• ಹೋಂ
  • »
  • ನ್ಯೂಸ್
  • »
  • Breaking News
  • »
  • Stop Tobacco: ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್​ ಸೇದೋ ಮುನ್ನ ಎಚ್ಚರ, ಈ ಆ್ಯಪ್​​ ಮೂಲಕ ಯಾರೂ ದೂರು ನೀಡ್ಬಹುದು!

Stop Tobacco: ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್​ ಸೇದೋ ಮುನ್ನ ಎಚ್ಚರ, ಈ ಆ್ಯಪ್​​ ಮೂಲಕ ಯಾರೂ ದೂರು ನೀಡ್ಬಹುದು!

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Tech Tips: ಇದುವರೆಗೆ ಕೇವಲ ಬಾಯಿ ಮಾತಿನಲ್ಲಿ ಸರ್ಕಾರದ ನಿಯಮವಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಪಾನ ನಿಷೇಧ ಎಂದು. ಆದರೆ ಇನ್ಮುದೆ ನಿಮ್ಮ ಕಣ್ಣಮುಂದೆಯೇ ಯಾರಾದರು ಸಿಗರೇಟ್​ ಸೇದುತ್ತಿದ್ದರೆ ಆ್ಯಪ್​ ಮೂಲಕ ಪೊಲೀಸ್​ ಇಲಾಖೆಗೆ ತಿಳಿಸಬಹುದು. ಹೇಗೆ ಎಂಬುದಕ್ಕೆ ಉತ್ತರ ಈ ಲೇಖನದಲ್ಲಿದೆ ಓದಿ.

ಮುಂದೆ ಓದಿ ...
  • Share this:

ಟೆಕ್ನಾಲಜಿ (Technology) ಎಷ್ಟು ಅಭಿವೃದ್ಧಿಯಾಗಿದೆ ಎಂದರೆ, ಕೇವಲ ಒಂದು ಸ್ಮಾರ್ಟ್​ಫೋನ್ ಮೂಲಕ ಈಗ ಏನನ್ನೂ ಮಾಡಬಹುದಾಗಿದೆ. ನಮಗೆಲ್ಲರಿಗೂ ಗೊತ್ತಿದ್ದ ಹಾಗೆ ಸ್ಮಾರ್ಟ್​ಫೋನ್ ಎಂಬುದು ಪ್ರತಿಯೊಬ್ಬರ ಅಗತ್ಯ ಸಾಧನವಾಗಿಬಿಟ್ಟಿದೆ. ಏಕೆಂದರೆ ಯಾವುದೇ ಕೆಲಸವನ್ನು ಈಗ ಕೇವಲ ಒಂದು ಸ್ಮಾರ್ಟ್​​ಫೋನ್ (Smartphne) ಮೂಲಕವೇ ಮಾಡಿಮುಗಿಸಬಹುದಾಗಿದೆ. ಎಷ್ಟೋ ಜನರಿಗೆ ನಮ್ಮ ದೇಶವನ್ನು (India) ಸದೃಢವಾಗಿ ಇನ್ನಷ್ಟು ಬಲಯುತಗೊಳಿಸ್ಬೇಕೆಂಬ ಮನಸ್ಸಿದೆ. ಇನ್ನೂ ಕೆಲವರಿಗೆ ದುಷ್ಚಟಮುಕ್ತ ಸಮಾಜವನ್ನಾಗಿ ಮಾಡಬೇಕು ಎನ್ನುವ ಕಲ್ಪನೆಯಿದೆ. ಆದರೆ ಕೆಲವೊಬ್ಬರಿಂದ ಸಮಾಜ ಈ ಕೆಟ್ಟ ಹಾದಿಯನ್ನು ಹಿಡಿಯುತ್ತಿದೆ. ಆದರೆ ಇದಕ್ಕಾಗಿಯೇ ಕೆಲವೊಂದು ಕಂಪೆನಿಗಳು ಹೊಸ ಟೆಕ್ನಾಲಜಿಯನ್ಗು ಕಂಡುಕೊಂಡಿವೆ.


ಇದುವರೆಗೆ ಕೇವಲ ಬಾಯಿ ಮಾತಿನಲ್ಲಿ ಸರ್ಕಾರದ ನಿಯಮವಿತ್ತು. ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ, ಮದ್ಯಪಾನ ನಿಷೇಧ ಎಂದು. ಆದರೆ ಇನ್ಮುದೆ ನಿಮ್ಮ ಕಣ್ಣಮುಂದೆಯೇ ಯಾರಾದರು ಸಿಗರೇಟ್​ ಸೇದುತ್ತಿದ್ದರೆ ಆ್ಯಪ್​ ಮೂಲಕ ಪೊಲೀಸ್​ ಇಲಾಖೆಗೆ ತಿಳಿಸಬಹುದು. ಹೇಗೆ ಎಂಬುದಕ್ಕೆ ಉತ್ತರ ಈ ಲೇಖನದಲ್ಲಿದೆ ಓದಿ.


ಆ್ಯಪ್ ಯಾವುದು?


ಇನ್ನು ಹೊಸದಾಗಿ ಲಾಂಚ್ ಆದ ಈ ಅಪ್ಲಿಕೇಶನ್​ನ ಹೆಸರು ‘ಸ್ಟಾಪ್​ ಟೊಬ್ಯಾಕೋ ಎಂದು. ಸದ್ಯ ಕೆಲ ತಿಂಗಳಷ್ಟೇ ಈ ಆಪ್ ಅನ್ನು ಲಾಂಚ್​ ಮಾಡಲಾಗಿದ್ದು, ಬೆಂಗಳೂರು ಇದರ ಅಭಿವೃದ್ಧಿಪಡಿಸುವಲ್ಲಿ ಭಾರೀ ಮುಂಚೂಣಿಯಲ್ಲಿದೆ. ಇನ್ನು ಸಿಕ್ಕಸಿಕ್ಕಲ್ಲೆಲ್ಲಾ ಬೀಡಿ, ಸಿಗರೇಟನ್ನು ಸೇದುವವರು ಮತ್ತು ಮಾರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಈ ಆ್ಯಪ್ ಅನ್ನು ರಚಿಸಲಾಗಿದೆ.


ಇದನ್ನೂ ಓದಿ: ವಾಟ್ಸಾಪ್​ನಲ್ಲಿ ಹೈಡ್​ ಮಾಡಿದ ಸ್ಟೇಟಸ್ ನೋಡ್ಬೇಕಾ? ಇಲ್ಲಿದೆ ನೋಡಿ ಸೂಪರ್ ಟ್ರಿಕ್ಸ್


ಶಿಕ್ಷೆ ಏನು?


ಇನ್ನು ಈ ಆಪ್ ಮೂಲಕ ಬಂದಂತಹ ದೂರಿಗೆ ತಕ್ಕಂತೆ ಅಲ್ಲಿದ್ದಂತವರಿಗೆ ದಂಡ ವಿಧಿಸುತ್ತಾರೆ. ಜೊತೆಗೆ ನಿಷೇಧ ಹೇರಿದ ನಗರಗಳಲ್ಲಿ ಮಾರುವವರಿಗೂ ದಂಡ ವಿಧಿಸಲಾಗುತ್ತದೆ. ನಂತರ ಇದು ಮುಂದುವರೆದರೆ ಅಂಗಡಿಯನ್ನೇ ಮುಚ್ಚಲಾಗುತ್ತದೆ ಎಂದು ಹೇಳಿದ್ದಾರೆ.


ರಾಜ್ಯದೆಲ್ಲೆಡೆ ಭಾರೀ ದೂರುಗಳು


ಇನ್ನು ಬೆಂಗಳೂರಿನ ಗಾಂಧಿನಗರ, ಎಚ್​ಎಸ್​ಆರ್​ ಲೇಔಟ್​​ ಮತ್ತು ಬಾಣಸವಾಡಿಯಲ್ಲಿ ಇದುವರೆಗೆ ಬಹಳಷ್ಟು ದೂರುಗಳು ದಾಖಲಾಗಿದ್ದು, ಜೊತೆಗೆ ಬೆಳಗಾವಿ ಮತ್ತು ದಕ್ಷಿಣಕನ್ನಡ ಜಿಲ್ಲೆಗಳಲ್ಲೂ ಪ್ರಕರಣಗಳು ದಾಖಲಾಗಿದೆ. ಇನ್ನು ಈ ದೂರುಗಳನ್ನು ಪರಿಶೀಲಿಸಿ ಮೊದಲಿಗೆ ಅಂಗಡಿ ಮಾಲೀಕರಿಗೆ ಎಚ್ಚರಿಗೆ ನೀಡಿ ದಂಡವನ್ನು ವಿಧಿಸುತ್ತಾರೆ. ಆದರೆ ಮುಂದಿನದಿನಗಳಲ್ಲಿ ಇದು ಮುಂದುವರೆದರೆ ಅಂಗಡಿಯನ್ನು ಮುಚ್ಚಲಾಗುತ್ತದೆ ಮತ್ತು ನಿಷೇಧದ ಸ್ಥಳದಲ್ಲಿ ಸಿಗರೇಟ್​ ಸೇದುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ.


ಸಾಂಕೇತಿಕ ಚಿತ್ರ


ಈ ಆ್ಯಪ್ ಬಳಸೋದು ಹೇಗೆ?


ಮೊದಲಿಗೆ ನಿಮ್ಮ ಆಂಡ್ರಾಯ್ಡ್​ ಸ್ಮಾರ್ಟ್​​ಫೋನ್​​ನಲ್ಲಿ ಗೂಗಲ್ ಪ್ಲೇ ಸ್ಟೋರ್​ಗೆ ಹೋಗಿ ಸ್ಟಾಪ್ ಟೊಬ್ಯಾಕೋ ಆ್ಯಪ್ ಅನ್ನು ಡೌನ್​ಲೋಡ್ ಮಾಡಿ. ನಂತರ ಅಲ್ಲಿ ನಿಮಗೆ ಜಿಪಿಎಸ್, ಕ್ಯಾಮೆರಾ, ಗ್ಯಾಲರಿ ಅನುಮತಿಯನ್ನು ನೀಡಲು ಆಯ್ಕೆಯನ್ನು ನೀಡಲಾಗುತ್ತದೆ.


ನಂತರ ನಿಷೇಧದ ಸ್ಥಳದಲ್ಲಿ ಯಾರು ಸಿಗರೇಟ್​ ಸೇದುತ್ತಿದ್ದಾರೆ ಅಥವಾ ಮಾರಾಟ ಮಾಡುತ್ತಿದ್ದಾರೆ ಅಂತವರ ಫೋಟೋ ತೆಗೆಯಿರಿ. ನಂತರ ಅದನ್ನು ಸ್ಟಾಪ್​ ಟೊಬ್ಯಾಕೊ ಆ್ಯಪ್ ಮೂಲಕ ಡೌನ್ ಮಾಡಿ. ಈ ಸಣದರ್ಭದಲ್ಲಿ ಜಿಪಿಎಸ್‌ ಆನ್​ ಆಗಲು ಅನುಮತಿ ಕೇಳುತ್ತದೆ. ನಂತರ ಫೋಟೋ ಅಪ್‌ಲೋಡ್ ಆಗುತ್ತಿದ್ದಂತೆಯೇ ನಿಯಮ ಉಲ್ಲಂಘನೆಯ ಲೊಕೇಶನ್​ ಆಟೋಮ್ಯಾಟಿಕ್‌ ಆಗಿ ಫೀಡ್ ಆಗುತ್ತದೆ.




ನಂತರದಲ್ಲಿ ನೀವು ಆ ಆ್ಯಪ್​ನಲ್ಲಿ ದೂರು ಸಲ್ಲಿಸಿ ಎಂಬ ಬಟನ್‌ ಮೇಲೆ ಕ್ಲಿಕ್‌ ಮಾಡಿ. ಈ ದೂರು ಆಯಾ ಜಿಲ್ಲೆಯ ತಂಬಾಕು ನಿಯಂತ್ರಣ ವಿಭಾಗಕ್ಕೆ ತಲುಪಲಿದ್ದು, ಸಂಬಂಧಿಸಿದ ಅಧಿಕಾರಿಗಳು ನೀವು ಸಲ್ಲಿಕೆ ಮಾಡಲಾದ ಫೋಟೋ ಹಾಗೂ ಜಿಪಿಎಸ್‌ ಆಧಾರಿತ ಸ್ಥಳಕ್ಕೆ ಬಂದು ಅಂಗಡಿ ಮಾಲೀಕರ ವಿರುದ್ಧ ಕ್ರಮ ಜರುಗಿಸುತ್ತಾರೆ. ಈ ಪ್ರಕ್ರಿಯೆ ಆರು ದಿನಗಳ ಒಳಗಾಗಿ ನಡೆಯುತ್ತದೆ.


ಇನ್ನು ನೀವು ನೀಡುವಂತಹ ದೂರುಗಳು ಆ ಪ್ರದೇಶಕ್ಕೆ ಅನುಸಾರವಾಗಿರುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಅನುಮತಿ ನೀಡಲಾಗಿರುತ್ತದೆ. ಇಂತಹ ಸಂದರ್ಭದಲ್ಲಿ ದೂರು ದಾಖಲಾಗುವುದಿಲ್ಲ.

top videos
    First published: