ಬೆಳಗ್ಗಿನ ಉಪಾಹಾರವು (Morning Breakfast) ದಿನದ ಪ್ರಮುಖ ಊಟವಾಗಿದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬೆಳಗಿನ ತಿಂಡಿಯು ದೀರ್ಘಕಾಲ ಹೊಟ್ಟೆ (Stomach) ತುಂಬಿಸಿಡಬೇಕು. ಶಕ್ತಿ (Energy) ನೀಡಬೇಕು. ದೇಹಕ್ಕೆ (Body) ಉತ್ತಮ ಹಾಗೂ ಅಗತ್ಯ ಪೋಷಕಾಂಶಗಳನ್ನು (Nutrients) ಒದಗಿಸುವಂತಿರಬೇಕು. ಇದಕ್ಕೆಲ್ಲಾ ಬೆಳಗ್ಗಿನ ತಿಂಡಿಗೆ ಬಿಳಿ ಬ್ರೆಡ್ ಮತ್ತು ಜಾಮ್ ತಿನ್ನುವ ಬದಲು ಆರೋಗ್ಯಕರ (Health) ಮತ್ತು ಪೋಷಕಾಂಶ ಸಮೃದ್ಧ ತರಕಾರಿಗಳು ಮತ್ತು ಬೇಳೆಕಾಳುಗಳ ಖಾದ್ಯ (Recipes) ಮಾಡಿ ಸವಿಯುವುದು ಉತ್ತಮ. ಇವುಗಳು ಆರೋಗ್ಯಕ್ಕೆ ಉತ್ತಮ ಖಾದ್ಯಗಳು. ದೇಹಕ್ಕೆ ದಿನವಿಡೀ ಅಗತ್ಯವಿರುವ ಶಕ್ತಿ ಮತ್ತು ಚೈತನ್ಯ ನೀಡುತ್ತವೆ. ಬೆಳಗ್ಗಿನ ತಿಂಡಿಗೆ ನೀವು ಬೀಟ್ರೂಟ್ ನ ಕೆಲವು ಖಾದ್ಯಗಳನ್ನು ಮಾಡಿ ತಿನ್ನಿ,್ಒ
ಬೆಳಗಿನ ತಿಂಡಿಗೆ ರುಚಿಕರ ಮತ್ತು ಆರೋಗ್ಯಕರ ಬೀಟ್ರೂಟ್ ರೆಸಿಪಿ
ಬೆಳಗ್ಗಿನ ಉಪಾಹಾರಕ್ಕಾಗಿ ನಾವು ಇಂದು ಪೋಷಕಾಂಶ ಸಮೃದ್ಧ ಮತ್ತು ಆರೋಗ್ಯಕರ ಬೀಟ್ರೂಟ್ ನ ಕೆಲವು ರೆಸಿಪಿಗಳ ಬಗ್ಗೆ ನೋಡೋಣ. ಇದು ದೇಹಕ್ಕೆ ಅಗತ್ಯ ಪೌಷ್ಟಿಕಾಂಶ ನೀಡುತ್ತದೆ.
ಆಹಾರದಲ್ಲಿ ಋತುಮಾನದ ತರಕಾರಿ ಎನ್ನಿಸಿರುವ ಹಾಗೂ ಎಲ್ಲಾ ಕಾಲದಲ್ಲಿಯೂ ಸಿಗುವ ಬೀಟ್ರೂಟ್ ಸೇರಿಸಿದರೆ ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ.
ಬೀಟ್ರೂಟ್ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹೃದಯ ಸ್ಥಿತಿ ಸುಧಾರಿಸುತ್ತದೆ. ರಕ್ತ ಶುದ್ಧೀಕರಿಸುತ್ತದೆ. ಜೊತೆಗೆ ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಹಾಗಾಗಿ ಬೀಟ್ರೂಟ್ ನೋಡಿ ಮೂಗು ಮುರಿಯದೇ, ನಿಮ್ಮ ನಿಯಮಿತ ಆಹಾರದಲ್ಲಿ ಸೇರಿಸಿ.
ಇಲ್ಲಿ ನಾವು ಕೆಲವು ರುಚಿಕರ ಬೀಟ್ರೂಟ್ ಪಾಕವಿಧಾನಗಳ ಬಗ್ಗೆ ತಿಳಿಯೋಣ.
ಬೆಳಗಿನ ಉಪಾಹಾರಕ್ಕೆ ಬೀಟ್ರೂಟ್ ಚಿಲ್ಲಾ ರೆಸಿಪಿ
ಬೇಕಾಗುವ ಪದಾರ್ಥಗಳು
1 ಕಪ್ ಕಡಲೆಬೇಳೆ ಹಿಟ್ಟು, 2 ಚಿಟಿಕೆ ಇಂಗು, ಅಗತ್ಯವಿರುವಷ್ಟು ಉಪ್ಪು, ಕುದಿಸಿದ 2 ದೊಡ್ಡ ಬೀಟ್ರೂಟ್, 2 ಟೇಬಲ್ಸ್ಪೂನ್ ಎಣ್ಣೆ, 1/2 ಕಪ್ ಓಟ್ಸ್ ಪುಡಿ, 1/2 ಚಮಚ ಕೇರಂ ಬೀಜಗಳು, 2 ಚಮಚ ಕೊತ್ತಂಬರಿ ಸೊಪ್ಪು ಮತ್ತು ನುಣ್ಣಗೆ ಕತ್ತರಿಸಿದ ಒಂದು ದೊಡ್ಡ ಈರುಳ್ಳಿ ಬೇಕು.
ಬೀಟ್ರೂಟ್ ಚಿಲ್ಲಾ ರೆಸಿಪಿ ಮಾಡುವ ವಿಧಾನ
ಮೊದಲು ಹಿಟ್ಟಿಗೆ ಓಟ್ಸ್, ಕೇರಮ್ ಬೀಜ, ಉಪ್ಪು ಮತ್ತು ಇಂಗು ಸೇರಿಸಿ. ಚೆನ್ನಾಗಿ ಮಿಶ್ರಣ ಮಾಡಿ. ನಂತರ ಬೇಯಿಸಿದ ಬೀಟ್ರೂಟ್ಗಳನ್ನು ಬ್ಲೆಂಡರ್ ಗೆ ಸೇರಿಸಿ ಮತ್ತು ಮೃದುವಾದ ಹಿಟ್ಟು ತಯಾರಿಸಿಕೊಳ್ಳಿ.
ಬೀಟ್ರೂಟ್ ಪ್ಯೂರೀಯನ್ನು ಇತರ ಪದಾರ್ಥದ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಮಧ್ಯಮ ಸ್ಥಿರತೆ ಬರುವವರೆಗೆ ಬ್ಯಾಟರ್ ಮಾಡಿ. ನಂತರ ಕೊತ್ತಂಬರಿ ಸೊಪ್ಪು, ಕತ್ತರಿಸಿದ ಈರುಳ್ಳಿ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ನಾನ್ ಸ್ಟಿಕ್ ತವಾಗೆ ಕೆಲವು ಹನಿ ಎಣ್ಣೆ ಸವರಿ ಎರಡು ಲೋಟ ಹಿಟ್ಟನ್ನು ಸುರಿದು ವೃತ್ತಾಕಾರಕ್ಕೆ ಹರಡಿ. ಈಗ ಚಿಲ್ಲಾ ಕಂದು ಮತ್ತು ಗರಿಗರಿ ಆಗುವವರೆಗೆ ಎರಡೂ ಬದಿ ಚೆನ್ನಾಗಿ ಬೇಯಿಸಿ. ಸರ್ವ್ ಮಾಡಿ. ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರಿ.
ಬೀಟ್ರೂಟ್ ಪರೋಟ ರೆಸಿಪಿ
ಇದಕ್ಕಾಗಿ ಎರಡು ಕಪ್ ಗೋಧಿ ಹಿಟ್ಟು, ಬೇಯಿಸಿದ ಎರಡು ಬೀಟ್ರೂಟ್, ಉಪ್ಪು, ಸಣ್ಣಗೆ ಕೊಚ್ಚಿದ ಈರುಳ್ಳಿ, ಮಸಾಲೆ ಬೇಕು. ಮೊದಲು ಬೇಯಿಸಿದ ಬೀಟ್ರೂಟ್ ಮಿಕ್ಸರ್ ಗೆ ಹಾಕಿ ರುಬ್ಬಿರಿ. ನಂತರ ಇದನ್ನು ಹಿಟ್ಟಿಗೆ ಹಾಕಿ ಚೆನ್ನಾಗಿ ಕಲೆಸಿ. ನಂತರ ಎಲ್ಲಾ ಮಸಾಲೆ, ಈರುಳ್ಳಿ ಹಾಕಿ ಕಲೆಸಿ.
ಇದನ್ನೂ ಓದಿ: ಅಸ್ತಮಾ ಚಿಕಿತ್ಸೆಯಲ್ಲಿ ಸ್ಟೀರಾಯ್ಡ್ ಬಳಸುತ್ತಾರಾ? ಅದು ರೋಗಿಯ ತೂಕ ಹೆಚ್ಚಿಸುತ್ತಾ?
ನಂತರ ಹಿಟ್ಟನ್ನು ಹತ್ತು ನಿಮಿಷ ಬಿಟ್ಟು ಸಣ್ಣ ಉಂಡೆ ತಯಾರಿಸಿ, ವೃತ್ತಾಕಾರದಲ್ಲಿ ಲಟ್ಟಿಸಿ. ನಂತರ ತವೆಗೆ ಹಾಕಿ, ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ಸರ್ವ್ ಮಾಡಿ. ನಿಮ್ಮಿಷ್ಟದ ಪಲ್ಯ ಮತ್ತು ಚಟ್ನಿ ಜೊತೆ ಸವಿಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ