• Home
  • »
  • News
  • »
  • breaking-news
  • »
  • Hubballi: ಬಿಜೆಪಿ ಕಚೇರಿ ಮುಂದೆ ಹೈಡ್ರಾಮಾ; ಕಾಂಗ್ರೆಸ್ ಪ್ರತಿಭಟನೆಯಲ್ಲಿ ಹಾರಾಡಿದ ಕೇಸರಿ ಶಾಲು

Hubballi: ಬಿಜೆಪಿ ಕಚೇರಿ ಮುಂದೆ ಹೈಡ್ರಾಮಾ; ಕಾಂಗ್ರೆಸ್ ಪ್ರತಿಭಟನೆಯಲ್ಲಿ ಹಾರಾಡಿದ ಕೇಸರಿ ಶಾಲು

ಕಾಂಗ್ರೆಸ್ ಪ್ರತಿಭಟನೆ

ಕಾಂಗ್ರೆಸ್ ಪ್ರತಿಭಟನೆ

ಗುತ್ತಿಗೆದಾರರ ಸಾವಿನ ಮೇಲೆ ಇವರು ಇಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಧೋರಣೆಯನ್ನೇ ಅವರ ಕಾರ್ಯಕರ್ತರು ಮಾಡ್ತಿದಾರೆ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಕಿಡಿಕಾರಿದರು.

  • Share this:

ಹುಬ್ಬಳ್ಳಿ - 40 ಪರ್ಸೆಂಟ್ ಕಮಿಷನ್ (40 percent Commission Allegation) ಆರೋಪ ಮಾಡಿ ಈ ಹಿಂದೆ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು. ಇದೀಗ ಹುಬ್ಬಳ್ಳಿಯ ಗುತ್ತಿಗೆದಾರರೊಬ್ಬರು (Hubballi Contractor) ಇದೇ ಪರ್ಸಂಟೇಜ್ ಆರೋಪ ಮಾಡಿ ದಯಾಮರಣಕ್ಕಾಗಿ ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತೆ ಪ್ರತಿಭಟನೆಯ (Congress Protest) ಹಾದಿ ತುಳಿದಿದೆ. ಬಿಜೆಪಿ ಕಚೇರಿ ಎದುರು ಪ್ರತಿಭಟನೆಗೆ ಮುಂದಾದಾಗ, ಕಮಲ ಕಾರ್ಯಕರ್ತರು ಪೋಸ್ಟರ್​ಗಳನ್ನು ಹರಿದು ಹಾಕಿ, ದಬ್ಬಿಕೊಂಡು ಹೋಗಿದ್ದರಿಂದ ಹೈಡ್ರಾಮಾ ನಡೆಯಿತು. 40 ಪರ್ಸೆಂಟೇಜ್ ವಿಚಾರಕ್ಕೆ ಸಂಬಂಧಿಸಿ ಕಾಂಗ್ರೆಸ್ ಪ್ರತಿಭಟನೆ ವೇಳೆ ಹುಬ್ಬಳ್ಳಿಯ ಬಿಜೆಪಿ ಕಚೇರಿ ಮುಂದೆ ಹೈಡ್ರಾಮಾ ನಡೆಯಿತು.


40 ಪರ್ಸೆಂಟ್ ಕಮಿಷನ್ ವಿರುದ್ಧ ಕೈ ಮುಖಂಡರು ದೇಶಪಾಂಡೆ ನಗರದಲ್ಲಿರುವ ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರಿಂದ ಜೈ ಶ್ರೀರಾಮ್ ಘೋಷಣೆ ಕೂಗಿದರು.


ಕಾಂಗ್ರೆಸ್ ಪ್ರತಿಭಟನೆ ವೇಳೆ ಹಾರಿದ ಕೇಸರಿ ಶಾಲು


ಸಹಸ್ರಾರ್ಜುನ ಜಯಂತಿ ಆಚರಣೆಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಕಚೇರಿಗೆ ಆಗಮಿಸಿದ್ದರು. ಈ ವೇಳೆ ಕಾಂಗ್ರೆಸ್ ಮುಖಂಡರು ಪ್ರತಿಭಟನೆಗೆ ಮುಂದಾಗಿದ್ದರು. ಇದರಿಂದ ಕುಪಿತಗೊಂಡ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ಬಳಿ ತೆರಳಿ ಕಮಿಷನ್ ಪೋಸ್ಟರ್ ಹರಿದು ಹಾಕಿದರು. ಪ್ರತಿಭಟನೆ ವೇಳೆ ನುಗ್ಗಿ ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲು ಹಾರಾಡಿಸಿದರು.


ಕಾಂಗ್ರೆಸ್ ಪ್ರತಿಭಟನೆ


ಬಿಜೆಪಿ ಸರ್ಕಾರದ ವಿರುದ್ಧ ಏಕಾಏಕಿ ಪ್ರತಿಭಟನೆಗೆ ಮುಂದಾಗಿದ್ದ ಕೈ ಕಾರ್ಯಕರ್ತರನ್ನು ತಳ್ಳಾಡಿದ ಬಿಜೆಪಿ ಕಾರ್ಯಕರ್ತರು, ದಬ್ಬಿಕೊಂಡು ಹೋದರು. ಕಾಂಗ್ರೆಸ್ ಮುಖಂಡರ ಜತೆ ವಾಗ್ವಾದ ಮಾಡಿದ ಬಿಜೆಪಿ ಕಾರ್ಯಕರ್ತರು, ಬಿಜೆಪಿ ಕಚೇರಿ ಮುಂಭಾಗದಿಂದ ಕೈ ಮುಖಂಡರನ್ನು ನೂಕುತ್ತಲೇ ಕಳುಹಿಸಿದರು.


ರಜತ್ ಉಳ್ಳಾಗಡ್ಡಿಮಠ ಆಕ್ರೋಶ


ಬಿಜೆಪಿ ಕಾರ್ಯಕರ್ತರ ನಡೆಗೆ ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು. 40 ಪರ್ಸೆಂಟ್ ಕಮಿಷನ್ ವಿರುದ್ಧ ನಮ್ಮ ಹೋರಾಟವಿತ್ತು. ಆದರೆ ನಾವು ತಂದ ನಾಮಫಲಕ ಹರಿದು ಹಾಕಿದ್ರು. ಗುತ್ತಿಗೆದಾರರ ಸಾವಿನ ಮೇಲೆ ಇವರು ಇಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಬಿಜೆಪಿ ಸರ್ಕಾರದ ಧೋರಣೆಯನ್ನೇ ಅವರ ಕಾರ್ಯಕರ್ತರು ಮಾಡ್ತಿದಾರೆ ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ ಕಿಡಿಕಾರಿದರು.


ಜಗದೀಶ್ ಶೆಟ್ಟರ್, ಮಾಜಿ ಸಿಎಂ


ದಾಖಲೆಗಳಿದ್ದರೆ ದೂರು ದಾಖಲಿಸಿ ಎಂದ ಶೆಟ್ಟರ್


ಮತ್ತೆ 40 ಪರ್ಸಂಟೇಜ್ ಸದ್ದು ಮಾಡುತ್ತಿರುವ ವಿಚಾರಕ್ಕೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಸಿದ್ದರಾಮಯ್ಯ ಹಿಟ್ & ರನ್ ಕೇಸ್ ಮಾಡ್ತಿದಾರೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಹುಬ್ಬಳ್ಳಿಯಲ್ಲಿ ಮಾತನಾಡಿದ, ಬರೀ ಗುತ್ತಿಗೆದಾರರೊಬ್ಬರು ಬರೆದ ಪತ್ರದ ಆಧಾರದ ಮೇಲೆ ಆರೋಪ ಮಾಡ್ತಿದಾರೆ. ನಿರ್ದಿಷ್ಟವಾಗಿ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಯಾವುದಾದರೂ ಆಧಾರಗಳಿದ್ದಲ್ಲಿ ಲೋಕಾಯುಕ್ತಕ್ಕೆ ದೂರು ನೀಡಲಿ. 40 ಪರ್ಸೆಂಟೇಜ್ ಯಾರು ತೆಗೆದುಕೊಂಡರು ಯಾರು ಯಾರಿಗೆ ಕೊಟ್ಟರು ಅನ್ನೋದನ್ನು ಹೇಳಲಿ. ಜವಾಬ್ದಾರಿಯುತ ವಿರೋಧ ಪಕ್ಷದ ನಾಯಕರಾಗಿ ಸರಿಯಾಗಿ ಕೆಲಸ ಮಾಡುತ್ತಿಲ್ಲ.


ಇದನ್ನೂ ಓದಿ: Veerendra Heggade: ವೀರೇಂದ್ರ ಹೆಗ್ಗಡೆಯವರ ಬಗ್ಗೆ ಸುಳ್ಳು ವದಂತಿ; ಮೆರವಣಿಗೆಯಲ್ಲಿ ಬಂದು ಕೋರ್ಟ್​ ಮುಂದೆ ಶರಣಾದ ವ್ಯಕ್ತಿ


ನನಗೆ ಮಾಹಿತಿ ಇಲ್ಲ


ಈಗ ಲೋಕಾಯುಕ್ತ ಇರೋದ್ರಿಂದ ಅಲ್ಲಿ ಹೋಗಿ ದೂರು ಸಲ್ಲಿಸಲಿ. ನಿಮ್ಮ ಬಳಿ ಇರುವಂತಹ ಸಾಕ್ಷ್ಯಗಳನ್ನು ನೀಡಲಿ ಎಂದರು. ಗುತ್ತಿಗೆದಾರರೊಬ್ಬರಿಂದ ದಯಾಮರಣಕ್ಕೆ ಮನವಿ ಪ್ರಕರಣದ ಕುರಿತು ಪ್ರತಿಕ್ರಿಯಿಸಿದ ಶೆಟ್ಟರ್, ಈ ಕುರಿತು ಏನು ಬೆಳವಣಿಗೆ ನಡೆದಿದೆ ಎಂಬುವುದು ನನಗೆ ಗೊತ್ತಿಲ್ಲ. ನಾನು ಮಾಧ್ಯಮಗಳಲ್ಲಿ ಅಷ್ಟೆ ನೋಡಿದ್ದೇನೆ. ಗುತ್ತಿಗೆದಾರ ಬಸವರಾಜ್ ಅವರು ಏನು ಪೂರೈಕೆ ಮಾಡಿದ್ದಾರೋ ಗೊತ್ತಿಲ್ಲ. ಮುಖ್ಯಮಂತ್ರಿಗಳು ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿದ್ದಾರೆ.


ಅವರು ಏನು ಕ್ರಮ ಕೈಗೊಳ್ತಾರೋ ಕೈಗೊಳ್ಳಲಿ. ಸಂಬಂಧಪಟ್ಟ ಸಚಿವರು ಈ ಬಗ್ಗೆ ಮಾಹಿತಿ ಪಡೆದು ಪ್ರತಿಕ್ರಿಯೆ ನೀಡಬಹುದು. ಸರ್ಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂದು ಕಾದು ನೋಡೋಣ ಎಂದರು.


ನಾನೇ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ಎಂದ ಶೆಟ್ಟರ್


ಮುಂದಿನ ಬಾರಿ ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ನಾನೇ ಸ್ಪರ್ಧೆ ಮಾಡ್ತೀನಿ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್  ಹೇಳಿದ್ದಾರೆ.


ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ತಮ್ಮ ಸ್ಪರ್ಧೆಯ ಬಗ್ಗೆ ಎದ್ದಿರುವ ಊಹಾಪೋಹಗಳ ವಿರುದ್ಧ ಕಿಡಿಕಾರಿದರು. ನನ್ನ ಸ್ಪರ್ಧೆ ಬಗ್ಗೆ ಕೆಲವು ಉಹಾಪೋಹ ಇವೆ. ಕೆಲವರು ಗವರ್ನರ್ ಆಗ್ತಾರೆ ಎಂದು ಸುದ್ದಿ ಹಬ್ಬಸ್ತಾರೆ. ಈ ಸಲ ನಾನೇ ಸ್ಪರ್ಧೆ ಮಾಡುವೆ. ಮತ್ತೊಬ್ಬರು ಸ್ಪರ್ಧೆ ಮಾಡೋ ಪ್ರಶ್ನೆಯೇ ಇಲ್ಲ ಎಂದು ಶೆಟ್ಟರ್ ಸ್ಪಷ್ಟಪಡಿಸಿದರು.


ಇದನ್ನೂ ಓದಿ:  Karnataka Rajyotsava: ನವ ಕರ್ನಾಟಕದಿಂದ ನವ ಭಾರತ ಸೃಷ್ಟಿಯಾಗಲಿ; ಸಿಎಂ ಬೊಮ್ಮಾಯಿ ಕರೆ


ಯಾರಾದ್ರೂ ಪತ್ರಕರ್ತರು ದೂರು ಕೊಡಲಿ


ಪತ್ರಕರ್ತರಿಗೆ ಗಿಫ್ಟ್ ನೀಡಿದ ವಿಚಾರಕ್ಕೆ  ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಮುಖ್ಯಮಂತ್ರಿಗಳು ಮಾತಾಡಿದ್ದಾರೆ. ಯಾರಾದ್ರೂ ಪತ್ರಕರ್ತರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರಾ ಎಂದ ಶೆಟ್ಟರ್, ನಾನು ಇದು ಸರಿ ಎಂದು ಹೇಳುತ್ತಿಲ್ಲ. ಪತ್ರಕರ್ತರು ಹೆಸರು ಬಂದಾಗ ಅವರು ಎಚ್ಚರ ಆಗಬೇಕು. ಯಾರಾದ್ರೂ ಪತ್ರಕರ್ತರು ದೂರು ಕೊಡಲಿ ಎಂದರು.


ಕೆಲವರು ಗಿಫ್ಟ್ ತಗೆದುಕೊಂಡಿರಬಹುದು. ಎಷ್ಟು ಜನ ತಗೆದುಕೊಂಡಿದ್ದಾರೆ, ಇಲ್ಲ ಅನ್ನೋದು ಗೊತ್ತಾಗಬೇಕು. ಪರೋಕ್ಷವಾಗಿ ಗಿಫ್ಟ್ ಹೋಗಿದೆ ಎಂದು ಶೆಟ್ಟರ್ ಒಪ್ಪಿಕೊಂಡರು. ಮುಖ್ಯಮಂತ್ರಿಗಳು ಈ ಅಪಾದನೆ ತಳ್ಳಿ ಹಾಕಿದ್ದಾರೆ. ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲಾಗಿದ್ದು, ಅವರು ತನಿಖೆ ಮಾಡ್ತಾರೆ ಎಂದು ಜಗದೀಶ್ ಶೆಟ್ಟರ್ ತಿಳಿಸಿದರು.

Published by:Mahmadrafik K
First published: