಾರ ಐಪಿ ಗ್ಲೋಬಲ್ ಎನ್ನುವ ಖಾಸಗಿ ಸಂಸ್ಥೆಗೆ ಗುಣಮಟ್ಟ ಪರಿಶೀಲನೆಗೆ ಅನುಮತಿ ನೀಡಿದ್ದು,  ಗುತ್ತಿಗೆ ಪಡೆದ ಸಂಸ್ತೆಯೂ ಮೇಲುಸ್ತುವಾರಿ ನಿರ್ಲಕ್ಷ್ಯವಹಿಸಿ ಅಕ್ರಮದಲ್ಲಿ ಪಾಲು ಪಡೆದುಕೊಂಡಿದೆ.

 • Share this:

  ಕೋಲಾರ: ನಗರದಲ್ಲಿ ಜಾರಿಯಲ್ಲಿರುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಅಮೃತ್ ಸಿಟಿ ಯೋಜನೆಯಲ್ಲಿ ಕೊಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿರು ವುದು ಬೆಳಕಿಗೆ ಬಂದಿದೆ. ನಗರದಾದ್ಯಂತ 11 ಪಾರ್ಕ್‍ಗಳನ್ನ ಅಭಿವೃದ್ದಿ ಪಡಿಸಲು 6 ಕೋಟಿ 90 ಲಕ್ಷ ಹಣ ಬಿಡುಗಡೆಯಾಗಿದ್ದು,  ನಗರಾಭಿವೃದ್ದಿ ಕೋಶ ಇಲಾಖೆ ಯ ಅಧಿಕಾರಿಗಳ ಭಾರೀ ಭ್ರಷ್ಟಾಚಾರದಿಂದ ಪಾರ್ಕ್‍ಗಳು ಅಭಿವೃದ್ದಿ ಯಾಗದೆ ಹಳ್ಳ ಹಿಡಿದಿದೆ. ಮೊದಲನೆಯ ಉದಾಹರಣೆಯಾಗಿ  ಕೋಲಾರದ ಕುಡಾ ಲೇಔಟ್‍ನಲ್ಲಿ 1 ಕೋಟಿ 20 ಲಕ್ಷ ವೆಚ್ಚದಲ್ಲಿ ಪಾರ್ಕ್‍ನಲ್ಲಿ ವಿವಿಧ ಕಾಮಗಾರಿಗಳನ್ನ ಗುತ್ತಿಗೆ ಪಡೆದ ವರ ಮೂಲಕ ನಡೆಸಲಾಗಿದೆ. ಪಾರ್ಕ್‍ನಲ್ಲಿ ವಾಕಿಂಗ್ ಪಾತ್, ಗ್ರಿಲ್‍ವರ್ಕ್, ಹಾಗೂ ಕುಳಿತುಕೊಳ್ಳುವ ಆಸನಗಳು ಕಳಪೆಯಾಗಿದೆ. ಇನ್ನು ಪಾರ್ಕ್ ನಲ್ಲಿ ಸುಂದವಾರ ಗಿಡಗಳೇ ಇಲ್ಲವಾಗಿದ್ದು, ಪಾರ್ಕ್ ತುಂಬೆಲ್ಲಾ ಗೊಬ್ಬು ಗಿಡಗಳು ಬೆಳೆದು ನಿಂತಿವೆ.


  ಕೆಲವೆಡೆ ಬಂಜರು ಭೂಮಿಯಂತೆ ಪಾರ್ಕ್ ಗಳು ನಿರ್ಮಾಣವಾಗಿದೆ. ಇನ್ನು ಹೀಗೆಯೇ 11 ಪಾರ್ಕ್‍ಗಳಲ್ಲಿಯು ಗಿಡಗಳನ್ನ ನೆಡಸದೆಯೇ. ಒಂದೊಂದು ಪಾರ್ಕ್‍ಗಳಲ್ಲಿ ಐದಾರು ಲಕ್ಷ ರೂಪಾಯಿಗಳನ್ನ ಗಿಡ ನೆಡಲು ಹಣ ಡ್ರಾ ಮಾಡಿದ್ದು, ಇದೀಗ ಪಾರ್ಕ್‍ಗಳಲ್ಲಿ ಗಿಡಗಳಿಲ್ಲದೆ ಖಾಲಿ ಜಮೀನಿನಂತೆ ಪಾರ್ಕ್‍ಗಳು ಕಾಣಸಿಗುತ್ತಿದೆ.


  ಅಮೃತ್ ಸಿಟಿ ಯೋಜನೆಯಡಿ ಗುತ್ತಿಗೆ ಪಡೆದಿರುವ ಕಾಮಗಾರಿ ವೀಕ್ಷಣೆಗೆ, ರಾಜ್ಯ ಸರ್ಕಾರ ಐಪಿ ಗ್ಲೋಬಲ್ ಎನ್ನುವ ಖಾಸಗಿ ಸಂಸ್ಥೆಗೆ ಗುಣಮಟ್ಟ ಪರಿಶೀಲನೆಗೆ ಅನುಮತಿ ನೀಡಿದ್ದು,  ಗುತ್ತಿಗೆ ಪಡೆದ ಸಂಸ್ತೆಯೂ ಮೇಲುಸ್ತುವಾರಿ ನಿರ್ಲಕ್ಷ್ಯವಹಿಸಿ ಅಕ್ರಮದಲ್ಲಿ ಪಾಲು ಪಡೆದುಕೊಂಡಿದೆ. ಇದೀಗ ಪಾರ್ಕ್‍ಗಳು ಅಭಿವೃದ್ದಿಯಾಗಲು ಬಿಡುಗಡೆಯಾಗಿರುವ ಹಣ, ಅಧಿಕಾರಿಗಳ ಹಾಗು ಗುತ್ತಿಗೆದಾರರ ಜೇಬು ಸೇರಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದ್ದು, ಪಾರ್ಕ್ ಎನ್ನುವ ಹೆಸರಿಗೆ ಕೋಲಾರದ ಪಾರ್ಕ್ ಗಳು ಸರಿಹೊಂದದ ಸ್ಥಿತಿ ನಿರ್ಮಾಣವಾಗಿದೆ.


  ಭ್ರಷ್ಟ ಅಧಿಕಾರಿಗಳ ಚಳಿಬಿಡಿಸಿದ ಸಂಸದ ಮುನಿಸ್ವಾಮಿ;


  ಕೋಟಿ ಕೋಟಿ ಲೂಟಿ ಮಾಹಿತಿ ದೊರೆತ ಹಿನ್ನಲೆ ಸಂಸದ ಎಸ್ ಮುನಿಸ್ವಾಮಿ ಸಹ ಪಾರ್ಕ್‍ಗಳಿಗೆ ಭೇಟಿ ನೀಡಿದ್ದು, ಪಾರ್ಕ್ ಗಳಲ್ಲಿನ ಕಾಮಗಾರಿ ಪರಿವೀಕ್ಷಣೆ ನಡೆಸಿದರು. ಇದೇ ವೇಳೆ  ಸ್ಥಳದಲ್ಲೆ ನಗರಾಬಿವೃದ್ದಿ ಕೋಶ ಇಲಾಖೆಯ ಇಂಜಿನಿಯರ್‍ಗಳನ್ನ ತೀವ್ರ ತರಾಟೆಗೆ ತೆಗೆದುಕೊಂಡು ಈ ಅವ್ಯವಹಾರವನ್ನ ತನಿಖೆಗೆ ಒಪ್ಪಿಸುವುದಾಗಿ ತಿಳಿಸಿದರು. ಆದರೆ ಸಂಸದರ ಆರೋಪವನ್ನ ನಗರಾಭಿವೃದ್ದಿ ಕೋಶ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ರಾಮಮೂರ್ತಿ ಅವ್ರು ತಳ್ಳಿಹಾಕಿದ್ದು, ಕಾಮಗಾರಿಯಲ್ಲಿ ಎಲ್ಲು ಕಳಪೆ  ನಡೆದಿಲ್ಲ ಎಂದಿದ್ದಾರೆ.


  ಇದನ್ನೂ ಓದಿ: ಜಮ್ಮು-ಕಾಶ್ಮೀರದಲ್ಲಿ ಮತ್ತೋರ್ವ ರಾಜಕೀಯ ಮುಖಂಡನ ಹತ್ಯೆ; ಕಳೆದ 12 ದಿನಗಳಲ್ಲಿ ಇದು 4 ನೇ ರಾಜಕೀಯ ಕೊಲೆ!


  ಅಲ್ಲದೆ ನಿರ್ವಹಣೆಯಿಲ್ಲದೆ ಗಿಡಗಳ ಬೆಳವಣಿಗೆಯು  ಆಗಿಲ್ಲ,‌ ಹಾಗಾಗಿ ಕೂಡಲೇ ಗುತ್ತಿಗೆದಾರರಿಗೆ ಸೂಚನೆ ನೀಡಿ ಗಿಡ ಬೆಳೆಸುವಂತೆ ತಿಳಿಸುತ್ತೇವೆ ಎಂದು ಮಾಡಿದ ತಪ್ಪಿಗೆ ಸಬೂಬು ನೀಡಿ ಜಾರಿಕೊಂಡಿದ್ದಾರೆ. ಇನ್ನು ನಗರಸಭೆಯಲ್ಲಿ ಆಡಳಿತಾಧಿಕಾರಿ ಇರುವ ಸಮಯದಲ್ಲಿ ಅಮೃತ್  ಸಿಟಿ ಕಾಮಗಾರಿಯಲ್ಲಿ ಅಧಿಕಾರಿಗಳು ಭಾರೀ ಅವ್ಯವಹಾರ ನಡೆಸಿದ್ದು, ಉನ್ನತ ಮಟ್ಟದ ತನಿಖೆಗೆ ನಗರಸಭೆ ಉಪಾಧ್ಯಕ್ಷ್ಯ ಪ್ರವೀಣ್ ಗೌಡ ಆಗ್ರಹಿಸಿದ್ದಾರೆ.


  ಇದನ್ನೂ ಓದಿ: ಜನರನ್ನು ಸಾಯುವಂತೆ ಮಾಡಿ ಬೂದಿ ಕೊಟ್ಟ ಬಿಜೆಪಿಗೆ ಜನಾಶೀರ್ವಾದ ಬೇಕಾ?: ಡಿ.ಕೆ. ಶಿವಕುಮಾರ್ ವ್ಯಂಗ್ಯ


  ಒಟ್ಟಿನಲ್ಲಿ ಸಂದರ ನಗರ ನಿರ್ಮಾಣಕ್ಕೆ ನಾಂದಿ ಹಾಡಲು ಕೇಂದ್ರ ಸರ್ಕಾರ ಅಮೃತ್ ಸಿಟಿ ಯೋಜನೆ ಜಾರಿಗೆ ತಂದು, ಹಣವನ್ನೇನೊ ಬಿಡುಗಡೆ ಮಾಡಿದೆ, ಆದರೆ ರಾಜ್ಯ ಸರ್ಕಾರದ ನಿರ್ಲಕ್ಷ್ಯ, ಗುತ್ತಿಗೆ ಪಡೆದವರ ಹಣದಾಸೆಯಿಂದ ಇದೀಗ ಪಾರ್ಕ್ ಗಳು ಅನಾಥವಾಗಿ, ಯಾರಿಗೂ ಉಪಯೋಗಕ್ಕೆ ಬಾರದಂತಾಗಿದೆ.


  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

  First published: