• ಹೋಂ
  • »
  • ನ್ಯೂಸ್
  • »
  • Breaking News
  • »
  • Devedrappa: 30 ವರ್ಷ ಡಿ ಗ್ರೂಪ್​ ನೌಕರನಾಗಿದ್ದ ದೇವೇಂದ್ರಪ್ಪರಿಗೆ ರೋಚಕ ಜಯ! ಜವಾನನಿಗೆ ಆಶಿರ್ವದಿಸಿದ ಜಗಳೂರು ಜನ

Devedrappa: 30 ವರ್ಷ ಡಿ ಗ್ರೂಪ್​ ನೌಕರನಾಗಿದ್ದ ದೇವೇಂದ್ರಪ್ಪರಿಗೆ ರೋಚಕ ಜಯ! ಜವಾನನಿಗೆ ಆಶಿರ್ವದಿಸಿದ ಜಗಳೂರು ಜನ

ಜಗಳೂರು ಶಾಸಕ ದೇವೇಂದ್ರಪ್ಪ

ಜಗಳೂರು ಶಾಸಕ ದೇವೇಂದ್ರಪ್ಪ

ಕಾಂಗ್ರೆಸ್ ಪಕ್ಷದ ಬಿ. ದೇವೇಂದ್ರಪ್ಪ ಅವರು ಎಚ್​ಪಿ ರಾಜೇಶ್​ ಮತ್ತು ಹಾಲಿ ಶಾಸಕ ಬಿಜೆಪಿಯ ಎಸ್​ವಿ ರಾಮಚಂದ್ರ ವಿರುದ್ಧ ಭರ್ಜರಿ ಪೈಪೋಟಿ ನೀಡಿ ಗೆಲುವು ಸಾಧಿಸಿದ್ದಾರೆ.

  • Share this:

ಬೆಂಗಳೂರು: ದಾವಣಗೆರೆ (Davanagere) ಜಿಲ್ಲೆಯ ಜಗಳೂರು ವಿಧಾನಸಭಾ  ಕ್ಷೇತ್ರದಲ್ಲಿ (Jagalur Constituency) ಕಾಂಗ್ರೆಸ್ (Congress) ಪಕ್ಷದ ಬಿ. ದೇವೇಂದ್ರಪ್ಪ (Devendrappa) ಅವರು ಎಚ್​ಪಿ ರಾಜೇಶ್​ ಮತ್ತು ಹಾಲಿ ಶಾಸಕ ಬಿಜೆಪಿಯ ಎಸ್​ವಿ ರಾಮಚಂದ್ರ ವಿರುದ್ಧ ಭರ್ಜರಿ ಪೈಪೋಟಿ ನೀಡಿ ಗೆಲುವು ಸಾಧಿಸಿದ್ದಾರೆ. ದೇವೇಂದ್ರಪ್ಪ 50765 ಮತಗಳನ್ನು ಪಡೆದರೆ, ಹಾಲಿ ಶಾಸಕ ರಾಮಚಂದ್ರ 49891 ಹಾಗೂ ಕಾಂಗ್ರೆಸ್​ನಿಂದ ಬಂಡಾಯ ಎದ್ದಿದ್ದ ಎಚ್​.ಪಿ ರಾಜೇಶ್​ 48923 ಮತಗಳನ್ನು ಪಡೆದರು. ಅಂತಿಮವಾಗಿ 1274 ಮತಗಳ ಅಂತರದಲ್ಲಿ ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ.


ಎಸ್ಟಿ ಮೀಸಲು ಕ್ಷೇತ್ರವಾದ ಜಗಳೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಚಿಕ್ಕಪ್ಪನಹಳ್ಳಿ ದೇವೇಂದ್ರಪ್ಪ ಅವರಿಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿತ್ತು. ವಿಶೇಷ ಎಂದರೆ ಅವರು ಕಳೆದ ವರ್ಷವಷ್ಟೇ ಜೆಡಿಎಸ್​​ನಿಂದ ಹೊರ ಬಂದು ಕಾಂಗ್ರೆಸ್​ ಸೇರ್ಪಡೆಯಾಗಿದ್ದರು. ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿದ್ದ ಅವರು ಒಂದೇ ವರ್ಷದಲ್ಲಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಇದೇ ಅವರಿಗೆ ಟಿಕೆಟ್ ಸಿಗುವಂತೆ ಮಾಡಿತ್ತು.


ಇದನ್ನೂ ಓದಿ: Pradeep Eshwar: ಸಚಿವ ಸುಧಾಕರ್ ಎದುರು ತೊಡೆತಟ್ಟಿದ ಪ್ರದೀಪ್ ಈಶ್ವರ್ ಯಾರು? ಬಲಿಷ್ಠ ನಾಯಕನ ವಿರುದ್ಧ ಗೆದ್ದಿದ್ಧು ಹೇಗೆ?


ಜವಾನರಾಗಿ ಕೆಲಸ ಮಾಡಿದ್ದ ದೇವೇಂದ್ರಪ್ಪ


ದೇವೇಂದ್ರಪ್ಪ ಅವರು ಬಡ ಕುಟುಂಬದಲ್ಲಿ ಜನಿಸಿದ್ದು, ಕಷ್ಟಗಳನ್ನು ಹಾಸುಹೊದ್ದು ಮಲಗಿದವರು. ಒಂದು ಕಾಲದಲ್ಲಿ ಒಂದೊತ್ತಿನ ಊಟಕ್ಕೂ ಕಷ್ಟ ಪಟ್ಟಿದ್ದಾರೆ. ಸುಮಾರು 30 ವರ್ಷಗಳ ಕಾಲ ಖಾಸಗಿ ಶಿಕ್ಷಣ ಸಂಸ್ಥೆಯೊಂದರಲ್ಲಿ ಜವಾನರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಮಾಜ ಸೇವೆ ಮಾಡುವ ದೃಷ್ಟಿಯಿಮದ ನಿವೃತ್ತಿಯಾದ ನಂತರ ರಾಜಕೀಯ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಮೊದಲು ಜೆಡಿಎಸ್​ ಸೇರಿದ್ದ ದೇವೇಂದ್ರಪ್ಪ ಕಳೆದ ವರ್ಷ ಜಗಳೂರು ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಆದರೆ ಕಳೆದ ವರ್ಷ ಕಾಂಗ್ರೆಸ್​ ಪಕ್ಷ ಸೇರಿದ್ದರು. ಈಗ ಜಗಳೂರು ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ. ದೇವೇಂದ್ರಪ್ಪ ಹಾಲಿ ಶಾಸಕ ರಾಮಚಂದ್ರ ವಿರುದ್ಧ 874 ಮತಗಳ ಅಂತರದಲ್ಲಿ ಗೆದ್ದಿದ್ದಾರೆ.




30 ವರ್ಷ ಡಿ ಗ್ರೂಪ್​ ನೌಕರನಾಗಿ ಸೇವೆ


ದೇವೇಂದ್ರಪ್ಪ ಅವರು ಜಗಳೂರಿನ ಅಮರಭಾರತಿ ವಿದ್ಯಾಕೇಂದ್ರದಲ್ಲಿ ಡಿ. ಗ್ರೂಪ್‌ ನೌಕರರಾಗಿ ಸುಮಾರು 30 ವರ್ಷ ಸೇವೆ ಸಲ್ಲಿಸಿದ್ದಾರೆ. ತಾವೂ ಬಡತನದಲ್ಲಿ ಬೆಳೆದಿದ್ದ ಅವರು, ಶಿಕ್ಷಣದ ಮಹತ್ವವನ್ನು ಅರಿತು ತಮ್ಮ ಇಬ್ಬರೂ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ಅವರ ಹಿರಿಯ ಮಗ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಕಿರಿಯ ಪುತ್ರ ಎಂಬಿಬಿಎಸ್ ಪದವಿ ಪಡೆದು ಮೊದಲು ವೈದ್ಯರಾಗಿ ಸೇವೆ ಸಲ್ಲಿಸಿದ್ದರು. ನಂತರ ಕೇಂದ್ರ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಐಆರ್‌ಎಸ್ ಸೇವೆಗೆ ಆಯ್ಕೆಯಾಗಿ, ಇದೀಗ ಆದಾಯ ತೆರಿಗೆ ಇಲಾಖೆಯಲ್ಲಿ ರಾಜ್ಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ.


ನಿಮ್ಮ ಜವಾನರಾಗಿ ಕೆಲಸ ಮಾಡುವೆ ಎಂದಿದ್ದ ದೇವೇಂದ್ರಪ್ಪ


ಕಾಲೇಜಿನಲ್ಲಿ ಜವಾನನಾಗಿ ಕೆಲಸ ಮಾಡಿ ಜೀವನ ನಡೆಸಿದ್ದೇನೆ. ನನ್ನ ಕಾರ್ಯಕ್ಷಮತೆ ನೋಡಿ ಕಾಂಗ್ರೆಸ್ ಪಕ್ಷ ಮನಗೆ ಟಿಕೆಟ್ ಕೊಟ್ಟಿದೆ. ನೀವೆಲ್ಲರೂ ಆಶೀರ್ವಾದ ಮಾಡಿ ನನಗೆ ಮತ ನೀಡಿ ಗೆಲ್ಲಿಸಿ. ಈ ಸಮಾಜದ ಕೊಳೆ ತೆಗೆಯಲು ಮತ್ತೊಮ್ಮೆ ಜವಾನನಾಗಿ ಕಸ ಗುಡಿಸಲು ನಾನು ಸಿದ್ಧನಿದ್ದೇನೆ ಎಂದು ಮತದಾರರಿಗೆ ಮನವಿ ಮಾಡಿದ್ದರು.

top videos
    First published: