ಆಹಾರ ಹಾಳು ಮಾಡುವುದು ಬಡವರ ಊಟ ಕದಿಯುವುದಕ್ಕೆ ಸಮ: ರಾಹುಲ್​ ಗಾಂಧಿ

ಸರ್ಕಾರ ರೈತರಿಂದ ಸಂಗ್ರಹಿಸಿದ್ದ ಸುಮಾರು 406 ಕೋಟಿ ಮೌಲ್ಯದ ಧಾನ್ಯಗಳನ್ನು ಕಳೆದುಕೊಂಡಿರುವುದನ್ನು ಬಹಿರಂಗಪಡಿಸಿದೆ ಎಂದು ಹೇಳಿದೆ. "ಆಹಾರವನ್ನು ವ್ಯರ್ಥ ಮಾಡುವುದು ಬಡವರಿಂದ ಕದಿಯುವುದಕ್ಕೆ ಸಮಾನ" ಎಂದು ಗಾಂಧಿ ತಮ್ಮ ಪೋಸ್ಟ್‌ನಲ್ಲಿ 'GOIwastes' ಹ್ಯಾಶ್‌ಟ್ಯಾಗ್ ಬಳಸಿ ಹೇಳಿದ್ದಾರೆ.

ಮುಂದೆ ಓದಿ ...
  • Share this:

    ಕಳೆದ ಮೂರು ವರ್ಷಗಳಲ್ಲಿ ಸರ್ಕಾರಿ ಧಾನ್ಯಗಳಲ್ಲಿ ಸಂಗ್ರಹಣೆಯ ಸಮಯದಲ್ಲಿ ಹಾನಿಯಿಂದಾಗಿ ಭಾರತವು 406 ಕೋಟಿ ಮೌಲ್ಯದ ಧಾನ್ಯಗಳನ್ನು ಕಳೆದುಕೊಂಡಿದೆ ಎಂದು ಮಾಧ್ಯಮ ವರದಿಗಳ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು, "ಆಹಾರವನ್ನು ವ್ಯರ್ಥ ಮಾಡುವುದು ಕದಿಯುವುದಕ್ಕೆ ಸಮನಾದ ಕೆಲಸ’’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿದ ಪೋಸ್ಟ್‌ನಲ್ಲಿ, ಮಾಜಿ ಕಾಂಗ್ರೆಸ್ ಮುಖ್ಯಸ್ಥರು ಮಾಧ್ಯಮ ವರದಿಯ ಸ್ಕ್ರೀನ್ ಶಾಟ್ ಅನ್ನು ಹಂಚಿಕೊಂಡಿದ್ದಾರೆ, ಆ ಸ್ಕ್ರೀನ್ ಶಾಟ್ ಸಂಸತ್ತಿನ ಸ್ಥಾಯಿ ಸಮಿತಿ ವರದಿಯಲ್ಲಿ ಉಲ್ಲೇಖಿಸಿದ ಮಾಹಿತಿಯಾಗಿದ್ದು,  ಸರ್ಕಾರ ರೈತರಿಂದ ಸಂಗ್ರಹಿಸಿದ್ದ ಸುಮಾರು 406 ಕೋಟಿ ಮೌಲ್ಯದ ಧಾನ್ಯಗಳನ್ನು ಕಳೆದುಕೊಂಡಿರುವುದನ್ನು ಬಹಿರಂಗಪಡಿಸಿದೆ ಎಂದು ಹೇಳಿದೆ.

    "ಆಹಾರವನ್ನು ವ್ಯರ್ಥ ಮಾಡುವುದು ಬಡವರಿಂದ ಕದಿಯುವುದಕ್ಕೆ ಸಮಾನ" ಎಂದು ಗಾಂಧಿ ತಮ್ಮ ಪೋಸ್ಟ್‌ನಲ್ಲಿ 'GOIwastes' ಹ್ಯಾಶ್‌ಟ್ಯಾಗ್ ಬಳಸಿ ಹೇಳಿದ್ದಾರೆ. ಒಂದು ವರದಿಯಲ್ಲಿ, ಆಹಾರ, ಗ್ರಾಹಕ ವ್ಯವಹಾರಗಳು ಮತ್ತು ಸಾರ್ವಜನಿಕ ವಿತರಣೆಯ ಸ್ಥಾಯಿ ಸಮಿತಿಯು ಸರ್ಕಾರವು ಆಹಾರ ಧಾನ್ಯಗಳ ಪ್ರಮಾಣ ಎಷ್ಟಿದೆ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದೆ.

    2020ರಲ್ಲಿ ಹೇರಿದ್ದ ಲಾಕ್ ಡೌನ್ ಅವಧಿಯಲ್ಲಿ ಭಾರತೀಯ ಆಹಾರ ನಿಗಮದ ಉಗ್ರಾಣದಲ್ಲಿ ಶೇಖರಿಸಲ್ಪಟ್ಟಿದ್ದ 1,550 ಟನ್ ಆಹಾರಧಾನ್ಯ ಹಾಳಾಗಿದೆ ಎಂಬುದು ಗ್ರಾಹಕರ ವ್ಯವಹಾರಗಳ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ ಅಂಶ ಹೇಳಿತ್ತು.

    ಮೇ ತಿಂಗಳಲ್ಲಿ 26 ಟನ್ ಮತ್ತು ಜೂನ್ ತಿಂಗಳಲ್ಲಿ 1453 ಟನ್ ಆಹಾರಧಾನ್ಯ ನಷ್ಟವಾಗಿದೆ ಎಂದು ಅಂಕಿಅಂಶಗಳು ಸ್ಪಷ್ಟಪಡಿಸಿವೆ. ಜುಲೈ-ಆಗಸ್ಟ್ ತಿಂಗಳಲ್ಲಿ ಕ್ರಮವಾಗಿ 41, 51 ಟನ್ ಆಹಾರಧಾನ್ಯ ನಷ್ಟವಾಗಿರುವುದು ದಾಖಲಾಗಿದೆ. ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ಶೂನ್ಯನಷ್ಟವಾಗಿರುವುದು ದಾಖಲೆಗಳಿಂದ ತಿಳಿದುಬಂದಿತ್ತು.

    2015-16 ಸಾಲಿನಲ್ಲಿ 60.3 ದಶಲಕ್ಷ ಟನ್ ಅಕ್ಕಿ ಮತ್ತು ಗೋಧಿ ಖರೀದಿಸಿದ್ದು 3116 ಟನ್ ಆಹಾರ ಧಾನ್ಯ ಗಳು ಹಾಳಾಗಿದೆ. ಇದು ಒಟ್ಟು ಖರೀದಿಯಲ್ಲಿ ಕೇವಲ ಶೇ. 0.005ರಷ್ಟು ಮಾತ್ರ ಎಂದು ಸಚಿವಾಲಯ ಹೇಳಿತ್ತು.  2016-17ನೇ ಸಾಲಿನಲ್ಲಿ 61 ದಶಲಕ್ಷ ಟನ್ ಖರೀದಿಸಿದ್ದು ನಷ್ಟ ಪ್ರಮಾಣ ಕೇವಲ ಶೇ. 0.014ರಷ್ಟು ಆಗಿದೆ ಎಂದು ವರದಿ ತಿಳಿಸಿತ್ತು.

    ಇದನ್ನೂ ಓದಿ: ಎರಡು ವರ್ಷದಿಂದ ಒಂದು ಶತಕವನ್ನು ಭಾರಿಸದ ಕೊಯ್ಲಿ; ಫಾರ್ಮ್​ ಕಳೆದುಕೊಂಡ ವಿರಾಟ್​?

    2017-18, 2018-19ನೇ ಸಾಲಿನಲ್ಲಿ ಶೇ. 0.003ರಷ್ಟು ಮತ್ತು ಶೇ. 0.006 ರಷ್ಟು ನಷ್ಟವಾಗಿದೆ. 2019-20ರಲ್ಲಿ 75.17 ದಶಲಕ್ಷ ಟನ್ ಆಹಾರಧಾನ್ಯ ಖರೀದಿಸಿತ್ತು. ಇದರಲ್ಲಿ 1930 ಟನ್ ನಷ್ಟವಾಗಿದೆ. ಇದು ಒಟ್ಟು ಖರೀದಿಯ ಕೇವಲ ಶೇ.0.002ರಷ್ಟು ನಷ್ಟವಾಗಿತ್ತು.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    First published: