• Home
  • »
  • News
  • »
  • breaking-news
  • »
  • Lakshana: ಇಕ್ಕಟ್ಟಿಗೆ ಸಿಲುಕಿದ ಭೂಪತಿ, ನಕ್ಷತ್ರಾ ಮುಖ್ಯನಾ, ವೈಷ್ಣವಿನಾ?

Lakshana: ಇಕ್ಕಟ್ಟಿಗೆ ಸಿಲುಕಿದ ಭೂಪತಿ, ನಕ್ಷತ್ರಾ ಮುಖ್ಯನಾ, ವೈಷ್ಣವಿನಾ?

ಭೂಪತಿಗೆ ನಕ್ಷತ್ರಾ ಮುಖ್ಯನಾ, ವೈಷ್ಣವಿನಾ?

ಭೂಪತಿಗೆ ನಕ್ಷತ್ರಾ ಮುಖ್ಯನಾ, ವೈಷ್ಣವಿನಾ?

ನಕ್ಷತ್ರಾ ಮನೆಯಿಂದ ಹೊರ ಹಾಕಿದ್ದಕ್ಕೆ, ವೈಷ್ಣವಿ ಭೂಪತಿಯನ್ನು ಕೇಳಿದ್ದಾಳೆ. ನಿನಗೆ ಯಾರು ಮುಖ್ಯ. ನಾನೋ, ನಕ್ಷತ್ರಾನೋ ಎಂದು. ಒಂದು ಈ ಮನೆಯಲ್ಲಿ ನಕ್ಷತ್ರಾ ಇರಬೇಕು. ಇಲ್ಲ ನಾನು ಇರಬೇಕು ಎಂದು ಹೇಳಿದ್ದಾಳೆ.

  • News18 Kannada
  • Last Updated :
  • Karnataka, India
  • Share this:

    ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30ಕ್ಕೆ ಪ್ರಸಾರವಾಗುತ್ತಿರುವ ಲಕ್ಷಣ (Lakshana) ಧಾರಾವಾಹಿಯೂ (Serial) ದಿನಕ್ಕೊಂದು ತಿರುವುಗಳನ್ನು ಪಡೆಯುತ್ತಾ ಜನರನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಿದೆ. ತನ್ನದೇ ಆದ ವಿಭಿನ್ನ ಶೈಲಿಯಲ್ಲಿ ಜನಪ್ರಿಯತೆ ಗಳಿಸಿದೆ. ಈ ಧಾರಾವಾಹಿಯ ನಾಯಕಿ ನಕ್ಷತ್ರಾ. ನೋಡಲು ಕಪ್ಪಾಗಿದ್ದರೂ ತಿಳಿ ಬಿಳಿ ಮನಸ್ಸಿನ ಹುಡುಗಿ. ಅಪ್ಪ ಚಂದ್ರಶೇಖರ್ ಮಾಡಿದ ಅವಾಂತರದಿಂದ ನಕ್ಷತ್ರಾ, ಭೂಪತಿಯನ್ನು ಮದುವೆ ಆಗೋ ಪರಿಸ್ಥಿತಿ ಬರುತ್ತೆ. ಮದುವೆನೂ ಆಗ್ತಾರೆ. ಬಲವಂತವಾಗಿ ಮದುವೆ ಮಾಡಿಸಿದ್ದಕ್ಕೆ, ಭೂಪತಿ (Bhupathi) ಮನೆಯವರಿಗೆ ಚಂದ್ರಶೇಖರ್ ಮತ್ತು ಅವರ ಮಗಳು ನಕ್ಷತ್ರಾ ಕಂಡ್ರೆ ಆಗಲ್ಲ. ಈಗ ಧಾರಾವಾಹಿಯಲ್ಲಿ ಅಗ್ನಿಸಾಕ್ಷಿ ಖ್ಯಾತಿಯ ಸನ್ನಿಧಿ ಅಂದ್ರೆ ವೈಷ್ಣವಿ (Vaishnavi) ಅವರ ಎಂಟ್ರಿ ಆಗಿದೆ. ಆಕೆ ನಾನು ಭೂಪತಿಯನ್ನು ಮದುವೆ (Marriage) ಆಗ್ತೀನಿ ಎಂದು ಕೂತಿದ್ದಾಳೆ.


    ಭೂಪತಿ ಬಾಳಲ್ಲಿ ಬಿರುಗಾಳಿ
    ನಕ್ಷತ್ರಾ ಹೇಗಾದ್ರೂ ಭೂಪತಿ ಪ್ರೀತಿಯನ್ನು ಪಡೆಯಬೇಕು ಎಂದು ಸಾಹಸ ಪಡುತ್ತಿದ್ದಾಳೆ. ಅದೇ ಸಮಯಕ್ಕೆ ಧಾರಾವಾಹಿಗೆ ವೈಷ್ಣವಿ ಅವರ ಎಂಟ್ರಿ ಆಗಿದೆ. ಭೂಪತಿ ಜೀವನಲ್ಲಿ ಹೊಸ ಸುಂಟರಗಾಳಿ ಎದ್ದಿದೆ. ಮನೆಗೆ ಬಂದಿರುವ ವೈಷ್ಣವಿ ನಾನು ಭೂಪತಿ ಪತ್ನಿ ಎನ್ನುತ್ತಿದ್ದಾಳೆ. ನಕ್ಷತ್ರಾ ಬಳಿ ಬಂದು, ನಿನ್ನ ಹೆಂಡತಿ ಪಟ್ಟ ಇವತ್ತಿಗೆ ಮುಗಿಯಿತು. ಇನ್ಮೇಲೆ ನಾನೇ ಭೂಪತಿ ಹೆಂಡತಿ ಎಂದು ಹೇಳುತ್ತಿದ್ದಾಳೆ.


    ಮನೆಯವರೆಲ್ಲಾ ಶಾಕ್
    ನಾನೇ ಭೂಪತಿ ಹೆಂಡತಿ ಎಂದು ಮನೆಯವರ ಮುಂದೆ ವೈಷ್ಣವಿ ಹೇಳುತ್ತಿದ್ದಾಳೆ. ಅದನ್ನು ಕೇಳಿ ಮನೆಯವರೆಲ್ಲಾ ಶಾಕ್ ಆಗಿದ್ದಾರೆ. ಶಕುಂತಲಾ ದೇವಿಯೂ ಏನೇನೋ ಮಾತನಾಡಬೇಡ ಎಂದು ಹೇಳುತ್ತಾಳೆ. ಅದಕ್ಕೆ ವೈಷ್ಣವಿ, ಭೂಪತಿಯನ್ನೇ ಕರೆದು ಕೇಳಿ, ನಾನು ಯಾರು ಯಾಕೆ ಬಂದಿದ್ದೇನೆ ಎಂದು ಗೊತ್ತಾಗುತ್ತೆ ಎಂದು ಹೇಳುತ್ತಾಳೆ. ಭೂಪತಿ ಸಹ ನನಗೆ ವೈಷ್ಣವಿ ಗೊತ್ತು ಎಂದು ಹೇಳುತ್ತಾನೆ.


    ಇದನ್ನೂ ಓದಿ: Kannadathi: ಹರ್ಷನಿಗಾಗಿ ಅಡ್ಡ ದಾರಿ ಹಿಡಿದ ವರು! ಸಾನಿಯಾ ಹೇಳಿದ ಪೇಪರ್​ ಹಿಡಿದು ಹೊಸ ಗೇಮ್ 


    ವೈಷ್ಣವಿಯನ್ನು ಮನೆಯಿಂದ ಹೊರ ಹಾಕಿದ ನಕ್ಷತ್ರಾ
    ವೈಷ್ಣವಿಗೆ ಈ ಮೊದಲು ಭೂಪತಿ ಮದುವೆ ಆಗುತ್ತೇನೆ ಎಂದು ಪ್ರಮಾಣ ಮಾಡಿದ್ನಂತೆ. ಅದನ್ನು ಮರೆತು ನಕ್ಷತ್ರಾಳನ್ನು ಮದುವೆ ಆಗಿದ್ದಾನೆ. ಅದಕ್ಕೆ ವೈಷ್ಣವಿ ಬಂದು ಮದುವೆ ಆಗು ಎನ್ನುತ್ತಿದ್ದಾಳೆ. ನಕ್ಷತ್ರಾ ಕೋಪಗೊಂಡು ಆಕೆಯನ್ನು ಮನೆಯಿಂದು ಹೊರ ದಬ್ಬುತ್ತಾಳೆ. ಆಗ ಭೂಪತಿ ಬಂದು ತಡೆಯುತ್ತಾನೆ.


    colors kannada serial, kannada serial, lakshana serial, serial today episode, vaishnavi enter to serial, nakshatra worried, ಲಕ್ಷಣ ಧಾರಾವಾಹಿ, ಭೂಪತಿಗೆ ನಕ್ಷತ್ರಾ ಮುಖ್ಯನಾ, ವೈಷ್ಣವಿನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ಲಕ್ಷಣ ಧಾರಾವಾಹಿ


    ವೈಷ್ಣವಿ ನಿನಗೆ ಯಾರು ಬೇಕು ಎಂದು ಪ್ರಶ್ನೆ
    ನಕ್ಷತ್ರಾ ಮನೆಯಿಂದ ಹೊರ ಹಾಕಿದ್ದಕ್ಕೆ, ವೈಷ್ಣವಿ ಭೂಪತಿಯನ್ನು ಕೇಳಿದ್ದಾಳೆ. ನಿನಗೆ ಯಾರು ಮುಖ್ಯ. ನಾನೋ, ನಕ್ಷತ್ರಾನೋ ಎಂದು. ಒಂದು ಈ ಮನೆಯಲ್ಲಿ ನಕ್ಷತ್ರಾ ಇರಬೇಕು. ಇಲ್ಲ ನಾನು ಇರಬೇಕು ಎಂದು ಹೇಳಿದ್ದಾಳೆ. ಭೂಪತಿಗೆ ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ.


    ಇದನ್ನೂ ಓದಿ: Olavina Nildana: ಅಮ್ಮ ಎಂದುಕೊಂಡಿದ್ದವಳೇ ತಾರಿಣಿಗೆ ವಿಷ ಬೆರೆಸಿ ಕೊಟ್ಟಿದ್ದಾಳೆ! ಗಣಪತಿ ಕಾಪಾಡ್ತಾನಾ? 


    ನಕ್ಷತ್ರಾಗೆ ಬಿಸಿ ತುಪ್ಪವಾದ ವೈಷ್ಣವಿ
    ಭೂಪತಿ ವೈಷ್ಣವಿ ಹೇಳಿದ ಮಾತಿಗೆಲ್ಲಾ ಓಕೆ ಎನ್ನುತ್ತಿದ್ದಾನೆ. ಈ ಮೊದಲು ಮಾತು ಕೊಟ್ಟಿದ್ದನ್ನು ಒಪ್ಪಿದ್ದಾನೆ. ಅದನ್ನೆಲ್ಲಾ ನೋಡಿ ನಕ್ಷತ್ರಾ ಒದ್ದಾಡುತ್ತಿದ್ದಾಳೆ. ತನ್ನ ಗಂಡ, ಬೇರೆಯವರ ಪಾಲಾಗುತ್ತಿದ್ದಾನೆ ಎಂದು ಬೇಸರ ಮಾಡಿಕೊಂಡಿದ್ದಾಳೆ. ಭೂಪತಿ ಈಗ ಯಾರನ್ನು ಆಯ್ಕೆ ಮಾಡ್ತಾನೆ ಅನ್ನೋದೇ ಯಕ್ಷ ಪ್ರಶ್ನೆಯಾಗಿದೆ.


    colors kannada serial, kannada serial, lakshana serial, serial today episode, vaishnavi enter to serial, nakshatra worried, ಲಕ್ಷಣ ಧಾರಾವಾಹಿ, ಭೂಪತಿಗೆ ನಕ್ಷತ್ರಾ ಮುಖ್ಯನಾ, ವೈಷ್ಣವಿನಾ?, ಕಲರ್ಸ್ ಕನ್ನಡದ ಧಾರಾವಾಹಿಗಳು, kannada news, karnataka news,
    ನಕ್ಷತ್ರಾ-ವೈಷ್ಣವಿ


    ಭೂಪತಿ ಆಯ್ಕೆ ಯಾರು? ಇದ್ದಕ್ಕಿದ್ದ ಹಾಗೇ ವೈಷ್ಣವಿ ಬಂದಿದ್ಯಾಕೆ? ನಕ್ಷತ್ರಾ ಜೀವನ ಅಲ್ಲೋಲ ಕಲ್ಲೋಲವಾಗುತ್ತಾ? ಮುಂದೇನಾಗುತ್ತೆ ಅಂತ ನೋಡೋಕೆ ಲಕ್ಷಣ ಧಾರಾವಾಹಿ ನೋಡಬೇಕು.

    Published by:Savitha Savitha
    First published: