• Home
  • »
  • News
  • »
  • breaking-news
  • »
  • Lemon And Water: ನೀರಿಗೆ ನಿಂಬೆರಸ, ಜೇನುತುಪ್ಪ ಬೆರೆಸಿ ಕುಡಿಯುವ ಮುನ್ನ ಈ ವಿಷಯಗಳನ್ನು ನೆನಪಿಡಿ

Lemon And Water: ನೀರಿಗೆ ನಿಂಬೆರಸ, ಜೇನುತುಪ್ಪ ಬೆರೆಸಿ ಕುಡಿಯುವ ಮುನ್ನ ಈ ವಿಷಯಗಳನ್ನು ನೆನಪಿಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Lemon and Honey Water: ಎಲ್ಲರಿಗೂ ಈ ಪಾನೀಯ ಸೂಕ್ತವಲ್ಲ ಎಂದಿರುವ ಡಾ ಭಾವಸರ್ ನಿಂಬೆ ಮತ್ತು ಜೇನುತುಪ್ಪದ ನೀರನ್ನು ಕುಡಿಯುವ ಮುನ್ನ ಕೆಲವು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳ ಬಗ್ಗೆ ತಿಳಿಸಿದ್ದಾರೆ.

  • Share this:

ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿನೊಂದಿಗೆ ನಿಂಬೆ ಮತ್ತು ಜೇನುತುಪ್ಪ (Lemon And honey) ಬೆರೆಸಿದ ಪಾನೀಯ ಕುಡಿಯುವುದರಿಂದ ದೇಹದ ಆರೋಗ್ಯದ (Health) ಮೇಲೆ ಒಂದು ರೀತಿಯ ಮ್ಯಾಜಿಕ್‌ನಂತೆ ಕೆಲಸ ಮಾಡುತ್ತದೆ. ತೂಕ ಇಳಿಕೆಯಿಂದ ಹಿಡಿದು ಮಲಬದ್ಧತೆಗೆ (Constipation) ಸಹಾಯ, ಹೊಟ್ಟೆಯುಬ್ಬರ ತಡೆಯುವಿಕೆ ಮತ್ತು ಯಕೃತ್ತನ್ನು ಶುದ್ಧೀಕರಿಸುವುದು ಸೇರಿ ಹಲವು ರೀತಿಯಲ್ಲಿ ಆರೋಗ್ಯಕ್ಕೆ ಸಹಕರಿಸುತ್ತದೆ. ಕೆಲವು ಪಾನೀಯಗಳು ಆರೋಗ್ಯಕರವಾಗಿ ಉತ್ತಮವಾಗಿದ್ದರೂ, ಅದನ್ನು ತಯಾರಿಸಲು ಸ್ವಲ್ಪ ಸಮಯ ಎತ್ತಿಡಬೇಕಾಗುತ್ತದೆ. ಆದರೆ ಈ ಸೂಪರ್‌ ಪಾನೀಯಗೆ ಶ್ರಮವಹಿಸುವ ಅಗತ್ಯವೇ ಇಲ್ಲ. ಕ್ಷಣಮಾತ್ರದಲ್ಲಿ ತಯಾರಾಗುತ್ತದೆ.


ಪ್ರತಿದಿನ ಬೆಳಿಗ್ಗೆ ಈ ಸುಲಭವಾಗಿ ತಯಾರಿಸಬಹುದಾದ ಪಾನೀಯವನ್ನು ಯಾವುದೇ ಅಡ್ಡಪರಿಣಾಮದ ಯೋಚನೆ ಇಲ್ಲದೇ ಸೇವಿಸಬಹುದು ಕೂಡ.


ನಿಂಬೆ, ಜೇನುತುಪ್ಪದಲ್ಲಿದೆ ಔಷಧೀಯ ಗುಣ


ನಿಂಬೆಯು ವಿಟಮಿನ್ ಸಿ, ಫ್ಲೇವನಾಯ್ಡ್‌ಗಳು, ಪೊಟ್ಯಾಸಿಯಮ್‌ನ ಅತ್ಯುತ್ತಮ ಮೂಲವಾಗಿದ್ದರೆ, ಇತ್ತ ಜೇನುತುಪ್ಪವು ಆಯುರ್ವೇದದಲ್ಲಿ ಪ್ರಮುಖವಾಗಿದೆ. ಕೆಮ್ಮು ನಿವಾರಕ, ರೋಗ ನಿರೋಧಕ ಶಕ್ತಿ ಹೆಚ್ಚಿಸುವಿಕೆ ಸೇರಿ ಹೃದಯದ ಆರೋಗ್ಯಕ್ಕೂ ಯೋಗ್ಯವಾಗಿದೆ.


ಆದ್ದರಿಂದ ಯಾವುದೇ ಚಿಂತೆಯಿಲ್ಲದೆ ಸುರಕ್ಷಿತವಾಗಿ ನಿಂಬೆ ಮತ್ತು ಜೇನುತುಪ್ಪ ಬೆರೆಸಿದ ಬೆಚ್ಚಗಿನ ನೀರನ್ನು ಸೇವಿಸಬಹುದು.


ಆಯುರ್ವೇದ ತಜ್ಞೆ ಡಾ. ದಿಕ್ಸಾ ಭಾವಸರ್ ಅವರು ತಮ್ಮ ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ನಿಂಬೆ ಮತ್ತು ಜೇನುತುಪ್ಪದ ನೀರು ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ ಎಂದಿದ್ದಾರೆ.


ಇದನ್ನೂ ಓದಿ: ನವಜಾತ ಶಿಶುಗಳ ಹೊಟ್ಟೆ ನೋವಿನ ಲಕ್ಷಣಗಳಿದು, ಅದಕ್ಕೆ ಪರಿಹಾರ ಇದಂತೆ


ಅಷ್ಟೇ ಅಲ್ಲ ಇದರ ಜೊತೆ "ಈ ನೀರು ಎಲ್ಲರಿಗೂ ಸರಿಹೊಂದುವುದಿಲ್ಲ" ಎಂಬ ಅಚ್ಚರಿ ಹೇಳಿಕೆ ಸಹ ನೀಡಿದ್ದಾರೆ. ಜೊತೆಗೆ ಸೂಕ್ತತೆಯನ್ನು ಹೇಗೆ ಪರಿಶೀಲಿಸುವುದು ಎಂಬುದರ ಕುರಿತು ಸಲಹೆಗಳನ್ನು ಮತ್ತು ಪಾನೀಯದ ಪ್ರಯೋಜನಗಳನ್ನು ಹಂಚಿಕೊಂಡಿದ್ದಾರೆ.




ನಿಂಬೆ-ಜೇನುತುಪ್ಪದ ನೀರಿನ ಪ್ರಯೋಜನಗಳು
• ನಿಂಬೆ ಮತ್ತು ಜೇನುತುಪ್ಪವು ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ. ಈ ಪಾನೀಯ ಸೇವನೆಯ ಜೊತೆಗೆ ವ್ಯಾಯಾಮ ಮತ್ತು ಆಹಾರದ ಬಗ್ಗೆಯೂ ಕಾಳಜಿ ವಹಿಸಿದರೆ ತೂಕ ಇಳಿಸಲು ಹೆಚ್ಚಿನ ಸಹಾಯವಾಗುತ್ತದೆ ಎಂದಿದ್ದಾರೆ.
• ಇದು ನಿಮ್ಮ ಯಕೃತ್ತನ್ನು ಡಿಟಾಕ್ಸ್‌ ಮಾಡಲು ಸಹಾಯ ಮಾಡುತ್ತದೆ.
• ಹೊಟ್ಟೆಯುಬ್ಬರ ಮತ್ತು ಭಾರವನ್ನು ಕಡಿಮೆ ಮಾಡುತ್ತದೆ.

ನಿಂಬೆ-ಜೇನುತುಪ್ಪದ ನೀರನ್ನು ಕುಡಿಯುವ ಮುನ್ನ ಈ ವಿಷಯಗಳನ್ನು ನೆನಪಿಡಿ


ಎಲ್ಲರಿಗೂ ಈ ಪಾನೀಯ ಸೂಕ್ತವಲ್ಲ ಎಂದಿರುವ ಡಾ ಭಾವಸರ್ ನಿಂಬೆ ಮತ್ತು ಜೇನುತುಪ್ಪದ ನೀರನ್ನು ಕುಡಿಯುವ ಮುನ್ನ ಕೆಲವು ಮನಸ್ಸಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳ ಬಗ್ಗೆ ತಿಳಿಸಿದ್ದಾರೆ.


1. ಬಿಸಿ ನೀರಿನಲ್ಲಿ ಜೇನುತುಪ್ಪ ವಿಷಕಾರಿಯಾಗುವುದರಿಂದ ಬೆಚ್ಚಗಿನ ನೀರಲ್ಲಿ ಮಾತ್ರ ಬೆರೆಸಿ ಕುಡಿಯಬೇಕು. ಹೀಗಾಗಿ ಕುಡಿಯುವ ಮುನ್ನ ನೀರು ತುಂಬಾ ಬೆಚ್ಚಗಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಮತ್ತು 1 ಚಮಚಕ್ಕಿಂತ ಹೆಚ್ಚು ಜೇನುತುಪ್ಪವನ್ನು ಸೇರಿಸಬೇಡಿ.
2. ಮೊದಲಿಗೆ ಕೇವಲ ಅರ್ಧ ನಿಂಬೆ ಹಣ್ಣಿನ ರಸವನ್ನು ಮಾತ್ರ ಬೆರೆಸಿ, ಇದು ನಿಮಗೆ ಸರಿಹೊಂದಿದರೆ ಮುಂದಿನ ದಿನಗಳಲ್ಲಿ ಒಂದು ನಿಂಬೆ ಹಣ್ಣನ್ನು ಬಳಸಬಹುದು.


ನಿಂಬೆ ಮತ್ತು ಜೇನುತುಪ್ಪದ ನೀರು: ಇದು ನಿಮಗೆ ಸರಿಹೊಂದುತ್ತದೆಯೇ ಎಂದು ತಿಳಿಯುವುದು ಹೇಗೆ?


- ಈ ಪಾನೀಯ ನಿಮಗೆ ಎದೆಯೂರಿ, ಹಲ್ಲಿನ ಸೂಕ್ಷ್ಮತೆ, ಬಾಯಿ ಹುಣ್ಣ ಇಂತಹ
ಅಹಿತಕರ ಅಥವಾ ವಿಚಿತ್ರವಾದ ಭಾವನೆಯನ್ನು ಉಂಟುಮಾಡದೇ ಹಗುರ ಎನಿಸಿದರೆ ನೀವು ಈ ಡಿಟಾಕ್ಸ್‌ ಪಾನೀಯವನ್ನು ಸೇವಿಸಬಹುದು.


ಇದನ್ನೂ ಓದಿ: ಮಧುಮೇಹ ಸಮಸ್ಯೆಗೆ ಈ ಗಿಡಮೂಲಿಕೆಯಲ್ಲಿದೆಯಂತೆ ಪರಿಹಾರ, ಟ್ರೈ ಮಾಡಿ


ನಿಂಬೆ ಮತ್ತು ಜೇನುತುಪ್ಪದ ನೀರು: ಯಾವಾಗ ಕುಡಿಯಬಾರದು?


- ನೀವು ಸಂಧಿವಾತ, ಹೈಪರ್ ಅಸಿಡಿಟಿ, ದುರ್ಬಲ ಮೂಳೆಗಳು, ದುರ್ಬಲ ಹಲ್ಲುಗಳು, ಬಾಯಿ ಹುಣ್ಣುಗಳು ಇತ್ಯಾದಿಗಳನ್ನು ಹೊಂದಿದ್ದರೆ ಈ ನಿಂಬೆಹಣ್ಣು-ಜೇನುತುಪ್ಪ ಬೆರೆಸಿದ ನೀರನ್ನು ಸೇವಿಸದಿರುವುದು ಉತ್ತಮ ಏಕೆಂದರೆ ಅದು ನಿಮ್ಮ ಆರೋಗ್ಯ ಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

Published by:Sandhya M
First published: