ಹಾವೇರಿ: ಕೋಳಿ ಮರಿಯನ್ನು ಸಾಕುತ್ತದೆಯಂತೆ. ಆದರೆ ಮರಿ ಕೋಳಿಯನ್ನು ಸಾಕುವುದಿಲ್ಲವಂತೆ. ಹಾಗೇ ಹೆತ್ತವರು (Parents) ತಮ್ಮ ಮಕ್ಕಳು ಎಷ್ಟೇ ದೊಡ್ಡವರಾದರೂ ಸಾಕುತ್ತಾರೆ. ಹೆತ್ತವರಿಗೆ ಮಕ್ಕಳು (Children) ಎಂದಿಗೂ ಭಾರವಾಗುವುದಿಲ್ಲ. ಮಕ್ಕಳಿಗೆ ತಾಯಿಯೇ (Mother) ಮೊದಲ ದೇವರು ಹಾಗೂ ಗುರು ಎಲ್ಲವೂ. ಒಂದು ಪಕ್ಷ ತನಗೇನಾದರೂ ಸರಿ, ತಮ್ಮ ಮಕ್ಕಳು ಚೆನ್ನಾಗಿ ಬಾಳಿ ಬದುಕಬೇಕು ಎಂದು ಬಯಸುವ ಏಕೈಕ ಜೀವ ಎಂದರೆ ತಾಯಿ. ಆದರೆ ಒಂಭತ್ತು ತಿಂಗಳು ಹೊತ್ತು, ಹೆತ್ತು, ಸಾಕಿ ಸಲುಹಿದ ಮಕ್ಕಳು ತಾಯಿಯ ಮುಂದೆಯೇ ಹಾಸಿಗೆ ಹಿಡಿದರೆ ಹೆತ್ತ ಕರಳು ಸಹಿಸುವುದಿಲ್ಲ. ಹೀಗಿರುವಾಗ ಹದಿನೈದು ವರ್ಷದಿಂದ ಹಾಸಿಗೆ ಹಿಡಿದಿರುವ ಮಗ, ಎಲ್ಲರಂತೆ ಸಹಜ ಜೀವನ ನಡೆಸಲಿ ಎಂದು ತಾಯಿಯೊಬ್ಬಳು ಹಗಲು ರಾತ್ರಿ ಕಣ್ಣೀರು ಇಡುತ್ತಿದ್ದಾಳೆ. ಇನ್ನೂ ತನ್ನ ಮಗನಿಗೆ ಸಹಾಯ ಮಾಡುವಂತೆ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ (Sudhamurthy) ಅವರ ಫೋಟೋ ಹಿಡಿದುಕೊಂಡು ಸಹಾಯ ಹಸ್ತ ಚಾಚಿದ್ದಾಳೆ. ನಿಜಕ್ಕೂ ಈ ದೃಶ್ಯ ನೋಡಿದವರ ಮನಕಲಕುವಂತಿದೆ.
ಸುಧಾಮೂರ್ತಿ ಫೋಟೋ ಹಿಡಿದು ಸಹಾಯಕ್ಕಾಗಿ ತಾಯಿ ಮಗ ಗೋಳಾಟ
ಹಾವೇರಿ ತಾಲೂಕಿನ ಸಂಗೂರು ಗ್ರಾಮದಲ್ಲಿ ತಾಯಿಯೊಬ್ಬಳು ಹದಿನೈದು ವರ್ಷ ಹಾಸಿಗೆ ಹಿಡಿದಿರುವ ಮಗನನ್ನು ಕಾಪಾಡಿ ಎಂದು ಡಾ. ಸುಧಾಮೂರ್ತಿ ಅವರ ಫೋಟೋ ಹಿಡಿದುಕೊಂಡು ಗೋಳಾಡುತ್ತಾ ಮನವಿ ಮಾಡಿದ್ದಾರೆ.
ಜಗದೀಶ್ ಸಜ್ಜನ್ ಗೆ ಬೇಕಾಗಿದೆ ನೆರವಿನ ಹಸ್ತ
ಮಗ ಜಗದೀಶ್ ಸಜ್ಜನ್ ಬೈಕ್ ನಿಂದ ಬಿದ್ದು ಸ್ವಾಧೀನ ಕಳದುಕೊಂಡು ಸುಮಾರು ಹದಿನೈದು ವರ್ಷದಿಂದ ಹಾಸಿಗೆ ಹಿಡಿದಿದ್ದಾನೆ. 8 ರಿಂದ 10 ಲಕ್ಷ ರೂಪಾಯಿಯವರೆಗೆ ಹಣ ಸಿಕ್ಕರೆ ನಮ್ಮ ಮಗ ಎಲ್ಲರಂತೆ ಓಡಾಡಿ ನಮ್ಮನ್ನು ಸಾಕುತ್ತಾನೆ. ನಮಗೆ ಕರ್ನಾಟಕದ ಜನತೆ ಕೂಡ ಸಹಾಯ ಮಾಡಿ ಎಂದು ಸುಧಾ ಮೂರ್ತಿ ಅಮ್ಮನ ಪೋಟೊ ಹಿಡಿದು ಪಾರವ್ವ ಎಂಬ ತಾಯಿ ಸಹಾಯ ಮಾಡಿ ಅಂತ 18 ಕ್ಯಾಮರಾ ಮುಂದೆ ರೋಧನೆ ವ್ಯಕ್ತಪಡಿಸಿದ್ದಾರೆ.
ಸೂಕ್ತ ಚಿಕಿತ್ಸೆ ಇಲ್ಲದೇ ನರಳುತ್ತಿರುವ ಜಗದೀಶ್ ಸಜ್ಜನ್
ಎದೆಯುದ್ದ ಬೆಳೆದ ಮಗ ವಿಧಿಯಾಟದಿಂದ ನರಳಾಡುತ್ತಿರುವುದನ್ನು ನೋಡುತ್ತಾ ಮರಗುತ್ತಿರುವ ತಾಯಿಯನ್ನು ನೋಡಿದರೆ ಎಂತಹ ಕಲ್ಲು ಹೃದಯ ಕೂಡ ಕರಗುವಂತಿದೆ. ಸೂಕ್ತ ಚಿಕಿತ್ಸೆ ಇಲ್ಲದೇ ಜಗದೀಶ್ ಸಜ್ಜನ್ ಒದ್ದಾಡುತ್ತಿದ್ದು, ವಯಸ್ಸಾದ ತಾಯಿ ಪಾರವ್ವನಿಗೆ ಇವನೇ ಆಸರೆ ಆಗಿದ್ದಾನೆ. ಸುಮಾರು ಹದಿನೈದು ವರ್ಷಗಳಿಂದ ಮನೆಯಲ್ಲೇ ಮಗನನ್ನು ನೋಡಿಕೊಳ್ಳುತ್ತಿರುವ ತಾಯಿ ಪಾರವ್ವ ಇದ್ದ ಜಮೀನು ಹಾಗೂ ಮನೆಯನ್ನು ಕೂಡ ಮಾರಿಕೊಂಡು ಬಿಟ್ಟಿದ್ದಾರೆ.
ಇದನ್ನೂ ಓದಿ: Sudha Murthy: ರಾಜಮಾತೆ ಕಾಲಿಗೆ ನಮಸ್ಕರಿಸಿದ ಸುಧಾ ಮೂರ್ತಿ; ನೀವು ಮಾಡಿದ್ದು ಸರೀನಾ ಎಂದು ನೆಟ್ಟಿಗರ ಪ್ರಶ್ನೆ!
ಕೊರೊನಾ ಸಮಯದಲ್ಲಿ ಸಹಾಯ ಹಸ್ತ ಚಾಚಿದ್ದ ಸುಧಾಮೂರ್ತಿ
ಕಷ್ಟದಲ್ಲಿರುವ ಅದೆಷ್ಟೋ ಮಂದಿಗೆ ಸುಧಾಮೂರ್ತಿ ಅವರು ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಎಷ್ಟೇಲ್ಲ ಹೆಸರು, ಆಸ್ತಿ ಸಂಪಾದಿಸಿದರೂ ಕೂಡ ಸರಳ ಜೀವಿಯಾಗಿರುವ ಸುಧಾಮೂರ್ತಿ ಅವರು, ಕೊರೊನಾ ಸಮಯದಲ್ಲಿ ಸರ್ಕಾರಕ್ಕೆ ಕೋಟ್ಯಾಂತರ ರೂ. ಅನುದಾನ ನೀಡಿದ್ದರು.
ಇದನ್ನೂ ಓದಿ: Infosys ಶುರು ಮಾಡೋಕೆ ಪತಿಗೆ ಸಾಲ ಕೊಟ್ಟಿದ್ರಂತೆ ಸುಧಾ ಮೂರ್ತಿ! ಈ ಬಗ್ಗೆ ಅವರೇ ಹೇಳಿದ್ದಾರೆ ನೋಡಿ
ವಿಶ್ವವಿಖ್ಯಾತ ಹಂಪಿ ಪ್ರವಾಸಿ ಮಾರ್ಗದರ್ಶಿಗಳು ಕೊರೊನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದನ್ನು ಗಮನಿಸಿದ ಇನ್ಫೋಸಿಸ್‌ನ ಸುಧಾಮೂರ್ತಿ 100 ಗೈಡ್ ಗಳಿಗೆ ತಲಾ 10 ಸಾವಿರ ರೂ. ಧನ ಸಹಾಯ ಮಾಡಿದ್ದರು.
ರಾಜಮಾತೆ ಪ್ರಮೋದಾ ದೇವಿ ಅವರ ಪಾದಕ್ಕೆ ನಮಸ್ಕರಿಸಿದ್ದ ಸುಧಾಮೂರ್ತಿ
ಹೀಗೆ ತಮ್ಮ ಸಮಾಜಮುಖಿ ಕಾರ್ಯಗಳಿಂದಲೇ ಜನಪ್ರಿಯರಾಗಿರುವ ಸುಧಾಮೂರ್ತಿ ಅವರು, ಈ ಬಾರಿ ನಡೆದ ದಸರಾ ವೇಳೆ ರಾಜಮಾತೆ ಪ್ರಮೋದಾ ದೇವಿ ಅವರ ಪಾದಕ್ಕೆ ನಮಸ್ಕಾರ ಮಾಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇನ್ನೂ ಸುಧಾಮೂರ್ತಿ ಅವರು ರಾಜಮಾತೆ ಕಾಲಿಗೆ ಬಿದ್ದು ನಮಸ್ಕರಿಸಿದ್ದು ಎಷ್ಟು ಸರಿ ಎಂದು ಅನೇಕ ಮಂದಿ ಪ್ರಶ್ನಿಸಿದ್ದರು. ಅಲ್ಲದೇ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ