ನವದೆಹಲಿ: ವಿಶ್ವದಲ್ಲೇ ಅತಿ ಹೆಚ್ಚು ಜನ ಸಂಖ್ಯೆ ಹೊಂದಿರುವ ನೆರೆಯ ಚೀನಾ (China) ದೇಶದಲ್ಲಿ ಇದೀಗ ಮತ್ತೆ ಕೊರೋನಾ ಸೋಂಕು(Coronavirus) ಉಲ್ಬಣಗೊಂಡಿದೆ. ಈಗಾಗಲೇ ಕೊರೋನಾ ಮೂರು ಅಲೆಗಳನ್ನು ದಾಟಿರುವ ಭಾರತಕ್ಕೆ (India) ಮತ್ತೊಮ್ಮೆ ಸಂಕಷ್ಟ ಎದುರಾಗಿದೆ. ಸದ್ಯ ಕೊರೋನಾದಿಂದ ಎಚ್ಚರಿಕೆ ಇರುವಂತೆ ಮತ್ತು ಕೊರೋನಾ ನಿಯಮಗಳನ್ನು ಪಾಲಿಸುವಂತೆ ಕೇಂದ್ರ ಸೂಚಿಸಿದೆ. ಭಾರತದಲ್ಲಿ ಎರಡು ಡೋಸ್ ಕೊರೋನಾ ಲಸಿಕೆ (Vaccine) ಸ್ವೀಕರಿಸಿದವರಿಗೆ ಹೋಲಿಸಿದರೆ, ಬೂಸ್ಟರ್ ಡೋಸ್ (Booster Dose) ಪಡೆದುಕೊಂಡವರ ಸಂಖ್ಯೆ ಬಹಳ ಕಡಿಮೆ. ಆದರೀಗ ಚೀನಾ ಮತ್ತು ಇತರ ದೇಶಗಳಲ್ಲಿ ಮತ್ತೆ ಕೊರೋನಾ ಉಲ್ಬಣಗೊಳ್ಳುತ್ತಿದ್ದು, ಬೂಸ್ಟರ್ ಡೋಸ್ ನೀಡಲು ಭಾರತೀಯ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಬೂಸ್ಟರ್ ಶಾಟ್ ಎಂದರೇನು? ಅದು ಏಕೆ ಮುಖ್ಯ
COVID-19 ನಂತಹ ಮಾರಾಣಾತಿಂಕ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಬೂಸ್ಟರ್ ಡೋಸ್ ಪಡೆದುಕೊಳ್ಳುವುದು ಅಗತ್ಯವಾಗಿದೆ. ಬೂಸ್ಟರ್ ಡೋಸ್ ಲಸಿಕೆಯು ಹೆಚ್ಚುವರಿ ಡೋಸ್ಗೆ ಸಮಾನವಾಗಿದೆ. OSF ಹೆಲ್ತ್ಕೇರ್ನ ಫಾರ್ಮಸಿ ಕಾರ್ಯಾಚರಣೆಗಳ ಉಪಾಧ್ಯಕ್ಷ ಸ್ಯಾಂಡಿ ಸಾಲ್ವರ್ಸನ್ ಅವರ ಪ್ರಕಾರ, ಈ ಬೂಸ್ಟರ್ ಡೋಸ್ಗಳು ವಾರಗಳು, ತಿಂಗಳುಗಳು ಅಥವಾ ವರ್ಷಗಳ ನಂತರ ಪ್ರಭಾವ ಬೀರಬಹುದು ಎಂದು ತಿಳಿಸಲಾಗಿದೆ.
ಹೆಚ್ಚಾಗಿ ವಯಸ್ಕರು ದಡಾರ, ನಾಯಿಕೆಮ್ಮು ಅಥವಾ ಮೆನಿಂಜೈಟಿಸ್ನಂತಹ ಕಾಯಿಲೆಗೆ ಒಳಗಾದಾಗ, ಹಿಂದೆ ಬೂಸ್ಟರ್ ಡೋಸ್ ನೀಡಲಾಗುತ್ತಿತ್ತು. ಟೆಟನಸ್ನಂತಹ ಕಾಯಿಲೆಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ಬೂಸ್ಟರ್ ಡೋಸ್ ಶಿಫಾರಸು ಮಾಡಲಾಗುತ್ತಿತ್ತು. ಏಕೆಂದರೆ ಇದರಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಿರುತ್ತದೆ.
ಬೂಸ್ಟರ್ ಡೋಸ್ ಹೇಗೆ ಸಹಾಯಕವಾಗಿದೆ?
ಕೆಲವು ಲಸಿಕೆಗಳನ್ನು ಮೂಲ ಡೋಸ್ನೊಂದಿಗೆ ಬೂಸ್ಟರ್ ಡೋಸ್ ಜೊತೆಗೆ ನೀಡಲಾಗುತ್ತದೆ. ಕೊರೋನಾ ವೈರಸ್ ವಿರುದ್ಧ ಹೋರಾಡುವ ಹಾಗೂ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ. ದೇಶದಲ್ಲಿರುವ ಪ್ರತಿಯೊಬ್ಬರನ್ನು ರಕ್ಷಿಸುವ ದೃಷ್ಠಿಯಿಂದ ಬೂಸ್ಟರ್ ಡೋಸ್ ನೀಡಲಾಗುತ್ತದೆ. ವೈರಸ್ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳಲು ಬೂಸ್ಟರ್ ಡೋಸ್ ಪಡೆಯುವುದು ಅಗತ್ಯವಾಗಿದೆ. ಇದು ನಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ. ಜೊತೆಗೆ ಬೂಸ್ಟರ್ ಡೋಸ್ಗಳು ವಯಸ್ಸಾದವರಿಗೆ ಹೆಚ್ಚು ಸಹಾಯಕವಾಗಿದೆ ಎಂದು ಹೇಳಲಾಗುತ್ತಿದೆ.
ಭಾರತದಲ್ಲಿ ಕೋವಿಡ್ ಬೂಸ್ಟರ್ ಪಡೆಯುವುದೇಗೆ?
ಬೂಸ್ಟರ್ಗಾಗಿ ನೀವು ನಿಮ್ಮ ನಿಮ್ಮ ಹತ್ತಿರದ ಆರೋಗ್ಯ ಕೇಂದ್ರ ಅಥವಾ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಬಹುದು. ಬೂಸ್ಟರ್ ಡೋಸ್ ಅನ್ನೇ ಭಾರತದಲ್ಲಿ ಕೋವಿಡ್-19 ಲಸಿಕೆಯನ್ನು ನಿಮ್ಮ ಮೊದಲ ಮತ್ತು ಎರಡನೇ ಡೋಸ್ ಆಗಿ ನೀಡಲಾಗುತ್ತಿದೆ.
ಎರಡನೇ ಡೋಸ್ ನಂತ್ರ ಬೂಸ್ಟರ್ ಡೋಸ್ ಪಡೆಯಲು ಎಷ್ಟು ಸಮಯಬೇಕಾಗುತ್ತದೆ?
ಕೇಂದ್ರ ಆರೋಗ್ಯ ಸಚಿವಾಲಯವು ಈ ಹಿಂದೆ COVID-19 ಲಸಿಕೆಯ ಎರಡನೇ ಡೋಸ್ ಪಡೆದ ಒಂಭತ್ತು ತಿಂಗಳ ಬಳಿಕ ಮೂರನೇ ಡೋಸ್ ಪಡೆಯಬಹುದು ಎಂದು ಸೂಚಿಸಿತ್ತು. ನಂತರ 2022 ಜುಲೈ 6ರಂದು ಒಂಭತ್ತು ತಿಂಗಳ ಬದಲಾಗಿ ಆರು ತಿಂಗಳಿಗೆ ಪಡೆಯಬಹುದು ಎಂದು ಸೂಚಿಸಿತ್ತು.
ಆದ್ದರಿಂದ, ಎರಡನೇ ಡೋಸ್ ಪಡೆದ ಆರು ತಿಂಗಳ ಬಳಿಕ ನಿಮ್ಮ ಬೂಸ್ಟರ್ ಡೋಸ್ ಅನ್ನು ಪಡೆಯಬಹುದು. ಆರು ತಿಂಗಳು ಪೂರ್ಣಗೊಂಡ ನಂತರ ಯಾವಾಗ ಬೇಕಾದರೂ ಬೂಸ್ಟರ್ ಡೋಸ್ ಪಡೆಯಬಹುದು.
ಭಾರತದಲ್ಲಿ ಶೇ 27-28 ಮಂದಿ ಮಾತ್ರ ಬೂಸ್ಟರ್ ಡೋಸ್ ಪಡೆದಿದ್ದಾರೆ
ಇಂದು ಕೊರೊನಾ ಕುರಿತಂತೆ ಕೇಂದ್ರ ನಾಯಕರು ಸಭೆ ನಡೆಸಿದರು. ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ ಎನ್ಐಟಿಐ ಆಯೋಗದ ಸದಸ್ಯ ವಿಕೆ ಪಾಲ್ ಅವರು, ಭಾರತದ ಜನಸಂಖ್ಯೆಯಲ್ಲಿ 27-28% ಮಂದಿ ಮಾತ್ರ ಇಲ್ಲಿಯವರೆಗೆ ಬೂಸ್ಟರ್ ಡೋಸ್ ಪಡೆದಿದ್ದಾರೆ. ವಿಶ್ವಾದ್ಯಂತ ಕೊರೊನಾ ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಬೂಸ್ಟರ್ ಡೋಸ್ ಪಡೆದುಕೊಳ್ಳುವುದು ಉತ್ತಮ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Corona Virus: ಕೊರೋನಾ ಇನ್ನೂ ಮುಗಿದಿಲ್ಲ, ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಧರಿಸಿ: ಕೇಂದ್ರದ ಸಲಹೆ
ಕೇವಲ 27-28% ಜನರು ಮಾತ್ರ ಮುನ್ನೆಚ್ಚರಿಕಾ ಕ್ರಮವಾಗಿ ಬೂಸ್ಟರ್ ಡೋಸ್ ಪಡೆದುಕೊಂಡಿದ್ದಾರೆ. ಹೀಗಾಗಿ ವಿಶೇಷವಾಗಿ ಹಿರಿಯ ನಾಗರಿಕರು ಎಚ್ಚರದಿಂದ ಇರಬೇಕು ಎಂದು ನಾವು ಹೇಳುತ್ತೇವೆ. ಪ್ರತಿಯೊಬ್ಬರು ಕೂಡ ಎಚ್ಚರದಿಂದಬೇಕು ಎಂದು ಸಲಹೆ ನೀಡುತ್ತೇವೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ