• ಹೋಂ
  • »
  • ನ್ಯೂಸ್
  • »
  • Breaking News
  • »
  • G Parameshwar: 'ಸಿಎಂ ಆಗೋ ಲಕ್ಷಣ ಕಾಣಿಸುತ್ತಿಲ್ಲ ಗಡ್ಡ ಬೋಳಿಸು' -ಕಾಯಕರ್ತರ ಪ್ರೀತಿ ಕಂಡು ಕಣ್ಣೀರಿಟ್ಟ ಜಿ ಪರಮೇಶ್ವರ್

G Parameshwar: 'ಸಿಎಂ ಆಗೋ ಲಕ್ಷಣ ಕಾಣಿಸುತ್ತಿಲ್ಲ ಗಡ್ಡ ಬೋಳಿಸು' -ಕಾಯಕರ್ತರ ಪ್ರೀತಿ ಕಂಡು ಕಣ್ಣೀರಿಟ್ಟ ಜಿ ಪರಮೇಶ್ವರ್

ಡಾ ಜಿ ಪರಮೇಶ್ವರ್, ಮಾಜಿ ಡಿಸಿಎಂ

ಡಾ ಜಿ ಪರಮೇಶ್ವರ್, ಮಾಜಿ ಡಿಸಿಎಂ

ನಾನು ಸಿಎಂ ಆಗಲಿ ಅಂತ ಹುಣಸೇಮರದಹಳ್ಳಿಯ ವ್ಯಕ್ತಿ ಹರಕೆ ಮಾಡಿಕೊಂಡಿದ್ದಾನೆ. ನಾನು ಸಿಎಂ ಆಗೋವರೆಗೂ ಗಡ್ಡ ಬೋಳಿಸಲ್ಲ ಅಂತ ಶಪಥ ಮಾಡಿದ್ದಾನೆ ಎಂದು ಪರಮೇಶ್ವರ್ ಕಾಂಗ್ರೆಸ್ ಸಭೆಯಲ್ಲಿ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.

  • Share this:

ತುಮಕೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Elections 2023) ಹತ್ತಿರವಾಗುತ್ತಿದ್ದಂತೆ ಕಾಂಗ್ರೆಸ್​​ ಪಕ್ಷದಲ್ಲಿ (Congress) ಮುಂದಿನ ಸಿಎಂ ಚರ್ಚೆಗೆ ನಾಯಕರು ಬ್ರೇಕ್​ ಹಾಕಿದ್ದಂತೆ ಕಾಣುತ್ತಿದೆ. ಇದಕ್ಕೂ ಮುನ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ (Siddaramiah) ಅವರ ಬೆಂಬಲಿಗರು ಹೋದಲ್ಲಿ ಬಂದಲ್ಲಿ ಮುಂದಿನ ಸಿಎಂ (Next CM) ಘೋಷಣೆಗಳನ್ನು ಕೂಗುತ್ತಿದ್ದರು. ಆದರೆ ಚುನಾವಣೆಯ ಸಮಯದಲ್ಲಿ ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಬಾರದು, ಅಲ್ಲದೆ ಬಿಜೆಪಿ ಹಾಗೂ ಜೆಡಿಎಸ್​​ ನಾಯಕರ ಟೀಕೆಗಳಿಗೆ ಗುರಿಯಾಗಬಹುದು ಎಂಬ ಕಾರಣದಿಂದ ಮುಂದಿನ ಸಿಎಂ ಘೋಷಣೆಗೆ ಬ್ರೇಕ್​ ಹಾಕಿದ್ದಾರೆ ಎನ್ನಲಾಗಿದೆ. ಆದರೆ ಈ ನಡುವೆ ಕಾರ್ಯಕರ್ತನ ಅಭಿಮಾನ ಕಂಡು ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ (G Parameshwar) ಕಣ್ಣೀರಿಟ್ಟ ಘಟನೆ ತುಮಕೂರಿನ (Tumakuru) ಕೊರಟಗೆರೆಯ ಮಾರುತಿ ಕಲ್ಯಾಣ ಮಂಟದಲ್ಲಿ ನಡೆದಿದೆ.


ನಾನು ಸಿಎಂ ಆಗಲಿ ಅಂತ ಹುಣಸೇಮರದಹಳ್ಳಿಯ ವ್ಯಕ್ತಿ ಹರಕೆ ಮಾಡಿಕೊಂಡಿದ್ದಾನೆ.


ಇಂದು ಕೊರಟಗೆರೆಯಲ್ಲಿ ಡಾ.ಜಿ.ಪರಮೇಶ್ವರ್ ಅವರನ್ನು ಬೆಂಬಲಿಸಿ ಗೊಲ್ಲ ಸಮುದಾಯ ಸಭೆ ಏರ್ಪಡಿಸಲಾಗಿತ್ತು. ಈ ವೇಳೆ ಕಾರ್ಯಕರ್ತರನ್ನು ಉದ್ದೇಶಿ ಮಾತನಾಡಿದ ಪರಮೇಶ್ವರ್ ಅವರು, ತಮ್ಮ ವಿಶೇಷ ಅಭಿಮಾನಿ ದೊಡ್ಡ ಮಾದಪ್ಪ ಎಂಬಾತನ ಬಗ್ಗೆ ಪ್ರಸ್ತಾಪಿಸಿದರು.


ಡಾ ಜಿ ಪರಮೇಶ್ವರ್, ಮಾಜಿ ಡಿಸಿಎಂ


ಇದನ್ನೂ ಓದಿ: Brahmin CM Controversy: ನನ್ನ ಪ್ರಶ್ನೆಗೆ ಉತ್ತರ ಕೊಡುವ ಧಮ್ ತಾಕತ್ತು ತೋರಿಸುತ್ತಿಲ್ಲ; ಬಿಜೆಪಿ ನಾಯಕರಿಗೆ ಕುಮಾರಸ್ವಾಮಿ ತಿರುಗೇಟು


ನಾನು ಸಿಎಂ ಆಗಲಿ ಅಂತ ಹುಣಸೇಮರದಹಳ್ಳಿಯ ವ್ಯಕ್ತಿ ಹರಕೆ ಮಾಡಿಕೊಂಡಿದ್ದಾನೆ. ನಾನು ಸಿಎಂ ಆಗೋವರೆಗೂ ಗಡ್ಡ ಬೋಳಿಸಲ್ಲ ಅಂತ ಶಪಥ ಮಾಡಿದ್ದಾನೆ. ಈ ವ್ಯಕ್ತಿಯ ಅಭಿಮಾನಕ್ಕೆ ನಾನು ಏನು ಹೇಳಲಿ. ಇವತ್ತಿನವರೆಗೂ ಆತ ಗಡ್ಡ ಬಿಟ್ಟುಕೊಂಡಿದ್ದಾನೆ. ಮೊನ್ನೆ ಅವನಿಗೆ ಹೇಳ್ದೆ, ಯಾಕೋ ಸಿಎಂ ಆಗೋ ತರ ಕಾಣಲಪ್ಪ, ಗಡ್ಡ ಬೋಳಿಸು ಅಂತ. ಆದರೆ ಆತ ಸುಮ್ಮನಿರಣ್ಣ, ಆಗೇ ಆಗುತ್ತೆ ಅನ್ನೋ ವಿಶ್ವಾಸ ತೋರಿಸಿದ್ದಾನೆ.


ಯಾದವ ಸಮುದಾಯದ ಪ್ರೀತಿಯನ್ನ ಎಂದು ಮರೆಯಲ್ಲ


ಅವನಿಗೂ ನನಗು ಏನು ಸಂಬಂಧ. ನನ್ನ ಬಗ್ಗೆ ಅಷ್ಟೊಂದು ಪ್ರೀತಿ, ಅಭಿಮಾನ ಇಟ್ಟುಕೊಂಡಿದ್ದಾನೆ. ನಾನು ಅವನಿಗೆ ಏನು ಕೊಟ್ಟಿದ್ದೀನಿ. ಯಾದವ ಸಮುದಾಯದ ಪ್ರೀತಿಯನ್ನ ಎಂದು ಮರೆಯಲ್ಲ. ಆತನ ವಿಶ್ವಾಸ ನನಗೆ ಸಾಕಷ್ಟು ಧೈರ್ಯ ತಂದಿದೆ. ಆ ಪುಣ್ಯಾತ್ಮ ನನ್ನ ಬಗ್ಗೆ ಇಷ್ಟೊಂದು ಪ್ರೀತಿ, ವಿಶ್ವಾಸ ಇಟ್ಟುಕೊಂಡಿದ್ದಾನೆ. ಈ ಸಮುದಾಯ ನನ್ನನ್ನು ಸಾಕಿಗೆ ಅನ್ನೋದಕ್ಕೆ ಅವನೇ ಸಾಕ್ಷಿ. ಇದು ನನ್ನ, ಸಮುದಾಯದ ನಡುವೆ ಇರುವ ಸಂಬಂಧ ಎಂದು ಹೇಳುತ್ತಿದ್ದೇನೆ ಎಂದು ಭಾಷಣದ ವೇಳೆ ಭಾವುಕರಾಗಿ ಕಣ್ಣೀರು ಹಾಕಿದ್ದಾರೆ.


ಇದನ್ನೂ ಓದಿ: Bengaluru: ಮೊದಲ ಪತ್ನಿ ಕಣ್ತಪ್ಪಿಸಿ 2ನೇ ಪತ್ನಿಗೆ ಸೀಮಂತ, ಸಂಭ್ರಮ ನಡೆಯುತ್ತಿದ್ದ ಮನೆ ರಣರಂಗ! ಅಸಲಿಗೆ ಆಗಿದ್ದೇನು?


ಹೊಸಕೋಟೆಯಲ್ಲಿ ಕಾಂಗ್ರೆಸ್ ಕಲಹ, ಬಿಜೆಪಿಗೆ ಬಲ!


ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಕಾಂಗ್ರೆಸ್​ನಲ್ಲಿ ಅಸಮಾಧಾನ, ಭಿನ್ನಮತ ತಾರಕಕ್ಕೇರಿದೆ. ಒಂದು ಬಣದ ಹಲವಾರು ಕಾರ್ಯಕರ್ತರು ಪಕ್ಷದ ಕಚೇರಿಗೆ ಬಣ್ಣ ಬಳಿದು, ಬೀಗ ಜಡಿದು, ಸಚಿವ ಎಂಟಿಬಿ ನಾಗರಾಜ್ ಸಮಕ್ಷಮ ಬಿಜೆಪಿಗೆ ಸೇರುವ ನಿರ್ಧಾರ ಮಾಡಿದ್ದಾರೆ.


ಬದುಕಿಡೀ ಪಕ್ಷಕ್ಕಾಗಿ ಬೆವರು ಸುರಿಸಿ ಜೀವ ತೇಯ್ದ ತಮ್ಮನ್ನು ಕಡೆಗಣಿಸಿ ನಿನ್ನೆ ಮೊನ್ನೆ ಪಕ್ಷ ಸೇರಿದವರಿಗೆ ಮನ್ನಣೆ ನೀಡಲಾಗುತ್ತಿದೆ. ನಮಗೆ ಅತೀವ ಬೇಸರ, ನಿರಾಶೆ, ಹತಾಷೆಯಾಗಿದೆ. ಫೆಬ್ರುವರಿ 13 ರಂದು ಪಕ್ಷ ತೊರೆದು ಸಚಿವ ಎಂಟಿಬಿ ನಾಗಾರಾಜ್ ಸಮಕ್ಷಮದಲ್ಲಿ ಬಿಜೆಪಿ ಸೇರಲು ನಿರ್ಧರಿಸಿದ್ದೇವೆ ಎಂದು ಕಣ್ಣೀರು ಹಾಕುತ್ತಾ ಹೇಳಿದರು. ಇದರೊಂದಿಗೆ ಪರೋಕ್ಷವಾಗಿ ಶಾಸಕ ಶರತ್ ಬಚ್ಚೇಗೌಡ ವಿರುದ್ಧ ಕಿಡಿಕಾರಿದ್ದಾರೆ.

Published by:Sumanth SN
First published: