Bigg Boss OTT: ಖುಷಿ ಖುಷಿಯಾಗಿ ಬಿಗ್​ ಬಾಸ್​ ಮನೆಗೆ ಚೈತ್ರ ಹಳ್ಳಿಕೇರಿ ಎಂಟ್ರಿ

10ನೇ ಸ್ಪರ್ಧಿಯಾಗಿ ನಟಿ ಚೈತ್ರ ಹಳ್ಳಿಕೇರಿ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿಗೆ ವಿವಾದದ ಮೂಲಕ ಸುದ್ದಿಯಾಗಿದ್ದ ಚೈತ್ರ ಹಳ್ಳಿಕೇರಿ ಗಂಡನ ವಿರುದ್ಧ ಕಂಪ್ಲೇಟ್​ ಕೊಟ್ಟಿದ್ರು. 

ನಟಿ ಚೈತ್ರ ಹಳ್ಳಿಕೇರಿ

ನಟಿ ಚೈತ್ರ ಹಳ್ಳಿಕೇರಿ

  • Share this:
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ (Big Boss OTT) ಈ ಬಾರಿ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ಪ್ರಸಾರವಾಗ್ತಿದೆ. ಈ ರಿಯಾಲಿಟಿ ಶೋಗೆ ಈಗಾಗಲೇ ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಅದರಂತೆ ಬಿಗ್ ಬಾಸ್ ಒಟಿಟಿಯಲ್ಲಿ ಕಾಣಿಸಿಕೊಳ್ಳುವ ಸ್ಪರ್ಧಿಗಳು ಯಾರೆಲ್ಲಾ ಎಂಬ ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ.  ಇದೀಗ 10ನೇ ಸ್ಪರ್ಧಿಯಾಗಿ ನಟಿ ಚೈತ್ರ ಹಳ್ಳಿಕೇರಿ ಎಂಟ್ರಿ ಕೊಟ್ಟಿದ್ದಾರೆ. ಇತ್ತೀಚಿಗೆ ವಿವಾದದ ಮೂಲಕ ಸುದ್ದಿಯಾಗಿದ್ದ ಚೈತ್ರ ಹಳ್ಳಿಕೇರಿ ಗಂಡನ ವಿರುದ್ಧ ಕಂಪ್ಲೇಟ್​ ಕೊಟ್ಟಿದ್ರು. 

‘ಮದುವೆ ನಂತರ ನಟನೆ ಬಿಡಬೇಕು ಎಂಬ ಷರತ್ತನ್ನು ನಾನು ಪಾಲಿಸಿದ್ದೆ. ಆದರೆ, ನನಗೆ ತುಂಬಾ ಕಷ್ಟವಾಗುತ್ತಿತ್ತು. ಹೇಗೋ ಕಷ್ಟಪಟ್ಟು ಧಾರಾವಾಹಿ ನಿರ್ಮಿಸಿದ್ದೆ. ಅದರಲ್ಲಿ ಆದ ಸಂಪಾದನೆಯನ್ನೂ ಪತಿ ಕಿತ್ತುಕೊಂಡಿದ್ದರು. ಅಷ್ಟೇ ಅಲ್ಲದೆ ನನ್ನನ್ನು ಥಳಿಸಿದ್ದರು’ ಎಂದು ಮಾರ್ಚ್ 14, 2018ರಂದು ಚೈತ್ರಾ ಬಸವನಗುಡಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.

ನಾನು ಹ್ಯಾಪಿ ಸೋಲ್

ನಾನು ಹ್ಯಾಪಿ ಸೋಲ್. ನನ್ನೊಳಗೆ ಖುಷಿ ನೋಡ್ತೀನಿ. ನನ್ನ ಇಡೀ ಫ್ಯಾಮಿಲಿಯಲ್ಲಿ ನಾನೊಬ್ಬಳೇ ಆರ್ಟಿಸ್ಟ್. ನನಗೆ ಸಿನಿಮಾದಿಂದ ತುಂಬಾ ಆಫರ್ ಬರುತ್ತಿತ್ತು. ಆದರೆ, ಒಪ್ಪಿಕೊಳ್ಳಲಿಲ್ಲ. ಮದುವೆ ಆದ್ಮೇಲೆ ರಿಯಾಲಿಟಿ ಗೊತ್ತಾಯ್ತು’ ಎಂದು ತಮ್ಮ ಬಗ್ಗೆ ಮಾತು ಆರಂಭಿಸಿದ್ದಾರೆ ಚೈತ್ರಾ.

chaitra hallikeri enter bigg boss ott kannada as contestant pvn
ನಟಿ ಚೈತ್ರ ಹಳ್ಳಿಕೇರಿ


‘ಮದುವೆ ಆದಮೇಲೆ ಕಿರುಕುಳ ಶುರುವಾಯ್ತು. ಅವರು ಕೂರು ಅಂದರೆ ಕೂರುತ್ತಿದ್ದೆ, ಏಳು ಅಂದರೆ ಏಳುತ್ತಿದ್ದೆ. ಮದುವೆಯಿಂದಾಗಿ ನನ್ನ ಜೀವನದ ಹಲವು ವರ್ಷ ಅಳಿಸಿ ಹೋಯ್ತು. ಆ ವರ್ಷಗಳಿಂದ ಸಿಕ್ಕಿದ್ದು ನನ್ನ ಈ ಇಬ್ಬರು ಮಕ್ಕಳು ಮಾತ್ರ. ನಾನು ಮೇಕಪ್ ಆರ್ಟಿಸ್ಟ್​ ಕೂಡ ಹೌದು. ಆ್ಯಕ್ಟಿಂಗ್ ಆಫರ್ ಬರುತ್ತಿದೆ. ಎಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲ. ಮತ್ತೊಂದು ಡೋರ್ ಓಪನ್ ಆಗ್ತಿದೆ’ ಎಂದರು ಚೈತ್ರಾ ಹಳ್ಳಿಕೇರಿ.

ತನ್ನ ಪತಿ ಮತ್ತು ಮಾವನ ವಿರುದ್ಧ ದೂರು

ಸ್ಯಾಂಡಲ್​ವುಡ್​ನಲ್ಲಿ (Sandalwood) ಮಿಂಚಿ ಮರೆಯಾಗಿದ್ದ ನಟಿ ಚೈತ್ರಾ ಹಳ್ಳಿಕೇರಿ (Chaitra Hallikeri) ತನ್ನ ಪತಿ ಮತ್ತು ಮಾವನ ವಿರುದ್ಧ ಪೊಲೀಸರಿಗೆ (Police) ದೂರು ನೀಡಿದ್ದು, ತನ್ನ ಬ್ಯಾಂಕ್ (Bank) ಖಾತೆ ದುರ್ಬಳಕೆ ಮಾಡಿಕೊಂಡು ಲೋನ್ ಪಡೆದಿರುವ ಆರೋಪ ಮಾಡಿದ್ದರು. ಈ ಬಗ್ಗೆ ಮೈಸೂರಿನ (Mysuru) ಜಯಲಕ್ಷ್ಮೀಪುರಂ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿರುವ ನಟಿ ಚೈತ್ರಾ, ನನ್ನ ಅನುಮತಿ ಇಲ್ಲದೇ ಪತಿ ಹಾಗೂ ಮಾವ ಸೇರಿ ಗೋಲ್ಡ್ ಲೋನ್ ಮಾಡಿದ್ದಾರೆ. ಇದಕ್ಕೆ ಬ್ಯಾಂಕ್ ಮ್ಯಾನೇಜರ್ ಸಹ ಸಹಾಯ ಮಾಡಿದ್ದಾರೆ ಎಂದು ಪತಿ ಬಾಲಾಜಿ ಪೋತರಾಜ್ ಮತ್ತು ಮಾವ ಪೋತರಾಜ್ ವಿರುದ್ಧ ಚೈತ್ರಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.

7ನೇ ಸ್ಪರ್ಧಿಯಾಗಿ ನಟಿ ಅಕ್ಷತಾ ಕುಕ್ಕಿ

ಇದೀಗ 7ನೇ ಸ್ಪರ್ಧಿಯಾಗಿ ನಟಿ ಅಕ್ಷತಾ ಕುಕ್ಕಿ (Akshata kuki)  ಎಂಟ್ರಿ ಕೊಟ್ಟಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯವರಾಗಿರುವ ಅಕ್ಷತಾ ಮನೆಯವರೆಲ್ಲ ಸರ್ಕಾರಿ ನೌಕರರು. ಇವರು ಕೂಡ ಸರ್ಕಾರಿ ಕೆಲಸಕ್ಕೇ ಸೇರಬೇಕು ಎಂದು ಅಂದುಕೊಡಿದ್ದರಂತೆ. ಆದರೆ, ಸಿನಿಮಾ ಜಗತ್ತಿನ ಬಗ್ಗೆ ಕುತೂಹಲ ಇದ್ದ ಕಾರಣ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.


 ಮಾಡೆಲ್​ ಆಗಿ ಎಂಟ್ರಿ ಕೊಟ್ಟ ಅಕ್ಷತಾ ಕುಕ್ಕಿಮಾಡೆಲ್​ ಆಗಿದ್ದ ಅಕ್ಷತಾ ಕುಕ್ಕಿ ಚಿತ್ರರಂಗದಲ್ಲೂ ಅನೇಕರ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮೊದಲಿಗೆ ಫ್ಯಾಶನ್ ಶೋನಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡ ಅಕ್ಷತಾಗೆ ಸಿನಿಮಾ ಆಫರ್ ಕೂಡ ಬಂದು ಅದರಲ್ಲಿ ಯಶಸ್ಸು ಸಾಧಿಸಿದರು.  ಸೈಡ್​ ಆ್ಯಕ್ಟರ್ ಆಗಿಯೂ ಇವರು ನಟಿಸಿದ್ದಾರೆ.

Published by:Pavana HS
First published: