• Home
 • »
 • News
 • »
 • breaking-news
 • »
 • BBK Season 09: ಕನ್ನಡ ಹೋರಾಟಗಾರರ ಕ್ಷಮೆ ಕೇಳಿ, ಕಣ್ಣೀರು ಹಾಕಿದ ಪ್ರಶಾಂತ್ ಸಂಬರ್ಗಿ!

BBK Season 09: ಕನ್ನಡ ಹೋರಾಟಗಾರರ ಕ್ಷಮೆ ಕೇಳಿ, ಕಣ್ಣೀರು ಹಾಕಿದ ಪ್ರಶಾಂತ್ ಸಂಬರ್ಗಿ!

ಕನ್ನಡ ಹೋರಾಟಗಾರರ ಕ್ಷಮೆ ಕೇಳಿ ಕಣ್ಣೀರು ಹಾಕಿದ ಪ್ರಶಾಂತ್ ಸಂಬರ್ಗಿ!

ಕನ್ನಡ ಹೋರಾಟಗಾರರ ಕ್ಷಮೆ ಕೇಳಿ ಕಣ್ಣೀರು ಹಾಕಿದ ಪ್ರಶಾಂತ್ ಸಂಬರ್ಗಿ!

ದಯವಿಟ್ಟು ಕನ್ನಡ ಹೋರಾಟಗಾರರೇ ಕ್ಷಮೆ ಇರಲಿ, ಕ್ಷಮೆ ಇರಲಿ, ಈ ರೀತಿ ಅರ್ಥ ಹೋಗಿದೆ ಎಂದ್ರೆ, ನನ್ನಿಂದ ತಪ್ಪಾಗಿದೆ. ನನಗೆ ಆ ರೀತಿ ಮಾತನಾಡಬಾರದಿತ್ತು ಎಂದು ಕ್ಷಮೆ ಕೇಳಿದ್ದಾರೆ.

 • News18 Kannada
 • Last Updated :
 • Karnataka, India
 • Share this:

  ಕಲರ್ಸ್ ಕನ್ನಡದಲ್ಲಿ (Colors Kannada) ಪ್ರತಿದಿನ 9.30ಕ್ಕೆ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss) ಪ್ರಸಾರವಾಗ್ತಿದೆ. ಹೀಗಾಗಲೇ ಬಿಗ್ ಬಾಸ್ 8 ಸೀಸನ್‍ಗಳು ಯಶಸ್ವಿಯಾಗಿ ಮುಗಿದಿವೆ. ಬಿಗ್ ಬಾಸ್ ಸೀನ್ 09 ವಿಶೇಷವಾಗಿದೆ. ಈ ಬಾರಿ ಬಿಗ್ ಬಾಸ್‍ಗೆ 9 ಜನ ನವೀನರು, 9 ಜನ ಪ್ರವೀಣರು ಎಂಟ್ರಿ ಆಗಿದ್ದರು. ಪ್ರವೀಣರು ಅಂದ್ರೆ ಹೀಗಾಗಲೇ ಹಳೇ ಸೀಸನ್ ಗಳಲ್ಲಿ ಇದ್ದವರು. ಅದರಲ್ಲಿ ಹೆಚ್ಚು ಖ್ಯಾತಿ ಹೊಂದಿವರು. ವಾದ ಮಾಡುವಂತವರೇ ಹೆಚ್ಚಾಗಿ ಸೆಲೆಕ್ಟ್ ಆಗಿದ್ದರು. ಅದರಲ್ಲಿ ಪ್ರಶಾಂತ್ ಸಂಬರ್ಗಿ (Prashanth Sambargi) ಕೂಡ ಒಬ್ಬರು. ಪ್ರಶಾಂತ್ ಸಂಬರ್ಗಿ ಇದ್ರೆ ಕೇಳಬೇಕಾ, ಅಲ್ಲಿ ಜಗಳ ಇದ್ದೇ ಇರುತ್ತೆ. ಈ ಬಾರಿ ಆ ಲೀಸ್ಟ್ ಗೆ ರೂಪೇಶ್ ರಾಜಣ್ಣ ಸೇರಿದ್ದಾರೆ. ಇಬ್ಬರು ಪದೇ ಪದೇ ಜಗಳ ಆಡ್ತಾನೇ ಇರ್ತಾರೆ. ಕನ್ನಡ ಹೋರಾಟಗಾರಿಗೆ ಅವಮಾನ ಮಾಡಿದ್ದ ಪ್ರಶಾಂತ್ ಸಂಬರ್ಗಿ ಕ್ಷಮೆ  (Sorry) ಕೇಳಿ ಕಣ್ಣೀರು ಹಾಕಿದ್ದಾರೆ.


  ಪ್ರಶಾಂತ್-ರಾಜಣ್ಣ ಜಗಳ
  ಬಿಗ್ ಬಾಸ್ ಸೀಸನ್ 09ರಲ್ಲಿ ಪ್ರಶಾಂತ್ ಸಂಬರ್ಗಿ, ರೂಪೇಶ್ ರಾಜಣ್ಣ ಪದೇ ಪದೇ ಜಗಳ ಆಡ್ತಾನೇ ಇರ್ತಾರೆ. ಯಾವುದಾದರೂ ವಿಷಯಕ್ಕೆ ಇಬ್ಬರು ಕಾಲು ಕೆರೆದುಕೊಂಡು ಗಲಾಟೆ ಮಾಡಿಕೊಳ್ತಾನೆ ಇರುತ್ತಾರೆ. ಮತ್ತೆ ಮಾತನಾಡುತ್ತಾರೆ. ಮರು ದಿನ ಮತ್ತೆ ಜಗಳ. ಇದೇ ಆಗಿ ಹೋಗಿದೆ. ಅದು ಓವರ್ ಆಗಿ ಪ್ರಶಾಂತ್ ಸಂಬರ್ಗಿ ಕನ್ನಡ ಪರ ಹೋರಾಟಗಾರರಿಗೆ ಅವಮಾನ ಮಾಡಿದ್ರು.


  ರೋಲ್ ಕಾಲ್ ಗಿರಾಕಿ ಎಂದಿದ್ದ ಪ್ರಶಾಂತ್
  ಈ ಹಿಂದೆ ಟಾಸ್ಕ್ ಆಡುವಾಗು ಪ್ರಶಾಂತ್ ಸಂಬರ್ಗಿ, ಈ ಕನ್ನಡ ಹೋರಾಟಗಾರರು ರೋಲ್ ಕಾಲ್ ಗಿರಾಕಿಗಳು. ಬರೀ ದುಡ್ಡು ಮಾಡ್ತಾರೆ ಎಂದು ಹೇಳಿದ್ದರು. ಅದಕ್ಕೆ ರೂಪೇಶ್ ರಾಜಣ್ಣ, ನಾನು ರೋಲ್ ಮಾಡಿದ್ದನ್ನು ಸಾಬೀತು ಮಾಡಿದ್ರೆ, ನಾನು ಸೂಸೈಡ್ ಮಾಡಿಕೊಳ್ಳಲು ರೆಡಿ ಎಂದಿದ್ದರು. ಅವತ್ತು ಜೋರು ಗಲಾಟೆ ಆಗಿತ್ತು.


  bigg boss kannada season 9, prashanth sambargi say sorry to kannada protesters, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಕನ್ನಡ ಹೋರಾಟಗಾರರ ಕ್ಷಮೆ ಕೇಳಿ, ಕಣ್ಣೀರು ಹಾಕಿದ ಪ್ರಶಾಂತ್ ಸಂಬರ್ಗಿ, kannada news, karnataka news,
  ಪ್ರಶಾಂತ್-ರಾಜಣ್ಣ ಜಗಳ


  ಇದನ್ನೂ ಓದಿ: Real Life: ಭಾಗ್ಯಲಕ್ಷ್ಮಿ ಧಾರಾವಾಹಿಯ ತಾಂಡವ್‍ನ ನಿಜವಾದ ಪತ್ನಿ ಯಾರು? ಮನೆಯಲ್ಲೂ ಕೋಪಿಷ್ಠಾನಾ ಈತ? 


  ಕನ್ನಡ ಪರ ಹೋರಾಟಗಾರರ ಪ್ರತಿಭಟನೆ
  ಈ ಬಾರಿಯ ಬಿಗ್ ಬಾಸ್ ಸೀಸನ್‍ಗೆ ಕನ್ನಡಪರ ಹೋರಾಟಗಾರರಾದ ರೂಪೇಶ್ ರಾಜಣ್ಣ ಬಂದಿದ್ದಾರೆ. ಪ್ರಶಾಂತ್ ಸಂಬರ್ಗಿ ಪದೇ ಪದೇ ರೂಪೇಶ್ ವಿರುದ್ಧ ಮಾತನಾಡುತ್ತಾರೆ. ಅಲ್ಲದೇ ಕನ್ನಡ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ಮಾತಾನಾಡುವಾಗ ಇಲ್ಲದ ಸಲ್ಲದ ಆರೋಪ ಮಾಡ್ತಾರೆ ಎಂದು ಪ್ರತಿಭಟನೆ ಮಾಡಿದ್ದರು.


  bigg boss kannada season 9, prashanth sambargi say sorry to kannada protesters, bigg boss kannada season 9 contestants, ಬಿಗ್ ಬಾಸ್ ಸೀಸನ್ 9, ಬಿಗ್ ಬಾಸ್ ಕನ್ನಡ ಸೀಸನ್ 9 ಸ್ಪರ್ಧಿಗಳು, ಕನ್ನಡ ಹೋರಾಟಗಾರರ ಕ್ಷಮೆ ಕೇಳಿ, ಕಣ್ಣೀರು ಹಾಕಿದ ಪ್ರಶಾಂತ್ ಸಂಬರ್ಗಿ, kannada news, karnataka news,
  ಕನ್ನಡ ಪರ ಹೋರಾಟಗಾರರ ಪ್ರತಿಭಟನೆ


  ಇದನ್ನೂ ಓದಿ: Matte Mayamruga: 2 ವರ್ಷದಿಂದ ಮಾಳವಿಕಾ ಪತಿ ಕೃಷ್ಣ ಪ್ರಸಾದ್ ಎಲ್ಲಿ ಹೋದ್ರು? ಎಲ್ಲಿ ನೋಡಿದ್ರೂ ಮಾಯಾಮೃಗದ್ದೇ ಚರ್ಚೆ! 


  ಬಿಗ್ ಬಾಸ್ ಮನೆಯಿಂದ ಹೊರ ಹಾಕಿ
  ಪ್ರಶಾಂತ್ ಸಂಬರ್ಗಿ ರಣಹೇಡಿ. ಎದುರಿಗೆ ನಿಂತು ಮಾತನಾಡಲು ಆಗಲ್ಲ. ಸಂಬರ್ಗಿ, ಪದೇ ಪದೇ ನಾನು ಕನ್ನಡ ಹೋರಾಟಗಾರರಿಗೆ ಬಿಸಿ ಮುಟ್ಟಿಸಿದ್ದೀನಿ ಅಂತ ಹೇಳ್ತಾರೆ. ಬಿಗ್ ಮನೆಯಲ್ಲಿ ತಮ್ಮ ಬಗ್ಗೆ ತಾವೇ ಕೊಚ್ಚಿಕೊಳ್ತಾರೆ. ಹೀಗೆ ಮಾಡ್ತಾ ಇದ್ರೆ, ಹೊರಗೆ ಬಂದ್ಮೇಲೆ ಏನು ಎಂದು ತೋರಿಸಬೇಕಾಗುತ್ತೆ ಎಂದು ಚಂದನ್ ಗೌಡ್ರು ಎನ್ನುವವರು ಪೋಸ್ಟ್ ಹಾಕಿಕೊಂಡಿದ್ದಾರೆ. ಅಲ್ಲದೇ ಬಿಗ್ ಬಾಸ್ ಮನೆಯಿಂದ ಆಚೆ ಕಳಿಸುವಂತೆ ಹೇಳಿದ್ದರು.  ಕ್ಷಮೆ ಕೇಳಿ, ಕಣ್ಣೀರು ಹಾಕಿದ ಪ್ರಶಾಂತ್ ಸಂಬರ್ಗಿ
  ಕನ್ನಡ ಹೋರಾಟಗಾರರಿಗೆ ನೋವಾಗಿದ್ರೆ ಕ್ಷಮಿಸಿ. ನನ್ನ ರಾಜಣ್ಣನ ಮೈಂಡ್ ಗೇಮ್ ಅದು. ನನ್ನ ಪ್ರೀತಿಯ ಕನ್ನಡಿಗರಿಗೆ ನೋವಾಗಿದ್ರೆ, ಕರ್ನಾಟಕದ ಜನತೆಗೆ ಕ್ಷಮೆ ಕೇಳುತ್ತೇನೆ. ರಭಸದಿಂದ ಬಂದ ಮಾತು, ವಿರುದ್ಧವಾಗಿರಬಹುದು. ದಯವಿಟ್ಟು ಕನ್ನಡ ಹೋರಾಟಗಾರರೇ ಕ್ಷಮೆ ಇರಲಿ, ಕ್ಷಮೆ ಇರಲಿ, ಈ ರೀತಿ ಅರ್ಥ ಹೋಗಿದೆ ಎಂದ್ರೆ, ನನ್ನಿಂದ ತಪ್ಪಾಗಿದೆ. ನನಗೆ ಆ ರೀತಿ ಮಾತನಾಡಬಾರದಿತ್ತು ಎಂದು ಕ್ಷಮೆ ಕೇಳಿದ್ದಾರೆ.

  Published by:Savitha Savitha
  First published: