• ಹೋಂ
  • »
  • ನ್ಯೂಸ್
  • »
  • Breaking News
  • »
  • Deepika Padukone: ಸಾವಿನ ಮನೆಯಲ್ಲಿ ಧರಿಸಿದ್ದ ದುಬಾರಿ ಬೆಲೆಯ ಉಡುಪುಗಳನ್ನು ಮಾರಾಟಕ್ಕಿಟ್ಟು ಟ್ರೋಲ್​ ಆದ ದೀಪಿಕಾ ಪಡುಕೋಣೆ

Deepika Padukone: ಸಾವಿನ ಮನೆಯಲ್ಲಿ ಧರಿಸಿದ್ದ ದುಬಾರಿ ಬೆಲೆಯ ಉಡುಪುಗಳನ್ನು ಮಾರಾಟಕ್ಕಿಟ್ಟು ಟ್ರೋಲ್​ ಆದ ದೀಪಿಕಾ ಪಡುಕೋಣೆ

ಈ ಹಿಂದೆ ಬಾಲಿವುಡ್ ಮಾದಕ ವಸ್ತು ಪ್ರಕರಣದಲ್ಲಿ ಎನ್​ಸಿಬಿ ವಿಚಾರಣೆ ಎದುರಿಸಿದ್ದಾಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ದೀಪಿಕಾ ಪಡುಕೋಣೆ ಟ್ರೋಲ್​ ಆಗಿದ್ದರು. ನಂತರ ಈಗ ಮತ್ತೆ ದೀಪಿಕಾ ಮಾಡಿರುವ ಒಂದು ಕೆಲಸದಿಂದಾಗಿ ಚರ್ಚೆಯ ವಿಷಯವಾಗಿದ್ದಾರೆ. ಹೌದು, ದೀಪಿಕಾ ಪಡುಕೋಣೆ ಸಾವಿನ ಮನೆಯಲ್ಲಿ ಧರಿಸಿದ್ದ ಬಟ್ಟೆಗಳನ್ನು ಆನ್​ಲೈನ್​ನಲ್ಲಿ ಮಾರಾಟಕ್ಕಿದ್ದಾರಂತೆ. 

ಮುಂದೆ ಓದಿ ...
  • Share this:

    ಸಾಮಾನ್ಯವಾಗಿ ಸಿನಿ ತಾರೆಯರು ತಮ್ಮ ದುಬಾರಿ ಉಡುಪುಗಳನ್ನು ಆನ್​ಲೈನ್​ನಲ್ಲಿ ಹರಾಜು ಮಾಡುವುದು ತುಂಬಾ ಸಮಯದಿಂದ ನಡೆದುಕೊಂಡು ಬರುತ್ತಿದೆ. ಬಾಲಿವುಡ್​, ಸ್ಯಾಂಡಲ್​ವುಡ್​ ಹೀಗೆ ಬೇರೆ ಭಾಷೆಗಳ ಸೆಲೆಬ್ರಿಟಿಗಳು ತಮ್ಮ ವಿನ್ಯಾಸಿತ ವಸ್ತ್ರಗಳನ್ನು ಆನ್​ಲೈನ್​ನಲ್ಲಿ ಹರಾಜಿಗಿಡುವ ಮೂಲಕ ಮಾರಾಟ ಮಾಡುತ್ತಾರೆ. ಇದಕ್ಕೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ಪ್ರತಿಕ್ರಿಯೆ ಸಿಗುತ್ತದೆ. ಹೀಗೆ ಆನ್​ಲೈನ್​ನಲ್ಲಿ ಹರಾಜಿಗಿಡುವ ಬಟ್ಟೆಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಒಂದೊಳ್ಳೆ ಕೆಲಸಕ್ಕೆ ಬಳಸಿಕೊಳ್ಳಲಾಗುತ್ತದೆ. ಕೆಲವೊಮ್ಮೆ ಸಿನಿಮಾಗಳಲ್ಲಿ ನಟಿಯರು ಧರಿಸಿದ್ದ ವಸ್ತ್ರಗಳನ್ನು ವಿನ್ತಾಸ ಮಾಡಿದ ವಿನ್ಯಾಸಕರು ದುಬಾರಿ ಮೊತ್ತಕ್ಕೆ ಅವುಗಳನ್ನು ಆನ್​ಲೈನ್​ನಲ್ಲಿ ಮಾರಾಟ ಮಾಡುತ್ತಾರೆ. ಆನ್​ಲೈನ್​ನಲ್ಲಿ ಕಿರುತೆರೆ ಹಾಗೂ ಬೆಳ್ಳಿತೆರೆಯ ಸೆಲೆಬ್ರಿಟಿಗಳು ವಿಶೇಷ ಸಂದರ್ಭಗಳಲ್ಲಿ ತೊಟ್ಟ ಬಟ್ಟೆ ಮಾರಾಟ ಮಾಡುವುದು ಈಗ ಸಾಮಾನ್ಯವಾಗಿ ಹೋಗಿದೆ. ಇವುಗಳನ್ನು ಕೊಳ್ಳಲು ಅಭಿಮಾನಿಗಳು ಮುಗಿಬೀಳುತ್ತಾರೆ. ಇದಕ್ಕೆ ಬಾಲಿವುಡ್ ನಟಿ ದೀಪಿಕಾ ಸಹ ಹೊರತಾಗಿಲ್ಲ. 

    ಈ ಹಿಂದೆ ಬಾಲಿವುಡ್ ಮಾದಕ ವಸ್ತು ಪ್ರಕರಣದಲ್ಲಿ ಎನ್​ಸಿಬಿ ವಿಚಾರಣೆ ಎದುರಿಸಿದ್ದಾಗ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದ ದೀಪಿಕಾ ಪಡುಕೋಣೆ ಟ್ರೋಲ್​ ಆಗಿದ್ದರು. ನಂತರ ಈಗ ಮತ್ತೆ ದೀಪಿಕಾ ಮಾಡಿರುವ ಒಂದು ಕೆಲಸದಿಂದಾಗಿ ಚರ್ಚೆಯ ವಿಷಯವಾಗಿದ್ದಾರೆ. ಹೌದು, ದೀಪಿಕಾ ಪಡುಕೋಣೆ ಸಾವಿನ ಮನೆಯಲ್ಲಿ ಧರಿಸಿದ್ದ ಬಟ್ಟೆಗಳನ್ನು ಆನ್​ಲೈನ್​ನಲ್ಲಿ ಮಾರಾಟಕ್ಕಿದ್ದಾರಂತೆ.

    Actress, Bollywood, ನಟಿ, ಬಾಲಿವುಡ್, ದೀಪಿಕಾ ಪಡುಕೋಣೆ, entertainment, Deepika Padukone,Actress,Bollywood,ನಟಿ,ಬಾಲಿವುಡ್,ದೀಪಿಕಾ ಪಡುಕೋಣೆ, funeral Cloths, clothes auction, Deepika Padukone auctioned her cloths she wore for funerals ae
    ಟ್ವೀಟ್​ ಮಾಡಿರುವುದರ ಪ್ರತಿ

    ಮಾಯಾ ಎಂಬವರು ತಮ್ಮ ಟ್ವಿಟರ್ ಖಾನೆಯಲ್ಲಿ ಈ ಕುರಿತಾಗಿ ಫೋಟೋ ಸಹಿತ ಮಾಹಿತಿ ನೀಡಿದ್ದಾರೆ. ದೀಪಿಕಾ ಪಡುಕೋಣೆ ಅವರು ಸೆಲೆಬ್ರಿಟಿಗಳ ಸಾವನ್ನಪ್ಪಿದಾಗ ಅವರ ಅಂತಿಮ ದರ್ಶನಕ್ಕೆ ಹೋಗಿದ್ದಾಗ ಧರಿಸಿದ್ದ ಡ್ರೆಸ್​ಗಳನ್ನು ಆನ್​ಲೈನ್​ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ದೀಪಿಕಾ ಮಾಡಿದ್ದು ಎಷ್ಟು ಸರಿ ಎಂದು ಮಾಯಾ ಪ್ರಶ್ನಿಸಿದ್ದಾರೆ.  ಅಲ್ಲದೆ ಇಂತಹ ಬಟ್ಟೆಗಳನ್ನು ಮಾರಲು ಇಡುವ ಬದಲು ಚಾರಿಟಿಗೆ ನೀಡಿದ್ದರೆ ಮೆಚ್ಚಿಕೊಳ್ಳಬಹುದಿತ್ತು ಎಂದಿದ್ದಾರೆ.

    ಮಾಯಾ ಅವರು ಮಾಡಿರುವ ಟ್ವೀಟ್​ಗೆ ದೀಪಿಕಾ ಪಡುಕೋಣೆ ಅಭಿಮಾನಿಗಳು ಪ್ರತಿಕ್ರಿಯಿಸುತ್ತಿದ್ದು, ಇದು ದಾನಕ್ಕಾಗಿ ಮಾಡುತ್ತಿರುವ ಮಾರಾಟ ಎಂದಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ಮಾಯಾ, ಸಾಮಾನ್ಯ ಬ್ರ್ಯಾಂಡ್​ನ ಬಟ್ಟೆಗಳನ್ನು ಹೀಗೆ ಮಾರಾಟ ಮಾಡಲು ಸಾಧ್ಯವಿಲ್ಲ. 2,700 ಹಾಗೂ 8 ಸಾವಿರ ಮಾಲ್ಯದ ಹಳೇ ಬಟ್ಟೆಗಳನ್ನು ಬಟ್ಟೆಗಳನ್ನು ಯಾರಿಗಾದರೂ ದಾನವಾಗಿ ನೀಡಬಹುದಿತ್ತಲೇ ಎಂದು ಪ್ರಶ್ನಿಸಿದ್ದಾರೆ.

    ಇದನ್ನೂ ಓದಿ: Prabhas- Radhe Shyam: ಡಾರ್ಲಿಂಗ್​ ಪ್ರಭಾಸ್ ಅಭಿಮಾನಿಗಳಿಗೆ ಗುಡ್​ ನ್ಯೂಸ್​: ಸಂಕ್ರಾಂತಿಗೆ ರಾಧೆ ಶ್ಯಾಮ್ ಆಟ ಶುರು..!

    ದೀಪಿಕಾ ಪಡುಕೋಣೆ ಮಾರಾಟಕ್ಕಿಟ್ಟಿರುವ ಬಟ್ಟೆಗಳನ್ನು ನಟಿ ಜಿಯಾ ಖಾನ್​ ಮರಣ ಹೊಂದಿದ್ದಾಗ ಅವರ ಅಂತಿಮ ದರ್ಶನಕ್ಕಾಗಿ ಹಾಗೂ ಪ್ರಿಯಾಂಕಾ ಚೋಪ್ರಾ ಅವರ ತಂದೆ ಅಗಲಿದಾಗ ನಡೆದಿದ್ದ ಪ್ರಾರ್ಥನೆಗೆ ಹೋದಾಗ ಧರಿಸಿದ್ದರಂತೆ. ಆಗ ದೀಪಿಕಾ ಧರಿಸಿದ್ದ ಫೋಟೋಗಳನ್ನೂ ಮಾಯಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಷಯದಿಂದಾಗಿ ದೀಪಿಕಾ ಪಡುಕೋಣೆ ಈಗ ಟ್ರೋಲ್​ ಆಗುತ್ತಿದ್ದಾರೆ.

    ಇದನ್ನೂ ಓದಿ: Sonam Kapoor: ಸಹೋದರಿ ರಿಯಾ ಕಪೂರ್ ಮದುವೆಯಲ್ಲಿ ಕಣ್ಣೀರಿಟ್ಟ ಸೋನಮ್ ಕಪೂರ್​..!

    ದೀಪಿಕಾ ಪಡುಕೋಣೆ ಅವರು ಮಾನಸಿಕ ಅಸ್ವಸ್ಥರಿಗಾಗಿ ಸಹಾಯ ಮಾಡುವ ಉದ್ದೇಶದಿಂದ ಲಿವ್​, ಲಾಫ್​, ಲವ್​ ಫೌಂಡೇಶನ್​ ಅನ್ನು ನಡೆಸುತ್ತಿದ್ದಾರೆ. ಇದರ ಅಂಗವಾಗಿ ಆಗಾಗ ದೀಪಿಕಾ ತಮ್ಮ ಕ್ಲೋಸೆಟ್​ಗಳಿಂದ ಬಟ್ಟೆಗಳನ್ನು ಮಾರಾಟ ಮಾಡುತ್ತಾರೆ. ನೆಟ್ಟಿಗರು ಈ ಬಟ್ಟೆಗಳನ್ನು ಕೊಳ್ಳಬಹುದಾಗಿದೆ. ಇದೇ ವೆಬ್​ ಸೈಟ್​ನಲ್ಲಿ ಮಂಗಳವಾರ ಎರಡು ಬಿಳಿ ಬಣ್ಣದ ಉಡುಪುಗಳನ್ನು ಮಾರಾಟಕ್ಕಿಟ್ಟು ಟ್ರೋಲ್ ಆಗಿದ್ದಾರೆ.

    ಸ್ಯಾಂಡಲ್​ವುಡ್​ನಲ್ಲೂ ಸಹ 2017ರಲ್ಲಿ ನಾಯಕಿಯರೆಲ್ಲ ಸೇರಿ ತಮ್ಮ ಬಟ್ಟೆಗಳನ್ನು ಹರಾಜು ಮಾಡುವ ಮೂಲಕ 80 ಸಾವಿರ ಹಣ ಗಳಿಸಿದ್ದರು. ದಿ ವ್ಯಾನಿಟಿ ಟ್ರಂಕ್​ ಸೇಲ್ ಹೆಸರಿನಲ್ಲಿ ನಡೆದಿದ್ದ ಹರಾಜು ಕೇವಲ ಒಂಧು ಗಂಟೆಯಲ್ಲೇ ಕೊನೆಗೊಂಡಿತ್ತು. ಇದರಿಂದ ಗಳಿಸಿದ್ದ ಹಣವನ್ನು ಸದರ್ಕಾರೇತರ ಸಂಸ್ಥೆಗಳಿಗೆ ನೀಡಿದ್ದರು.

    top videos
      First published: