• ಹೋಂ
  • »
  • ನ್ಯೂಸ್
  • »
  • Breaking News
  • »
  • Accident: ತುಮಕೂರಿನಲ್ಲಿ ಸೇತುವೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಕಾರು; ಮೂವರ ದುರ್ಮರಣ

Accident: ತುಮಕೂರಿನಲ್ಲಿ ಸೇತುವೆಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ಕಾರು; ಮೂವರ ದುರ್ಮರಣ

ಕಾರು ಅಪಘಾತ, ಮೂವರು ಸಾವು

ಕಾರು ಅಪಘಾತ, ಮೂವರು ಸಾವು

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿನ ಸೇತುವೆಯಿಂದ ಕಾರು ಕೆಳಕ್ಕೆ ಬಿದ್ದಿದ್ದು, ಅಪಘಾತದಲ್ಲಿ ಮೂವರು ಸಾವನ್ನಪ್ಪಿದ್ದಾರೆ.

  • Share this:

ತುಮಕೂರು (ಡಿ.14): ಜಿಲ್ಲೆಗೆ ಇಂದು ಕರಾಳ ದಿನವಾಗಿದೆ (Black Day). ಸರಣಿ ಅಪಘಾತಗಳು ಸಂಭವಿಸಿದ್ದು ಸಾವು-ನೋವು ಹೆಚ್ಚಾಗಿದೆ. ತುಮಕೂರು (Tumakuru) ಜಿಲ್ಲೆ ಶಿರಾ ತಾಲೂಕಿನ ದೊಡ್ಡಾಲದಮರದ ಬಳಿ ಭೀಕರ ರಸ್ತೆ ಅಪಘಾತ (Road Accident) ಸಂಭವಿಸಿದ್ದು, ಕಾರು ಸೇತುವೆಗೆ (Bridge) ಡಿಕ್ಕಿ ಹೊಡೆದು ಬಳಿಕ ಸೇತುವೆ ಮೇಲಿಂದ ಕೆಳಕ್ಕೆ ಬಿದ್ದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದಾರೆ (3 People Death). ಮೃತಪಟ್ಟ ಮೂವರು ಬೆಂಗಳೂರು ಮೂಲದವರು ಎಂದು ತಿಳಿದು ಬಂದಿದೆ.


ಭೀಕರ ಅಪಘಾತ ಮೂವರ ಸಾವು


ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಜೋಗಿಹಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿನ ಸೇತುವೆಯಿಂದ ಕಾರು ಕೆಳಕ್ಕೆ ಬಿದ್ದಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ರು, ಗಂಭೀರವಾಗಿ ಗಾಯಗೊಂಡಿದ್ದರು ಮತ್ತಿಬ್ಬರು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.
ಬೆಂಗಳೂರು ಕಡೆಗೆ ಬರುತ್ತಿದ್ದ ಕಾರು


ಕಾರು ಚಿತ್ರದುರ್ಗದಿಂದ ಬೆಂಗಳೂರು ಕಡೆಗೆ ತೆರಳುತ್ತಿತ್ತು ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿದೆ. ಬಳಿಕ ಕಾರು ಸೇತುವೆ ಮೇಲಿಂದ ಕೆಳಕ್ಕೆ ಬಿದ್ದಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.  ಈ ಅಪಘಾತ ಸಂಬಂಧ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಬೆಳಗ್ಗೆ ಭೀಕರ ಅಪಘಾತ ಮೂವರ ಸಾವು


ಕಾರು ಮತ್ತು ಕ್ಯಾಂಟರ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಅಪಘಾತದಲ್ಲಿ ನಾಲ್ವರು ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೊಂಡ್ಲಿಕ್ರಾಸ್ ಸಮೀಪ ನಡೆದಿದೆ.
ಸ್ಥಳದಲ್ಲೇ ಇಬ್ಬರ ಸಾವು


ಅಪಘಾತ ಸಂಭವಿಸಿದ್ದ  ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವಿಗೀಡಾಗಿದ್ದರು. ಬಳಿಕ ತೀವ್ರವಾಗಿ ಗಾಯಗೊಂಡಿದ್ದ ಮತ್ತಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅವರು ಕೂಡ ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾರೆ.ಕಾರು ಮತ್ತು ಕ್ಯಾಂಟರ್ ನಡುವೆ ನಡೆದ ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.


ಮೃತರನ್ನು ಚಿಕ್ಕನಾಯಕನಹಳ್ಳಿ ತಾಲೂಕಿನ ನಡುವನಹಳ್ಳಿಯವರು ತಂದೆ ನಾರಾಯಣಪ್ಪ (51)  ತಾಯಿ ನಾಗರತ್ನ (45) ಮಗ ಸಾಗರ್ (21) ಹಾಗೂ ರಾಮಣ್ಣ (60) ಮೃತ ದುರ್ದೈವಿಗಳು. ಅಪಘಾತದಲ್ಲಿ ತಂದೆ, ತಾಯಿ ಮಗ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ.


ಕಾರು, ಕ್ಯಾಂಟರ್​ ಮುಖಾಮುಖಿ ಡಿಕ್ಕಿ


ಇಂಡಿಕಾ ಕಾರ್ ಕೆಬಿ ಕ್ರಾಸ್ ನಿಂದ ತುಮಕೂರು ಕಡೆ ಪ್ರಯಾಣಿಸುವಾಗ ಮುಖಾಮುಖಿ ಡಿಕ್ಕಿಯಾಗಿದೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕ್ಯಾಂಟರ್ ಲಾರಿ ಓವರ್ ಟೇಕ್ ಮಾಡಲು ಹೋಗಿ ಇಂಡಿಕಾ ಕಾರಿಗೆ ಡಿಕ್ಕಿ ಹೊಡೆದಿದೆ. ಒಂದೇ ಗ್ರಾಮದ ನಾಲ್ವರು ಹಾಗೂ ಕಾರಿನಲ್ಲಿದ್ದ ನಾಯಿ ಕೂಡ ಸಾವನ್ನಪ್ಪಿದೆ.
ಮೂವರು ಅಪಘಾತದಲ್ಲಿ ಸಾವು


ನಾರಾಯಣಪ್ಪ ಕುಟುಂಬದ ಬೆಂಗಳೂರಿನ ಹೆಗ್ಗನಹಳ್ಳಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದರು. ನಾರಾಯಣಪ್ಪ ಕುಟುಂಬದ ನಾಲ್ವರಲ್ಲಿ ಮೂವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.


ಇದನ್ನೂ ಓದಿ: Namma Clinic: ನಮ್ಮ ಕ್ಲಿನಿಕ್ ಲೋಕಾರ್ಪಣೆಗೊಳಿಸಿದ ಸಿಎಂ; ಈ ಎಲ್ಲಾ ಸೇವೆಗಳು ಉಚಿತ!


ಇಬ್ಬರು ಬೈಕ್ ಸವಾರರ ಸಾವು


ಚಾಮರಾಜನಗರದಲ್ಲ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ - ಹಂಗಳ ರಸ್ತೆಯಲ್ಲಿ ಧಾರುಣ ಘಟನೆ ನಡೆದಿದೆ. ಲಕ್ಕೂರು ಗ್ರಾಮದ ಅನಿಲ್ (26), ಜಕ್ಕಳ್ಳಿ ಗ್ರಾಮದ ಚಂದ್ರು (32) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ಸಂಬಂಧ ಗುಂಡ್ಲುಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Published by:ಪಾವನ ಎಚ್ ಎಸ್
First published: