• ಹೋಂ
  • »
  • ನ್ಯೂಸ್
  • »
  • Breaking News
  • »
  • Arvind Kejriwal: ಆಟೋ ಡ್ರೈವರ್ ಮನೆಗೆ ಊಟಕ್ಕೆ ಹೊರಟ ಕೇಜ್ರಿವಾಲ್; ತಡೆದ ಪೊಲೀಸರಿಗೆ ವಾರ್ನ್

Arvind Kejriwal: ಆಟೋ ಡ್ರೈವರ್ ಮನೆಗೆ ಊಟಕ್ಕೆ ಹೊರಟ ಕೇಜ್ರಿವಾಲ್; ತಡೆದ ಪೊಲೀಸರಿಗೆ ವಾರ್ನ್

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

ಸಿಟ್ಟಿಗೆದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ 'ಜನತಾ ಕಾ ಆದ್ಮಿ ಹೂ' ಎಂದು ಪೊಲೀಸ್  ಅಧಿಕಾರಿಗಳಿಗೆ ವಾರ್ನ್ ಮಾಡಿದ್ದಾರೆ. 

  • Share this:

ಅರವಿಂದ್ ಕೇಜ್ರಿವಾಲ್ ಪೊಲೀಸರ ವಿರುದ್ಧ ಸಿಟ್ಟಿಗೆದ್ದ ಕಾರಣಗಳಿಂದ ದೇಶಾದ್ಯಂತ ಮತ್ತೆ ಸುದ್ದಿಯಲ್ಲಿದ್ದಾರೆ.  ಪೊಲೀಸರಿಗೂ ಅರವಿಂದ್ ಕೇಜ್ರಿವಾಲ್ ನಡುವೆ ಹೈವೋಲ್ಟೇಜ್ ಡ್ರಾಮಾ ನಡೆದಿದೆ.  ಈ ಹಿಂದೆ ಆಟೋಚಾಲಕರೋರ್ವರು (Auto Driver) ದೆಹಲಿ ಸಿಎಂ ಕೇಜ್ರಿವಾಲ್​ರನ್ನು (Delhi CM Arvind Kejriwal)  ತಮ್ಮ ಮನೆಗೆ ಊಟಕ್ಕೆ ಕರೆದಿದ್ದರು. ಸೋಮವಾರ ತಡರಾತ್ರಿ  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಊಟಕ್ಕೆ ಕರೆದಿದ್ದ ಆಟೋ ಚಾಲಕನ ಮನೆಗೆ ಹೋಗುತ್ತಿದ್ದಾಗ ಅವರನ್ನು ಪೊಲೀಸರು ಭದ್ರತಾ ಕಾರಣಗಳಿಗಾಗಿ ತಡೆದು ನಿಲ್ಲಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್   'ಜನತಾ ಕಾ ಆದ್ಮಿ ಹೂ' ಎಂದು ಪೊಲೀಸ್  (Arvind Kejriwal Warns Police)  ಅಧಿಕಾರಿಗಳಿಗೆ ವಾರ್ನ್ ಮಾಡಿದ್ದಾರೆ. 


ಎಎಪಿ ಟ್ವೀಟ್ ಮಾಡಿದ ವೀಡಿಯೊದಲ್ಲಿ ಇಬ್ಬರು ಆಮ್ ಆದ್ಮಿ  ಕಾರ್ಯಕರ್ತರ ಪಕ್ಕದಲ್ಲಿ ಕುಳಿತಿರುವ ಅರವಿಂದ್ ಕೇಜ್ರಿವಾಲ್,  ಕರ್ತವ್ಯದಲ್ಲಿರುವ ಅಧಿಕಾರಿ ವಿರುದ್ದ ಸಿಟ್ಟಿಗೆದ್ದಿರುವ ಕಂಡುಬರುತ್ತದೆ. "ಇದಕ್ಕಾಗಿಯೇ ಗುಜರಾತ್‌ನ ಜನರು ಅತೃಪ್ತರಾಗಿದ್ದಾರೆ. ಪ್ರೋಟೋಕಾಲ್ ಅನ್ನು ಉಲ್ಲೇಖಿಸಿ ನೀವು ಜನರ ಬಳಿಗೆ ಹೋಗುವುದನ್ನು ತಡೆಯುತ್ತಿದ್ದೀರಿ.  ರಾಜ್ಯದ ನಾಯಕರು ಅವರ ಬಳಿಗೆ ಹೋಗುವುದಿಲ್ಲ. ಪ್ರೋಟೋಕಾಲ್ ಅನ್ನು ಮುರಿದು ಜನರನ್ನು ಭೇಟಿ ಮಾಡಲು ನಿಮ್ಮ ನಾಯಕರನ್ನು ಆಗ್ರಹಿಸಿ" ಎಂದು ಅರವಿಂದ್ ಕೇಜ್ರಿವಾಲ್ ಹೇಳುತ್ತಿರುವುದು ಸಹ ವಿಡಿಯೊದಲ್ಲಿ ಕೇಳಿಸುತ್ತದೆ.


ವಾಗ್ವಾದದಲ್ಲಿ ನಿರತ ಕೇಜ್ರಿವಾಲ್


ಇದನ್ನೂ ಓದಿ: Kohinoor Diamond: ಕೊಹಿನೂರ್ ವಜ್ರ ಭಾರತದ ಈ ದೇವರಿಗೆ ಸೇರಿದ್ದು, ತಕ್ಷಣ ಮರಳಿಸಲು ಆಗ್ರಹ


ನಮಗೆ ನಿಮ್ಮ ಭದ್ರತೆ ಬೇಡ
“ನಿಮ್ಮ ಭದ್ರತೆ ನಮಗೆ ಬೇಡ. ನಿಮ್ಮ ಭದ್ರತೆಯನ್ನು ನೀವು ತೆಗೆದುಕೊಳ್ಳಬಹುದು ಅಥವಾ ತೆಗೆದುಕೊಳ್ಳದೆಯೂ ಇರಬಹುದು. ನೀವು ನಮ್ಮನ್ನು ಭದ್ರತೆ ತೆಗೆದುಕೊಳ್ಳುವಂತೆ ಏಕೆ ಒತ್ತಾಯಿಸುತ್ತಿದ್ದೀರಿ? ನೀವು ನಮ್ಮನ್ನು ಒತ್ತೆಯಾಳಾಗಿ ಇರಿಸಿದ್ದೀರಿ ”ಎಂದು ಕೇಜ್ರಿವಾಲ್ ಅಧಿಕಾರಿಗೆ ಹೇಳಿದ್ದಾರೆ.ಸದ್ಯ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಪೊಲೀಸರ ವಿರುದ್ಧ ಅಬ್ಬರಿಸಿರುವ ವಿಡಿಯೋ ಫುಲ್ ವೈರಲ್ ಆಗುತ್ತಿದೆ.


ಇದನ್ನೂ ಓದಿ: Electric Highway: ಭಾರತದಲ್ಲೂ ಎಲೆಕ್ಟ್ರಿಕ್ ಹೈವೇ ನಿರ್ಮಾಣ, ಗಾಡಿ ಓಡಿದ್ರೆ ಚಾರ್ಜ್ ಆಗುತ್ತೆ!


ಇತ್ತೀಚಿಗಷ್ಟೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಗ್ನಿಪರೀಕ್ಷೆಯಲ್ಲಿ ಗೆದ್ದಿದ್ದಾರೆ. ದೆಹಲಿ ವಿಧಾನಸಭೆಯಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿಶ್ವಾಸಮತ ಗೆದ್ದಿದ್ದಾರೆ. 70 ಸದಸ್ಯರ ದೆಹಲಿ ವಿಧಾನಸಭೆಯಲ್ಲಿ ಎಎಪಿ 62 ಶಾಸಕರನ್ನು ಹೊಂದಿದ್ದರೆ, ಬಿಜೆಪಿ ಎಂಟು ಶಾಸಕರನ್ನು ಹೊಂದಿದೆ. ಈ ಪೈಕಿ 58 ಶಾಸಕರು ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ (AAP) ಪರವಾಗಿ ಮತ ಚಲಾಯಿಸಿದ್ದಾರೆ. ತಮ್ಮ ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷ ಬಿಜೆಪಿಯ 'ಆಪರೇಷನ್ ಕಮಲ' ವಿಫಲವಾಗಿದೆ ಎಂದು ಆರೋಪಿಸಿ ಕೇಜ್ರಿವಾಲ್ ಅವರು ದೆಹಲಿ ವಿಧಾನಸಭೆಯಲ್ಲಿ ವಿಶ್ವಾಸ ನಿರ್ಣಯವನ್ನು ಪ್ರಸ್ತಾಪಿಸಿದ್ದರು.

top videos
    First published: