• ಹೋಂ
  • »
  • ನ್ಯೂಸ್
  • »
  • Breaking News
  • »
  • Explained| ನಟ ಲಿಯೋನಾರ್ಡೋ ಡಿಕಾಪ್ರಿಯೋಗೂ ತಾಲಿಬಾನ್​ಗೂ ಸಂಬಂಧವೇನು? ಈಗ ಆಫ್ಘನ್ ಕ್ಷೌರಿಕರು ಹೆದರುತ್ತಿರುವುದು ಏಕೆ?

Explained| ನಟ ಲಿಯೋನಾರ್ಡೋ ಡಿಕಾಪ್ರಿಯೋಗೂ ತಾಲಿಬಾನ್​ಗೂ ಸಂಬಂಧವೇನು? ಈಗ ಆಫ್ಘನ್ ಕ್ಷೌರಿಕರು ಹೆದರುತ್ತಿರುವುದು ಏಕೆ?

ಈಗ 20 ವರ್ಷಗಳ ನಂತರ ಉಗ್ರಗಾಮಿ ತಾಲಿಬಾನ್ ಶಕ್ತಿ ಮತ್ತೊಮ್ಮೆ ಅಫ್ಘನ್ ದೇಶವನ್ನು ವಶಪಡಿಸಿಕೊಳ್ಳುತ್ತಿದ್ದಂತೆ, ದುಃಖ ಮತ್ತು ಭೀತಿಗೊಳಗಾದ ಅಫ್ಘಾನಿಸ್ತಾನ ಮತ್ತು ಅದರ ಜನರು ವಿಶೇಷವಾಗಿ ಕ್ಷೌರಿಕರು ಇದೀಗ ಇತಿಹಾಸದ ಪುನರಾವರ್ತನೆಯ ಬಗ್ಗೆ ಯೋಚಿಸುತ್ತಿದ್ದಾರೆ.

  • Share this:

    ಅಫ್ಘನ್​ ದೇಶವನ್ನು ಕಬಳಿಸಿದಂದಿನಿಂದ ತಾಲಿಬಾನ್ (Taliban) ಉಗ್ರರು ಅಲ್ಲಿನ ಯುವಕರು ಮತ್ತು ಮಹಿಳೆಯರಿಗೆ ನಿರಂತರವಾಗಿ ಹಿಂಸೆ ನೀಡುತ್ತಲೇ ಇದ್ದಾರೆ. ಆದರೆ, ಇದೀಗ ಅಫ್ಘನ್ ಕ್ಷೌರಿಕರ ಭವಿಷ್ಯ ಸಹ ಅನಿಶ್ಚಿತತೆಯಿಂದ ಕಾಡುತ್ತಿದೆ. ಅಲ್ಲದೆ, ಅವರು ಭಯದ ನಡುವೆ ಭವಿಷ್ಯದ ಕರಾಳ ದಿನಗಳ ಅಲೋಚನೆಯಲ್ಲಿ ದಿನ ಕಳೆಯುವಂತಾಗಿದೆ. ಇದಕ್ಕೆ ಕಾರಣಗಳೂ ಇಲ್ಲದೆ ಏನಿಲ್ಲ. ಟೈಟಾನಿಕ್ (Titanic) ಚಿತ್ರ ಬಿಡುಗಡೆಯಾದ ಸಂದರ್ಭದಲ್ಲಿ ಚಿತ್ರದ ನಾಯಕ ಲಿಯೋನಾರ್ಡೋ ಡಿಕಾಪ್ರಿಯೋ (Leonardo Dicaprio) ಕೇಶ ವಿನ್ಯಾಸ ಸಾಕಷ್ಟು ಸದ್ದು ಮಾಡಿತ್ತು. ಆದರೆ, ಅಫ್ಘನ್​ನಲ್ಲಿ ಗ್ರಾಹಕರಿಗೆ ಈ ರೀತಿಯ ಕೇಶ ವಿನ್ಯಾಸ ಮಾಡಿದ ಕಾರಣಕ್ಕೆ 2001 ರಲ್ಲಿ ಅಂದಿನ ಆಡಳಿತಾರೂಢ ತಾಲಿಬಾನ್ ಕ್ಷೌರಿಕರನ್ನು ಜೈಲಿಗಟ್ಟಿತು. ಇದರ ಜೊತೆಯಲ್ಲಿ, ಧಾರ್ಮಿಕ ವ್ಯವಹಾರಗಳ ತಾಲಿಬಾನ್ ಸಚಿವಾಲಯವು ಕಾಬೂಲ್‌ನಾದ್ಯಂತ ಕ್ಷೌರಿಕರಿಗೆ ಪತ್ರವನ್ನು ಕಳುಹಿಸಿದ್ದು, ಅವರಿಗೆ "ವಿದೇಶಿ ಕ್ಷೌರ" ಮಾಡದಂತೆ ಎಚ್ಚರಿಕೆಯನ್ನೂ ನೀಡಿತ್ತು. ಬಂಧಿತರು "ಇಸ್ಲಾಮಿಕ್ ವಿರೋಧಿ ಪಾಶ್ಚಾತ್ಯ ಕೇಶವಿನ್ಯಾಸವನ್ನು ಜನಪ್ರಿಯಗೊಳಿಸಿದರು" ಎಂದು ಆರೋಪಿಸಲಾಗಿತ್ತು.

    ಇಸ್ಲಾಂನ ಕಟ್ಟುನಿಟ್ಟಾದ ನಿಯಮಗಳನ್ನು ಹೇರಲು ಪ್ರಯತ್ನಿಸುತ್ತಿದ್ದ ತಾಲಿಬಾನ್‌ಗಳು ನಿಷೇಧಿಸಿದ ಹೇರ್ಕಟ್‌ಗಳಲ್ಲಿ 'ಬೀಟಲ್ಸ್ ಕಟ್' ಕೂಡ ಸೇರಿದೆ. ತಾಲಿಬಾನ್‌ಗಳು ಆರಂಭದಲ್ಲಿ ಡಿಕಾಪ್ರಿಯೋ ಕೇಶ ವಿನ್ಯಾಸವನ್ನು ನಕಲು ಮಾಡಿದ್ದ ಯುವಕರೇ ಸುಲಭ ತುತ್ತಾಗಿದ್ದರು. ನಂತರ ತಾಲಿಬಾನ್​ಗಳು ಕ್ಷೌರಿಕರನ್ನು ಹತ್ತಿಕ್ಕಲು ಮುಂದಾಗಿದ್ದರು. ಈ ವಿಚಾರದಲ್ಲಿ ಕ್ಷೌರಿಕರನ್ನು ಸಾಕಷ್ಟು ಹಿಂಸೆಗೂ ಒಳಪಡಿಸಲಾಗಿತ್ತು.

    ಈಗ 20 ವರ್ಷಗಳ ನಂತರ ಉಗ್ರಗಾಮಿ ತಾಲಿಬಾನ್ ಶಕ್ತಿ ಮತ್ತೊಮ್ಮೆ ಅಫ್ಘನ್ ದೇಶವನ್ನು ವಶಪಡಿಸಿಕೊಳ್ಳುತ್ತಿದ್ದಂತೆ, ದುಃಖ ಮತ್ತು ಭೀತಿಗೊಳಗಾದ ಅಫ್ಘಾನಿಸ್ತಾನ ಮತ್ತು ಅದರ ಜನರು ವಿಶೇಷವಾಗಿ ಕ್ಷೌರಿಕರು ಇದೀಗ ಇತಿಹಾಸದ ಪುನರಾವರ್ತನೆಯ ಬಗ್ಗೆ ಯೋಚಿಸುತ್ತಿದ್ದಾರೆ.

    ತಾಲಿಬಾನ್​ಗಳು ಒಂದೆಡೆ ಅಫ್ಘನ್​ ಜನರಿಗೆ ನೆಮ್ಮದಿಯಾಗಿ ಬದುಕುವ ಆಶ್ವಾಸನೆಯನ್ನು ನೀಡುತ್ತಿದ್ದರೂ ಸಹ ಮತ್ತೊಂದೆಡೆ ಜನರ ಮೇಲೆ ಈಗಾಗಲೇ ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲು ಮುಂದಾಗಿದೆ. ಮುಸ್ಲಿಮರು ಗಡ್ಡವನ್ನು ಬೆಳೆಸಲೇಬೇಕು ಎಂಬ ತಮ್ಮ ಹಳೆಯ ನಿಯಮವನ್ನು ಜಾರಿಗೆ ತರಲು ತಾಲಿಬಾನ್ ಮುಂದಾಗಿದೆ. ಇದು ಸಾಮಾನ್ಯವಾಗಿ ಕ್ಷೌರಿಕರ ವ್ಯವಹಾರವನ್ನು ದೊಡ್ಡ ಮಟ್ಟದಲ್ಲಿ ಬಾದಿಸುವ ಗುರಿಯನ್ನು ಹೊಂದಿದೆ ಎಂದು ಹೇಳಲಾಗುತ್ತಿದೆ.

    ಕಾಬೂಲ್‌ನಲ್ಲಿ ಕೆಲಸ ಮಾಡುತ್ತಿದ್ದ ಕ್ಷೌರಿಕನೊಬ್ಬ ಬುಧವಾರ ರಾಯಿಟರ್ಸ್‌ಗೆ ಹೇಳಿದ್ದು, "ಭವಿಷ್ಯದಲ್ಲಿ ತನ್ನ ವ್ಯಾಪಾರಕ್ಕೆ ತಾಲಿಬಾನ್ ಆಳ್ವಿಕೆಯ ಅರ್ಥವೇನೆಂದು ಹೆದರಿಕೆಯಾಗುತ್ತಿದೆ" ಎಂದು ತನ್ನ ಭಯವನ್ನು ವ್ಯಕ್ತಪಡಿಸಿದ್ದಾರೆ.

    ಇದನ್ನೂ ಓದಿ: Gang Rape| ಜಾರ್ಖಂಡ್​ನಲ್ಲಿ ಬಾಲಕಿಯ ಮೇಲೆ 7 ಜನರಿಂದ ಸಾಮೂಹಿಕ ಅತ್ಯಾಚಾರ; ಆರೋಪಿಗಳೂ ಅಪ್ರಾಪ್ತ ಬಾಲಕರೇ!

    ಮತ್ತೊಬ್ಬ ಕ್ಷೌರಿಕ ಮೊಹಮ್ಮದ್ ಅಮೀನ್ ನೂರಿ ಮಾತನಾಡಿದ್ದು, "ನಮಗೆ ಕ್ಷೌರದ ಹೊರತು ಬೇರೆ ಯಾವುದೇ ಕೆಲಸ ಗೊತ್ತಿಲ್ಲ ಮತ್ತು ಇಸ್ಲಾಮಿಕ್ ಎಮಿರೇಟ್‌ನ ಹಿಂದಿನ ವ್ಯವಸ್ಥೆಯಲ್ಲಿ, ನಮ್ಮ ಕೆಲಸವು ಕಾನೂನಿಗೆ ವಿರುದ್ಧವಾಗಿತ್ತು. ಪುರುಷರ ಮೇಕಪ್ ಮತ್ತು ಟ್ಯಾಟೂಗಳನ್ನು ಅನುಮತಿಸಲಾಗುವುದಿಲ್ಲ. ಆದ್ದರಿಂದ ಗ್ರಾಹಕರು ತುಂಬಾ ಕಡಿಮೆ. ಎಲ್ಲರೂ ತಾಲಿಬಾನ್ ಕಾನೂನಿಗೆ ಹೆದರುತ್ತಾರೆ. ತಾಲಿಬಾನಿಗಳು ಇನ್ನೂ ತಮ್ಮ ಸಂಪೂರ್ಣ ಕಾನೂನುಗಳನ್ನು ಕಾರ್ಯಗತಗೊಳಿಸಿಲ್ಲ. ಆದರೂ, ನಾವು ಭಯದಲ್ಲೇ ಕೆಲಸ ಮಾಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ. ಕ್ಷೌರಿಕರಲ್ಲದೆ, ಸಂಗೀತ, ನೃತ್ಯ, ಕ್ರೀಡೆಗಳು, ವಿಶೇಷವಾಗಿ ಮಹಿಳಾ ಕ್ರೀಡೆಗಳು ಸಹ ಅಫ್ಘನ್​ನಲ್ಲಿ ಹೆಚ್ಚಿನ ನಷ್ಟವನ್ನು ಅನುಭವಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    First published: