Govt Job Alert: ತುಮಕೂರಿನಲ್ಲಿ ಕಂಪ್ಯೂಟರ್​ ಆಪರೇಟರ್​, ಸಮಾಲೋಚಕರ ಹುದ್ದೆಗೆ ಅರ್ಜಿ ಅಹ್ವಾನ

ಸಮಾಲೋಚಕರು, ಕ್ಲರ್ಕ್​ ಮತ್ತು ಕಂಪ್ಯೂಟರ್​ ಆಪರೇಟರ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

 ಬೇಗ ಅರ್ಜಿ ಸಲ್ಲಿಸಿ

ಬೇಗ ಅರ್ಜಿ ಸಲ್ಲಿಸಿ

 • Share this:
  ತುಮಕೂರಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ (women and child Development Department)  ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ರಾಜ್ಯ ಮಹಿಳಾ ಅಭಿವೃದ್ಧಿ ನಿಗಮನದ ರಾಜ್ಯ ಸಂಪನ್ಮೂಲ ಕೇಂದ್ರದ ನಿರ್ವಹಣೆ ಮತ್ತು ನಿಗಮನ ಯೋಜನೆ ಕುರಿತು ಅರಿವು ಮೂಡಿಸಲು ಸಮಾಲೋಚಕರು, ಕ್ಲರ್ಕ್​ ಮತ್ತು ಕಂಪ್ಯೂಟರ್​ ಆಪರೇಟರ್​ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಆ.8 ಆಗಿದೆ.

  ಈ ಹುದ್ದೆಗಳನ್ನು ತಾತ್ಕಾಲಿಕವಾಗಿ, ಒಪ್ಪಂದದ ಮೇರೆಗೆ ನೇಮಕ ಮಾಡಲಾಗುತ್ತಿದೆ. ಅಭ್ಯರ್ಥಿಗಳ ಕಾರ್ಯ ದಕ್ಷತೆಯ ಆಧಾರದ ಮೇಲೆ ಹುದ್ದೆಯನ್ನು ಮುಂದುವರೆಸಲಾಗುವುದು. ಈ ನೇಮಕಾತಿಗೆ ಸಂಬಂಧಿಸಿದ ಇತರ ಪ್ರಮುಖ ಮಾಹಿತಿಗಳಾದ ಅರ್ಜಿ ಪ್ರಕ್ರಿಯೆ, ಖಾಲಿ ಹುದ್ದೆಗಳ ಸಂಖ್ಯೆ, ವೇತನಗಳು, ಆಯ್ಕೆ ವಿಧಾನ ಇತ್ಯಾದಿಗಳ ಮಾಹಿತಿ ಈ ಕೆಳಗಿನಂತಿವೆ.

  ಸಂಸ್ಥೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ತುಮಕೂರು
  ಹುದ್ದೆ: ಸಮಾಲೋಚಕರು, ಕ್ಲರ್ಕ್​/ ಕಂಪ್ಯೂಟರ್​ ಆಪರೇಟರ್​
  ಒಟ್ಟು ಹುದ್ದೆ: ನಿಗದಿ ಪಡಿಸಿಲ್ಲ
  ಕರ್ತವ್ಯ ನಿರ್ವಹಣೆ ಸ್ಥಳ: ತುಮಕೂರು
  ವೇತನ: 10,000-12,000 ರೂ ಮಾಸಿಕ


  ಹುದ್ದೆವಿದ್ಯಾರ್ಹತೆವೇತನ
  ಸಮಾಲೋಚಕರುಎಂಎಸ್​ಡಬ್ಲ್ಯು/ ಮಹಿಳಾ ಅಧ್ಯಯನದಲ್ಲಿ ಎಂಎ ಪದವಿ12 ಸಾವಿರ ವೇತನದ ಜೊತೆ 2 ಸಾವಿರ ಪ್ರಯಾಣ ಭತ್ಯೆ ಮಾಸಿಕ
  ಕ್ಲರ್ಕ್​ಪಿಯುಸಿ10 ಸಾವಿರ ರೂ ಮಾಸಿ

  ಅನುಭವ
  ಸಮಾಲೋಚಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ 3 ರಿಂದ 5 ವರ್ಷಗಳ ಅನುಭವ ಹೊಂದಿರಬೇಕು.
  ತುಮಕೂರು ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಪ್ರವಾಸ ನಡೆಸಲು ಸಿದ್ಧರಿರಬೇಕು
  ಕ್ಲರ್ಕ್​ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್​ ಜ್ಞಾನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು.

  ಇದನ್ನು ಓದಿ: ದಾವಣೆಗೆರೆಯಲ್ಲಿ 82 ಅಂಗನವಾಡಿ ಕಾರ್ಯಕರ್ತರ ಹುದ್ದೆ; ಜು. 29 ಅರ್ಜಿ ಸಲ್ಲಿಕೆಗೆ ಕಡೆಯ ದಿನ

  ಅರ್ಜಿ ಸಲ್ಲಿಕೆ: ಆಫ್​ಲೈನ್​
  ಆಯ್ಕೆ: ಮೆರಿಟ್​ ಮತ್ತು ಸಂದರ್ಶನ

  ಪ್ರಮುಖ ದಿನಾಂಕ
  ಅಭ್ಯರ್ಥಿಗಳು ಅರ್ಜಿಯನ್ನು ಪಡೆಯಲು ಕಡೆಯ ದಿನಾಂಕ 30 ಜುಲೈ 2022
  ಅಭ್ಯರ್ಥಿ ಅರ್ಜಿ ಸಲ್ಲಿಸಲು ಕಡೆಯ ದಿನಾಂಕ 8 ಆಗಸ್ಟ್​ 2022

  ಅರ್ಜಿ ಪಡೆದು, ಸಲ್ಲಿಸುವ ಸ್ಥಳ
  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎಂಜಿ ರಸ್ತೆ, ಬಾಲ ಭವನ ಆವರಣ, ತುಮಕೂರು.

  ಇದನ್ನು ಓದಿ: ಧಾರವಾಡದಲ್ಲಿ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ; ಇಲ್ಲಿದೆ ಹುದ್ದೆ ವಿವರ

  ಅರ್ಜಿ ಸಲ್ಲಿಕೆ ಪ್ರಕ್ರಿಯೆ
  ಅಧಿಸೂಚನೆ 2022 ಅನ್ನು ಸಂಪೂರ್ಣವಾಗಿ ಪರಿಶೀಲಿಸಿ ಮತ್ತು ಅಭ್ಯರ್ಥಿಯು ಅರ್ಹತಾ ಮಾನದಂಡಗಳನ್ನು ಪೂರೈಸುತ್ತಾರೆಯೇ ಎಂದು ಖಚಿತಪಡಿಸಿಕೊಂಡು ಮುಂದುವರೆಯಿರಿ.

  -ಅಧಿಕೃತ ಅಧಿಸೂಚನೆಯಿಂದ- ಲಭ್ಯವಿರುವ ನಿಗದಿತ ಅರ್ಜಿ ನಮೂನೆಯಲ್ಲಿ ಫಾರ್ಮ್ ಅನ್ನು ಭರ್ತಿ ಮಾಡಿ.

  - ಸಂವಹನ ಉದ್ದೇಶಕ್ಕಾಗಿ ದಯವಿಟ್ಟು ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ಸಂಖ್ಯೆ ಐಡಿ ಪುರಾವೆ, ವಯಸ್ಸು, ಶೈಕ್ಷಣಿಕ ಅರ್ಹತೆ, ಇತ್ತೀಚಿನ ಫೋಟೋಗ್ರಾಫ್,  ಯಾವುದೇ ಅನುಭವವಿದ್ದರೆ ಇತ್ಯಾದಿ ದಾಖಲೆಗಳನ್ನು ಸಿದ್ಧವಾಗಿಡಿ.

  ಹೆಚ್ಚಿನ ಮಾಹಿತಿಗೆ 0816-2272590 ಕರೆ ಮಾಡಬಹುದಾಗಿದೆ
  Published by:Seema R
  First published: