ಚಿತ್ರರಂಗದಲ್ಲಿ ಕೆಲವರು ತಮ್ಮ ಪ್ರೀತಿ, ಮದುವೆ (Marriage) ವಿಷಯಗಳನ್ನ ತುಂಬಾನೇ ಗೌಪ್ಯವಾಗಿಟ್ಟು, ವಿವಾಹವಾದ ಮೇಲೆ ತಮ್ಮೆಲ್ಲಾ ಅಭಿಮಾನಿಗಳಿಗೆ ಸಾಮಾಜಿಕ ಮಾಧ್ಯಮದಲ್ಲಿ (Social Media) ಪೋಸ್ಟ್‌ವೊಂದನ್ನು ಹಂಚಿಕೊಳ್ಳುವುದರೊಂದಿಗೆ ಸಿಹಿಸುದ್ದಿಯನ್ನು ಬಹಿರಂಗಪಡಿಸುತ್ತಾರೆ ಅಂತ ಹೇಳಬಹುದು. ಇಲ್ಲಿಯೂ ಇಂತಹದೇ ಒಂದು ಮದುವೆ ನಡೆದಿದೆ ನೋಡಿ. ಬಹುಭಾಷಾ ನಟಿ ಮತ್ತು ಫ್ಯಾಷನ್ (Fashion) ಡಿಸೈನರ್ ಆದ ಮಸಾಬಾ ಗುಪ್ತಾ (Masaba Gupta) ಅವರು ಬಹುಕಾಲದ ಗೆಳೆಯ ಸತ್ಯದೀಪ್ ಮಿಶ್ರಾ ಅವರನ್ನು ಸದ್ದಿಲ್ಲದೇ ವಿವಾಹವಾಗಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಮದುವೆ ಕುರಿತು ಪೋಸ್ಟ್
ಡಿಸೈನರ್ ಸಹ ಆದ ಮಸಾಬಾ ಗುಪ್ತಾ ಮತ್ತು ನಟ ಸತ್ಯದೀಪ್ ಮಿಶ್ರಾ ಅವರು ಮದುವೆಯಾದ ವಿಚಾರವನ್ನು ತಮ್ಮ ಇನ್‌ಸ್ಟಾಗ್ರಾಮ್ ನಲ್ಲಿ ಮ್ಯಾಚಿಂಗ್ ಪೋಸ್ಟ್ ಗಳೊಂದಿಗೆ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಮದುವೆಯ ಫೋಟೋಗಳಲ್ಲಿ ಮಸಾಬಾ ಮತ್ತು ಸತ್ಯದೀಪ್ ಇಬ್ಬರೂ ಗುಲಾಬಿ ಬಣ್ಣದ ಉಡುಪನ್ನು ಧರಿಸಿರುವುದನ್ನು ನೋಡಬಹುದಾಗಿದೆ.
ವಧು ಮತ್ತು ವರ ಇಬ್ಬರೂ ತಮ್ಮ ವಿನ್ಯಾಸ ಲೇಬಲ್ ಹೌಸ್ ಆಫ್ ಮಸಾಬಾದ ಉಡುಪುಗಳನ್ನು ಧರಿಸಿದ್ದರು. ಮದುವೆಯ ಪೋಸ್ಟ್ ನ ಶೀರ್ಷಿಕೆಯಲ್ಲಿ ಅವರು "ಇಂದು ಬೆಳಿಗ್ಗೆ ನನ್ನ ಶಾಂತ ಸಾಗರದಂತೆ ಇರುವ ನನ್ನ ಗೆಳೆಯನನ್ನು ಮದುವೆಯಾದೆ. ಪ್ರೀತಿ, ಶಾಂತಿ, ಸ್ಥಿರತೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ನಗುವಿನ ಅನೇಕ ಕಾರಣಗಳು ಇಲ್ಲಿವೆ. ಈ ಶೀರ್ಷಿಕೆಯನ್ನು ಆರಿಸಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು.. ಇದು ಅದ್ಭುತವಾಗಲಿದೆ" ಎಂದು ಬರೆದಿದ್ದಾರೆ.
ದಂಪತಿಗಳಿಗೆ ಹರಿದುಬಂದ ಅಭಿನಂದನೆಗಳ ಮಹಾಪೂರ
ಮಸಾಬಾ ಪೋಸ್ಟ್ ಹಂಚಿಕೊಂಡ ಸ್ವಲ್ಪ ಸಮಯದ ನಂತರ ಸಂದೇಶಗಳು ಕಾಮೆಂಟ್ ಗಳ ಸರಮಾಲೆಯಲ್ಲಿ ಹರಿದು ಬಂದವು. "ಅಭಿನಂದನೆಗಳು" ಎಂದು ಹಲವಾರು ಸೆಲೆಬ್ರಿಟಿಗಳು ಬರೆದಿದ್ದಾರೆ. ನವವಿವಾಹಿತ ಅಥಿಯಾ ಶೆಟ್ಟಿ, ನಟ ಆಯುಷ್ಮಾನ್ ಖುರಾನಾ, ಅನಿಲ್ ಕಪೂರ್, ಅನನ್ಯಾ ಪಾಂಡೆ ಮತ್ತು ಮೀರಾ ಕಪೂರ್ ಸಹ ನವದಂಪತಿಗೆ ಶುಭಕೋರಿದ್ದಾರೆ.
ದಂಪತಿಗಳು ಮದುವೆಯಾದದ್ದು ನ್ಯಾಯಾಲಯದಲ್ಲಿ ಅಂತ ಖುದ್ದು ಮಸಾಬಾ ಅವರೇ ವೋಗ್ ಗೆ ತಿಳಿಸಿದರು. "ನಮ್ಮ ಮದುವೆಯನ್ನ ತುಂಬಾನೇ ಸರಳವಾಗಿ ಮತ್ತು ನಮಗೆ ತುಂಬಾನೇ ಹತ್ತಿರವಿರುವ ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿ ಆಗುವುದು ಇದರ ಉದ್ದೇಶವಾಗಿತ್ತು. ಇದು ತುಂಬಾ ನಿಕಟವಾಗಿರಬೇಕು ಎಂದು ನಾವು ಬಯಸಿದ್ದೇವು. ಏಕೆಂದರೆ ಅದು ಸರಿಯಾದ ವಿಷಯ ಎಂದು ನಾವು ಭಾವಿಸಿದ್ದೇವೆ ಮತ್ತು ನಾವು ಮುಂದೆ ಸಹ ಇದನ್ನು ದೊಡ್ಡ ರೀತಿಯಲ್ಲಿ ಆಚರಿಸುವುದಿಲ್ಲ. ಆದಾಗ್ಯೂ, ಸತ್ಯದೀಪ್ ಮತ್ತು ನನ್ನ ಕೆಲ ಸ್ನೇಹಿತರು ಮತ್ತು ಕುಟುಂಬದವರೊಡನೆ ನಮ್ಮ ಮದುವೆ ಸಮಾರಂಭವನ್ನು ಸಣ್ಣದಾಗಿ ಆಚರಿಸುತ್ತೇವೆ" ಎಂದು ಮಸಾಬಾ ತಿಳಿಸಿದ್ದಾರೆ.
‘ಮಸಾಬಾ ಮಸಾಬಾ’ ಶೋ ಸೆಟ್ ನಲ್ಲಿ ಭೇಟಿ ಆಗಿದ್ದ ಜೋಡಿ ಹಕ್ಕಿಗಳು
ಮಸಾಬಾ ಗುಪ್ತಾ ಮತ್ತು ಸತ್ಯದೀಪ್ ಮಿಶ್ರಾ ಅವರು ಮಸಾಬಾ ಮಸಾಬಾ ಶೋ ನ ಸೆಟ್ ಗಳಲ್ಲಿ ಪರಸ್ಪರ ಭೇಟಿಯಾದರು. ಅವರು 2020 ರಿಂದ ಪರಸ್ಪರರ ಇನ್‌ಸ್ಟಾಗ್ರಾಮ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಸಾಬಾ ಈ ಹಿಂದೆ ನಿರ್ಮಾಪಕ ಮಧು ಮಂಟೇನಾ ಮತ್ತು ಸತ್ಯದೀಪ್ ನಟಿ ಅದಿತಿ ರಾವ್-ಹೈದರಿ ಅವರನ್ನು ವಿವಾಹವಾಗಿದ್ದರು.
ನಟಿ ನೀನಾ ಗುಪ್ತಾ ಮತ್ತು ಕ್ರಿಕೆಟಿಗ ವಿವಿಯನ್ ರಿಚರ್ಡ್ಸ್ ಅವರ ಪುತ್ರಿ ಮಸಾಬಾ ಗುಪ್ತಾ ಖ್ಯಾತ ಡಿಸೈನರ್ ಆಗಿದ್ದು, ಮಸಾಬಾ ಮಸಾಬಾ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಸತ್ಯದೀಪ್ ಮಿಶ್ರಾ ಅವರು ಬಾಂಬೆ ವೆಲ್ವೆಟ್, ನೋ ಒನ್ ಕಿಲ್ಡ್ ಜೆಸ್ಸಿಕಾ ಮತ್ತು ವಿಕ್ರಮ್ ವೇದದ ಹಿಂದಿ ಆವೃತ್ತಿಯ ಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ಮೆಚ್ಚುಗೆ ಪಡೆದ ನಟ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ