• Home
 • »
 • News
 • »
 • breaking-news
 • »
 • Online: ಆನ್‌ಲೈನ್‌ನಲ್ಲಿ ಸುಲಭವಾಗಿ ಹಣ ಗಳಿಸುವುದು ಹೇಗೆ? ಈ ಟ್ರಿಕ್ಸ್​ ಫಾಲೋ ಮಾಡಿ!

Online: ಆನ್‌ಲೈನ್‌ನಲ್ಲಿ ಸುಲಭವಾಗಿ ಹಣ ಗಳಿಸುವುದು ಹೇಗೆ? ಈ ಟ್ರಿಕ್ಸ್​ ಫಾಲೋ ಮಾಡಿ!

Money Mantra

Money Mantra

ಪ್ರತಿಯೊಬ್ಬರೂ ಒಂದಲ್ಲ ಒಂದು ಕೌಶಲ್ಯವನ್ನು ಹೊಂದಿರುತ್ತಾರೆ. ಕೆಲವೊಬ್ಬರು ತಮ್ಮ ಸೃಜನಶೀಲತೆಯನ್ನೇ ಉಪಯೋಗಿಸಿಕೊಂಡು ಆನ್‌ಲೈನ್‌ನಲ್ಲಿ ಹಣಗಳಿಸುತ್ತಾರೆ. ಹೇಗೆಂಬುದು ಇಲ್ಲಿದೆ ಮಾಹಿತಿ.

 • Share this:

  ಇದು ಆಧುನಿಕ ಯುಗ. ಇಲ್ಲಿ ಎಲ್ಲವೂ ಸಾಧ್ಯ. ಇಲ್ಲಿ ಆಗದು ಎಂಬ ಮಾತೇ ಇಲ್ಲ. ಈಗಿನ ಡಿಜಿಟಲ್‌ (Digital) ಯುಗ ಎಂಬುದು ಈಗಿನ ಯುವಕರ ಮನಸ್ಸಲ್ಲಿ ಮೊಬೈಲ್‌ (Mobile), ಲ್ಯಾಪ್‌ಟಾಪ್‌ (Laptop) ಎಂಬ ಅಂಶ ನುಗ್ಗಿಬಿಟ್ಟಿದೆ. ಆದರೆ ಈಗ ಇಲ್ಲಿ ಮನೆಯಲ್ಲೇ ಕುಳಿತು ಹಣಗಳಿಸುವುದು ಹೇಗೆ ಎಂದು ಯೋಚನೆ ಮಾಡುವವರೇ ಹೆಚ್ಚು. ಹಲವಾರು ಜನರು ಮನೆಯಲ್ಲೇ ಕುಳಿತು ಹಣ ಸಂಪಾದನೆ ಮಾಡುತ್ತಾರೆ.ಇದಕ್ಕೆ ಮುಖ್ಯ ಕಾರಣ ಇಂಟರ್ನೆಟ್ (Internet) ಎಂಬ ಮಾಧ್ಯಮವು  ಬೃಹತ್ ವೇದಿಕೆಯಾಗಿ ಮಾರ್ಪಟ್ಟಿದೆ. ಹಾಗಾದರೆ ಮನೆಯಲ್ಲೇ ಕುಳಿತು ಆನ್​ಲೈನ್​​ನಲ್ಲಿ ಸುಲಭವಾಗಿ ಹಣ ಮಾಡುವುದು ಹೇಗೆ? ಇಲ್ಲಿದೆ ನೋಡಿ ಕೆಲವೊಂದಿಷ್ಟು ಟಿಪ್ಸ್‌ಗಳು.


  ಪ್ರತಿಯೊಬ್ಬರೂ ಒಂದಲ್ಲ ಒಂದು ಕೌಶಲ್ಯವನ್ನು ಹೊಂದಿರುತ್ತಾರೆ. ಕೆಲವೊಬ್ಬರು ತಮ್ಮ ಸೃಜನಶೀಲತೆಯನ್ನೇ ಉಪಯೋಗಿಸಿಕೊಂಡು ಆನ್‌ಲೈನ್‌ನಲ್ಲಿ ಹಣಗಳಿಸುತ್ತಾರೆ. ಆದರೆ ಕೆಲವೊಬ್ಬರಿಗೆ ಈ ಎಲ್ಲಾ ಟ್ಯಾಲೆಂಟ್‌ಗಳಿದ್ದರೂ ಸಂಪಾದನೆ ಮಾಡುವುದು ಹೇಗೆ ಎಂಬುದನ್ನು ಅರಿತಿರುವುದಿಲ್ಲ. ಹಾಗಾದ್ರೆ ಯಾವ ರೀತಿ ಆನ್‌ಲೈನ್‌ನಲ್ಲಿ ಹಣ ಗಳಿಸಬೇಕು ಎಂಬುದನ್ನು ನಾವು ನಿಮಗೆ ತಿಳಿಸ್ತೀವಿ. ಇಲ್ಲಿದೆ ಮಾಹಿತಿ.


  ಯಾವೆಲ್ಲಾ ರೀತಿಯಲ್ಲಿ ಆನ್‌ಲೈನ್‌ನಲ್ಲಿ ಹಣಗಳಿಸಬಹುದು?


  ಫೋಟೋಗ್ರಫಿ ಮಾಡುವ ಮೂಲಕ:


  ಈಗಿನ ಟ್ರೆಂಡಿಂಗ್‌ನಲ್ಲಿ ಫೋಟೋಗ್ರಾಫಿ ಎಂಬುದು ಕೂಡ ಮಾರುಕಟ್ಟೆಯಲ್ಲಿ ದೊಡ್ಡದಾಗಿ ಕಾಣಿಸಿಕೊಳ್ಳುತ್ತಿದೆ. ಮೊದಲೆಲ್ಲಾ ಆಕರ್ಷಕವಾಗಿ ಉತ್ತಮ ಬೆಲೆಯಲ್ಲಿರುವ ಡಿಎಸ್‌ಎಲ್‌ಆರ್‌ ಕ್ಯಾಮರಾಗಳನ್ನು ಬಳಸಿ ಫೋಟೋಗ್ರಾಫಿ, ವಿಡಿಯೋಗ್ರಫಿ ಮಾಡುತ್ತಿದ್ದರು. ಆದರೆ ಈಗ ಈ ಎಲ್ಲಾ ಫೀಚರ್ಸ್ ಮೊಬೈಲ್‌ನಲ್ಲಿ ಬಂದಿರುವುದರಿಂದ ಫೋಟೋಗ್ರಫಿ ಇನ್ನಷ್ಟು ಅಭಿವೃದ್ಧಿಯನ್ನು ಹೊಂದಿದೆ.


  ಇದನ್ನೂ ಓದಿ: ಹುಷಾರ್, ನಿಮ್ಮ ಡಿಜಿಟಲ್‌ ಅಕೌಂಟ್‌ ಹ್ಯಾಕ್‌ ಆಗುತ್ತೆ! ಸೈಬರ್‌ ಚೋರರಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿ


  ನಿಮ್ಮಲ್ಲಿ ಛಾಯಾಗ್ರಹಣದ ಕೌಶಲ್ಯವಿದ್ದರೆ ಸುಲಭವಾಗಿ ಮನೆಯಿಂದಲೇ ಹಣ ಮಾಡಬಹುದು. ನೀವು ಪ್ರಕೃತಿ, ಪ್ರಾಣಿಗಳು ಮತ್ತು ನಿಮ್ಮ ಸುತ್ತಲಿನ ವಸ್ತುಗಳ ಸೃಜನಶೀಲ ಫೋಟೋಗಳನ್ನು ತೆಗೆದುಕೊಂಡು ಅವುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಬಹುದು. ಇದಕ್ಕಾಗಿ Imagesbazaar.com, Shutterstock.com, Gettyimages.com ಮತ್ತು Stock.adobe.com ನಂತಹ ಸ್ಟಾಕ್ ಫೋಟೋಗ್ರಫಿ ತಾಣಗಳಲ್ಲಿ ಫೋಟೋಗಳಿಗೆ ಪರವಾನಗಿ ನೀಡುವ ಮೂಲಕ ಉತ್ತಮ ಹಣವನ್ನು ಗಳಿಸಬಹುದು.


  how-to-make-easy-money-online-here-are-the-tricks
  ಸಾಂದರ್ಭಿಕ ಚಿತ್ರ


  ಇ-ಟ್ಯೂಶನ್‌ ನೀಡುವ ಮೂಲಕ


  ಈಗೀಗ ಆನ್‌ಲೈನ್‌ ಮೂಲಕ ಟ್ಯೂಶನ್‌ ಕೊಡುವವರಿಗೂ ಬೇಡಿಕೆ ಹೆಚ್ಚಾಗಿದೆ. ಕೋವಿಡ್‌ನ ಪರಿಣಾಮದಿಂದ ಲಾಕ್‌ಡೌನ್‌ನ ನಂತರ ಈ ಟ್ಯೂಶನ್‌ ಕೊಡುವವರನ್ನು ಜನರು ಕಾಯುತ್ತಿದ್ದಾರೆ. ನಿಮ್ಮಲ್ಲಿ ಇನ್ನೊಬ್ಬರಿಗೆ ವಿದ್ಯೆಯನ್ನು ಹೇಳಿಕೊಡುವ ಸಾಮರ್ಥ್ಯವಿದ್ದರೆ ನಿಮಗೆ ಇ-ಟ್ಯೂಶನ್‌ ನೀಡುವ ಮುಖಾಂತರ ಸುಲಭದಲ್ಲಿ ಹಣ ಸಂಪಾದಿಸಬಹುದು.


  ಇ-ಟ್ಯೂಶನ್ ಕ್ಷೇತ್ರದಲ್ಲಿ ಯಶಸ್ವಿಯಾಗಿ ಮುನ್ನಡೆಯುತ್ತಿರುವ ಬೈಜುಸ್ (BYJU’S) ಸಂಸ್ಥೆ ಬಗ್ಗೆ ನೀವು ಕೇಳಿರಬಹುದು. ಇದರಲ್ಲಿ ನೀವು ಒಂದು ವಿಷಯದಲ್ಲಿ ಪರಿಣಿತಿ ಹೊಂದಿದ್ದರೆ , ವಾರದಲ್ಲಿ ಕೆಲವು ಗಂಟೆಗಳ ಕಾಲ ಟ್ಯೂಶನ್‌ ನೀಡಬಹುದು. ಇದಲ್ಲದೆ ಟ್ಯೂಟರ್ ವೀಸಾ, ಇ-ಟ್ಯೂಟರ್, ಸ್ಮಾರ್ಟ್ ಥಿಂಕಿಂಗ್, ಟ್ಯೂಟರ್. ಕಾಂ ಮೊದಲಾದ ತಾಣಗಳಲ್ಲಿ ನೀವು ನಿಮ್ಮ ಪರಿಣಿತಿಯನ್ನು ವಿವರಿಸಿದರೆ ಇಲ್ಲೂ ಕಾರ್ಯನಿರ್ವಹಿಸಬಹುದು.


  how-to-make-easy-money-online-here-are-the-tricks
  ಆನ್‌ಲೈನ್‌


  ಬ್ಲಾಗ್‌ ಬರೆಯುವ ಮೂಲಕ


  ಇನ್ನು ಆನ್​ಲೈನ್​ನಲ್ಲಿ ನಿಮ್ಮದೇ ಸ್ವಂತ ಬ್ಲಾಗ್ ಒಂದನ್ನು ರಚಿಸಿ ಹಣ ಸಂಪಾದಿಸಬಹುದು. ಇದನ್ನು ಪ್ರಾರಂಭಿಸಲು ಹೆಚ್ಚಿನ ಕೌಶಲ್ಯವಾಗಲೀ ಹಣವಾಗಲೀ ಬೇಕಾಗಿಲ್ಲ. ಆದರೆ ನೀವು ಯಾವ ವಿಷಯದ ಬಗ್ಗೆ ಬರೆಯುತ್ತೀರಿ ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು. ನಂತರ ಜನರಿಗೆ ಯಾವ ವಿಷಯದ ಕುರಿತು ಹೆಚ್ಚು ಆಸಕ್ತಿ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ನಿಮ್ಮ ತಾಣಕ್ಕೆ ಎಷ್ಟು ಹೆಚ್ಚು ಜನರು ಭೇಟಿ ನೀಡುತ್ತಾರೋ, ಅದನ್ನು ಪರಿಗಣಿಸಿ ಜಾಹೀರಾತು, ಸಂಭಾವನೆ ಇರುವ ಲೇಖನ ಬರೆಯುವ ಅವಕಾಶ ನಿಮ್ಮನ್ನು ಆರಿಸಿಕೊಂಡು ಬರುತ್ತದೆ.


  ಇನ್ಸ್ಟಾಗ್ರಾಮ್‌ನಲ್ಲೂ ಹಣ ಗಳಿಸಬಹುದು


  ಎಲ್ಲರಿಗೂ ತಿಳಿದಿರುವಂತೆ ನಾವೆಲ್ಲರೂ ಟೈಮ್​ ಪಾಸ್​ ಮಾಡಲು ಸಾಮಾಜಿಕ ಜಾಲತಾಣವಾದ ಇನ್​ಸ್ಟಾಗ್ರಾಮ್ ಉಪಯೋಗ ಮಾಡುತ್ತೇವೆ. ಆದರೆ, ಈ ಇನ್​ಸ್ಟಾಗ್ರಾಮ್​ನಿಂದ ಸಂಪಾದನೆ ಕೂಡ ಮಾಡಬಹುದು ಎಂದರೆ ನಂಬಲೇಬೇಕು. ಇನ್​ಸ್ಟಾಗ್ರಾಮ್​ನಲ್ಲಿ ಅಧಿಕ ಫಾಲೋವರ್​​ಗಳನ್ನು ಹೊಂದಿ, ಇನ್‌ಸ್ಟಾದಲ್ಲೇ ಜನಪ್ರಿಯತೆ ಗಳಿಸಿರುವವರು ಒಂದು ಪೋಸ್ಟ್‌ಗೆ 5 -15 ಸಾವಿರ ಹಣವನ್ನು ಪಡೆಯಬಹುದು.


  ಇದನ್ನೂ ಓದಿ: ಸಾವಿನ ನಂತರ ನಿಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ ಏನಾಗುತ್ತೆ? ಶಾಕ್​ ಆಗ್ತೀರಾ ನೋಡಿ


  ಇನ್‌ಸ್ಟಾಗ್ರಾಂನಲ್ಲೇ ಆದಾಯ ಪಡೆಯುವವರು ಸ್ಪಾನ್ಸರ್‌ ಪೋಸ್ಟ್ ಮೂಲಕವು ಹಣ ಗಳಿಸುತ್ತಾರೆ. ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಇದರಿಂದ ಕೋಟಿ ಗಟ್ಟಲೆ ಹಣ ಸಂಪಾದಿಸುತ್ತಿದ್ದಾರೆ.

  Published by:Harshith AS
  First published: