ಕಲರ್ಸ್ ಕನ್ನಡದಲ್ಲಿ (Colors Kannada) ಸಂಜೆ 6 ಗಂಟೆಗೆ ಒಲವಿನ ನಿಲ್ದಾಣ (Olavina Nildana) ಧಾರಾವಾಹಿ ಪ್ರಸಾರವಾಗ್ತಿದೆ. ಇದೊಂದು ಪ್ರೀತಿ ಆಧಾರಿತ ಕಥೆಯಾಗಿದ್ದು, ಹೀರೋ ಸಿದ್ಧಾಂತ್ ಮತ್ತು ನಟಿ ತಾರಿಣಿ ತಮ್ಮ ಪ್ರೀತಿ (Love) ಪಡೆದುಕೊಳ್ಳಲು ಆಗದೇ ಒದ್ದಾಡುತ್ತಿದ್ದಾರೆ. ಧಾರಾವಾಹಿಯಲ್ಲಿ ತಾರಿಣಿ ಮದುವೆ (Marriage) ಕಾರ್ಯಕ್ರಮಗಳು ಆರಂಭವಾಗಿವೆ. ಆದ್ರೂ ತಾರಿಣಿ ದೇವರ ಬಳಿ ಸಿದ್ಧಾಂತ್ ಒಳಿತಿಗಾಗಿ ಬೇಡಿಕೊಳ್ತಾ ಇದ್ದಾಳೆ. ತಾರಿಣಿ ಸಿದ್ಧಾಂತ್‍ನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದಳು. ಅವನಿಗೆ ತನ್ನ ಪ್ರೀತಿ ವಿಷ್ಯ ಹೇಳಿಕೊಂಡು ಮದುವೆಯಾಗಬೇಕು ಎಂದುಕೊಂಡಿದ್ದಾಳೆ. ಆದ್ರೆ ಸಿದ್ಧಾಂತ್ ಅವತ್ತೇ ತಾನು ವಿದೇಶಕ್ಕೆ (Foreign) ಹೋಗುವುದಾಗಿ ಹೇಳಿದ್ದ. ಅದಕ್ಕೆ ತಾರಿಣಿ ಏನೂ ಹೇಳದೇ ಸುಮ್ಮನಾಗಿದ್ದಳು. ಈಗ ಮೆಹಂದಿಯಲ್ಲಿ ಸಿದ್ಧಾಂತ್ ಹೆಸರು ಹಾಕಿಸಿಕೊಂಡಿದ್ದಾಳೆ.
ಪ್ರೀತಿ ಮುಚ್ಚಿಟ್ಟ ತಾರಿಣಿ
ಸಿದ್ಧಾಂತ್ ವಿದೇಶಕ್ಕೆ ಹೋಗುತ್ತೇನೆ ಎಂದಿದ್ದೇ ತಡ, ತಾರಿಣಿ ತನ್ನ ಪ್ರೀತಿ ಮುಚ್ಚಿಟ್ಟು, ಧೀರಜ್ ನನ್ನು ಮದುವೆಯಾಗಲು ಒಪ್ಪಿದ್ದಾಳೆ. ಬಳೆ ಶಾಸ್ತ್ರ, ಮೆಹಂದಿ ಶಾಸ್ತ್ರ ಮುಕ್ತಾಯವಾಗಿದೆ. ಇನ್ನೂ ಮದುವೆ ಶಾಸ್ತ್ರಕ್ಕೆ ಎಲ್ಲಾ ತಯಾರಿಯನ್ನು ಧೀರಜ್ ಅಮ್ಮ ಜಗದೀಶ್ವರಿಯೇ ನೋಡಿಕೊಂಡಿದ್ದಾಳೆ.
ಅಮ್ಮನಿಗಾಗಿ ಮದುವೆಗೆ ಒಪ್ಪಿಗೆ
ನನ್ನ ಅಮ್ಮ ಕೆಟ್ಟವಳು ಅಲ್ಲ. ಜಗತ್ತಿನಲ್ಲಿ ಕೆಟ್ಟ ತಾಯಿ ಅಂತ ಯಾರೂ ಇರಲ್ಲ. ನನ್ನಮ್ಮನೂ ಸಹ ನನಗೆ ಒಳ್ಳೆಯದಾಗಲಿ ಅಂತ ಇದೆಲ್ಲಾ ಮಾಡ್ತಾ ಇದಾಳೆ. ನನ್ನ ಭವಿಷ್ಯ ಚೆನ್ನಾಗಿರುತ್ತೆ. ನಾನು ಖುಷಿಯಾಗಿ ಇರ್ತೇನೆ ಎನ್ನುವುದೇ ಅವಳ ನಂಬಿಕೆ ಎಂದು ತಾರಿಣಿ ದೇವರ ಮುಂದೆ ಹೇಳಿಕೊಳ್ತಾ ಇದ್ದಾಳೆ.
ನನ್ನ ಅಮ್ಮನ ಮನಸ್ಸಿಗೆ ನೋವು ಮಾಡಲು ಇಷ್ಟ ಇಲ್ಲದೇ ಈ ಮದುವೆಗೆ ಒಪ್ಪಿಕೊಂಡಿದ್ದೇನೆ ತಾಯಿ. ಎಲ್ಲರನ್ನೂ ಕಾಪಾಡೋ ಮಹಾತಾಯಿ ನೀನು. ದೇವತೆ, ಯಾವುದು ಸರಿ, ಸರಿಯಲ್ಲ ಎನ್ನುವುದು ನಿನಗೆ ಗೊತ್ತಿರುತ್ತೆ. ಸರಿಯಾದ ದಾರಿಯಲ್ಲಿ ಎಲ್ಲವನ್ನೂ ನಡೆಸು ಇಷ್ಟೇ ನನ್ನ ಪ್ರಾರ್ಥನೆ ಎಂದು ದೇವಿ ಮುಂದೆ ತಾರಿಣಿ ಬೇಡಿಕೊಂಡಿದ್ದಾಳೆ.
ನಾವು ಬಯಸಿದ್ದು ಸಿಗಲ್ಲ
ತಾರಿಣಿ ಮತ್ತು ಸಿದ್ಧಾಂತ್ ಮಾತನಾಡುತ್ತಿದ್ದಾರೆ. ನಾವು ಬಸಿದ್ದೆಲ್ಲ ಸಿಗಲ್ಲ ಎಂದು ಹೇಳ್ತಾ ಇದ್ದಾನೆ. ಅದಕ್ಕೆ ತಾರಿಣಿ ಸಿಕ್ಕಿದೆಯೆಲ್ಲ. ಒಳ್ಳೆ ಕೆಲಸ. ವಿದೇಶಕ್ಕೆ ಹೋಗ್ತಾ ಇದ್ದೀರಿ. ಒಳ್ಳೆಯ ಕೆಲಸ. ನಿಮ್ಮ ಮನೆ ಪ್ರ್ಲಾಬಂ ತೀರುತ್ತೆ. ನೀವು ಅಂದುಕೊಂಡಂತೆ ಆಯ್ತು ಎಂದು ಹೇಳ್ತಾಳೆ. ಅದಕ್ಕೆ ಸಿದ್ಧಾಂತ್ ಒಂದು ಬೇಕು ಅಂದ್ರೆ ಇನ್ನೊಂದು ಕಳೆದುಕೊಳ್ಳಬೇಕು ತಾರಿಣಿ ಬಳಿ ಹೇಳ್ತಾನೆ.
ಕೈನಲ್ಲಿ ಸಿದ್ಧಾಂತ್ ಹೆಸರು
ಸಿದ್ಧಾಂತ್ ಮಾತನಾಡುತ್ತಾ, ಮೆಹಂದಿ ತೋರಿಸು ಎಂದು ಕೇಳ್ತಾನೆ. ತಾರಿಣಿ ಖುಷಿಯಿಂದ ಮೆಹಂದಿ ತೋರಿಸುತ್ತಾಳೆ. ಕೈನಲ್ಲಿ S ಮತ್ತು T ಎಂದು ಇರುತ್ತೆ. ಅದನ್ನು ನೋಡಿ ಸಿದ್ಧಾಂತ್‍ಗೆ ಬೇಸರ ಆಗುತ್ತೆ. ತಾರಿಣಿ ಬೇಗ ಅಲ್ಲಿಂದ ಎದ್ದ ಹೋಗ್ತಾಳೆ. ಸಿದ್ಧಾಂತ್ ಗೆ ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ.
ಇದನ್ನೂ ಓದಿ: Olavina Nildana: ಸಿದ್ಧಾಂತ್ ಬಳಿ ತನ್ನ ಪ್ರೀತಿ ವಿಚಾರ ಹೇಳಿಕೊಳ್ತಾಳಾ ತಾರಿಣಿ, ಕುಟುಂಬದ ಜವಾಬ್ದಾರಿಯಲ್ಲಿ ನಟ!
ಪ್ರೀತಿ ವಿಷ್ಯ ಹೇಳಿಕೊಳ್ತಾರಾ?
ಇಬ್ಬರಿಗೂ ಒಬ್ಬರನ್ನು ಕಂಡ್ರೆ ಒಬ್ಬರಿಗೆ ತುಂಬಾ ಇಷ್ಟ. ಆದ್ರೆ ಹೇಳಿಕೊಳ್ಳುಲು ಆಗ್ತಿಲ್ಲ. ಮದುವೆ ಬೇರೆ ಹತ್ತಿರ ಬಂದಿದೆ. ಈಗಲಾದ್ರೂ ಪ್ರೀತಿ ಹೇಳಿಕೊಂಡು ಮದುವೆ ಆಗ್ತಾರಾ ನೋಡಬೇಕು.ತಾರಿಣಿ ಮದುವೆ ಆಗ್ತಿರುವ ಧೀರಜ್ ಕೆಟ್ಟವನು. ತಾರಿಣಿ ಮೇಲೆ ಸೇಡು ತೀರಿಸಿಕೊಳ್ಳಲು ಈ ಮದುವೆ ಆಗ್ತಾ ಇದ್ದಾನೆ. ಹಾಗಾದ್ರೆ ತಾರಿಣಿ ಮದುವೆ ಯಾರ ಜೊತೆ ಆಗುತ್ತೆ ಎನ್ನುವುದೇ ಕುತೂಹಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ