• ಹೋಂ
  • »
  • ನ್ಯೂಸ್
  • »
  • Breaking News
  • »
  • ಕೋವಿಡ್​ ಆರ್ಥಿಕ ಸಂಕಷ್ಟಕ್ಕೆ ನಲುಗಿದ ಇಡೀ ಕುಟುಂಬವೇ ಏಕಾಏಕಿ ನಾಪತ್ತೆ!

ಕೋವಿಡ್​ ಆರ್ಥಿಕ ಸಂಕಷ್ಟಕ್ಕೆ ನಲುಗಿದ ಇಡೀ ಕುಟುಂಬವೇ ಏಕಾಏಕಿ ನಾಪತ್ತೆ!

ಕೋವಿಡ್​ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ  ಕುಟುಂಬವೊಂದು ಬದುಕು ಅಂತ್ಯಕಾಣಿಸುವ ಧೈರ್ಯ ಮಾಡಿ, ನಾಪತ್ತೆಯಾಗಿರುವ ಪ್ರಕರಣ ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿ ನಡೆದಿದೆ

ಕೋವಿಡ್​ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕುಟುಂಬವೊಂದು ಬದುಕು ಅಂತ್ಯಕಾಣಿಸುವ ಧೈರ್ಯ ಮಾಡಿ, ನಾಪತ್ತೆಯಾಗಿರುವ ಪ್ರಕರಣ ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿ ನಡೆದಿದೆ

ಕೋವಿಡ್​ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಕುಟುಂಬವೊಂದು ಬದುಕು ಅಂತ್ಯಕಾಣಿಸುವ ಧೈರ್ಯ ಮಾಡಿ, ನಾಪತ್ತೆಯಾಗಿರುವ ಪ್ರಕರಣ ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿ ನಡೆದಿದೆ

  • Share this:

    ಬೆಂಗಳೂರು (ಆ. 18): ಕಡಿಮೆ ಆದಾಯ, ಸಾಲದ ಭೂತ ಇದ್ದರೂ ಅದನ್ನು ಕಷ್ಟಪಟ್ಟು ತೀರಿಸುವ ಛಲದೊಂದಿಗೆ ನೆಮ್ಮದಿಯ ಬದುಕು ಕಾಣುತ್ತಿದ್ದ ಅದೆಷ್ಟೋ ಕೆಳ ಮಧ್ಯಮ ವರ್ಗದ ಕುಟುಂಬಗಳು ಕೋವಿಡ್​ ಸೋಂಕಿನಿಂದ ನಲುಗಿದೆ. ಕಳೆದ ಒಂದೂವರೆ ವರ್ಷದಿಂದ ಆದಾಯವಿಲ್ಲದೇ, ಸಾಲದ ಬಡ್ಡಿ ಮಿತಿ ಮೀರಿ ಜನರ ಬದುಕು ನಿರ್ವಹಣೆಯೇ ಕಷ್ಟವಾಗಿದೆ. ಕೋವಿಡ್​ ಲಾಕ್​ಡೌನ್​ ಅಕ್ಷರಶಃ ಅನೇಕ ಕೆಳ ಮಧ್ಯಮ ವರ್ಗದ ಕುಟುಂಬಕ್ಕೆ ಶಾಪವಾಗಿ ಪರಿಣಮಿಸಿದ್ದು ಸುಳ್ಳಲ್ಲ. ಅದೇ ರೀತಿ ಕೋವಿಡ್​ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸುಂದರ ಕುಟುಂಬವೊಂದು ಬದುಕು ಅಂತ್ಯಕಾಣಿಸುವ ಧೈರ್ಯ ಮಾಡಿ, ನಾಪತ್ತೆಯಾಗಿರುವ ಪ್ರಕರಣ ಬೆಂಗಳೂರಿನ ಟಿ ದಾಸರಹಳ್ಳಿಯಲ್ಲಿ ನಡೆದಿದೆ.


    ಕೋವಿಡ್​ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಜೀವನ ನಿರ್ವಹಣೆ ಬಲು ಕಷ್ಟವಾಗಿದೆ. ಇದರ ಜೊತೆ ಅವಮಾನಗಳು ಇನ್ನಷ್ಟು ಬರೆ ಎಳೆದಿದ್ದು, ಬದುಕಲು ಆಗದು ಎಂದು ಕುಟುಂಬವೊಂದು ಸೂಸೈಡ್​ ನೋಟ್​ ಬರೆದು ನಾಪತ್ತೆಯಾಗಿರುವ ಪ್ರಕರಣ ಬಾಗಲಗುಂಟೆ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕುಟುಂಬದ ಹುಡುಕಾಟಕ್ಕೆ ಮುಂದಾಗಿದ್ದಾರೆ.


    ಗಾಂಧಿ ಎಂಬ 43 ವರ್ಷದ ವ್ಯಕ್ತಿ ಟಿ ದಾಸರಹಳ್ಳಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅವರ ಹೆಂಡತಿ ಶಾಲಿನಿ ಕಂಪ್ಯೂಟರ್​ ಆಪರೇಟರ್​ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ನೆಮ್ಮದಿಯ ಜೀವನ ನಡೆಸುತ್ತಿದ್ದರು. ಆದರೆ, ಕೋವಿಡ್​ನಿಂದ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು, ಸಾಲದ ಹೊರೆ ಹೆಚ್ಚಿತ್ತು. ನಿತ್ಯ ಸಾಲಗಾರರು ಮನೆ ಮುಂದೆ ಬಂದು ಒತ್ತಡ ಹೇರಲು ಶುರು ಮಾಡಿದರು. ಏಕಾಏಕಿ ಏಳು ಲಕ್ಷ ಹಣ ತರುವುದು ದುಸ್ತರವಾಗಿತ್ತು. ಈ ಎಲ್ಲಾ ಕಾರಣದಿಂದ ಬೆಸತ್ತ ಕುಟುಂಬ ಮನೆಯಲ್ಲಿ ಸೂಸೈಡ್​ ನೋಟ್​ ಬರೆದುಟ್ಟು ನಾಪತ್ತೆಯಾಗಿದ್ದಾರೆ.


    ಇದನ್ನು ಓದಿ: ಸಿದ್ದಾಪುರದ ಸಾಂತ್ವನ ಕೇಂದ್ರದ ಗೋಡೆ ಹಾರಿ ವಿದೇಶಿ ಮಹಿಳೆಯರು ಪರಾರಿ


    "ನಮಗೆ ಜೀವನ ನಡೆಸಲು ತುಂಬಾ ಕಷ್ಟವಾಗುತ್ತಿದೆ. ನಮಗೆ, ಈ ಜೀವನ ಬೇಡವೇ ಬೇಡ. ದಯಮಾಡಿ ನಮ್ಮನ್ನ ಸಾಯಲು ಬಿಡಿ." ತೀರ್ಥ ಕ್ಷೇತ್ರ ದರ್ಶನ ಮಾಡಿ ಜೀವನ ಅಂತ್ಯ ಮಾಡಿಕೊಳ್ಳುತ್ತೇವೆ ಎಂದು ಪತ್ರದಲ್ಲಿ ಬರೆದಿಟ್ಟಿದ್ದಾರೆ.


    ಪ್ರಕರಣ ಬಯಲಿಗೆ ಬಂದಿದ್ದೇಗೆ?
    ಕಳೆದ ಐದು ದಿನಗಳ ಹಿಂದೆಯೇ ಕುಟುಂಬ ನಾಪತ್ತೆಯಾಗಿದ್ದು, ಈ ಬಗ್ಗೆ ಯಾರಿಗೂ ಸುಳಿವಿಲ್ಲ. ಶಾಲಿನಿ ಬಾಮೈದ ಆಗಸ್ಟ್​ 12ರಂದು ಕರೆ ಮಾಡಿದಾಗ ಮನೆಯವರ ಎಲ್ಲಾ ಫೋನ್​ ನಂಬರ್​ ಸ್ವಿಚ್​​ ಆಫ್​ ಬಂದಿದೆ. ಈ ವೇಳೆ ಅನುಮಾನಗೊಂಡು ಮನೆ ಮಾಲೀಕರಿಗೆ ಕರೆ ಮಾಡಿದಾಗ ಅವರು ಮನೆ ವಸ್ತು ಎಲ್ಲಾ ತೆಗೆದುಕೊಂಡು ಖಾಲಿ ಮಾಡಿಕೊಂಡು ಹೋಗಿದ್ದಾರೆ ಎಂದಿದ್ದಾರೆ.


    ಮನೆ ಮಾಲೀಕರ ಮಾತಿಗೆ ಸಮಾಧಾನವಾಗದೇ, ಬಾಮೈದ ಚಿರಂಜೀವಿ ಮನೆಗೆ ಬಂದು ನೋಡಿದಾಗ ಮನೆಯ ಸೋಫಾದ ಮೇಲೆ ಈ ಆತ್ಮಹತ್ಯೆ ಪತ್ರ ಸಿಕ್ಕಿದೆ. ಈ ಕುರಿತು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದು, ಕುಟುಂಬ ಹುಡುಕಿಕೊಂಡುವಂತೆ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿರುವ ಪೊಲೀಸರು ಕುಟುಂಬದ ಶೋಧಕ್ಕೆ ಮುಂದಾಗಿದ್ದಾರೆ.


    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.

    First published: