Yogaraj Bhat: ಇದೇನು ದೇವ್ಲೇ ದೇವ್ಲೇ, ತಲೆಕೆಟ್ಟ ಭಟ್ರು ಎಬುಡ ತಬುಡ! ಯೋಗರಾಜ್ ಭಟ್ರ ಕಾಮಿಡಿ ವಿಡಿಯೋ ಶೇರ್ ಮಾಡಿದ ಗಣೇಶ್

ಗಾಳಿಪಟ 2 (Gaalipata 2) ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದೀಗ ಯಶಸ್ಸಿನ ಖುಷಿಯಲ್ಲಿ ಭಟ್ಟರು ತೇಲಾಡುತ್ತಾ ಇದ್ದಾರಂತೆ. ಹೀಗಂತೆ ಖುದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಹೇಳಿದ್ದಾರೆ. ಈ ಬಗ್ಗೆ ಭಟ್ಟರ ಫನ್ನಿ ವಿಡಿಯೋವನ್ನು (Funny Video) ಗಣೇಶ್ ತಮ್ಮ ಫೇಸ್‌ಬುಕ್‌ನಲ್ಲಿ (Facebook) ಶೇರ್ ಮಾಡಿದ್ದಾರೆ.

ನಿರ್ದೇಶಕ ಯೋಗರಾಜ್ ಭಟ್

ನಿರ್ದೇಶಕ ಯೋಗರಾಜ್ ಭಟ್

  • Share this:
ಕನ್ನಡ ಚಿತ್ರರಂಗದ (Kannada Film Industry) ಪ್ರತಿಭಾನ್ವಿತ ನಿರ್ದೇಶಕ (Director), ಕಥೆ, ಚಿತ್ರಕಥೆಗಾರ, ಚಿತ್ರ ಸಾಹಿತಿ, ಸಂಭಾಷಣಾಕಾರ, ನಿರ್ಮಾಪಕ (Producer) ಮತ್ತು ಪೋಷಕ ನಟರೂ ಆಗಿರುವ ಯೋಗರಾಜ್ ಭಟ್‌ (Yogaraj Bhat) ಅವರು ನಗುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಯಾಕೆಂದರೆ ಸದ್ಯ ಅವರು ನಿರ್ದೇಶಿಸಿ, ಗೋಲ್ಡನ್ ಸ್ಟಾರ್ ಗಣೇಶ್ (Golden Star Ganesh), ದಿಗಂತ್, ಪವನ್, ಶರ್ಮಿಳಾ ಮಾಂಡ್ರೆ ಮತ್ತಿತರರು ನಟಿಸಿರುವ ಗಾಳಿಪಟ 2 (Gaalipata 2) ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ. ಇದೀಗ ಯಶಸ್ಸಿನ ಖುಷಿಯಲ್ಲಿ ಭಟ್ಟರು ತೇಲಾಡುತ್ತಾ ಇದ್ದಾರಂತೆ. ಹೀಗಂತೆ ಖುದ್ದು ಗೋಲ್ಡನ್ ಸ್ಟಾರ್ ಗಣೇಶ್ ಅವರೇ ಹೇಳಿದ್ದಾರೆ. ಈ ಬಗ್ಗೆ ಭಟ್ಟರ ಫನ್ನಿ ವಿಡಿಯೋವನ್ನು (Funny Video) ಗಣೇಶ್ ತಮ್ಮ ಫೇಸ್‌ಬುಕ್‌ನಲ್ಲಿ (Facebook) ಶೇರ್ ಮಾಡಿದ್ದಾರೆ. ಅದನ್ನು ನೋಡಿದ ಅಭಿಮಾನಿಗಳು ತಲೆಕೆಟ್ಟ ಭಟ್ಟ ಎಬುಡ ತಬುಡ! ಅಂತ ಅವರದ್ದೇ ಹಾಡನ್ನು ಗುನುಗುತ್ತಿದ್ದಾರಂತೆ!

ಭಟ್ಟರ ಫನ್ನಿ ವಿಡಿಯೋ ಶೇರ್ ಮಾಡಿದ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್ ತಮ್ಮ ಫೇಸ್‌ಬುಕ್ ಪೇಜ್‌ನಲ್ಲಿ ಯೋಗರಾಜ್‌ ಭಟ್ಟರ 15 ಸೆಕೆಂಡ್‌ಗಳ ವಿಡಿಯೋ ಶೇರ್ ಮಾಡಿದ್ದಾರೆ. ನಾನು ಹೇಳ್ದೆ 'ನಮ್ ಭಟ್ರು ಲೂಸ್ ಆಗವ್ರೆ' ಅಂತ. ಯಾರೂ ನಂಬಲಿಲ್ಲ. ಇಲ್ಲಿ ನೋಡಿ. 'ಲೂಸ್ ಆಗವ್ರೆ' ಅಂತ ಭಟ್ರ ಹೆಂಡತಿ ಮತ್ತೆ ಮಗಳೇ ಕನ್ಫರ್ಮ್ ಮಾಡ್ತಿದಾರೆ. ಗಾಳಿಪಟ ರಿಲೀಸ್ ಆಗಿ ಪ್ರಪಂಚಾದ್ಯಂತ ಅಭಿಮಾನಿಗಳು ಜಾಸ್ತಿ ಪ್ರೀತಿ ತೋರ್ಸಕ್ಕೆ ಶುರು ಮಾಡಿದ್ಮೇಲಂತೂ ಕಂಟ್ರೋಲ್‌ಗೇ ಸಿಗದೆ ಹೆಂಗೆಂಗೋ ಆಡ್ತಾವ್ರೆ! 'ಕೈಲಿ ತಮಟೆ ಕೊಡ್ಬೇಡಿ 'EPIC ಅಂತ ಗಣೇಶ್ ಬರೆದಿದ್ದಾರೆ. ಈ ವಿಡಿಯೋವನ್ನು ಅವರ ಫೇಸ್‌ ಬುಕ್ ಪೇಜ್‌ನಲ್ಲಿ ನೋಡಬಹುದು.

ಆ ವಿಡಿಯೋದಲ್ಲಿ ಏನಿದೆ?

ವಿಡಿಯೋದಲ್ಲಿ ಅವರು ವಿಚಿತ್ರ ಭಂಗಿಯಲ್ಲಿ ಕುಳಿತು ಶೂ ಹಾಕಿಕೊಂಡಿದ್ದಾರೆ. ಅವರ ಮಗಳು ಇದನ್ನು ರೆಕಾರ್ಡ್ ಮಾಡಿದ್ದಾರೆ. ಇದೀಗ ಈ ವಿಡಿಯೋಗೆ ಅವರ ಅಭಿಮಾನಿಗಳು, ನೆಟ್ಟಿಗರು ವಿವಿಧ ರೀತಿಯಲ್ಲಿ, ಕಾಮಿಡಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Gaalipata 2: ಭಟ್ರು ಜೊತೆ ಗಣಿ ಬಿಟ್ಟ ಗಾಳಿಪಟ-2 ಸೂಪರ್​ ಹಿಟ್​; ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​

ಭಟ್ರಿಗೆ ಲಿಪ್ ಟು ಲಿಪ್ ಕಿಸ್ ಕೊಟ್ಟಿದ್ದ ಅಭಿಮಾನಿ

ಯೋಗರಾಜ್ ಭಟ್ ತುಟಿಗೆ ಅಭಿಮಾನಿಯೊಬ್ಬ ಏಕಾಏಕಾ ಮುತ್ತಿಕ್ಕಿದ್ದಾನೆ. ಸದ್ಯ ಈ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳ ಸಂಭ್ರಮದ ಮಧ್ಯೆ ಎಂಟ್ರಿ ಕೊಟ್ಟ ಭಟ್ರನ್ನು ತಬ್ಬಿ ಖುಷಿ ಸಂತಸ ಪಟ್ಟರು. ಬಳಿಕ ಅಭಿಮಾನಿಯೊಬ್ಬ ಭಟ್ಟರ ತುಟಿಗೆ ಮುತ್ತಿಟ್ಟಿದ್ದಾನೆ. ಈ ವಿಡಿಯೋ ನೋಡಿದ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ಗಾಳಿಪಟ 2 ಯಶಸ್ವಿ ಪ್ರದರ್ಶನ

ಮತ್ತೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಯೋಗರಾಜ್ ಭಟ್ ಒಂದಾಗಿದ್ದಾರೆ. ಅವರಿಬ್ಬರ ಕಾಂಬಿನೇಷನ್‌ನಲ್ಲಿ ಬಂದ ಗಾಳಿಪಟ 2 ಕಳೆದ ವಾರವಷ್ಟೇ ರಿಲೀಸ್ ಆಗಿದೆ. ಸಿನಿಮಾ ರಿಲೀಸ್ ಆಗಿ ಸೂಪರ್ ಡೂಪರ್ ರೆಸ್ಪಾನ್ಸ್ ಪಡೆದುಕೊಳ್ತಿದೆ. ಚಿತ್ರ ಬಿಡುಗಡೆ ಆದ ಮೊದಲ ದಿನವೇ ಬಾಕ್ಸ್ ಆಫೀಸ್ ನಲ್ಲಿ ಸೌಂಡ್ ಮಾಡುತ್ತಿದ್ದು ಭಟ್ರು- ಗಣಿ ಜೋಡಿ ಕೋಟಿ ಕೋಟಿ ಗಳಿಕೆ ಮಾಡಿ ಹೊಸ ದಾಖಲೆ ಬರೆಯುತ್ತಿದ್ದಾರೆ.

ಇದನ್ನೂ ಓದಿ: Gaalipata 2 Review: ಕಾಮಿಡಿಯೂ, ಎಮೋಷನ್​​ಗಳೂ - ಭಾವನೆಗಳ ಬಣ್ಣ ತುಂಬಿ ಹಾರಿದ ಗಾಳಿಪಟ!

ಬಾಕ್ಸ್ ಆಫೀಸ್‌ನಲ್ಲಿ ಗಾಳಿಪಟ 2 ಸದ್ದು

ಗಾಳಿಪಟ 2 ತಂಡ ಮೊದಲ ದಿನವೇ 20 ಕೋಟಿ ಗಳಿಕೆ ಮಾಡಿದ್ದಾರೆ ಎನ್ನಲಾಗಿದೆ. ಗಾಳಿಪಟ 2 ಸಿನಿಮಾ ಮೊದಲ ದಿನವೆ ರಾಜ್ಯದಲ್ಲಿ 700 ಶೋಗಳು. ಹೊರ ರಾಜ್ಯದಲ್ಲಿ 200, ವಿದೇಶದಲ್ಲಿ 250 ಶೋ ಪ್ರದರ್ಶನವಾಗಿತ್ತು. ಒಟ್ಟಾರೆ 1150 ಶೋ ಪ್ರದರ್ಶನವಾಗಿದ್ದು. 15 ರಿಂದ 20 ಕೋಟಿ ಮೊದಲ ದಿನದಲ್ಲೇ ಗಳಿಕೆ ಮಾಡಿದೆ ಎಂದು ಅಂದಾಜು ಮಾಡಲಾಗಿದೆ.
Published by:Annappa Achari
First published: