ರಾಮಾಚಾರಿ (Ramachari) ಧಾರಾವಾಹಿ (Serial) ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 9 ಗಂಟೆಗೆ ಪ್ರಸಾರವಾಗ್ತಿದೆ. ಈ ಕತೆಯ ನಾಯಕ ರಾಮಾಚಾರಿ, ನಾಯಕಿ ಚಾರು. ಧಾರಾವಾಹಿ ಶುರವಾದಾಗ ಇಬ್ಬರಿಗೂ ಒಬ್ಬರನ್ನು ಕಂಡ್ರೆ ಒಬ್ಬರಿಗೆ ಆಗುತ್ತಿರಲಿಲ್ಲ. ರಾಮಾಚಾರಿ ಒಳ್ಳೆಯ ಗುಣ, ನಡತೆ, ಅವನ ಸ್ವಾಭಿಮಾನ ನೋಡಿ ಚಾರುಗೆ ಪ್ರೀತಿಯಾಗುತ್ತೆ. ಚಾರು ಮತ್ತು ರಾಮಾಚಾರಿ ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾಮಾಚಾರಿ ಮಾಡಿದ ಯಡವಟ್ಟಿನಿಂದ ಕೆಮಿಕಲ್ ಬಿದ್ದು ಚಾರು ಕಣ್ಣು ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತೆ. ಅದಕ್ಕೆ ರಾಮಾಚಾರಿ ಕೊರಗುತ್ತಾ ಇರುತ್ತಾನೆ. ಕಣ್ಣು ಕಾಣದ ಚಾರುಗೆ ನಾನೇ ಬೆಳಕಾಗಬೇಕು ಎಂದು ರಾಮಾಚಾರಿ ಯಾರಿಗೂ ಹೇಳದೇ ಆಕೆಗೆ ತಾಳಿ ಕಟ್ಟಿದ್ದಾನೆ. ಈಗ ರಾಮಾಚಾರಿ ಅಣ್ಣ ಕೋದಂಡ ಸಹ ಗುಟ್ಟಾಗಿ ಮದುವೆಯಾಗಿದ್ದಾನೆ (Marriage). ಕೋದಂಡನ ಹೆಂಡ್ತಿ ವೈಶಾಖಾ ಜೋರಿದ್ದು, ರಾಮಾಚಾರಿ ಮೇಲೆ ಕಾಫಿ (Coffee) ಎಸೆದಿದ್ದಾಳೆ.
ಗುಟ್ಟಾಗಿ ಮದುವೆಯಾದ ಕೋದಂಡ
ರಾಮಾಚಾರಿ ಅಣ್ಣ ಕೋದಂಡನ ಮೊದಲ ಹೆಂಡ್ತಿ ಅಪೂರ್ವ ಸತ್ತಿದ್ದಾಳೆ. ಅದಕ್ಕೆ ಕೋದಂಡ ಗುಟ್ಟಾಗಿ ಎರಡನೇ ಮದುವೆಯಾಗಿದ್ದಾನೆ. ಹೆಂಡ್ತಿಯನ್ನು ಮನೆಗೆ ಕರೆದುಕೊಂಡು ಬಂದಿದ್ದಾರೆ. ಮನೆಯವರೆಲ್ಲಾ ಬೈದು, ಒಳಗೆ ಕರೆದುಕೊಂಡಿದ್ದಾರೆ. ಅಪ್ಪ ಮಾತ್ರ, ನನ್ನನ್ನು ಮಾತನಾಡಿಸಬೇಡ ಎಂದು ಹೇಳಿದ್ದಾರೆ. ಅದಕ್ಕೆ ರಾಮಾಚಾರಿ ಅತ್ತಿಗೆ ವೈಶಾಖಾಗೆ ಎಲ್ಲರ ಮೇಲೆ ಕೋಪ ಇದೆ.
ಅತ್ತಿಗೆಗೆ ಕಾಫಿ ತಂದ ರಾಮಾಚಾರಿ
ಅತ್ತಿಗೆ ತಗೋಳಿ ಸ್ಟ್ರಾಂಗ್ ಕಾಫಿ. ನಮ್ಮ ಅಮ್ಮ ತುಂಬಾ ಚೆನ್ನಾಗಿ ಕಾಫಿ ಮಾಡ್ತಾರೆ. ನನಗೆ ಗೊತ್ತು ಅತ್ತಿಗೆಮ್ಮ ನಿಮಗೆ ನಮ್ಮ ಮನೆಯವರ ಮೇಲೆ ಸಿಟ್ಟಿದೆ ಅಂತ. ಆದ್ರೆ ಸತ್ಯ ಹೇಳ್ತೀನಿ, ನಮ್ಮ ಮನೆಯವರ ನೀವು ಅಂದಕೊಂಡಷ್ಟು ಕೆಟ್ಟವರಲ್ಲ. ಗೊತ್ತು ನಮ್ಮ ಕಡೆಯಿಂದ ಸಣ್ಣ ತಪ್ಪಾಗಿದೆ. ನೀವು ಮನೆಗೆ ಬಂದಾಗ ಅಮ್ಮ, ಅಜ್ಜಿ ನಿಮ್ಮನ್ನು ಪ್ರೀತಿಯಿಂದ ಕರೆದುಕೊಂಡಿಲ್ಲ. ಯಾಕಂದ್ರೆ ಅಪ್ಪನ ಬಗ್ಗೆ ಭಯ ಇತ್ತು ಅದಕ್ಕೆ ಆ ರೀತಿ ಮಾಡಿದ್ದಾರೆ ಎಂದು ರಾಮಾಚಾರಿ ಅತ್ತಿಗೆ ವೈಶಾಖಾಗೆ ಹೇಳಿದ್ದಾನೆ.
ಎಲ್ಲಾ ಸರಿ ಹೋಗುತ್ತೆ
ಮಗ ಹೇಳದೇ ಕೇಳದೇ ಮದುವೆಯಾದ ಅನ್ನುವ ಬೇಸರ. ಅದೇ ಕಾರಣಕ್ಕೆ ನಿಮ್ಮನ್ನು ಪ್ರೀತಿಯಿಂದ ಕರೆದುಕೊಂಡಿಲ್ಲ ಅಷ್ಟೇ. ಆದ್ರೆ ನಮ್ಮ ಮನೆಯವರಿಗೆ ದ್ವೇಷ ಸಾಧಿಸುವ ಬುದ್ಧಿ ಇಲ್ಲ. ಅಪ್ಪ ನಿಮಗೆ ಬೈದಿರಬಹುದು. ಆಶೀರ್ವಾದ ಮಾಡಲ್ಲ ಎಂದಿರಬಹುದು. ಆದ್ರೆ ಅವರ ಮನಸ್ಸಿನಲ್ಲಿ ಅಣ್ಣನ ಮೇಲೆ, ಅಣ್ಣ ತೆಗೆದುಕೊಳ್ಳುವ ನಿರ್ಧಾರದ ಮೇಲೆ ಅಪಾರವಾದ ಪ್ರೀತಿ ಇದೆ. ನಿಧಾನವಾಗಿ ಎಲ್ಲಾ ಸರಿ ಹೋಗುತ್ತೆ ಎಂದು ರಾಮಾಚಾರಿ ಹೇಳಿದ್ದಾನೆ.
ಕಾಫಿ ಎಸೆದ ವೈಶಾಖಾ
ಕೋಪಕ್ಕೆ ಪ್ರತಿ ಕೋಪ ಉತ್ತರ ಅಲ್ಲ. ಪ್ರೀತಿಯೊಂದೇ ಕೋಪನಾ ನಾಶ ಮಾಡೋಕೆ ಆಗೋದು. ಅದೊಂದಕ್ಕೆ ಆ ಶಕ್ತಿ ಇರುವುದು. ಸ್ಪಲ್ಪ ನೈಸ್ ಮಾಡಿ, ಹೊಂದಿಕೊಂಡು ಹೋಗಿ, ಎಲ್ಲರ ಮನಸ್ಸು ಬೆಣ್ಣೆಯಂತೆ ಕರಗಿ ಹೋಗುತ್ತೆ. ನಿಮ್ಮನ್ನು ಮಹಾರಾಣಿ ತರ ತಲೆ ಮೇಲೆ ಕೂರಿಸಿಕೊಂಡು ಮೆರೆಸುತ್ತಾರೆ ಎಂದು ರಾಮಾಚಾರಿ ಹೇಳಿ ಕಾಫಿ ಕೊಡ್ತಾನೆ. ಆಗ ವೈಶಾಖಾ ಆ ಕಾಫಿಯನ್ನು ಅವನಿಗೆ ಎಸೆಯುತ್ತಾಳೆ.
ಅತ್ತಿಗೆಮ್ಮ ಅನ್ನಬೇಡ ಎಂದ ವೈಶಾಖಾ
ಯಾರಾದ್ರೂ ಬೆಣ್ಣೆ ತರ ನೈಸ್ ಆಗಿ ಮಾತನಾಡೋಕೆ ಬಂದ್ರೆ ಉರಿಯುತ್ತೆ. ಯಾರಿಗೆ ಹೇಳ್ತಾ ಇದೀಯಾ ಹೊಂದಿಕೊಂಡು ಹೋಗು ಅಂತ, ನಾನು ಈ ಮನೆ ಸೊಸೆಯಾಗಿ ಬಂದಿರುವವಳು. ನನಗೆ ನೀವು ಹೊಂದಿಕೊಳ್ಳಬೇಕು. ಮೊದಲು ಅತ್ತಿಗೆಮ್ಮ ಎನ್ನುವುದನ್ನು ಬಿಡು. ಯಾರಿಗೆ ಅಮ್ಮ ಅಂತಿಯಾ? ನನಗೆ ಆ ರೀತಿ ಅನ್ನಬೇಡ. ಅವರ ನೆತ್ತಿ ಮೇಲೆ ಹತ್ತಿ ಮೆರೆಯೋಕೆ ಬರುತ್ತೆ ಎಂದು ವೈಶಾಖಾ ಹೇಳಿದ್ದಾಳೆ.
ಇದನ್ನೂ ಓದಿ: Rupesh Rajanna: ಚುನಾವಣೆ ಅಖಾಡದತ್ತ ಬಿಗ್ಬಾಸ್ ಸ್ಪರ್ಧಿ; ಏನ್ ಹೇಳ್ತಾರೆ ಕನ್ನಡಪರ ಹೋರಾಟಗಾರ?
ಸಂಸಾರದಲ್ಲಿ ಬಿರುಗಾಳಿ ಎಬ್ಬಿಸುತ್ತಾಳಾ ವೈಶಾಖಾ, ಅತ್ತಿಗೆಯದ್ದು ವಿಲನ್ ಪಾತ್ರನಾ? ಮುಂದೇನಾಗುತ್ತೆ ಅಂತ ನೋಡೋಕೆ ರಾಮಾಚಾರಿ ಸೀರಿಯಲ್ ನೋಡಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ